Thursday, June 28, 2012

ನಿತ್ಯನಿಗೊಂದು ವಿಶ್ವನಿಗೊಂದು ಸರಿಯೇ / Why is Suvarna News after Nityananda?

ನಿತ್ಯನಿಗೊಂದು ವಿಶ್ವನಿಗೊಂದು ಸರಿಯೇ?

ಕೆಲ ವಾರಗಳ ಹಿಂದೆ ನಿತ್ಯಾನಂದನ ಆಶ್ರಮದೊಳಗೆ ಯಾವುದೋ ಅಮೆರಿಕದ ಕೋರ್ಟಿನ ಸಮನ್ಸ್ ಹಿಡಿದು ಯಕ:ಸ್ಚಿತ್ ಕೋರ್ಟ್ ಕಾರಕೂನನಂತೆ ಪತ್ರಿಕಾಗೋಷ್ಟಿಯಲ್ಲೇ ಬಿಸಾಡಲು ನೋಡಿ ಮಹಿಳೆಯರಿಂದ ವಿಶ್ವೇಶ್ವರ ಭಟ್ಟರ ಶಿಷ್ಯ ಹಿಗ್ಗಾಮುಗ್ಗಾ ಗೂಸಾ ಪಡೆದಿದ್ದು, ಬಳಿಕ ಕ.ರ.ವೇ. ಬಾಡಿಗೆ ಪುಂಡರ ಮೂಲಕ ಗಲಭೆ ಎಬ್ಬಿಸಿ ಮುಖ್ಯಮಂತ್ರಿಗಳೇ ಮಧ್ಯ ಪ್ರವೇಶಿಸಿ ನ್ಯಾಯ ವಿರೋಧಿ ಆದೇಶಿಸಿದ್ದು  ಹಳೆ ಸುದ್ದಿ.

ವರ್ಷಗಟ್ಟಳೆ ಬರೋಬ್ಬರಿ ೭ ಸಮನ್ಸುಗಳನ್ನು ಪಡೆಯದೆ ("ಪ್ರಧಾನಿ ವಿಮಾನದಲ್ಲಿದ್ದೆ ಸಾರ್" ) ಅಂತೂ ನಿನ್ನೆ ಬೆಳಿಗ್ಗೆಯಿಂದ ರಾತ್ರಿ ತನಕ ಪೋಲಿಸ್ ಜತೆ "ಕರಾವಳಿ ಅಲೆ"ಯ ಸೀತಾರಾಮನಂತೆ ನ್ಯಾಯಾಲಯದಲ್ಲಿ ಅಬ್ಬೇಪಾರಿಯಂತೆ ನಿಂತುಕೊಂಡಿದದ್ದು "ಥಾಟ್ಸ್ ಕನ್ನಡ"ದ ಶಾಮಿ ಬಿಟ್ಟರೆ ಬೇರೆ ಯಾರಿಗೂ "ಬ್ರೇಕಿಂಗ್ ನ್ಯೂಸ್" ಆಗಲೇ ಇಲ್ಲ. ಪ್ರಾಯಶ: ಅವರ ಒಂದು ಕಾಲದ ಗೆಳೆಯ ಬೆಳಗೆರೆಯಂತೆ, ಊರಿಗೆಲ್ಲಾ ಉಪದೇಶ ಮಾಡುವವರು ಸಮನ್ಸ್ ತಪ್ಪಿಸಿಕೊಂಡು ಓಡಾಡುವುದನ್ನು ಪ್ರತಿಷ್ಠೆಯೆಂದು ತಿಳಿದುಕೊಂಡಿದ್ದಾರೇನೋ? Home Minister ಅಶೋಕ್ ಜೊತೆ ಡೀಲ್ ಮಾಡಿಕೊಂಡು ರಾಜ್ಯ ಪೊಲೀಸರ ಬೆಂಗಾವಲು ಪಡೆದು ನಮ್ಮಂತಹ ತೆರಿಗೆದಾರರ ಹಣದಲ್ಲಿ ಎಸ್ಕಾರ್ಟು ಇಟ್ಟುಕೊಂಡು ಓಡಾಡುವ ವಿಶ್ವೇಶ್ವರ ಭಟ್ಗೆ ಇದೇ ಪೊಲೀಸರು ೨೦೦೭ರಿಂದ ಸಮನ್ಸ್ ಕೊಡಲು ಆಗಿಲ್ಲವೆಂಬುದು ಎಂತಹ ವಿಪರ್ಯಾಸವಲ್ಲವೇ?


*****************

Suvarna TV - Vishweshwara Bhat and Nityananda: Did V.Bhat "create" this news on behalf of his "guru" Chandrashekhara?



ನಿತ್ಯಾನಂದನ ಮೇಲೆ ಒಂದೇ ಸಮನೆ ಸುವರ್ಣ ಧಾಳಿ ಮಾಡಿದ್ದು ಯಾಕೆ ಎಂಬ ಪ್ರಶ್ನೆಗೆ ಬಹಳ ಉತ್ತರಗಳು ಹರಿದಾಡುತ್ತಿವೆ. ರಿಯಲ್ ಎಸ್ಟೇಟ್ ಮಾಫಿಯಾ, ಕರವೇ ಪುಂಡರು, ಮುತ್ತಪ್ಪ ರೈ ಇತ್ಯಾದಿ. ಆದರೆ ನನ್ನ ಖಚಿತ ಮೂಲಗಳ ಪ್ರಕಾರ ಇದೊಂದು ಸ್ವಾಮಿಗಳ ನಡುವಿನ ವೃತ್ತಿ ಮತ್ಸರವಷ್ಟೆ - ಆದರೆ ದುರುಪಯೋಗವಾದದ್ದು ಮಾಧ್ಯಮ!

ಇಡೀ ನಿತ್ಯಾನಂದನ ಪ್ರಕರಣವನ್ನು "ಸೃಷ್ಟಿಸಿದ್ದು" ತನ್ನ ಗುರು "ಅಂತರಾಷ್ಟ್ರೀಯ ವಾಸ್ತು ತಜ್ನ"  ಚಂದ್ರಶೇಖರ ಸ್ವಾಮೀಜಿಗೋಸ್ಕರವೆಂಬುದು ಎಲ್ಲಾ ಸುದ್ದಿ ಮನೆಗಳಲ್ಲಿ ಗೊತ್ತಿದೆ. ಕೆಲ ತಿಂಗಳ ಹಿಂದೆ ಮುಲ್ಕಿಯಲ್ಲಿ ಚಂದ್ರಶೇಖರ ಸ್ವಾಮಿಯ ಯಾಗದಲ್ಲಿ ಪಾಲ್ಗೊಂಡ ಚಿತ್ರ ಇಲ್ಲಿದೆ.


 Photo credit: www.daijiworld.com under fair credit use.

ಈ ಸ್ವಾಮಿಯ ಬಗ್ಗೆ ಗೊತ್ತಿರುವವರಿಗೆ ಗೊತ್ತು - ವ್ಹೀಲಿಂಗ್ ಡೀಲಿಂಗ್ ಸ್ವಾಮಿಯ ಹೂರಣ. ನ್ಯೂಯಾರ್ಕಿನಲ್ಲಿ ವರ್ಲ್ಡ್ ಟ್ರೇಡ್ ಸೆಂಟರಿಗೆ ನನ್ನದೇ ವಾಸ್ತು ಎಂದು ಹೇಳುವ ಈ ಸ್ವಾಮಿಯ ಅಸಲತ್ತು ಅರಿಯುವುದು ನಿಮಗೇ ಬಿಟ್ಟದ್ದು.

ರಾಜಕುಮಾರ್ - ಬಂಗಾರಪ್ಪ, ಐಶ್ವರ್ಯ ರೈ - ಬಚ್ಚನ್ ಬೀಗರಾದದ್ದು ತನ್ನಿಂದಲೇ ಎಂದು ಮಾಧ್ಯಮಗಳಿಗೆ ಲೀಕ್ ಮಾಡಿ ಫೇಮಸ್ ಆಗುವ ಚಟ ಈ ಸ್ವಾಮಿಗೆ. 

ಆದರೆ ಈ ಸ್ವಾಮಿಗೆ ನಿತ್ಯಾನಂದನಂತಹ ಯುವಕನತ್ತ ಜನರ ಚಿತ್ತ, ಅದರಲ್ಲೂ ಸಿನೆಮಾ ಮಂದಿ ನಿತ್ಯನಿಗೆ ಉಘೇ ಉಘೇ ಎನ್ನುವುದು ಒಂದೇ ಸಮನೆ ಹೊಟ್ಟೆ ಕಾಯಿಸಿ ಬಿಟ್ಟಿದೆ. ಯಾಕೆಂದರೆ ಈ ಚಂದ್ರಶೇಖರ ಸ್ವಾಮಿ ಒಂದು ಕಾಲದಲ್ಲಿ ಇದೇ ರೀತಿ ಚಿತ್ರರಂಗದ ಸಹವಾಸದಿಂದಲೇ "ಫೇಮಸ್" ಆದದ್ದು.

ನನ್ನ ಒಂದು ಮೂಲದ ಪ್ರಕಾರ ನಿತ್ಯನ ವಿರೋಧ ಆರೋಪ ಮಾಡುತ್ತಿರುವ ಯುವತಿಯ ತಂದೆ ಸೇತುಮಾಧವ ರಾವ್ ಈ ಚಂದ್ರಶೇಖರ ಗುರುವಿನ ದೋಸ್ತ್. ಒಟ್ಟಾರೆ ಪ್ರಭಾವಿ ಗುರು/ಸ್ವಾಮೀಜಿಗಳ ವೃತ್ತಿ ಮತ್ಸರದಲ್ಲಿ ಮಾಧ್ಯಮ ಬಳಕೆಯಾದದ್ದು ಇಲ್ಲಿ ಸ್ಪಷ್ಟ.

For those who were wondering "Why is Suvarna News suddenly after Nityananda Swami" - now you know the rest of the story.