Saturday, December 26, 2009

೨೧ನೇ ಶತಮಾನದಲ್ಲಿ ರಾಜ್ಯಪಾಲ, ರಾಷ್ಟ್ರಪತಿಗಳೆಂಬ ಉತ್ಸವ ಮೂರ್ತಿಗಳ ಪ್ರಸ್ತುತತೆ Relevancy of President and Governor posts in 21st Century

ಆಂಧ್ರಪ್ರದೇಶದ ರಾಜ್ಯಪಾಲ ಎನ್.ಡಿ.ತಿವಾರಿಯ ರಾಜಭವನದ ಕಾಮಕೇಳಿ ಪ್ರಸಂಗ ಮತ್ತೊಮ್ಮೆ ಈ ರಾಜ್ಯಪಾಲಗಿರಿಯೆಂಬ retirement home ನ ಪ್ರಸ್ತುತೆಯನ್ನು ಪ್ರಶ್ನಿಸುವಂತಾಗಿದೆ.

ರಾಜ್ಯಪಾಲರ ಬೆಡ್ ರೂಂ ಅವರ ವೈಯಕ್ತಿಕ ವ್ಯಾಪಾರ, ಟಿ.ವಿ.ಚಾನೆಲ್ ರೇಟಿಂಗಿಗೋಸ್ಕರ ಈ ಸ್ಟಂಟು ಮಾಡಿದೆ ಎಂದೆಲ್ಲಾ ಹೇಳುವವರು ಪ್ರಾಯಶ: ರಾಜಭವನಕ್ಕೆ ಹೋಗಿಲ್ಲ. ರಾಜಭವನಕ್ಕೆ ಹೋಗುವುದೆಂದರೆ ಜೋಕಲ್ಲ. ಜನಸಾಮಾನ್ಯರು ಬಿಡಿ, ರಾಜ್ಯಪಾಲರನ್ನು ಭೇಟಿಯಾಗಲು ಸ್ವತ: ಮುಖ್ಯಮಂತ್ರಿಯೇ appointment time ತೆಗೆದುಕೊಂಡು ಹೋಗಬೇಕಾಗುತ್ತದೆ. ಹೀಗಿರುವಾಗ ಕಾಲ್ ಗರ್ಲುಗಳು ರಾಜಭವನಕ್ಕೆ ಹೀಗೆ ಹೋಗಿ ಹಾಗೆ ಬರುತ್ತಾರೆಂದರೆ ಗಂಭೀರವಾದ ವಿಷಯ.

ಅಷ್ಟಕ್ಕೂ ಇಡೀ ಆಂಧ್ರವೇ ತೆಲಂಗಾಣದ ವಿಷಯದಲ್ಲಿ ಹೊತ್ತಿ ಉರಿಯುತ್ತಿರುವಾಗ ಎನ್.ಡಿ.ತಿವಾರಿ ಏನು ಮಾಡುತ್ತಿದ್ದಾರೆ? ನಮ್ಮ ಮಂಗಳೂರಿನ ಪಬ್ ಗಲಾಟೆಯನ್ನೊಮ್ಮೆ ನೆನಪು ಮಾಡಿಕೊಳ್ಳಿ - ಪಬ್ಬಿನ ಗಬ್ಬಿನ ಸಮಯದಲ್ಲಿ ಯಾರೋ ಕೆಲ ಅನೈತಿಕ ಚಟುವಟಿಕೆಯಲ್ಲಿ ನಿರತರಾದ ಹುಡುಗಿಯರ ಮೇಲೆ ಕೈ ಮಾಡಿದ ಮಾತ್ರಕ್ಕೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರುವ ಬೆದರಿಕೆಯನ್ನು ಕೇಂದ್ರ ಸರಕಾರ ಮಾಡಿತ್ತು. ಆದರೆ ಈಗ ಇಡೀ ಆಂಧ್ರ ಹೊತ್ತಿ ಉರಿದಿದೆ, ಎಷ್ಟೋ ಜನರು ಪ್ರಾಣ ಕಳೆದುಕೊಂಡಿದ್ದಾರೆ, ನೂರಾರು ಬಸ್ಸುಗಳು ಸಾರ್ವಜನಿಕ ಆಸ್ತಿ ಉರಿದು ಭಸ್ಮವಾಗಿವೆ, ಆಡಳಿತ ವಿರೋಧ ಪಕ್ಷಗಳೂ divide ಆಗಿ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗಿದೆ. ರಾಷ್ಟ್ರಪತಿ ಆಡಳಿತಕ್ಕೆ fit case ಇದ್ದರೆ ಅದು ಇಂದಿನ ಆಂಧ್ರಪ್ರದೇಶದ ದು:ಸ್ಥಿತಿ. ಆದರೆ ಇದನ್ನೆಲ್ಲಾ ರಾಷ್ಟ್ರ‍ಪತಿಗೆ "report" ಮಾಡುವ ರಾಜ್ಯಪಾಲ (೨೧ನೇ ಶತಮಾನದ ಲೈವ್ ಟಿ.ವಿ., ಇಂಟರನೆಟ್ಟು ಝಮಾನಾದಲ್ಲೂ ರಾಜ್ಯಪಾಲರು ರಿಪೋರ‍್ಟನ್ನು ಪೋಸ್ಟ್, FAX ಮಾಡುವುದು ಹಾಸ್ಯಾಸ್ಪದ) ಬೆಡ್ ರೂಂಮಿನಲ್ಲಿ ಬ್ಯುಸಿಯಾಗಿದ್ದಾರೆ.
&&
ಇನ್ನು ನಮ್ಮ ಕರ್ನಾಟಕದ ರಾಜ್ಯಪಾಲ ಹಂಸರಾಜ ಭಾರಾಧ್ವಾಜ್ ಎಂಬ ಜೋಕರ್ ಬಗ್ಗೆ ಬರೆಯದಿರುವುದೇ ಲೇಸೇನೋ. ಕೇಂದ್ರದಲ್ಲಿ ಈ ಬಾರಿ ಮಂತ್ರಿ ಹುದ್ದೆ ಸಿಗದೆ ಕರ್ನಾಟಕದ ರಾಜ್ಯಪಾಲನೆಂಬ ಗಂಜಿ ಕೇಂದ್ರಕ್ಕೆ ಒಕ್ಕರಿಸಿರುವ ಇವರು ಇನ್ನೂ ಪಕ್ಕಾ active politician ನಂತೆ ಹೇಳಿಕೆ ಕೊಡುವುದರಲ್ಲೇ ಬ್ಯುಸಿಯಾಗಿದ್ದಾರೆ. ರಾಜ್ಯ ಕಾಂಗ್ರೆಸ್ ಮುಖಂಡರುಗಳಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ರಾಜ್ಯ ಸರಕಾರದ ಬಗ್ಗೆ ಆರೋಪ ಮಾಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ.

ಇತ್ತೀಚೆಗೆ ಮಾನವ ಹಕ್ಕು ದಿನದ ಸಂದರ್ಭದಲ್ಲಿ ಈ ಹಂಸರಾಜ್ ಭಾರಧ್ವಾಜ್ ಮಾನವ ಹಕ್ಕುಗಳ ಬಗ್ಗೆ ಭಾಷಣ ಮಾಡಿದ್ದನ್ನು ಪತ್ರಿಕೆಗಳಲ್ಲಿ ಓದಿ ನಗು ಬಂತು. ಇಂದಿರಾ ಗಾಂಧಿ ಪ್ರಜಾಪ್ರಭುತ್ವವನ್ನು ಕೊಲೆ ಮಾಡಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಇಂದಿರಾ ಗಾಂಧಿ ಮತ್ತು ಸಂಜಯ ಗಾಂಧಿ ಮಾನವ ಹಕ್ಕು, ಮಾಧ್ಯಮ ಸ್ವಾತಂತ್ರ್ಯವನ್ನು ಕೊಲೆ ಮಾಡಿದಾಗ ಅವರ ಬೆನ್ನ ಹಿಂದಿನ legal brain ಮತ್ತಾರೂ ಅಲ್ಲ, ಇದೇ ಭಾರಧ್ವಾಜ್! ಇಂತಹ ಭಾರಧ್ವಾಜನ್ನು ಮಾನವ ಹಕ್ಕು ದಿನಾಚರಣೆಗೆ ಇನ್ನೊಂದು ಗಂಜಿ ಕೇಂದ್ರದ ನಿವೃತ್ತ ನ್ಯಾಯಮೂರ್ತಿ ಎಚ್.ಆರ್.ನಾಯಕ್ ಯಾವ ಆಧಾರದ ಮೇಲೆ ಮುಖ್ಯ ಅತಿಥಿಯಾಗಿ ಕರೆದರೋ!
&&
ಸೋನಿಯಾ ಅಡಿಯಾಳಾಗಿ ರಾಷ್ಟ್ರ‍ಪತಿ ಸ್ಥಾನವೇರಿದ ಪ್ರತಿಭಾ ಪಾಟೀಲ್ Guinness Records ಹುಚ್ಚಿಗೆ ಬಿದ್ದಂತಿದೆ. ರಾಷ್ಟ್ರದ ಪ್ರಮುಖ ರಾಜ್ಯವಾದ ಆಂಧ್ರ ಪ್ರದೇಶ ಹೊತ್ತಿ ಉರಿಯುತ್ತಿದ್ದರೂ ಈಯಮ್ಮ ಯುದ್ಧ ವಿಮಾನಗಳಲ್ಲಿ, ನೌಕೆಗಳಲ್ಲಿ ಫೋಟೋ session ನಲ್ಲಿ ಬ್ಯುಸಿ. ಅಫ್ಜಲ್ ಗುರು ಮತ್ತು ಇತರ ಪಾತಕಿಗಳ ಮರಣದಂಡನೆಗಳ ಆದೇಶಗಳ ಮೇಲೆ ಕೂತಿರುವ ಪ್ರತಿಭಾ ಪಾಟೀಲ್ ದೇಶ ದ್ರೋಹಿಗಳ ವಿರುದ್ಧ ಯಾವುದೇ action ತೆಗೆದುಕೊಳ್ಳದೆ ಯುದ್ಧ ನೌಕೆಗಳ ಮೇಲಿ ನಿಂತು ಪೋಸ್ ಕೊಟ್ಟರೆ ಉಪಯೋಗವೇನು? ಅದು ಸಾಲದಂತೆ Christmas ರಜೆಗೆ ಲಕ್ಷದ್ವೀಪಕ್ಕೆ ತನ್ನ ಸಂಸಾರದೊಂದಿಗೆ ಸಾಗಿದ ಪ್ರತಿಭಾ ಪಾಟೀಲ್ ಮಂಗಳೂರಿನಲ್ಲಿ ಯಕ:ಶ್ಚಿತ್ ವಿಮಾನ ಬದಲಾವಣೆಗೋಸ್ಕರ ೫ ನಿಮಿಷದ ಭೇಟಿಗೆ ಇಡೀ ಜಿಲ್ಲಾಡಳಿತವೇ ಒಂದು ವಾರದಿಂದ ಸ್ಥಭ್ದವಾಗಿತ್ತು ಎಂದು ಮಂಗಳೂರಿನ ಮಾಧ್ಯಮಗಳು ವರದಿ ಮಾಡಿವೆ.

ಬ್ರಿಟಿಷರೇನೋ ಭಾರತೀಯರನ್ನು ಅಡಿಗೆ ಹಾಕಲು ಪ್ರೊಟೋಕಾಲ್ ಎಂಬ ಗುಮ್ಮ ಉಪಯೋಗಿಸುತ್ತಿದ್ದರು. ಆದರೆ ೨೧ನೇ ಶತಮಾನದಲ್ಲಿ ಕೇವಲ protocol ಹೆಸರಲ್ಲಿ ರಾಜ್ಯಪಾಲರು, ರಾಷ್ಟ್ರಪತಿಗಳು ಮಾಡುವ ದುಂದುವೆಚ್ಚವನ್ನು ನೋಡಿ ನಾವೇಕೆ ಸುಮ್ಮನಿರಬೇಕು? ಅಂಬೇಡ್ಕರ್ ಎಂಬ ಬ್ರ‍ಿಟಿಷ್ ಗುಲಾಮ ಬ್ರ‍ಿಟನಿನ ಸಂವಿಧಾನ copy ಮಾಡಿದರಿಂದ ಇಂತಹ ರಾಜ್ಯಪಾಲ, ರಾಷ್ಟ್ರಪತಿಯೆಂಬ ಉತ್ಸವ ಮೂರ್ತಿಗಳು ನಮ್ಮ ಮೇಲೆ ಸವಾರಿ ಮಾಡುತ್ತಿದ್ದಾರೆ. ಇಂದು ಹಳ್ಳಿ ಹಳ್ಳಿಯಲ್ಲೂ ನಾವು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತೇವೆ. ಗ್ರಾಮ ಪಂಚಾಯತ್ ಮತ್ತಿತರ ಸ್ಥಳೀಯ ಸಂಸ್ಥೆಗಳು ಬಲಿಷ್ಟವಾಗುತ್ತಿವೆ. ಹೀಗಿರುವಾಗ ಪ್ರಜಾಪ್ರಭುತ್ವದ ಆಶಯಕ್ಕೆ ಮಾರಕವಾಗಿರುವ ರಾಷ್ಟ್ರಪತಿ, ರಾಜ್ಯಪಾಲ ಹುದ್ದೆಗಳನ್ನು ಕಿತ್ತೊಸೆಯುವ ಸಮಯ ಬಂದಿದೆಯೆನಿಸುತ್ತದೆ.
&&

Relevancy of Governor and President posts in 21st century:

A.P.Governor N.D.Tiwari is knee deep in sleaze scandal where he is accused of using call girls in Raj Bhavan. Those who say "It is his own private business dammit" have perhaps not visited Raj Bhavan or Governor. Even Chief Minister of the state has to go through ADC of Governor and seek appointment. So it is indeed serious that call girls can go in and out of Raj Bhavan without any problem if news coming of Hyderabad is indeed true.

Keeping aside the sleaze case, one has to ask what exactly is Governor of Andhra Pradesh is doing when whole state is in the brink of anarchy due to Telangana issue. Government properties are being destryoed, state transport has virtually shutdown for weeks, ruling parties and opposition parties are split so much no one knows who is still MLA or not due to all the resignation drama.

One is reminded of threat of President's Rule in Karnataka during "pub issue" when few girls involved in immoral acts were trashed and it became a national issue. What is Central Govt doing now when whole AP is on the brink of anarchy and scores have died due to violence? If there was ever a valid President's Rule candidate, then that is current day Andhra Pradesh.Why are there no talks of President's Rule? Or is President still waiting for "report" or FAX from State Governor who apparently is busy in his bedroom?

Speaking of Governors, it is unfortunate that Karnataka also has not been spared of joker of a Governor in Mr. Hansraj Bhardwaj. H.R.Bhardwaj who was denied cabinet birth in Central this time was sent packing to Karnataka as Governor. Mr.Bharadwaj seems to have forgotten that Governor post is apolitical. Some of his statements embrassing state government even beats opposition Congress leaders blame on ruling party.

I was amused when I read news item of H.R.Bharadwaj speaking eloquently about Human Rights during World Human Rights Day. For those who are not aware of Bharadwaj, he was the "legal brain" behind Indira Gandhi and was instrumental in (mis)guiding her and allowing imposition of Emergency which effectively halted world's largest democracy for couple of years with untold human rights viloations of millions. Now same Bharadwaj is speaking about Human Rights - isn't it ironic?

Speaking of irony, our President Prathibha Patil seems to be obsessed with breaking Guinness Records (on tax payers money). What is ironic is Mrs.Patil posing with fighter jets or naval ship when same Patil is sitting pretty on hanging Afjal and other anti-nationals. What is the point in posing with war machines when she can't even act on obvious anti-nationals?

Coastal media have reported how lakhs of rupees were spent on 5 minute visit of Prathibha Patil to change planes in Mangalore on her way to Lakshadweep for private vacation. Whole district administration of Dakshina Kannada was on a stand still for at least a week preparing for this 5 minutes event and normal flight operations were disrupted in Mangalore airport for four hours due to Patil's visit.

Ambedkar, who was perhaps inspired by British Constitution or monarchy included ceremonial heads like President and Governor's in our constitution. But haven't we taken all these protocol bullshit too seriously? What is the point in all these protocols when a governor is romping with call girls in Raj Bhavan? It's time to get rid of these ceremonial retirement institutions called President and Governors.

Wednesday, December 9, 2009

ನಿವೃತ್ತ ನ್ಯಾಯಾಧೀಶರೆಂಬ ಬಿಳಿಯಾನೆಗಳು - ಅಧಿಕಾರಕ್ಕಾಗಿ ಆಯೋಗ ಅಧ್ಯಕ್ಷತೆ, ಲೋಕಾಯುಕ್ತ, ಸರಕಾರಿ ಹುದ್ದೆಗಳಿಗೆ ಜೋತು ಬೀಳುವ ನಿತ್ಯ ಸುಮಂಗಲಿಯರು!

ರಾಜಕಾರಣಿಗಳು, ಪತ್ರಕರ್ತರ ಬಗ್ಗೆ ಈ ಬ್ಲಾಗಿನಲ್ಲಿ ಬಹಳಷ್ಟು ಬರೆದಿದ್ದೇನೆ. ಬಹಳ ಸಮಯದಿಂದ ನಮ್ಮ ಪ್ರಜಾಪ್ರಭ್ಹುತ್ವದ ಇನ್ನೊಂದು ಅಂಗವಾದ ನ್ಯಾಯಾಂಗದ ಬಗ್ಗೆ ಬರೆಯಬೇಕೆಂದಿದ್ದೆ.

ಇಂದಿನ (Dec.9) "ವಿಜಯ ಕರ್ನಾಟಕ"ದಲ್ಲಿ ವಿನಾಯಕ ಭಟ್ಟರು ಬರೆದ "ತನಿಖಾ ಆಯೋಗ:ನಿವೃತ್ತರಿಗೆ ಸುಯೋಗ"ದಲ್ಲಿ ನಾನು ಇತ್ತೀಚೆಗೆ ಏನು ಯೋಚಿಸುತ್ತಿದ್ದೇಯೋ ಅದರ ಬಗ್ಗೆಯೇ ಬಹಳ ಚೆನ್ನಾಗಿ ಬರೆದಿದ್ದಾರೆ.

ಲಿಬಾರಾನ್ ಆಯೋಗ ಬಾಬರಿ ಮಸೀದಿ ಧ್ವಂಸ ಕುರಿತು ೧೭ ವರ್ಷಗಳಷ್ಟು ಸುಧೀರ್ಘ ವಿವಾರಣೆಯೆಂಬ ನಾಟಕ ನಟಿಸಿ ಕಡಿದು ಹಾಕಿದ್ದೇನೆಂದು ಇಡೀ ದೇಶ ಕೇಳುತ್ತಿದೆ.

ಪ್ರಾಯಶ: ದೆಹಲಿಯಲ್ಲಿ, ರಾಜ್ಯ ರಾಜಧಾನಿಗಳಲ್ಲಿ ನಮ್ಮ ರಾಜಕಾರಣಿಗಳನ್ನೂ ಮೀರಿಸುವಷ್ಟು ಕೊಬ್ಬಿ ಬೆಳೆದಿರುವವರೆಂದರೆ ಸುಪ್ರೀಂ ಮತ್ತು ಹೈಕೋರ‍್ಟ್ ನ್ಯಾಯಾಧೀಶರು. ನಾನು ಉಡುಪಿಯ ಪಿ.ಪಿ.ಸಿ.ಯಲ್ಲಿ ಓದುತ್ತಿದ್ದಾಗ ಕೃಷ್ಣನ ದರ್ಶನ ಮಾಡಲು ಬರುತ್ತಿದ್ದ ಈ ನ್ಯಾಯಾಧೀಶರ ಧೂಂಧಾಂ ಭೇಟಿ ಯಾವುದೇ ರಾಜಕೀಯ ಪುಢಾರಿಯ ಮೆರವಣಿಗೆಗಿಂತ ಕಮ್ಮಿಯಿರಲಿಲ್ಲ. ೩-೪ (ಸರಕಾರಿ ಗೂಟದ) ಕಾರುಗಳು, ಎದುರು ಹಿಂದೆ ಪೊಲೀಸ್ ಜೀಪುಗಳ ಮೆರವಣಿಗೆ ಕಣ್ಣು ಬಾಯಿ ಬಿಟ್ಟು ನೋಡುತ್ತಿದ್ದ ನಾವು ಯಾರೋ ದೊಡ್ಡ ಮಂತ್ರಿಗಳು ಬಂದಿದ್ದಾರೆಯೇ ಎಂದು ಮಠದ ಮಾಣಿಗಳನ್ನು ಕೇಳಿದರೆ "ಇಲ್ಲ ಮಾರಾಯ, ಯಾರೋ ಆಂಧ್ರದ, ಸಿಕ್ಕಿಂನ ಹೈಕೋರ‍್ಟ್ ಜಡ್ಜ್" ಅಂತೆಯೋ ಇಲ್ಲಾ ನಿವೃತ್ತ ಸುಪ್ರೀಂ ಕೋರ್ಟ್ ಜಡ್ಜಂತೆಯೆಂದು ಮಾಣಿಗಳು ಉತ್ತರಿಸುತ್ತಿದ್ದರು.

ಒಮ್ಮೊಮ್ಮೆ ನ್ಯಾಯಾಧೀಶರುಗಳು ಸರಕಾರದ ವಿರುದ್ಧ, ಮಂತ್ರಿಗಳ ವಿರುದ್ಧ ಬಾಯಿಗೆ ಬಂದಂತೆ ಬಯ್ಯುವುದುಂಟು - ಅದನ್ನು ನಮ್ಮ ಮಾಧ್ಯಮ ಮಿತ್ರರೂ ಯಥಾವತ್ತಾಗಿ ಹೆಡ್ ಲೈನ್ ಹಾಕುವುದೂ ಉಂಟು (ಇತ್ತೀಚೆಗಿನ ಉದಾಹರಣೆ ವಿಶ್ವೇಶ್ವರ ಹೆಗಡೆಯವರು ಭಾಷಾ ನೀತಿಯ ಬಗ್ಗೆ ಉಗುಳಿಸಿಕೊಂಡದ್ದು). ಈಗ ಭ್ರಷ್ಟಾಚಾರದ ಅರೋಪ ಹೊತ್ತಿರುವ ದಿನಕರನ್ ಕೂಡಾ ಕರ್ನಾಟಕಕ್ಕೆ ಬಂದ ಶುರುವಿನಲ್ಲಿ ಮಾಡಿದ್ದು ಅದನ್ನೇ - ಅದೇನೋ ಇಂಗ್ಲಿಷಿನಲ್ಲಿ "playing for the gallery" ಅಂಥಾರಲ್ಲಾ ಹಾಗೆ. ಅಂದ ಹಾಗೆ ದೂರದ ತಮಿಳುನಾಡಿನ ಮಾಧ್ಯಮ ಮಿತ್ರರು ದಿನಕರನ್ ಆಸ್ತಿ ಬಗ್ಗೆ research ಮಾಡಿದಷ್ಟೂ ಕನ್ನಡದ ಮಾಧ್ಯಮ ಹೀರೋಗಳು ಯಾಕೆ ಮಾಡಿಲ್ಲ? ದಿನಕರನ್ ಕೆಲ ಸೆಕೆಂಡುಗಳ ವಿಚಾರಣೆಯಲ್ಲಿ ಗಣಿಗಳಿಗೆ ಬೇಕಾಬಿಟ್ಟೀ ಪರವಾನಿಗೆ, ಕೊಲೆಗಡುಕರ ಬಿಡುಗಡೆ ಮಾಡಿ ತೀರ್ಪು ಕೊಡುತ್ತಿದ್ದಾಗ ಕನ್ನಡದ ಮಾಧ್ಯಮ ಮಿತ್ರರಿಗೆ corruption ವಾಸನೆ ಯಾಕೆ ಹೊಡೆಯಲಿಲ್ಲ?

ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆಯಷ್ಟು ಗಬ್ಬೆಟ್ಟು ಹೋದ ನ್ಯಾಯಾಂಗ ವ್ಯವಸ್ಥೆ ಬೇರೆ ಯಾವ ದೇಶದಲ್ಲೂ ಇರಲಿಕ್ಕಿಲ್ಲ. ನಮ್ಮ ನ್ಯಾಯಾಧೀಶರು ಎಷ್ಟು ಕೊಬ್ಬಿ ಹೋಗಿದ್ದಾರೆ ಎಂಬುದನ್ನು ತಿಳಿಯಲು ಬೆಂಗಳೂರಿನಲ್ಲಿ ಮಂತ್ರಿಗಳ ಮನೆಗಳನ್ನೂ ನಾಚಿಸುವಂತ್ತಿರುವ ನ್ಯಾಯಾಧೀಶರ official ಬಂಗ್ಲೆಗಳನ್ನು ನೋಡಿ. ಯಡ್ಯೂರಪ್ಪನವರ ಬೆಡ್ ರೂಮಿನ ಬಗ್ಗೆ ಯಾರೋ ಪುಣ್ಯಾತ್ಮ RTI ಹಾಕಿ ವಿವರ ಪಡೆದುಕೊಂಡ - ಆದರೆ ಅದೇ ಕರ್ನಾಟಕ ಹೈಕೋರ್ಟ್ ಜಡ್ಜುಗಳ ಅರಮನೆಯಂತಹ ಸರಕಾರಿ ಬಂಗ್ಲೆಗಳ ಖರ್ಚಿನ ಬಗ್ಗೆ RTI ಹಾಕಲೂ ಅವಕಾಶವಿಲ್ಲದಂತೆ ಈ ನ್ಯಾಯಾಧೀಶರುಗಳು ನೋಡಿಕೊಂಡಿದ್ದಾರೆ - ನ್ಯಾಯಾಧೀಶರುಗಳ ಆಸ್ತಿ ಪಾಸ್ತಿ ವಿವರಣೆ ನೀಡಲು ಇದೇ ಬಿಳಿಯಾನೆಗಳು ಬಯಸುತ್ತಿಲ್ಲ.

ಸರಕಾರೀ ಬಂಗಲೆ, ಆಳು ಕಾಳು, ಹೆಂಡತಿ ಮಕ್ಕಳಿಗೊಂದು ಸರಕಾರೀ ಕಾರು ಬಳಸಿ ಐಷಾರಾಮಿ ಜೀವನ ನಡೆಸುವ ನ್ಯಾಯಾಧೀಶರೆಂಬ ಬಿಳಿಯಾನೆಗಳ ಕೆಲಸದ ಶೈಲಿ ನಮ್ಮ ಕೋರ್ಟುಗಳಲ್ಲಿ ರಾಶಿ ಬಿದ್ದಿರುವ ಕೇಸುಗಳನ್ನು ನೋಡಿದರೆ ಗೊತ್ತಾಗುತ್ತದೆ. ರಾಜಕಾರಣಿಗಳಾದರೋ ಪ್ರತಿ ಐದು ವರ್ಷಕ್ಕೊಮ್ಮೆ ಊರೂರು ತಿರುಗಾಡಿ ಇಲೆಕ್ಷನ್ ಎಂಬ ಪರೀಕ್ಷೆ ಪಾಸಾಗಬೇಕು. ಆದರೆ ಒಮ್ಮೆ ನ್ಯಾಯಾಧೀಶರಾದರೆ ಸಾಕು, ನಿವೃತ್ತಿ ತನಕವೂ ಸರಕಾರೀ ಖರ್ಚಿನಲ್ಲಿ ಮಜಾ ಉಡಾಯಿಸಬಹುದು.

ರಾಜಕಾರಣಿಗಳಾದರೆ ಐದು ವರ್ಷಕ್ಕೊಮ್ಮೆ ಮತದಾರ ಪ್ರಭುವಿಗೆ ಉತ್ತರ ಕೊಡಬೇಕು, ಆದರೆ ನ್ಯಾಯಾಧೀಶರೆಂಬ ಬಿಳಿಯಾನೆಗಳಿಗೆ accountability ಯೇ ಇಲ್ಲ! Stay order issue ಮಾಡುವುದು, ಕೇಸುಗಳನ್ನು ವಿನಾಕಾರಣ adjourn ಮಾಡಿ ಗೋಲ್ಫ್ ಕೋರ್ಸಿನಲ್ಲಿ ಕಾಲಕಳೆಯುವುದನ್ನೇ ತಮ್ಮ ಕೆಲಸವೆಂದು ಈ ಬಿಳಿಯಾನೆಗಳು ತಿಳಿದಂತಿದೆ.


ನಿವೃತ್ತಿಯ ನಂತರ


ಇನ್ನು ನಿವೃತ್ತಿಯ ನಂತರ ಈ ನ್ಯಾಯಾಧೀಶರೆಂಬ ಬಿಳಿಯಾನೆಗಳು ತಮ್ಮ ಮುಂಚಿನ ಗತ್ತು ವೈಭವ ಉಳಿಸಿಕೊಳ್ಳಲು ಯಾವುದಾದರೂ ಸರಕಾರೀ ಹುದ್ದೆ ಪಡೆಯಲು ಮಾಡುವ ಸರ್ಕಸ್ ಯಾವುದೇ ರಾಜಕೀಯ ಪುಢಾರಿಯನ್ನೂ ನಾಚಿಸುವಂತ್ತಿರುತ್ತದೆ. ಮರಿ ಪುಢಾರಿಗಳು ನಿಗಮ ಮಂಡಳಿಯೆಂದೆಲ್ಲಾ ಓಡಾಡಿದರೆ ಈ ನಿವೃತ್ತ ನ್ಯಾಯಾಧೀಶರುಗಳು "ನ್ಯಾಯಾಂಗ ಆಯೋಗ", "ವಿಚಾರಣಾ ಆಯೋಗ", "ಲೋಕಾಯುಕ್ತ", "ಮಾನವ ಹಕ್ಕುಗಳ ಆಯೋಗ"ಗಳೆಂಬ ಗಂಜೀ ಕೇಂದ್ರಗಳಲ್ಲಿ ಆಶ್ರಯ ಪಡೆಯಲು ಅಧಿಕಾರಸ್ಥ ರಾಜಕಾರಣಿಗಳ ಮುಂದೆ ಮಾನ ಮರ್ಯಾದೆ ಎಲ್ಲವನ್ನೂ ಬದಿಗಿಟ್ಟು ಸಾಲಲ್ಲಿ ನಿಂತಿರುತ್ತಾರೆ.

ಕರ್ನಾಟಕದಲ್ಲಿ ಇತ್ತೀಚೆಗಿನ "ನಿವೃತ್ತ ನ್ಯಾಯಾಧೀಶರ ಆಯೋಗ"ವೆಂಬ ಮುಗಿಯದ ನಾಟಕ ಪ್ರಹಸನವನ್ನೇ ನೋಡಿ. ಹಾವೇರಿ ಗೋಲೀಬಾರ್ ತನಿಖೆ ಮಾಡುತ್ತಿರುವ ಜಗನ್ನಾಥ ಶೆಟ್ಟಿ, ಕರಾವಳಿಯ ಚರ್ಚ್ ಧಾಳಿ ತನಿಖೆ ಮಾಡುತ್ತಿರುವ ಬಿ.ಕೆ.ಸೋಮಶೇಖರ ವರ್ಷ ಕಳೆದರೂ ಕೋಟಿಗಟ್ಟಳೆ ಖರ್ಚು ಮಾಡಿದರೂ ಇನ್ನೂ ತಮ್ಮ ವರದಿ ಸಲ್ಲಿಸಿಲ್ಲ. ಇಂದಿನ 24x7 ಮಾಧ್ಯಮಗಳ ಕಾಲದಲ್ಲಿ ಹಾವೇರಿ ಮತ್ತು ಮಂಗಳೂರು ಚರ್ಚ್ ಧಾಳಿಗಳೆರಡನ್ನೂ ಟಿ.ವಿ.ಮಾಧ್ಯಮಗಳು visuals ಪ್ರಸಾರ ಮಾಡಿವೆ - ಇವೆರಡೂ ಒಂಥರಾ open and shut caseಗಳು. ಹಾವೇರಿ ಘಟನೆಯಲ್ಲಿ ರೈತರ ಹೆಸರಲ್ಲಿ ಯಾರು ಗಲಾಟೆ ಮಾಡಿದರು, ಯಾರು ಪೊಲೀಸ್ ವ್ಯಾನಿಗೆ ಬೆಂಕಿ ಹಚ್ಚಲು ಹೋದರು, ಕಲ್ಲು ಹೊಡೆಯುತ್ತಿದ್ದ "ರೈತ"ರ ಅಸಲುತನ ಎಲ್ಲಾ ಟಿವಿಯಲ್ಲಿ ಬಂದಿದೆ. ಆದರೂ ಈ ಬಿಳಿಯಾನೆಗಳು ವಿಚಾರಣೆಯ ನೆಪದಲ್ಲಿ ರಾಜ್ಯವಿಡೀ ಸರಕಾರಿ ಖರ್ಚಿನಲ್ಲಿ ಹೆಂಡತಿ ಮಕ್ಕಳೊಂದಿಗೆ ಸರಕಾರೀ ಖರ್ಚಿನಲ್ಲಿ ಗೂಟದ ಕಾರುಗಳಲ್ಲಿ ತಿರುಗುತ್ತಿದ್ದಾರೆ.
ಇನ್ನು ಲೋಕಾಯುಕ್ತ ಹುದ್ದೆ ಅಲಂಕರಿಸಿರುವ ಸಂತೋಷ್ ಹೆಗ್ಡೆಯವರ ಬಗ್ಗೆ ಬರೆಯದಿರುವುದೇ ವಾಸಿಯೇನೋ. ಹೈಕೋರ್ಟ್ ಜಡ್ಜಾಗಿ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಸೇವೆ ಸಲ್ಲಿಸಿದರೂ ನ್ಯಾಯಾಧೀಶರಾಗಿ ಹೇಳಿಕೊಳ್ಳುವಂತಹ achievement ಇಲ್ಲ ಹೆಗ್ಡೆಯವರದ್ದು. ನಿವೃತ್ತಿ ನಂತರ ಕರ್ನಾಟಕಕ್ಕೆ ಹಿಂತಿರುಗಿದ ಹೆಗ್ಡೆಯವರಿಗೆ ಲೋಕಾಯುಕ್ತ ಹುದ್ದೆ ಅವರ ತಂದೆ ಕೆ.ಎಸ್.ಹೆಗ್ಡೆಯವರು ಬಿಜೆಪಿ ಧುರೀಣರಾಗಿದ್ದರೆಂಬ ಕಾರಣಕ್ಕೆ ದಕ್ಕಿತು.

ಲೋಕಾಯುಕ್ತರಾಗಿ ಪ್ರತಿ ನಿತ್ಯವೆಂಬಂತೆ ಪತ್ರಿಕಾ ಹೇಳಿಕೆ ಕೊಡುವುದು, ತಾನು ಬಿಜೆಪಿಯ ದಾಕ್ಷಿಣ್ಯಕ್ಕೆ ಬಿದ್ದಿಲ್ಲವೆಂದು ತೋರಿಸಲು ದಿನಬೆಳಗಾದರೆ ರಾಜ್ಯ ಸರಕಾರವನ್ನು ದೂರುವುದು, ಲೋಕಾಯುಕ್ತಕ್ಕೆ ಸರಕಾರ ಸಿಬ್ಬಂದಿ ಕೊಡುತ್ತಿಲ್ಲವೆಂದೋ, ಲೋಕಾಯುಕ್ತಕ್ಕೆ ಸರಕಾರ power ಕೊಡುತ್ತಿಲ್ಲವೆಂದು ಇದ್ದ ಬಿದ್ದ ಸಭೆ ಸಮಾರಂಭಗಳಲ್ಲಿ, ಪತ್ರಿಕಾಗೋಷ್ಠಿಗಳಲ್ಲಿ ಹೇಳಿಕೆ ಕೊಡುವುದನ್ನೇ ಲೋಕಾಯುಕ್ತರ ಕೆಲಸವೆಂದು ಹೆಗ್ಡೆಯವರು ತಿಳಿದಂತಿದೆ. ಇಂತಹ ಪ್ರಭಾವಿ ಹುದ್ದೆಯನ್ನು ನಿವಾರಿಸಲು ಆಗದಿದ್ದರೆ ಬೇರೆ ಯಾವುದೇ ಸೀದಾಸಾದಾ ಜನರು ಯಾವಾಗಲೋ ಒಂದೋ ರಾಜೀನಾಮೆ ಬಿಸಾಕಿ ಹೋಗುತ್ತಿದ್ದರು ಅಥವಾ ಹುದ್ದೆಯಲ್ಲಿದ್ದೇ ಸಾಧ್ಯವಾದಷ್ಟು ಬದಲಾವಣೆ ತರುತ್ತಿದ್ದರು. ಟಿ.ಎನ್.ಶೇಷನ್ ಎಂಬಾ ಮಹಾಪುರುಷ ಒಂದು ಕಾಲದಲ್ಲಿ ಚುನಾವಣಾ ಆಯೋಗವೆಂಬ ಅಕ್ಷರಷ: ಹಲ್ಲಿಲ್ಲದ ಶಿಖಂಡೀ ಆಯೋಗವನ್ನು ಯಾವುದೇ additional power ಯಾ ಕಾನೂನು ಯಾ legislative ಬದಲಾವಣೆಯಿಲ್ಲದೇ ಹೇಗೆ ಸಂಪೂರ್ಣವಾಗಿ ಬದಲಿಸಿದರು ಎಂಬುದನ್ನು ಒಮ್ಮೆ ನೆನಪಿಸಿಕೊಳ್ಳಿ.

ಸಂತೋಷ್ ಹೆಗ್ಡೆಯವರಿಗೆ ಮನಸ್ಸಿದ್ದರೆ ಈಗಿನ ಲೋಕಾಯುಕ್ತ ಚೌಕ್ಕಟ್ಟಿನಲ್ಲೇ ಬದಲಾವಣೆ ಮಾಡಬಹುದು ಇಲ್ಲಾ ರಾಜೀನಾಮೆ ಬಿಸಾಕಿ ಹೋಗಬಹುದು - ಆದರೆ ದಶಕಗಳಷ್ಟು ಕಾಲ ನ್ಯಾಯಾಧೀಶರಾಗಿ ಸಕಲ ಸರಕಾರೀ ಸೌಲಭ್ಯಗಳನ್ನು ಉಪಯೋಗಿಸಿರುವ ಹೆಗ್ಡೆಯವರು typical Indian judge ನಂತೆ status quo ನಲ್ಲೇ forever ಇರಲು ಬಯಸಿದಂತಿದೆ. ತಾನು ಜೀವವಿದ್ದೇನೆ ಎಂದು ತೋರಿಸಿಕೊಳ್ಳಲು ವಾರಕ್ಕೊಮ್ಮೆ ಸರಕಾರದ ವಿರುದ್ಧ ಕಿಡಿ, ತನಗೆ ಸಂಬಂಧವೇ ಇಲ್ಲದ ವಿಷಯದ ಬಗ್ಗೆ ಕೊರೆಯುವುದು, ತಿಂಗಳಿಗೊಮ್ಮೆ raid ನಲ್ಲೇ ಹೆಗ್ಡೆಯವರು ತೃಪ್ತಿ ಕಂಡಂತಿದೆ. ನಿವೃತ್ತಿಯ ನಂತರವೂ ಸವಲತ್ತು, ಸರಕಾರೀ ಕಾರು, ಆಳು ಕಾಳುಗಳು ಸಿಗುವಾಗ ಯಾರು ಬೇಡ ಹೇಳುತ್ತಾರೆ ಹೇಳಿ?
ಹೆಗ್ಡೆಯವರಂತೆ ಇರುವ ಇನ್ನೊಂದು ಬಿಳಿಯಾನೆ ಕರ್ನಾಟಕ ಮಾನವ ಹಕ್ಕು ಆಯೋಗದ ಅಧ್ಯಕ್ಷ ಎಸ್.ಆರ್.ನಾಯಕ್. ಇವರೂ ರಿಟೈರ‍್ಡ್ ಜಸ್ಟಿಸ್. ಮನಸ್ಸಿದ್ದರೆ ಮಾನವ ಹಕ್ಕು ಆಯೋಗದ ಅಧ್ಯಕ್ಷರಾಗಿ ಬಹಳಷ್ಟು ಸಾಧಿಸಬಹುದು. ಎಲ್ಲಾ ಅಧಿಕಾರವಿದ್ದರೂ ಸಂತೋಷ್ ಹೆಗ್ಡೆಯವರಂತೆ ಸರಕಾರವನ್ನು ಟೀಕಿಸುವುದರಲ್ಲೇ time waste ಮಾಡುತ್ತಿದ್ದಾರಿವರು. ನೆರೆ ಪರಿಹಾರದ ಬಗ್ಗೆ ಬೆಂಗಳೂರಿನಲ್ಲಿ ಕೂತು ವಸ್ತುಸ್ಥಿತಿ ತಿಳಿಯದೆ ಪುಂಖಾನುಗಟ್ಟಳೆ ಹೇಳಿಕೆ ಕೊಟ್ಟು ಉಗುಳಿಸಿಕೊಂಡ ಈ ಆಸಾಮಿ ಮಾನವ ಹಕ್ಕುಗಳ ಬಗ್ಗೆ ಇದುವರೆಗೆ ಸಾಧಿಸಿದ್ದೇನೂ ಇಲ್ಲ. ತನ್ನ ವ್ಯಾಪ್ತಿಗೆ ಸಂಬಂಧಪಡದ ವಿಷಯದ ಬಗ್ಗೆ ಕೊರೆಯುವ ಈ ಭೂಪ ಚಪ್ಪಾಳೆಗಾಗಿ ಪಕ್ಕಾ ರಾಜಕಾರಣಿಗಳಂತೆ ಹೇಳಿಕೆ ಕೊಡುತ್ತಿರುತ್ತಾರೆ. ಗಣಿ ವಿಷಯವಿರಲಿ, ನೆರೆ ಪರಿಹಾರವಿರಲಿ, ಪ್ರಿಯಾಂಕ ಗರ್ಭಿಣಿಯಾದ ವಿಷಯವಿರಲಿ - ಬೆಂಗಳೂರಿನಲ್ಲಿ ಕುಳಿತು ರಾಜಮರ್ಯಾದೆ ಅನುಭವಿಸುತ್ತಾ ಪ್ರಚಾರಕ್ಕಾಗಿ ಹೇಳಿಕೆ ಕೊಡುವ ನಾಯಕ್ ಮನಸ್ಸಿದ್ದರೆ ತನಗೀಗವಿರುವ ವ್ಯಾಪ್ತಿಯಲ್ಲೇ ಬಹಳಷ್ಟು ಸಾಧಿಸಬಹುದು. ಸುಮ್ಮನೆ ಹೇಳಿಕೆ ಕೊಡಬೇಕಾದರೆ ಆಮ್ನೆಸ್ಟಿ, HRW ನಂತಹ NGOಗಳು ಅಂತಹ ಕೆಲಸವನ್ನು ಈಗಾಗಲೇ ಮಾಡುತ್ತವೆ. ಅದು ಬಿಟ್ಟು ಸರಕಾರ ತನಗೆ ನೀಡಿರುವ ಎಲ್ಲಾ ಸೌಲಭ್ಯಗಳನ್ನು ಅನುಭವಿಸುತ್ತಾ ತೆರಿಗೆದಾರರ ಹಣವನ್ನು ಪೋಲು ಮಾಡುತ್ತಿರುವ ನಾಯಕರಂತಹವರು ಇದ್ದರೇನು ಹೋದರೇನು?

ಎಲ್ಲಾ ನ್ಯಾಯಾಧೀಶರು ಹೀಗೆಂದು ಹೇಳುತ್ತಿಲ್ಲ. ವಕೀಲರು ಇದಕ್ಕಿಂತ ಇನ್ನೂ ಹಾಳು - ಇತ್ತೀಚೆಗೆ ಹೈಕೋರ್ಟಿನಲ್ಲಿ ನಡೆದ ಹೊಯ್ ಕೈ ಗಲಭೆಯೇ ವಕೀಲರ ಸಾಚಾತನವನ್ನು ಬಯಲು ಮಾಡಿದೆ. ತಾಲೂಕು ಮಟ್ಟದಲ್ಲೂ ರಾಶಿ ರಾಶಿ ಬಿದ್ದಿರುವ ಕೋರ್ಟು ಕೇಸುಗಳನ್ನು ಕಂಡಾಗ ನ್ಯಾಯಾಂಗ ವ್ಯವಸ್ಥೆಯ ಬಗ್ಗೆಯೇ ಹೇಸಿಕೆಯಾಗುತ್ತದೆ. ನ್ಯಾಯಾಂಗ ನಿಂದನೆಗೆ ಹೆದರಿ ಮಾಧ್ಯಮಗಳೂ ಜನರೂ ಸುಮ್ಮನ್ನಿದ್ದಾರೆ. The Emperor has no clothes ಎಂದು ಹೇಳಲು ಜನರೀಗ ಹೆದರಬಹುದು. ಆದರೆ ದಿನಕರನ್ ಪ್ರಕರಣದಲ್ಲಿ ನೋಡಿದಂತೆ ಜನರ ಸಹನೆಯ ಕಟ್ಟೆಒಡೆಯುವ ಕಾಲ ದೂರವಿಲ್ಲ. ನ್ಯಾಯಾಂಗ ನಿಂದನೆ ಎಂಬ ಗುಮ್ಮವನ್ನು ಎದುರಿಟ್ಟುಕೊಂಡು ತಾವು ಏನಾದರೂ ಮಾಡಬಹುದು, ಕಣ್ಣೂ ಮುಚ್ಚಿ ಭ್ರಷ್ಟಾಚಾರ ಮಾಡಬಹುದು, ತಾವು ಯಾರಿಗೂ accountable ಅಲ್ಲವೆಂದು ಬೀಗುವ ನ್ಯಾಯಾಧೀಶರು ಜನರ ತಾಳ್ಮೆಗೂ ಮಿತಿಯಿದೆಯೆಂಬುದನ್ನು ಅರಿಯಬೇಕಾಗಿದೆ.

Thursday, November 12, 2009

ಪೋಸ್ಟ್ ಮ್ಯಾನ್ ಕೆಲಸ ಮಾಡಿದ ಕಟ್ಟಾ, ಅಶೋಕ್ VKಯಲ್ಲಿ ಸಂಧಾನಕಾರರಾಗಿ ಪ್ರತ್ಯಕ್ಷ ಹೇಗೆ?

ವಿಚಿತ್ರ ನೋಡಿ. ಕಳೆದೆರಡು ವಾರಗಳ ಬಿಕ್ಕಟ್ಟಿನ ಸಮಯದಲ್ಲಿ ಸುದ್ದಿಯಿಲ್ಲದೇ ಮಾಯವಾಗಿ ಗಾಳಿ ಯಾವ ಕಡೆಗೆ ಬೀಸುತ್ತದೆಯೆಂದು ಎಲ್ಲೋ ಅಡಗಿ ಕುಳಿತಿದ್ದ ಬೆಂಗಳೂರಿನ ಸಚಿದ್ವಯರಾದ ಕಟ್ಟಾ ಸುಬ್ರಮಣ್ಯ ನಾಯ್ಡು ಮತ್ತು ಅಶೋಕ್ ಇದೀಗ ಅನಾಮತ್ತಾಗಿ "troubleshooter", "ಸಂಧಾನಕಾರ"ರಾಗಿ "ವಿಜಯ ಕರ್ನಾಟಕ"ದಲ್ಲಿ ಕಾಣಿಸಿಕೊಂಡಿದ್ದಾರೆ.

ವಿಜಯ ಕರ್ನಾಟಕದ ಸುದರ್ಶನ ಚನ್ನಂಗಿಹಳ್ಳಿ ಏಕ್ ದಮ್ ಈ ಸಚಿವರಿಗೆ ಬಕೆಟ್ಟು ಹಿಡಿದು ಬಿಟ್ಟಿದ್ದಾರೆ. ಕೆಲ ಅಣಿಮುತ್ತುಗಳ ಸ್ಯಾಂಪಲ್:
- ಈ ಸಚಿವದ್ವಯರು "ಎರಡೂ ಬಣಗಳ ನಡುವೆ ಸೇತುವೆಯಾಗಿ" ಓಡಾಡಿದ್ದಾರೆ.
- ಉಭಯ ಬಣದ ನಾಯಕರ ನಡುವೆ ರಾಜಿಗೆ ಯತ್ನಿಸಿದರು
- ವರಿಷ್ಠರ ಸಂದೇಶಗಳನ್ನು ರವಾನಿಸುವ ಕಾರ್ಯ ನಿರ್ವಹಿಸಿದರು.

ಕಡೆಯದಂತೂ ನಾವೀಗ ಶಿಲಾಯುಗದಲ್ಲಿ ಅಥವಾ ರಾಮಾಯಣದ ಜಮಾನಾದಲ್ಲಿ ಇದ್ದೇವೆಯೆಂಬ ಅಭಿಪ್ರಾಯ ಕೊಡುತ್ತದೆ. ಮೊಬೈಲ್ ಸೆಲ್ ಎಲ್ಲೆಡೆ ಇರುವಾಗ ಈ ಸಚಿವರು "ಸಂದೇಶ ರವಾನಿಸುವ ಕಾರ್ಯ ನಿರ್ವಹಿಸಿದರು" ಎಂದು ಸುದರ್ಶನ ಹೇಳಿ ಓದುಗರ ಕಿವಿ ಮೇಲೆ ಹೂ ಇಡಲು ಯತ್ನಿಸಿದ್ದಾರೆ.

ಯಡ್ಡಿ ರೆಡ್ಡಿ ಹೊಡೆದಾಡಿಕೊಳ್ಳುತ್ತಿರುವಾಗ ಎಲ್ಲೋ ಅಡಗಿ ಕುಳಿತಿದ್ದ ಮತ್ತು ಎಲ್ಲಾ activity ದೆಹಲಿಗೆ shift ಆಗಿದ್ದಾಗ ಬೆಂಗಳೂರಿನಲ್ಲೆ ಇದ್ದ ಕಟ್ಟಾ ಅಶೋಕ್ ರವರು ಈಗ ಎಲ್ಲಾ ಬಿಕ್ಕಟ್ಟು ಪರಿಹಾರವಾದ ನಂತರ ವಿ.ಕ.ದಲ್ಲಿ "ಮುತ್ಸದ್ಧಿ"ಗಳಾಗಿ ಕಂಡುಬರುವುದರ ಹಿಂದೆ ಏನು ಕೆಲಸ ಮಾಡಿರಬಹುದು? 24x7 ಟಿವಿ ಕವರೇಜಿನ ಕಾಲದಲ್ಲಿ ಹೀಗೆಲ್ಲಾ ಬರೆದರೆ ಜನ ನಂಬುತ್ತಾರಾ?

Monday, November 2, 2009

ರೆಡ್ಡಿಗಳ ಕಪಿ ಮುಷ್ಠಿಯಿಂದ ಕರ್ನಾಟಕಕ್ಕೆ ಮುಕ್ತಿಯೆಂದು?ಮಾಧ್ಯಮಗಳಲ್ಲಿ ನಡೆಯುತ್ತಿರುವ ಭಿನ್ನಮತ - ರೆಡ್ಡಿಗಳ ಮುಷ್ಠಿಯಲ್ಲಿ ಕರ್ನಾಟಕದ ಮಾಧ್ಯಮ ಮಿತ್ರರು

ರಾಜಶೇಖರ ರೆಡ್ಡಿಯ ಹೆಲಿಕಾಪ್ಟರ್ ಪರ್ವತಕ್ಕಪ್ಪಳಿಸಿ ಬಾಡಿ ಸಿಗುವುದರೊಳಗೆ ಜಗನ್ ತನ್ನ ಟಿ.ವಿ. ಮತ್ತು ದಿನಪತ್ರಿಕೆಯ ಮೂಲಕ ಆಂಧ್ರ ಮತ್ತು ದೇಶದಾದ್ಯಂತ create ಮಾಡಿದ emotion ಭಾರತದ ಮಾಧ್ಯಮಗಳ ಸುದ್ದಿ coverage ಮಟ್ಟಿಗೆ ಒಂದು turning point. ದಿಢೀರನೆ ಎಲ್ಲಿಂದಲೋ ಬಂದ ನೂರಾರು ಜನರು ಜಿಲ್ಲೆ ಜಿಲ್ಲೆಗಳ ಕಾಂಗ್ರೆಸ್ ಕಚೇರಿ ಮುಂದೆ ಅರ್ತನಾದಿಸಿದ್ದೇನು, ಆತ್ಮಹತ್ಯೆ ಮಾಡಿಕೊಳ್ಳುತ್ತೇವೆಯೆಂದು ಬೊಬ್ಬೆ ಹಾಕಿದ್ದೇನು, ಜಗನ್ ಬಿಟ್ಟರೆ ಇನ್ನು ರಾಜ್ಯಕ್ಕೆ ಉಳಿಗಾಲವಿಲ್ಲವೆಂದು ಟಿ.ವಿ.ಯಲ್ಲಿ ಪ್ರದರ್ಶಿಸಿದ್ದೇನು!

ಇದೇ ಮಾಧ್ಯಮ strategyಯನ್ನು ಬಳ್ಳಾರಿಯ ಮಣ್ಣು ಮಾರಿ ಬದುಕುತ್ತಿರುವ ರೆಡ್ಡಿ ಬ್ರದರ್ಸ್ ಈಗ ಕರ್ನಾಟಕದಲ್ಲಿ ಭಿನ್ನಮತ ರಾಜಕಾರಣಕ್ಕೆ ಉಪಯೋಗಿಸುತ್ತಿದ್ದಾರೆ. ಹೇಗೂ ಜಗನ್ ರೆಡ್ಡಿಯ ಖಾಸಾ ದೋಸ್ತಿಗಳು ನೋಡಿ?

ಈ ರೆಡ್ಡಿಗಳು ಬಿಸಾಕುತ್ತಿರುವ ಬ್ರೆಡ್ ತಿನ್ನಲ್ಲು ನಾಮುಂದೆ ತಾಮುಂದೆಯೆಂದು ಜೊಲ್ಲು ಸುರಿಸಿ ತಿನ್ನುತ್ತಿರುವವರು MLAಗಳು ಮಾತ್ರವಲ್ಲ, ಮಾಧ್ಯಮ ಮಿತ್ರರೂ ಎಂದು ಹೇಳಲು ವಿಷಾದವಾಗುತ್ತದೆ.

ಇಡೀ ಬಳ್ಳಾರಿಯನ್ನು ಗಣಿಗಾರಿಕೆ ನೆಪದಲ್ಲಿ ಅಗೆದು ಮಾರಿ ತಮ್ಮ ಮನೆ, ಹೆಲಿಕಾಪ್ಟರ್, MLAಗಳನ್ನು ಇಟ್ಟುಕೊಂಡಿರುವ ಈ ಬಳ್ಳಾರಿ ರೆಡ್ಡಿಗಳು ಬಳ್ಳಾರಿಯ ಪತ್ರಕರ್ತ ಮಿತ್ರರಿಗೆ ಪ್ರತಿ ವರ್ಷ laptop, ಕೆಮರಾಗಳನ್ನು ಭಿಕ್ಷೆಯಾಗಿ ನೀಡುತ್ತಾ ಇಟ್ಟುಕೊಂಡಿರುವುದು ಎಲ್ಲರಿಗೂ ತಿಳಿದಿದೆ. ಆದರೆ ರಾಜ್ಯ ಮಟ್ಟದಲ್ಲೂ ಈ ರೆಡ್ಡಿಗಳು ಪ್ರಾಯಶ: ಎಲ್ಲಾ ಪ್ರಮುಖ ಮಾಧ್ಯಮ ಮಿತ್ರರನ್ನು "ಸಾಕಿಕೊಂಡಿರುವುದು" ಇತ್ತೀಚಿನ ಭಿನ್ನಮತ ಸ್ಪೋಟದಲ್ಲಿ ಸ್ಪಷ್ಟವಾಗಿದೆ.

ಇಲ್ಲದಿದ್ದರೆ ಯಾವ ಮಾಧ್ಯಮ ಮಿತ್ರರೂ ಈ ರೆಡ್ಡಿಗಳಿಗೆ ಕೆಳಗಿನ ಪ್ರಶ್ನೆಗಳನ್ನೇಕೆ ಕೇಳುತ್ತಿಲ್ಲ:
 • ಇಡೀ ರಾಜ್ಯವೇ ನೆರೆಯಲ್ಲಿ ಕೊಚ್ಚಿ ಹೋಗಿರುವಾಗ ಭಿನ್ನಮತದ ಕಹಳೆ ಊದುವುದು ಯಾವ ಜನಪರ ಕಾರ್ಯ?
 • ತಾವು ಮಂತ್ರಿಗಳಾಗಿ ೧೬ ತಿಂಗಳಾಯಿತು - ತಮ್ಮ ಸಾಧನೆ ಏನು?
 • ಶ್ರೀರಾಮುಲು - ಈ ಮಹಾನುಭವ ಆರೋಗ್ಯ ಖಾತೆಯಂತಹ ಪ್ರಮುಖ ಖಾತೆ ಇಟ್ಟುಕೊಂಡಿದ್ದರೂ ಹಂದಿ ಜ್ವರದಂತಹ ಹೆಮ್ಮಾರಿ ಬಂದಿರುವಾಗ ಅಲ್ಲೇ ಬಳ್ಳಾರಿ ಹೈದರಾಬಾದಿಗೆ ತನ್ನ ಮೇಕಪ್ಪಿಗಾಗಿ ಹಾರಾಡುತ್ತಿದ್ದ ವಿನ: ವಿಧಾನಮಂಡಳದಲ್ಲಿ ಕಂಡು ಬಂದದ್ದು ಬೆರಳೆಣಿಕೆಯ ದಿನಗಳಲ್ಲಷ್ಟೇ. ಇತ್ತೀಚೆಗೆ ರಾಜ್ಯದ ಸರಕಾರೀ ವೈದ್ಯರು ರಾಜೀನಾಮೆ ಬೆದರಿಕೆ ಹಾಕಿದ್ದಾಗ ಕಾಣೆಯಾಗಿದ್ದ ಈ ಆಸಾಮಿಯ ಕೆಲಸವನ್ನು ಕಡೆಗೆ ಅದೇ ಯಡ್ಡಿ, ರಾ.ಗೌಡ, ಆಚಾರ್ಯರಂತವರು ಮಾಡಿ ಬಿಕ್ಕಟ್ಟು ಪರಿಹಾರ ಮಾಡಿದರು. ಜನರು ನೆರೆಯಲ್ಲಿ ಮುಳುಗಿರುವಾಗ ಶ್ರೀರಾಮುಲು ತನ್ನ ಮಿತ್ರರೊಂದಿಗೆ ಹೆಲಿಕಾಪ್ಟರಿನಲ್ಲಿ ಹಾರಾಡುತ್ತಾ ಅತ್ತ ಸಿನೆಮಾ ನೋಡುತ್ತಿದ್ದದ್ದು ಸರಿಯೇ?
 • ಕರುಣಾಕರ ರೆಡ್ಡಿ - ಕಂದಾಯದಂತಹ ಅತಿ ಪ್ರಮುಖ ಖಾತೆಯನ್ನು ಹೊಂದಿರುವ ಈ ಆಸಾಮಿ ರಾಜ್ಯವಿಡೀ ನೆರೆ ನೀರಿನಲ್ಲಿ ಮುಳುಗಿರುವಾಗ ಕೆಲ ಫೊಟೋಗಳಲ್ಲಿ ಮಿಂಚಿದರೇ (ಅದೂ ತನ್ನ ಮನೆಯಿರುವ ಬಳ್ಳಾರಿಯಲ್ಲಿ) ವಿನ: ತಾನು ರಾಜ್ಯದ ಕಂದಾಯ ಮಂತ್ರಿಯೆಂಬುದನ್ನು ಮರೆತು ಬಳ್ಳಾರಿಯಲ್ಲೇ ವಾರಗಟ್ಟಳೆ ಕೂತು ತನ್ನ ಗಣಿ ವ್ಯವಹಾರವನ್ನು ನೋಡಿ ಕೊಳ್ಳುತ್ತಿರುವುದು ಸರಿಯೇ?
 • ಇನ್ನು ಜನಾರ್ಧನ ರೆಡ್ಡಿ ಒಮ್ಮೆ ತಮ್ಮನ್ನು ಕುಮಾರಸ್ವಾಮಿ, ಚೆನ್ನಿಗಪ್ಪರ ವೀಡಿಯೋ ಇದೆ ಎಂದೆಲ್ಲಾ fool ಮಾಡಿದ್ದನ್ನು ಪತ್ರಕರ್ತ ಮಿತ್ರರು ಮರೆತಂತಿದೆ. ಇವತ್ತು ಗಣಿ ಲಂಚದ ವೀಡಿಯೋ ತೋರಿಸುತ್ತೇನೆ, ನಾಳೆ ತೋರಿಸುತ್ತೇನೆ ಎಂದೆಲ್ಲಾ ಹೇಳಿ ಬೆಂಗಳೂರು ಬಳ್ಳಾರಿ ನಡುವೆ ಪತ್ರಕರ್ತರನ್ನು ಓಡಾಡಿಸಿದ ಈ ಆಸಾಮಿ ಬರೀ ಟೊಳ್ಳುವೆಂದು ಜನರಿಗೆ ಯಾವಾಗಲೋ ಅರ್ಥವಾಗಿದೆ.
 • ಇನ್ನು ಜಗದೀಶ ಶೆಟ್ಟರ್ ಎಂಬ ಹುಬ್ಬಳ್ಳಿಯಾಂವನ ಬಗ್ಗೆಯೇನು ಹೇಳಬೇಕು? ಕುಮಾರಸ್ವಾಮಿಯ ೧೮ ತಿಂಗಳ ಸರಕಾರದಲ್ಲಿ ಕಂದಾಯ ಮಂತ್ರಿಯಾಗಿ ಅವರ ಸಾಧನೆಯೇನು ಎಂದು ಕೇಳಬೇಕಾಗುತ್ತದೆ. ಎಷ್ಟೇ ನೆನೆದರೂ ಈ ಶೆಟ್ಟರ್ ಕಂದಾಯ ಮಂತ್ರಿಯಾಗಿ ಏನು ಕಡೆದು ಹಾಕಿದರು ಎಂದು ನೆನಪಾಗುತ್ತಿಲ್ಲ. ಒಂದು ಮೂಲದ ಪ್ರಕಾರ ಆ 16 ತಿಂಗಳಲ್ಲಿ ಶೆಟ್ಟರ್ ಹಾಗೂ ಅವರ ಸಹೋದರ "ದುಡಿದು ಹಾಕಿದಷ್ಟು" ಕರ್ನಾಟಕದ ಯಾವ ಕಂದಾಯ ಮಂತ್ರಿಯೂ ದುಡಿದಿಲ್ಲವಂತೆ. ಅದೇ ಸುದ್ದಿ ಕೇಂದ್ರದ ಬಿಜೆಪಿ ನಾಯಕರುಗಳಿಗೆ ತಲುಪಿ ಅವರನ್ನು ಮುಂದಿನ ಸರಕಾರದಲ್ಲಿ ಮಂತ್ರಿ ಮಾಡದಿರುವ ತೀರ್ಮಾನ ಮಾಡಿದ್ದಾರೆಂದು ಕಳೆದ ವರ್ಷ ಕೇಳಿಬಂದಿತ್ತು. ಸದಾ ನಿದ್ದೆಯಿಂದ ಹೊರಬರದಿರುವ ಶೆಟ್ಟರ್ ಮುಖ್ಯಮಂತ್ರಿ ಕ್ಯಾಂಡಿಡೇಟ್ ಎಂದು ಯಾವ ಬಿಜೆಪಿ ಕಾರ್ಯಕರ್ತರೂ ನಂಬುವುದಿಲ್ಲ - ಕೇವಲ ರೆಡ್ಡಿಗಳಿಂದ ಕೃತಾರ್ಥರಾದ ಮಾಧ್ಯಮ ಮಂದಿಗಳಷ್ಟೇ ಅದನ್ನು ಹೇಳುತ್ತಿರುತ್ತಾರಷ್ಟೇ. ಇನ್ನು ರೆಡ್ಡಿಗಳ ಬೆಂಬಲದಿಂದ ಮುಖ್ಯಮಂತ್ರಿಯಾದರೂ ಆ ರೆಡ್ದಿಗಳ ಗಣಿ ಮಣ್ಣಿನ ಧೂಳು ತೆಗೆಯಲು ಕಾರ್ಪೆಟ್ ಆಗಬೇಕಷ್ಟೇ ಎಂದು ತಿಳಿಯದಷ್ಟು ಶೆಟ್ಟರ್ ದಡ್ಡರೇನಲ್ಲ.

ಈ ರೆಡ್ಡಿಗಳು ರಾಜ್ಯದ ಭೂಮಿಯನ್ನು ಲೂಟಿ ಮಾಡಿ ರಾಜ್ಯದ ರಸ್ತೆಗಳನ್ನು, ಬಂದರುಗಳನ್ನು ತಿಂದು ಕುಡಿದಾಗಿದೆ. ವಿಧಾನಸೌಧವಿರುವ ಜಾಗದಲ್ಲಿ ಖನಿಜ ಕಂಡುಬಂದರೆ ಅದನ್ನು ಅಗೆದು ಚೀನಾಕ್ಕೆ ಮಾರಲು ಹೇಸದ ಜನರು ಇವರು. ವರ್ಷಕ್ಕೊಮ್ಮೆ ಸಾಮೂಹಿಕ ವಿವಾಹ, ಸುಷ್ಮಾ ಸ್ವರಾಜ್ ಜೊತೆ ವರಮಹಾಲಕ್ಷ್ಮಿ ಪೂಜೆ ಮಾಡಿದ ಕೂಡಲೇ ರಾಜ್ಯದಲ್ಲಿ ತಮ್ಮ ಮೀರುವ ನಾಯಕರು ಇಲ್ಲ, ತಮ್ಮ ಗುರಿ ಮುಖ್ಯಮಂತ್ರಿ ಖುರ್ಚಿಯೆಂದೆಲ್ಲಾ ಹೇಳಿಸಿಕೊಳ್ಳುವ ಈ ರೆಡ್ಡಿಗಳು ಕರ್ನಾಟಕದ ಜನತೆಯ ತಾಳ್ಮೆ ಪರಿಶೀಲಿಸುತ್ತಿದ್ದಾರೆ.

ಇಷ್ಟೆಲ್ಲಾ ತಮ್ಮ ಕಣ್ಣ ಮುಂದೆಯಿದ್ದರೂ ರೆಡ್ಡಿಗಳು ಹೇಳಿದ್ದೇ ಪಂಚಾಮೃತವೆಂದು ಬರೆಯುವ ದೊಡ್ಡ ಪತ್ರಕರ್ತರ ಗುಂಪೇ ಇದೆ. ಇದೇ ಗುಂಪಿಗೆ ೨೬ MLAಗಳು ೮೦ MLAಗಳಂತೆ ಕಾಣುತ್ತಾರೆ. ಪದೇ ಪದೇ ಯಡ್ಯೂರಪ್ಪನವರ ಬಗ್ಗೆ ಬರೆದದ್ದನ್ನೇ ಬೇರೆ ಬೇರೆ ರೀತಿಯಲ್ಲಿ ಬರೆದು (ಯಡ್ಯೂರಪ್ಪ ಸಿಡುಕ, ಸಹ ಮಂತ್ರಿಗಳ ಜೊತೆ ನಗುವುದಿಲ್ಲ, ಶೋಭಾ show ಇತ್ಯಾದಿ) ತಮ್ಮ ಕಾಲಂಗಳನ್ನು ತುಂಬಿಸಿಕೊಳ್ಳುತ್ತಿದ್ದಾರೆ. ಅವರು ಯಡ್ಯೂರಪ್ಪನವರ ಬಗ್ಗೆ ಬರೆಯುವುದೆಲ್ಲಾ ನಿಜವಿರಬಹುದು, ಆದರೆ ಆ ವಿಷಯಗಳನ್ನೆತ್ತಲು ಇದು ಸರಿಯಾದ ಸಮಯವೇ?

ಅತ್ತ ಜಗನ್ ತನ್ನ ತಂದೆ ಹೆಲಿಕಾಪ್ಟರ್ ದುರಂತದಲ್ಲಿ ಮಡಿದು ಬಾಡಿ ಸಿಗುವ ಮೊಡಲೇ ಟಿವಿ ಪತ್ರಿಕೆಗಳಲ್ಲಿ ತನ್ನನ್ನು ಮುಂದಿನ ಮುಖ್ಯಮಂತ್ರಿಯಾಗಿ project ಮಾಡಿಕೊಂಡು ಈಗ ಎಲ್ಲಿದ್ದಾರೆಯೆಂಬುದನ್ನು ಹುಡುಕುವ ಸ್ಥಿತಿ ಬಂದಿದೆ. ಯಾವ ಮಾಧ್ಯಮಗಳು ಪತ್ರಕರ್ತರು ಜಗನ್ ರೆಡ್ಡಿಯನ್ನು ಆಂಧ್ರದ ಮುಖ್ಯಮಂತ್ರಿಯೆಂದು project ಮಾಡಿದರೋ ಅದೇ ಮಾಧ್ಯಮಗಳು ಈಗ ಜಗನ್ ರೆಡ್ಡಿಯನ್ನು ಮೂಸಿ ನೋಡುತ್ತಿಲ್ಲ.

ಮಾಧ್ಯಮಗಳ ಮೂಲಕವೇ ರಾಜಕೀಯ ನಡೆಸಬಹುದು, ಪತ್ರಕರ್ತರನ್ನು ತಮ್ಮ ಎಜೆಂಡಾಗೆ ತಕ್ಕಂತೆ ಬಳಸಿಕೊಳ್ಳಬಹುದು, ಜನರನ್ನು ವರಿಷ್ಠರನ್ನು ತಮ್ಮ ದಾರಿಗೆ ತರಬಹುದು ಎಂದು ರೆಡ್ಡಿಗಳು ಭಾವಿಸಿದ್ದರೆ ಅತ್ತ ಆಂಧ್ರದಲ್ಲಿ ಜಗನ್ ರೆಡ್ಡಿಗಾದ ಪರಿಸ್ಥಿತಿಯನ್ನು ನೋಡಿಯಾದರೂ ಕಲಿಯುವುದೊಳಿತು.

Tuesday, September 29, 2009

What is wrong in police posing as journalists to catch anti-nationals?

Two police officers posing as journalists from Singapore captured Maoist terrorist leader Chatradhar Mahato. (Photo:Telegraph Calcutta)

Seems almost like a plot from spy movie.

From Times of India:

"Mahato was not arrested outright. The television crew' interviewed him till 2 pm and then took him aside for a phone-in'. Once isolated, he was pushed into a vehicle at gunpoint. Before PCPA members could react, the vehicles had pulled away from the area. "
Not surprisingly when whole W.Bengal police force was looking for this terrorist, local journalists had free access to him, just like how our own Gowri Lankesh and other "journalists" have access to Naxals of Western Ghats. And police exploited that connection to arrest the terrorist fooling even local journalists who ran for their life and are now shivering with fear.

Predictably, some media organisations are seeing red (no pun)

The Press Club of Calcutta has “condemned” the police’s disguise as journalists, saying it had "lowered the dignity of the profession”. Of course, rubbing shoulders with terrorists brings "dignity to profession"?

W.Bengal PWD minister raises a good question - “The end justifies the means. The police always try to zero in on culprits under disguise. What if the godmen and beggars now complain the police undermine their professional credibility and security by posing as one of them?” asked Kshiti Goswami, the RSP leader and PWD minister.

Good question. When Tehelka fooled politicians claiming to be weapon dalals, I don't remember anyone saying Tehelka journalists "lowered the dignity of arms brokers"? Rather same media hailed that sting operation as some kind of watershed event in Indian journalism? What is wrong now if police use same tactics and pose as journalists to catch anti-national elements?

Some other retired irrelevant busy bees in media like Nihal Singh and Inder Malhotra and "International Federation of Journalists" (whose fake membership card one can purchase for less than 200 Rupees) claim this operation has " “diminished the role and profession of journalists.”. Really Mr.Malhotra? Isn't this the same Malhotra who worshipped Indira Gandhi when she shut down or blacked out newspapers during Emergency? And even now justifies Indira Gandhi's action during Emergency "because of her struggles in Indian politics as a woman"?

Closer home it is open secret that some journalists and professors in Shimoga, Kuvempu University, Udupi and Mangalore are in regular touch with Naxals of Western Ghats. Gowri Lankesh - a "journalist" just because her dad was "journalist"- had interviewed Naxals in Western Ghats for her rag and when a naxal was killed in encounter had demanded that govt release body to her so that she can construct a memorial. (she ended up losing Editor post for that blunder)

If a journalist can wear many roles for their "sting operations", what is wrong in police claiming to be journalist to catch anti-national elements? When journalists openly boast of their connections to these terrorists and use that to sell their stories or get ratings (or sell themselves as seen in W.Bengal where two local journalists sold themselves to someone claiming to be from Singapore media house), what is wrong if police pose as journalists to do their job?

Saturday, September 5, 2009

ರಜೆಯೆಂದರೆ ಮಾಧ್ಯಮ ಮಿತ್ರರಿಗೇಕೆ ಅಲರ್ಜಿ?

ಸಡನ್ನಾಗಿ ಕೆಲ ಕನ್ನಡ ಮಾಧ್ಯಮ ಮಿತ್ರರು YSR ನಿಧನಕ್ಕೆ ಕರ್ನಾಟಕದಲ್ಲಿ ರಜೆ ಯಾಕೆಯೆಂಬ ಚರ್ಚೆ ಶುರು ಮಾಡಿದ್ದಾರೆ.

ಎಂದಿನಂತೆ "ವಿಜಯ ಕರ್ನಾಟಕ" ತನ್ನ ಕಚೇರಿಗೆ ಈ ರಜೆ ಯಾಕೆ ಬೇಕಿತ್ತು ಎಂದು ಕೇಳಿ ಬಹಳ ಕರೆಗಳು ಬಂದವು ಎಂದು ಹೇಳಿಕೊಂಡಿದೆ. ಕರೆ ಮಾಡಿದವರ ಹೆಸರು ಏನು, ಕೆಲಸವೇನು ಮುಂತಾದ details ಕೇಳಬೇಡಿ - ಕರ್ನಾಟಕದ ನಂ.೧ ಪತ್ರಿಕೆ ಪತ್ರಿಕಾಧರ್ಮದ basics ಮರೆತು ತನಗೆ ಬೇಕಾದ ಹಾಗೆ ಅನಾಮಧೇಯ SMS, ಫೋನ್, ಪತ್ರಗಳನ್ನು ಸೃಷ್ಟಿಸುವುದರಲ್ಲೂ ನಂ.೧ ಅಲ್ಲವೇ? ಕೆಲ ಪತ್ರಿಕೆಗಳ ಸಂಪಾದಕರು "ಹೆಸರು ಬೇಡ, ಊರು ಗೊತ್ತಿಲ್ಲ"ವೆಂಬ ವಾಚಕರ ಪತ್ರಗಳನ್ನು ಸೃಷ್ಟಿಸಿದಂತೆ.

Thaskannada.com ನ ಶ್ಯಾಮಸುಂದರ್ ಅಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ "ಶುಕ್ರವಾರದ ರಜೆ ನಮ್ಮ ಪ್ರಕಾರ ಅಸಿಂಧು" ಎಂದು ಷರಾ ಬರೆದುಬಿಟ್ಟಿದ್ದಾರೆ.

ರಜೆ ಕೊಡಬೇಕಿತ್ತಾ ಇಲ್ಲವೋ ಚರ್ಚೆ ಈ ಬ್ಲಾಗ್ ಪೋಸ್ಟಿನ ಉದ್ಧೇಶವಲ್ಲ. ಆದರೆ ತಮಗೆ ಬೇಕಾದ ಹಾಗೆ ಹೇಗೆ ಒಂದು sentimentನ್ನು, opinionನ್ನು ಮಾಧ್ಯಮಗಳು out of the air ಹೇಗೆ ಸೃಷ್ಟಿ ಮಾಡುತ್ತವೆಯೆಂದು ತೋರಿಸಲಷ್ಟೇ.

____________________________________________________________

ರಜೆ ಕೊಟ್ಟರೆ ಯಾಕೆ ರಜೆ ಕೊಟ್ರಿ ಎಂಬ ಪ್ರಶ್ನೆ.

ಒಂದು ವೇಳೆ ಕರ್ನಾಟಕ ರಜೆ ಕೊಡದಿದ್ದರೆ ಪ್ರಶ್ನೆಗಳು ಹೀಗಿರುತ್ತಿದ್ದವೇನೋ? ನೀವೂ guess ಮಾಡಿ ಕಮೆಂಟಿನಲ್ಲಿ:
 • ಅತ್ತ ತಮಿಳುನಾಡಿನಲ್ಲಿ ರಜೆ ಕೊಟ್ರು, ಕರ್ನಾಟಕದಲ್ಲೇಕೆ ರಜೆಯಿಲ್ಲ?
 • ವೈ.ಎಸ್.ಆರ್. ಕಾಂಗ್ರೆಸ್, ಅದಕ್ಕೇ ಕರ್ನಾಟಕದ ಬಿಜೆಪಿ ಸರಕಾರ ರಜೆ ಕೊಡಲಿಲ್ಲಯೆಂಬ ಮೂದಲಿಕೆ.
 • ವಿರೋಧ ಪಕ್ಷವಾದ ಕಾಂಗ್ರೆಸ್ಸಿನಿಂದ ರಜೆಗೆ ಒತ್ತಾಯಿಸಿ ಧರಣಿ, ಸತ್ಯಾಗ್ರಹ. ಒಂದೆರಡು ಬಸ್ ಭಸ್ಮ
 • ನಾಯಕರು ಸತ್ತಾಗಲೂ ರಜೆ ಕೊಡದೆ ರಾಜಕೀಯ ಮಾಡುವ ಬಿಜೆಪಿ ಸರಕಾರವೆಂಬ ಆರೋಪ
 • TV9 Breaking News "ಮರಣದಲ್ಲೂ ರಾಜಕೀಯ ಮಾಡುವ ಕರ್ನಾಟಕದ ಬಿಜೆಪಿ ಸರಕಾರ"
 • ಈTV Breaking News "ರಜೆಯಿಲ್ಲದ ಈ YSR ಸಾವು ನ್ಯಾಯವೇ?"
 • Churumuriಯಲ್ಲಿ "Ella OK, Worku Yaake?"
 • ಬಳ್ಳಾರಿ ರೆಡ್ಡಿ ಕೃಪಾಪೋಷಿತ ಪತ್ರಕರ್ತರುಗಳ ವರದಿಗಳು ಹೀಗಿರುತ್ತಿದ್ದವೇನೋ - "YSR ನಿಧನಕ್ಕೆ ರಜೆ ಕೊಡದ ಕರ್ನಾಟಕ ಸರಕಾರದ ವಿರುದ್ಧ ಸಿಡಿದೆದ್ದ ಬಳ್ಳಾರಿ ಬ್ರದರ್ಸ್!"
 • ಬ್ಲಾಗ್ ವಿಧುರ ಜೋಗಿ ಒಂದು ವೇಳೆ ಬ್ಲಾಗು ಬರೆಯುತ್ತಿದ್ದರೆ, ಹೇಗೆ ಇದೆಲ್ಲಾ Christian YSR ವಿರುದ್ಧ ಮಂಗಳೂರಿನ ಸಂಘ ಪರಿವಾರದ conspiracy ಎಂದೆಲ್ಲಾ "ಅವಧಿ"ಯಲ್ಲಿ ಬರೆಯುತ್ತಿದ್ದರೇನೋ.
ಏನ್ ಹೇಳ್ತೀರಾ ನೀವು?

Tuesday, September 1, 2009

ಇಂಟರನೆಟ್ಟು, ಬ್ಲಾಗು, office ಗಾಸಿಪ್ಪು - ಸೈಬರ್ ಕ್ರೈಮಂತೆ

ಮಿತ್ರನೊಬ್ಬ TV9 Delhi Bureau Chief Shivaprasad T.R. ಬ್ಲಾಗ್ ಲಿಂಕು ಕಳಿಸಿದ್ದ.

ಆ ಬ್ಲಾಗಿನಲ್ಲಿ ಈ ಶಿವಪ್ರಸಾದ್ ಟಿ.ಆರ್. ರವರು ಪಾಪ ಗೋಳೋ ಅಂದತ್ತಿಕೊಂಡಿದ್ದಾರೆ. ಯಾರೋ ಅವರ ಬಗ್ಗೆ ಗಾಸಿಪ್ ಹಬ್ಬಿಸುತ್ತಿದ್ದಾರಂತೆ, ಅವರು ದಿನಕ್ಕೆ ೧೮ ಘಂಟೆ ಕೆಲಸ ಮಾಡುತ್ತಾರಂತೆ, ಏನೋ ಬುಕ್ ಬರೆಯುತ್ತಿದ್ದಾರಂತೆ, ಬೇರೆ ಕೆಲಸಕ್ಕೆ ಪುರುಸೊತ್ತಿಲ್ಲವಂತೆ, ಆಫೀಸಿನಲ್ಲಿ ದೆಹಲಿ ನಂತರ ಎಲ್ಲಿ ಅಂತ ಗೊತ್ತಿಲ್ಲವಂತೆ ಎಂದೆಲ್ಲಾ ಏನೋ ಅಸಂಬದ್ಧವಾಗಿ ಪ್ರಲಾಪಿಸಿದ್ದಾರೆ. ತಮ್ಮ ತೊಂದರೆ ಸಂಸಾರ ತಾಪತ್ರಯವೆಲ್ಲಾ ಬರೆದುಕೊಂಡದ್ದು ಸಾಲದೆ ಕಡೆಗೆ ಯಾವುದೋ ಬ್ಲಾಗ್ ವಿರುದ್ಧ ದೆಹಲಿ ಪೊಲೀಸರ ಸೈಬರ್ ಕ್ರೈಮ್ ಡಿವಿಜನ್ನಿಗೆ ಕಂಪ್ಲೇಂಟ್ ಕೊಟ್ಟಿದ್ದೇನೆಂದು ಕೊಚ್ಚಿಕೊಂಡಿದ್ದಾರೆ.

ಯಾರೋ ಇಂಟರನೆಟ್ಟಿನಲ್ಲಿ ತನ್ನ ಬಗ್ಗೆ ಉಲ್ಲೇಖ ಮಾಡಿದ್ದಾರೆ ಅಥವಾ ಬರೆದಿದ್ದಾರೆಯೆಂಬುದನ್ನೇ ಶಿವಪ್ರಸಾದರು ಸೈಬರ್ ಕ್ರೈಮೆಂದು ತಿಳಿದಿರುವುದು ಬಹಳ ಆಶ್ಚರ್ಯಕರ. ಅದರಲ್ಲೂ ತಾನು ಟಿವಿಯಲ್ಲಿ ಯಾರ ಮೇಲೂ ಏನು ಬೇಕಾದರೂ ಹೇಳಬಹುದು, ಆದರೆ ತನ್ನ ಬಗ್ಗೆ ಯಾರೂ ಮಾತನಾಡಕೂಡದು ಎಂಬ ಶಿವಪ್ರಸಾದರ ಧೋರಣೆ ಮುಕ್ತ ಮಾಧ್ಯಮ ವಿರೋಧಿ ಮತ್ತು ಸಂವಿಧಾನ ಬದ್ಧ freedom of speech ವಿರೋಧಿಯಲ್ಲವೇ?

ಶಿವಪ್ರಸಾದರನ್ನೇ ತೆಗೆದುಕೊಳ್ಳಿ - ಪದ್ಮಪ್ರಿಯ ಕಾಣೆ ಪ್ರಕರಣದಲ್ಲಿ ಈ ಶಿವಪ್ರಸಾದ ಮತ್ತು ಅವರ TV9 ಹೇಗೆ ವರ್ತಿಸಿತು, ಹೇಗೆ ಪದ್ಮಪ್ರಿಯಾ ಬಗ್ಗೆ ಇಲ್ಲಸಲ್ಲದ ಸುದ್ದಿಯನ್ನು ಪ್ರಸಾರ ಮಾಡಿ ಕಡೆಗೆ ಅವರ ಜೀವವನ್ನೇ ತೆಗೆದುಕೊಳ್ಳುವ ಸ್ಥಿತಿ ಉಂಟುಮಾಡಿತು ಎಂಬುದನ್ನು ಹೇಗೆ ಮರೆಯಲು ಸಾಧ್ಯ? ಒಬ್ಬರ ಜೀವ ಮರಣದ ಪ್ರಶ್ನೆ ಬಂದಾಗ careless ಆಗಿ ವರ್ತಿಸಿ ಯಾರ್ಯಾರೋ ಮೇಲೆ ಕಮೆಂಟು ಮಾಡಿದ ಇವರು ಈಗ ಯಕ:ಶ್ಚಿತ್ ಇಂಟರನೆಟ್ಟು ಬ್ಲಾಗಿನಲ್ಲಿ ಯಾರೋ ತನ್ನ ಹೆಸರು ಬರೆದಿದ್ದಾರೆಂದ ಮಾತ್ರಕ್ಕೆ ಸೈಬರ್ ಕ್ರೈಮ್ ಡಿವಿಜನ್ನಿಗೆ ಹೋಗಿ ಕಂಪ್ಲೇಂಟ್ ಕೊಡುತ್ತಾರೆ!

ಆ ಪೊಲೀಸರು ಇವರು ಪತ್ರಕರ್ತರೆಂದು ರೋಪು ಹಾಕಿದಕ್ಕೇನೋ ಇವರ ಕಂಪ್ಲೇಂಟ್ ತೆಗೆದುಕೊಂಡಿರಬಹುದು - ಆದರೆ ಇಂದಿನ ಉಗ್ರವಾದಿಗಳ ತಾಂಡವವಾಡುವ ದಿನಗಳಲ್ಲಿ ಇಂತಹ ವೈಯಕ್ತಿಕ ಪುಟುಗೋಸಿ ವಿಷಯಕ್ಕೆ importance ಕೊಡುವಷ್ಟು ದೆಹಲಿ ಪೊಲೀಸರು ದಡ್ಡರಲ್ಲವೆಂದು ನನ್ನ ಅಭಿಪ್ರಾಯ.

ಏನ್ ವಿಪರ್ಯಾಸ ನೋಡಿ - ಶಿವ ಪ್ರಸಾದ್ ಟಿ.ಆರ್.ರ ಬಯೋಡಾಟಾ ಪ್ರಕಾರ ಅವರು ಸ್ವಾತಂತ್ರ್ಯ ಹೋರ‍ಾಟ, ಜಾಲಿಯಾನ್ ಬಾಗ್ ಹತ್ಯೆ ಬಗ್ಗೆ ಪುಸ್ತಕ ಬರೆದಿದ್ದಾರಂತೆ. ಇದೇ ಶಿವ ಪ್ರಸಾದರು ಯಾವ ಸ್ವಾತಂತ್ರ್ಯಕ್ಕಾಗಿ ನಮ್ಮ ಸ್ವಾತಂತ್ರ್ಯ ಹೋರ‍ಾಟಗಾರರು ಬಲಿದಾನ ಮಾಡಿದರೋ ಅದೇ ಸ್ವಾತಂತ್ರ್ಯವನ್ನು ಪೊಲೀಸ್ ಕಂಪ್ಲೇಂಟ್ ಕೊಡುವುದರ ಮೂಲಕ, ಹೆದರಿಸುವುದರ ಮೂಲಕ ಕಸಿಯಲು ಹೊರಟಿದ್ದಾರೆ. ಒಟ್ಟಾರೆ ಮಾಧ್ಯಮದವರು ಏನು ಬೇಕಾದರೂ ಯಾರ ಮೇಲೂ ಏನೂ ಬರೆಯಬಹುದು, ಆದರೆ ಅವರ ದ್ವಂದ್ವ ನೀತಿಯನ್ನು ತಪ್ಪನ್ನು ಎತ್ತಿ ತೋರಿಸಿದರೆ ಪೊಲೀಸ್ ರಾಜ್ಯ ಹೇರಲು ಹೊರಟಿದ್ದಾರಿವರು. ತಾನು ದೆಹಲಿಯಲ್ಲಿದ್ದರೂ ಕರ್ನಾಟಕದ ಗುಪ್ತ ಇಲಾಖೆಯ ಆಫೀಸರ್ ಹೆಸರನ್ನು ಇವರು namedrop ಮಾಡುವ ಉದ್ದೇಶ ತಾನು ಎಷ್ಟು well connected ಎಂದು ತೋರಿಸುವುದಕ್ಕಲ್ಲದೇ ಮತ್ತೇನು?

ಎಂಥಹಾ ಪರಿಸ್ಥಿತಿ ಬಂದಿದೆ ನೋಡಿ ಕನ್ನಡ ಮಾಧ್ಯಮಗಳಿಗೆ - ದೆಹಲಿ posting ಅಂದರೆ ಮುಂಚೆಯೆಲ್ಲಾ ಎಂತಹ prestige ಇತ್ತು, ಗೌರವ ಇತ್ತು. ರ‍ಾಷ್ಟ್ರೀಯ ಅಂತರಾಷ್ಟ್ರೀಯ ವಿಚಾರ ತಿಳಿದಿರುವ, ಕನಿಷ್ಟ treaty, law ತಿಳಿದಿರುವ ವರದಿಗಾರರನ್ನು ದೆಹಲಿಗೆ ಕಳಿಸುತ್ತಿದ್ದರು. ಹೀಗಿರುವಾಗ ಶಿವಪ್ರಸಾದರಿಗೆ cyber law ತಿಳಿದಿರದಿದ್ದರೆ ಅದು ಅವರ ತಪ್ಪಲ್ಲ. ಒಂದು cyber complaint ಕೊಡಬೇಕಾದರೆ ಅಲ್ಲಿ ಏನೋ ಡ್ಯಾಮೇಜ್ ಆಗಿರಬೇಕು (cheating, ಹಣ ಕಳೆದುಕೊಳ್ಳುವುದು, ಮಾನ ನಷ್ಟ, ಅಶ್ಲೀಲ, threat ಇತ್ಯಾದಿ). ಆದರೆ ಶಿವಪ್ರಕಾಶರ ಪ್ರಕಾರ ಅವರ ಆಫೀಸಿನಲ್ಲಿ ಅಥವಾ ಮಾಧ್ಯಮ ಮಿತ್ರರು ಮಾಡುವ ಗಾಸಿಪ್ cyber crime ಅಂತೆ!

ಈಗ ಪತ್ರಿಕೆಗಳು, ಟಿವಿ ಚಾನೆಲ್ಲುಗಳು ಯಾರು ಕೈಗೆ ಸಿಗುತ್ತಾರೋ, ಯಾರಿಗೆ ಹಿಂದಿ ಇಂಗ್ಲಿಷ್ ಬರುತ್ತೋ ಅವರನ್ನು ದೆಹಲಿಗೆ ಕಳಿಸುವ ಪರಿಸ್ಥಿತಿ ಬಂದಿದೆ. ಇವರೂ ಕರ್ನಾಟಕ ಭವನದ ಇಡ್ಲಿ ದೋಸೆ ತಿನ್ನುತ್ತಾ ಅಲ್ಲಿನ ಕ್ಯಾಂಟೀನಿನ ಅಂದಿನ ಗಾಸಿಪ್ಪನ್ನೇ ವರದಿ ಮಾಡಿ ದಿನಕಳೆಯುತ್ತಿದ್ದಾರೆ. ದೆಹಲಿ ಬೈಲೈನ್ ಹಾಕಿ ಬೇರೆ ಬೇರೆ ಕನ್ನಡ ಪತ್ರಿಕೆಗಳ ವರದಿಗಳನ್ನೇ ನೋಡಿ - ವರದಿಗಳಲ್ಲಿ ಏನೂ ವಿಶೇಷವೇ ಇಲ್ಲ. ಎಲ್ಲವೂ identical. Sourceಗಳೂ ಒಂದೇ, ಸುದ್ದಿಯೂ ಒಂದೇ, ಗಾಸಿಪ್ಪೂ ಒಂದೇ.

ಪರಿಸ್ಥಿತಿ ಹೀಗಿರುವಾಗ ಶಿವಪ್ರಸಾದರು ಬ್ಲಾಗಿಗರ ಮೇಲೆ ಪೊಲೀಸ್ ಕಂಪ್ಲೇಂಟ್, ರೋಪ್ ಹಾಕಿರುವುದನ್ನು ಕಂಡು ಆಶ್ಚರ್ಯವಾಗಲಿಲ್ಲ. ಕರ್ನಾಟಕ ಭವನಕ್ಕೆ ಬರುವ ರಾಜಕಾರಣಿಗಳ ಜೊತೆ ಮಸಾಲೆ ದೋಸೆ ತಿಂದು ಕಾಫಿ ಕುಡಿದ ಮಾತ್ರಕ್ಕೆ ತಾವು well connected, powerful ಎಂಬ ಭಾವನೆ ಈ ಪತ್ರಕರ್ತರಲ್ಲಿ ಮೂಡುತ್ತದೆ. ಒಂಥರಾ arrogance ಬರುತ್ತದೆ. ಅದೇ arrogance ಶಿವಪ್ರಸಾದರು ಮಾಧ್ಯಮ ಮನೆಗಳ ಗಾಸಿಪ್ ವಿರುದ್ಧ cyber crime complaint ಕೊಡುವಂತೆ ಪ್ರೇರೇಪಿಸಿದೆ.

ನೀವೇ ಒಮ್ಮೆ ಅವರ ಅಸಂಬದ್ದ ಪ್ರಲಾಪ ಓದಿ ನೋಡಿ - ಏನೋ ಸ್ವಲ್ಪ ಆಚೀಚೆ ಆದಂತಿದೆ. ಏನೇ ಇರಲಿ ಅವರ ಎಲ್ಲಾ ಪರ್ಸನಲ್ ತೊಂದರೆಗಳು ಬಗೆಹರಿಯಲಿ ಎಂದು ಆಶಿಸೋಣ.
___________________________________________________________________
ಕೊನೆ ಗುಟುಕು: ಅಂದ ಹಾಗೆ ಈ ಬ್ಲಾಗ್ ಪೋಸ್ಟನ್ನು ನನ್ನ ಲಾಯರ್ ಗೆಳೆಯ (Rank Holder and Cyber Law Specialist) review ಮಾಡಿದ್ದಾನಲ್ಲದೆ ಈ ಪೋಸ್ಟ್ ಮಾಡುವುದು cyber crime ಅಲ್ಲ - ಸಂವಿಧಾನ ದತ್ತ ವ್ಯಕ್ತಿ ಸ್ವಾತಂತ್ರ್ಯದಡಿ ಬರುತ್ತದೆಯೆಂದು certify ಮಾಡಿದ್ದಾನೆ. ಅವನ ಮಾತಲ್ಲಿ ಒಂದು ಉದಾಹರಣೆ ಕೊಡಬೇಕಾದರೆ - ನನ್ನ ಪೋಸ್ಟಿನಲ್ಲಿ ಪದ್ಮಪ್ರಿಯ ಮತ್ತು TV9 ಉಲ್ಲೇಖವಿದೆ. ಆದರೆ ನಾನು ಬರೆದಿರುವುದು "ಶಿವಪ್ರಸಾದರು ಮತ್ತು TV9 ಪದ್ಮಪ್ರಿಯಾ ಮರಣಕ್ಕೆ ಕಾರಣವಾಗುವಂತಹ ಸುದ್ದಿ ಪ್ರಸಾರ ಮಾಡಿದರು". ಇದನ್ನೇ ನಾನು "ಪದ್ಮಪ್ರಿಯಾ ಮರಣಕ್ಕೆ ಶಿವಪ್ರಸಾದ ಮತ್ತು TV9 ಕಾರಣ" ಎಂದು ಬರೆದಿದ್ದರೆ ಅದು ಮಾನಹಾನಿಕರವಾಗುತಿತ್ತು. ಈ ಬ್ಲಾಗಿನ ಪ್ರತೀ ವಾಕ್ಯವು ಇಂತಹ ಪರಿಶೀಲನೆಗೆ ಒಳಗಾದ ನಂತರವೇ ಪ್ರಕಟಣೆ ಮಾಡುತ್ತಿದ್ದೇನೆ. ಶಿವಪ್ರಸಾದ ಮತ್ತವರ ದೆಹಲಿಯ powerful ಗೆಳೆಯರು ತಮ್ಮ ಸಂಸ್ಥೆಗಳ ಬಲ ಪ್ರಯೋಗಿಸಿ ಬೇರೆ ಬ್ಲಾಗು ಬಂದು ಮಾಡಬಹುದು. ಶಿವಪ್ರಸಾದರು ಈ ಬ್ಲಾಗಿನ ವಿರುದ್ಧವೂ ಕಂಪ್ಲೇಂಟ್ ಕೊಡಬಹುದು. ಆದರೆ ಅದನ್ನು ಎದುರಿಸಲು ನಾವು ಬೇಕಾದಂತಹ due diligence ಮಾಡಿದ್ದೇವೆಯೆಂದು ಹೇಳಲು ಈ ಸ್ಪಷ್ಟೀಕರಣವಷ್ಟೇ.
___________________________________________________________________

Wednesday, August 26, 2009

ಬ್ಲಾಗು ಕಮೆಂಟು ಜಂಜಾಟ - ಹೋಗಿ ಬನ್ನಿಯಲ್ಲ, ಹೋಗಿ ಹೋಗಿ ಜೋಗಿ..

ಕನ್ನಡ ಬ್ಲಾಗೋಸ್ಫೀಯರಲ್ಲಿ ಅನಾಮಿಕ ಬ್ಲಾಗುಗಳ ವಿರುದ್ಧ ಟೀ ಕಪ್ಪಿನಲ್ಲಿ ಚಂಡಮಾರುತದಂತೆ (Storm in a tea cup) ಅಲ್ಲೋಲ ಕಲ್ಲೋಲವುಂಟಾಗಿದೆ. ಬ್ಲಾಗುಗಳ ಹಿಂದಿರುವವರು ಯಾರು, IP Address ಟ್ರಾಕ್ ಮಾಡುವುದು (Proxy Serverಗಳ ಬಗ್ಗೆ ಕೇಳಿದ್ದಾರೋ ಇಲ್ಲವೋ ಈ Modern ಸೈಬರ್ Sherlock Homes ಗಳು) ಇವುಗಳ ಕುರಿತೇ ಇಡೀ ದಿನ ಚಿಂತಿಸುತ್ತಾ ಆಕಾಶವೇ ತಲೆ ಮೇಲೆ ಬಿದ್ದಂತೆ ಕುಳಿತಿದೆ ಕನ್ನಡ ಬ್ಲಾಗಿನ ವರ್ಗವೊಂದು.

ಕನ್ನಡ ಬ್ಲಾಗ್ ಲೋಕದ ಜನಪ್ರಿಯ ಜೋಗಿಯವರು ಬ್ಲಾಗು ಬಂದು ಮಾಡುತ್ತಾರಂತೆ, ಅವರಿಗೆ ಬುದ್ಧಿ ಹೇಳಬೇಕೆಂದೆಲ್ಲಾ ತಮ್ಮ fan boisಗಳಿಂದ ಹೇಳಿಸಿಕೊಳ್ಳುತ್ತಿದ್ದಾರೆ.

ಜೋಗಿಯವರು ಅದ್ಭುತ ಬರಹಗಾರ ಮತ್ತು ಜನಪ್ರಿಯ ಬರಹಗಾರ ಮತ್ತು ಬ್ಲಾಗಿಗನೆಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅವರು ಈ permanent victim complex ಗೊಳಗಾಗಿ ಪದೇ ಪದೇ ಬ್ಲಾಗ್ ಬಂದ್ ಮಾಡುವುದು, ಬ್ಲಾಗ್ ಡಿಲೀಟ್ ಮಾಡುವುದು, ಅವರ fan boiಗಳು ಸಾರ್ ಬ್ಲಾಗ್ ಬಂದ್ ಮಾಡಬೇಡಿಯೆಂದು ದಮ್ಮಯ್ಯ ದಕ್ಕಯ್ಯ ಹಾಕುವುದರ ಮರ್ಮ ಅರಿವಾಗುತ್ತಿಲ್ಲ.

ಕೆಲ ಸಮಯದ ಹಿಂದೆ ಬೈಂದೂರಿನಲ್ಲಿ ಚಾರ್ಲಿ ಚಾಪ್ಲಿನ್ ಪ್ರತಿಮೆಗೆ ವಿರೋಧವುಂಟಾದಾಗ ತಾನು ದಕ್ಷಿಣ ಕನ್ನಡದವನೆಂಬ ಒಂದೇ ಕಾರಣಕ್ಕೆ ತಾನು ಕರಾವಳಿಯವನೆಂದು ಹೇಳಲು ನಾಚಿಕೆಯಾಗುತ್ತದೆಂದು ಗೋಳೋ ಎಂದು ಅತ್ತು, ಏನೇನೋ ಬರೆದು ತನ್ನ fan boisಗಳೆದುರು ಹೀರೋ ಆಗಿ ತನ್ನ ಗೆಳೆಯ ಹೇಮಂತ ಹೆಗಡೆಯ ಚಿತ್ರಕ್ಕೆ ಪುಕ್ಕಟೆ ಪ್ರಚಾರವನ್ನು ಜೋಗಿ ಒದಗಿಸಿದ್ದು ಹೇಗೆ ಮರೆಯಲು ಸಾಧ್ಯ ಹೇಳಿ? ಅದೇ techniqueನ್ನು ಪುನ: ಪುನ: ಉಪಯೋಗಿಸಿ ತನ್ನ ಹೆಸರು ಪ್ರಚಾರದಲ್ಲಿಡಲು ಈಗ ಈ ಬ್ಲಾಗ್ ಲೋಕಕ್ಕೆ ವಿದಾಯವೆಂಬ ನಾಟಕ ಬೇಕಿತ್ತಾ?

ಅಲ್ಲಾ ಅಪ್ಪ ಅಮ್ಮ ಇಲ್ಲದ ಅನಾಮಿಕ ಕಮೆಂಟುಗಳಿಗೆ ಇಷ್ಟು ತಲೆ ಬಿಸಿ ಮಾಡುವ ಇವರು ಈ ಮೇಲ್ ನಲ್ಲಿ ಬರುವ Spamಗಳನ್ನು ಹೇಗೆ ಹ್ಯಾಂಡಲ್ ಮಾಡುತ್ತಾರೋ? ಗುರ್ತವಿಲ್ಲದವರು ಈ ಮೇಲ್ ಮಾಡಿದರೆಂದು ಹುಚ್ಚು ಹಿಡಿದು ಹೋಗುತ್ತಾರೋ? ಯಾರೋ ನೈಜೀರಿಯಾದವನು ಈ ಮೇಲ್ ಕಳಿಸಿದಾ ಅಂತಾ ಈ-ಮೇಲ್ ಅಕೌಂಟುಗಳನ್ನೇ ಬಂದ್ ಮಾಡುತ್ತಾರಾ ಇವರು? ಒಂದು ಸಿಂಪಲ್ DELETE ಬಟನ್ ಒತ್ತುವುದಕ್ಕೇಕೆ ನಾಚಿಕೆ ಇವರಿಗೆ? ನಿಜಕ್ಕೂ DELETE ಬಟನ್ ಒತ್ತುವುದು ಇಷ್ಟು ಕಷ್ಟವೆಂದು ತಿಳಿದಿರಲಿಲ್ಲಾ.

ಸರಿಯಾಗಿ storm in the tea cup ಇದು. ಕಳೆದ ವಾರದ ಜಿ.ಎನ್.ಮೋಹನರ "ಮೀಡಿಯಾ ಮಿರ್ಚಿ" ಅಂಕಣಕ್ಕೆ ನಾನು ಪ್ರತಿಕ್ರಿಯೆಯಲ್ಲಿ ಹೇಳಿದಂತೆ (ಇಡೀ ಪ್ರತಿಕ್ರಿಯೆ ಕೆಳಗಿದೆ), ಕಮೆಂಟುಗಳ ಬಗ್ಗೆ, ಬ್ಲಾಗುಗಳ ಬಗ್ಗೆ ಇದ್ದಕಿದ್ದಂತೆ ಕಿಡಿಕಾರಲು ಮೂಲಕಾರಣ ಕನ್ನಡ ಮಾಧ್ಯಮ ಲೋಕವನ್ನು ವಿಶ್ಲೇಷಿಸುವ ಕೆಲ ಬ್ಲಾಗುಗಳು ಜನ್ಮ ತೆಳೆದದ್ದು. ಯಾವಾಗಲೂ ಇತರರ ಬಗ್ಗೆ ಕಮೆಂಟು ಮಾಡುವ ಕೆಲ ಸ್ಥಾಪಿತ ಮಾಧ್ಯಮ ಮಿತ್ರರಿಗೆ ಈ ಬ್ಲಾಗುಗಳು ಅಪಥ್ಯವಾದಂತಿದೆ. ಆ ಬ್ಲಾಗುಗಳು ಎತ್ತಿರುವ ವಿಷಯಗಳ ಬಗ್ಗೆ ಚರ್ಚೆ ಮಾಡುವ ಬದಲು ಬ್ಲಾಗ್ ಹಿಂದಿರುವವರು ಯಾರು, ಅವರ ಉದ್ಧೇಶವೇನು ಮುಂತಾದ ಅನಗತ್ಯತ ವಿಷಯಗಳ ಬಗ್ಗೆಯೇ ಚರ್ಚೆಯನ್ನು misdirect ಮಾಡಲು ಕನ್ನಡದ ಕೆಲ ಹಿರಿ ಮಾಧ್ಯಮ ಮಿತ್ರರು ಟೊಂಕ ಕಟ್ಟಿದಂತಿದೆ.

****
ನಾನು ಯಾರು? ನಾನು ನಾನೇ?

ಡಿ.ಪಿ.ಸತೀಶ್ ಎಂಬ CNN-IBNನವರು ನನ್ನ "ರಾಕೇಶ್ ಮಥಾಯಸ್" ಹೆಸರಿನ ಬಗ್ಗೆಯೇ ಸಂಶಯ ವ್ಯಕ್ತಪಡಿಸಿದ್ದಾರೆ. ನಾನು ನಾನೆಂದು ಹೇಗೆ ತೋರಿಸಲಿ ಇಂಟರನೆಟ್ಟಲ್ಲಿ? ಅಥವಾ ಕೆಲ ಮಿತ್ರರು ಮಾಡುವಂತೆ Shaadi.comನಲ್ಲಿ ನಕಲಿ ಫೊಟೋ ಹಾಕುವಂತೆ ಯಾರದೋ ಫೊಟೋ ನನ್ನದೆಂದು ಹಾಕಿದರೆ satisfy ಆಗುತ್ತಾರೇನೋ? ಇದೆಲ್ಲಾ ಮಾಧ್ಯಮ ಲೋಕದ ಒಂಥರಾ ಗರ್ಭ ಗುಡಿ ಸಂಸ್ಕೃತಿಯಂತೆ ಕಾಣುತ್ತದೆ. ಹಿಂದೆಲ್ಲಾ ಜನಿವಾರವಿದ್ದರೂ ಬ್ರಾಹ್ಮಣರೆಂದು ಪ್ರೂವ್ ಮಾಡಲು ಮಠಗಳಲ್ಲಿ ಶ್ಲೋಕ ಹೇಳಿ ತಮ್ಮ ಸಂಸ್ಕಾರ prove ಮಾಡಬೇಕಿತ್ತಂತೆ - ಈಗ ಬ್ಲಾಗ್ ಲೋಕದಲ್ಲಿ ಇಂತಹದೇ system ಬಂದರೂ ಆಶ್ಚರ್ಯವಿಲ್ಲವೇನೋ?

ಇದೇ ಸತೀಶ್ ಯಾವುದೋ ಇನ್ನೊಂದು ಬ್ಲಾಗ್ ಬಗ್ಗೆ ಬಡಬಡಿಸಿದ್ದಾರೆ - ಅವರೂ victim ಅಂತೆ. ನಾನು ಅದನ್ನು Churumuriಯಲ್ಲಿ ಓದಿದ ನೆನಪು - ಲಿಂಕ್ ಇಲ್ಲಿದೆ ನೋಡಿ - ಅಲ್ಲಿನ ಕಮೆಂಟುಗಳನ್ನು ಓದಿದರೆ ತಾನು ಹೆಣೆದ ಬಲೆಯಲ್ಲೇ ಸಿಕ್ಕಿಬಿದ್ದು ಈ D.P.Satish expose ಆಗಿರುವುದನ್ನು ನೋಡಬಹುದು. ಇನ್ನೂ ಸ್ವಲ್ಪ Google ಮಾಡಿ ನೋಡಿದರೆ ಇದೇ D.P.Satish ಇನ್ನೊಂದು ಬ್ಲಾಗಿಗೆ threat ಹಾಕಿದನ್ನೂ ನೋಡಿ - ಆ ಬ್ಲಾಗಿಗ ಮಾಡಿದ ತಪ್ಪು D.P.Satish ವರದಿಯಲ್ಲಿನ ತಪ್ಪು ತೋರಿಸಿದು. ಆ ಬ್ಲಾಗಿಗ ಯಾರೆಂದು ಗೊತ್ತಿಲ್ಲ - ಆದರೆ CNN-IBN, D.P.Satish threat ಗಳಿಗೆ ಹೆದರದೆ ತನ್ನ stanceಗೆ ನಿಂತದ್ದು ಅಭಿನಂದನೀಯ. ವಿವರಗಳಿಗೆ ಇಲ್ಲಿ ನೋಡಿ - CNN-IBN Reporter D.P.Satish threatens blogger for exposing factual error in his report. “Freedom of media” applies only to Main Stream Media and not bloggers?

D.P.Satish ಈಗ ಏನೇ boast ಮಾಡಬಹುದು, ಆದರೆ ಆ ಬ್ಲಾಗಿಗ ಸತೀಶರ ಅಥವಾ CNN-IBN threat ಗೆ ಮಣಿದಂತೆ ಕಾಣಲಿಲ್ಲ.

ಅನಾಮಧೇಯ ಬ್ಲಾಗ್ ವಿರುದ್ದ ಸಮರವಾಯಿತು, ಈಗ ನಾನು ನನ್ನ ನಿಜ ಹೆಸರು ಹಾಕಿ ಬ್ಲಾಗ್ ನಡೆಸುತ್ತಿದ್ದರೂ ಅದೂ ಸಾಲದಂತೆ! ತಮ್ಮ ಖುಷಿ ಪಡೆಸಲು ಬೇರೇನು ಮಾಡಬೇಕು ಸಾರ್? ನನ್ನ ಹೆಸರು ಜೊತೆ Son Of, Brother Of, Home Address, Office Address, Phone Number, Religion, Church, ID card scan, ನಾನು ವಾಸವಿರುವ ಹಾಸ್ಟೆಲ್ ರೂಮ್ ನಂಬರ್ರು ಕೊಡಬೇಕಾ? ತಮ್ಮ ಬ್ಲಾಗಲ್ಲಿ ಅದೆಲ್ಲಾ ಹಾಕಿದ್ದೀರಾ? ಅಥವಾ ನಾನು ತಮ್ಮಂತೆ big name ಕಂಪೆನಿಯಲ್ಲಿ ಕೆಲಸದಲಿಲ್ಲವೆಂದ ಮಾತ್ರಕ್ಕೆ ಈ ಎಲ್ಲಾ requirementಆ? Talk about double standards.

****

ಶ್ರೀ ಜಿ.ಎನ್.ಮೋಹನರ ಕಳೆದ ವಾರದ "ಮೀಡಿಯಾ ಮಿರ್ಚಿ" ಅಂಕಣಕ್ಕೆ ನನ್ನ ಪ್ರತಿಕ್ರಿಯೆ ಕೆಳಗಿದೆ. ಬೇಸರದ ಸಂಗತಿಯೆಂದರೆ ನಾನೆತ್ತಿರುವ ವಿಷಯಗಳ ಬಗ್ಗೆ ಚರ್ಚಿಸುವ ಬದಲು ಮೋಹನರು ನಾನು ಯಾರು ಎಂಬುದರ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ ಮತ್ತು ವಿಷಯಕ್ಕೇ ಸಂಬಂಧವೇ ಇಲ್ಲದ D.P.Satish ರ ಕಮೆಂಟನ್ನು replyಯಾಗಿ ಪೋಸ್ಟ್ ಮಾಡಿದ್ದಾರೆ. ಕಳೆದ ವಾರ ತನ್ನ ಕಾಲಮಿನಲ್ಲಿ ನನ್ನ ಹೆಸರನ್ನು ಉಪಯೋಗಿಸುವಾಗ ಅದೇಕೆ ಹೊಳೆಯಲಿಲ್ಲವೋ? ಏನೇ ಇರಲಿ ಈ ದೊಡ್ಡ ಕಂಪೆನಿಗಳ ದೊಡ್ಡ ಜನರ ಕೆಲ ವಿಷಯ ಅರ್ಥವಾಗುತ್ತಿಲ್ಲ - ಪ್ರಾಯಶ: ಕಾಲ ಕಳೆದಂತೆ ಕಲಿಯುತ್ತೇನೇನೋ.

ನಿಜಾ ಹೇಳಬೇಕೆಂದರೆ ತಮ್ಮ ಈ ಅಂಕಣ ಪ್ರಾಯಷ: "ವಿಜಯ ಕರ್ನಾಟಕ"ದ ಸಾವಿರಕ್ಕಿಂತಲೂ ಕಡಿಮೆ ಓದುಗರಿಗೆ ಅರ್ಥವಾಗಿರಬಹುದೇನೋ? ತಟ್ಟಿರಬಹುದೇನೋ? ಒಮ್ಮೆ ತಮ್ಮ ಬ್ಲಾಗ್ ಗೆಳೆಯರ, "ಅವಧಿ"ಯ ಪರಿಮಿತಿಯಿಂದ ಹೊರಬಂದು ತಮ್ಮದೇ ಅಂಕಣವನ್ನು ಇನ್ನೊಮ್ಮೆ ಓದಿ.

ವಿಜಯ ಕರ್ನಾಟಕದ ಓದುಗರಾದ ರಾಯಚೂರಿನ ನಿರುದ್ಯೋಗಿ, ಬಳ್ಳಾರಿಯ ಗಣಿ ಕೊರೆಯುವ ಲಾರಿ ಡ್ರೈವರ್, ವಿಟ್ಲದ ಅಡಿಕೆ ಕೃಷಿಕ, ಬೆಂಗಳೂರಿನ ದರ್ಶಿನಿಯ ಅಡುಗೇ ಭಟ್ಟ, ವಿಧಾನಸೌಧದ ಜವಾನ ತಾವೆಂದು ಭಾವಿಸಿ ಒಮ್ಮೆ ಓದಿ - ಅಂಕಣದ ತಲೆಬುಡ ಅಥವಾಯಿತೇ? ಊಹೂಂ? ಬ್ಲಾಗ್ ಲೋಕವೇ ಸರ್ವಸ್ವವೆಂದು ತಿಳಿದಿರುವ ಜನರಿದ್ದಾರೆ ನಿಜ, ಆದರೆ "ವಿಜಯ ಕರ್ನಾಟಕ" ಒಂದು ಸರ್ವೇ ಮಾಡಿದರೆ ಹೆಚ್ಚೆಂದರೆ ೧೦% ಓದುಗರಿಗೆ ಬ್ಲಾಗ್ ಅಂದರೇನೆಂದು ತಿಳಿದಿರಬಹುದೇನೋ? ಮತ್ತದರಲ್ಲಿ ೧-೫% ಜನರು ರೆಗ್ಯುಲರ್ರಾಗಿ ಕನ್ನಡ ಬ್ಲಾಗುಗಳನ್ನು ಓದಬಹುದೇನೋ?

ತಾವೆತ್ತಿದ ವಿಷಯಗಳೆಲ್ಲಾ ಗಂಭೀರವಾದವು ಮತ್ತು ಚರ್ಚೆಗೆ ಅರ್ಹವೆಂಬುದರಲ್ಲಿ ಎರಡು ಮಾತಿಲ್ಲ. ಎಲ್ಲಾ ಬ್ಲಾಗಿಗರೂ ಕಮೆಂಟುಗಳ ಕಿರಿಕಿರಿ ಎದುರಿಸಿದವರೇ. ಆದರೆ ಇಡೀ ಮಾಧ್ಯಮ ಪ್ರಪಂಚದಲ್ಲಿ ಬ್ಲಾಗುಗಳ penetration ಅದರಲ್ಲೂ ಕರ್ನಾಟಕದಲ್ಲಿ negligible. "ಕನ್ನಡ ಬ್ಲಾಗಿಗರ" ಕೂಟವನ್ನೇ ತೆಗೆದುಕೊಳ್ಳಿ - ಎಷ್ಟು chain mail ಕಳಿಸಿದರೂ, ರವಿ ಹೆಗಡೆಯಂತವರು ಮತ್ತಿತರು ಪತ್ರಿಕೆಗಳಲ್ಲಿ ಬರೆದು ಪ್ರಚಾರ ಮಾಡಿದರೂ membership ಪುಟುಗೋಸಿ ೧೭೦೦ ದಾಟಿಲ್ಲ. ಇದು ಐ.ಟಿ. ಕ್ಯಾಪಿಟಲಿರುವ ಕರ್ನಾಟಕದ ಕತೆ. ಬ್ಲಾಗುಗಳಿಂದ ಕ್ರಾಂತಿ ಸಾಧಿಸುತ್ತೇವೆಯೆಂಬುದು ನಮ್ಮ ಮಟ್ಟಿಗೆ ಭ್ರಮೆಯಷ್ಟೇ. (ರವಿ ಕೃಷ್ಣಾ ರೆಡ್ಡಿಯ ಇಲೆಕ್ಶನ್ campaign ನೆನಪಿಸಿಕೊಳ್ಳಿ)

ಹೀಗಿರುವಾಗ ಬ್ಲಾಗುಗಳು, ಕಮೆಂಟುಗಳ ಬಗ್ಗೆಯೇ ಎರಡೆರಡು ಅಂಕಣಗಳ ಅಗತ್ಯವಿತ್ತೇ? ಮಾಧ್ಯಮಲೋಕದಲ್ಲಿದ್ದವರು ಮೊದಲಿನಿಂದಲೂ ಅನಾಮಧೇಯರ ಕಿರಿಕಿರಿ ಎದುರಿಸಿದ್ದಾರೆ - ಪತ್ರಿಕೆಗಳಿಗೆ ಪ್ರತಿನಿತ್ಯ ಹೆಸರು, ಊರಿಲ್ಲದ ಅಂಚೆ ಬರುತ್ತವೆ, ಸೀದಾ ಕಸದ ಬುಟ್ಟಿಗೆ ಹೋಗುತ್ತವೆ. ಇದೇ attitude ನಮ್ಮ ಬ್ಲಾಗರುಗಳಿಗೇಕಿಲ್ಲ? ಯಾಕೋ ಕಮೆಂಟಿಗರ ಬಗ್ಗೆ care ತೋರಿಸುವುದು ಜಾಸ್ತಿಯಾಯಿತೇನೋ ಎಣಿಸುತ್ತದೆ ಅಥವಾ ಕನ್ನಡ ಬ್ಲಾಗಿಗರು extra sensitive ಆಗಿಬಿಟ್ಟಿದ್ದಾರೇನೋ?

ಎಲ್ಲಾ ಬದಿಗಿಟ್ಟು ನೋಡಿದರೆ ತಮ್ಮ ಅಂಕಣಗಳ ಮತ್ತು ಕೆಲ ಕನ್ನಡ ಬ್ಲಾಗಿಗರ ಈ ಸಡನ್ನಾಗಿ ಕಮೆಂಟುಗಳ ಬಗೆಗಿನ concernನ target ಯಾರೆಂಬುದು ಸ್ಪಷ್ಟ. ಮಾಧ್ಯಮಗಳನ್ನು ವಿಷ್ಲೇಶಿಸುವ, ತಪ್ಪುಗಳನ್ನು ಎತ್ತಿ ತೋರಿಸುವ ಎರಡು ಮೂರು ಬ್ಲಾಗುಗಳು ಶುರುವಾದದ್ದೇ ಕೆಲ mainstream mediaದವರಿಗೆ ಕಿರಿಕಿರಿಯಾದಂತಿದೆ. ಮಾಧ್ಯಮದಲ್ಲಿರುವವರು ರಾಜಕಾರಣಿಗಳಂತೆ public eyeಯಲ್ಲಿರುವವರೇ. ಇದುವರೆಗೆ ಅದನ್ನು ಮರೆತು ಯಾವುದೇ ಜವಾಬ್ದಾರಿಯಿಲ್ಲದೆ, accountability ಇಲ್ಲದೆ ಕೆಲ ಕನ್ನಡ ಮಾಧ್ಯಮ ಮಿತ್ರರು ಈ ಪತ್ರಿಕಾ ಸ್ವಾತಂತ್ರ್ಯವನ್ನು ದುರುಪಯೋಗಿಸಿರುವುದನ್ನು ಈಗ ಬ್ಲಾಗುಗಳು ಅವನ್ನು ಎತ್ತಿ ತೋರಿಸುತ್ತಿರುವುದು ಕೆಲವರಿಗೆ ಅಪಥ್ಯವಾದಂತಿದೆ.

ಅದೇನೋ ಇಂಗ್ಲಿಷಿನಲ್ಲಿದೆಯಲ್ಲ - If you can't take the heat, get out of the kitchen - ಕಮೆಂಟಿಗರ ಕಿರಿಕಿರಿ ಬೇಡವೆಂದರೆ Invite Only ಬ್ಲಾಗ್ ಮಾಡಿ, ಆದರೆ ಅದು ಇಡೀ ಇಂಟರ್ನೆಟ್ಟು ಮಾಧ್ಯಮದ openness, information sharing conceptಗೆ ವಿರುದ್ಧವೆಂಬುದೂ ತಿಳಿದಿರಲಿ.

"ಮೀಡಿಯಾ ಮಿರ್ಚಿ" ಅಂಕಣವನ್ನು ವಿಶ್ವೇಶ್ವರ ಭಟ್ಟರು introduce ಮಾಡುವಾಗ ಹೇಳಿರುವುದೇನೋ, ತಾವೀಗ ಬರೆಯುತ್ತಿರುವುದೇನೋ! ನಿಜ, ಪತ್ರಿಕಾ ಅಂಕಣದ word count ನಂತಹ ಕಟ್ಟು ಪಾಡುಗಳಿವೆ. ಆದರೆ ಎಲ್ಲೋ ತಮ್ಮ ಅಂಕಣ ಸೀಮಿತ ಪ್ರಪಂಚದಿಂದ ಹೊರಬಂದಂತಿಲ್ಲ. ತಮ್ಮ ಈ ಎರಡು ಅಂಕಣಗಳು ತಮ್ಮ ಅಂತರಂಗ ಕೆಲ ಮಿತ್ರರಿಗೆ, ಜೈ ಹೋ ಎನ್ನುವವರಿಗೆ ಮತ್ತು ೧೭೦೦ ಕನ್ನಡ ಬ್ಲಾಗಿಗರಿಗೆ ಅರ್ಥವಾಗಬಹುದೇ ಹೊರತು ಕರ್ನಾಟಕದ ನಂ.೧ ಪತ್ರಿಕೆಯ ಲಕ್ಷಾಂತರ ಓದುಗರಿಗೆ ತಾವು ಬರೆದಿರುವುದೇನೆಂದು ತಿಳಿಯದಿರುವ ಸಾಧ್ಯತೆಗಳೇ ಜಾಸ್ತಿ.

ನನ್ನ ಈ honest opinionನಿಂದ ಯಾರಿಗಾದರೂ ಬೇಜಾರಾದರೆ ದಯವಿಟ್ಟು ಕ್ಷಮೆಯಿರಲಿ.

****

Sunday, August 16, 2009

ನರೇಂದ್ರ ಮೋದಿಗೆ ವೀಸಾ ಕೊಡಲ್ಲ ಎಂದು ಅಮೆರಿಕಾ ಹೇಳಿದಾಗ ಕುಣಿದ ಮಾಧ್ಯಮಗಳು ಶಾರೂಖ್ ಖಾನ್ ಎಂದಾಗ ಬೊಬ್ಬೆ ಹಾಕುವರೇಕಯ್ಯಾ?Shahrukh Khan - publicity stunt?


ಎಂಥಹಾ ವಿಪರ್ಯಾಸ ನೋಡಿ. ಇಡೀ ದೇಶವೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿರುವಾಗ ಎಲ್ಲಾ ಮಾಧ್ಯಮಗಳಲ್ಲಿ ಮಾತ್ರ ಶಾರೂಖ್ ಖಾನ್ ಅಮೆರಿಕ ವಿಮಾನ ನಿಲ್ದಾಣ ತಾಪತ್ರಯದ್ದೇ ಸುದ್ದಿ.

ದಾಸ್ಯದ ಸಂಕೋಲೆ ಕಿತ್ತೆಗೆದ ದಿನವನ್ನು ಸಂಭ್ರಮಿಸುವ ಬದಲು ಮಾಧ್ಯಮಗಳಲ್ಲಿ ಶಾರುಖ್ ಖಾನ್ "ಅಯ್ಯೊ ಮಯ್ಯೊ ಅಮೆರಿಕಾದವರು ನನ್ನನ್ನು ಕಡೆಯಾಗಿ ನೋಡಿಕೊಂಡ"ರೆಂಬುದೇ Breaking News. ಇದೇ ಮಾಧ್ಯಮಗಳು ನರೇಂದ್ರ ಮೋದಿಗೆ ಅಮೆರಿಕಾ ಸರಕಾರ ವೀಸಾ ಕೊಡದಿದ್ದಾಗ ಅಮೆರಿಕಾವೇ ನಮ್ಮ ಆಪತ್ಬಾಂಧವನೆಂದು ವರ್ಣಿಸಿದ್ದು ನೆನಪಿಸಿಕೊಳ್ಳಿ. ಸ್ವತ: ಭಾರತ ಸರಕಾರವೇ (ಕಾಂಗ್ರೆಸ್ ಸರಕಾರವಾಗಿದ್ದರೂ) ಮೋದಿಗೆ ಬೆಂಬಲವಾಗಿ ನಿಂತಿತ್ತು ಅಂದು. ಆದರೆ ಮಾಧ್ಯಮಗಳಿಗೆ ಮೋದಿಗೆ ವೀಸಾ ಕೊಡದಿದ್ದದ್ದು ಪ್ರಜಾಪ್ರಭುತ್ವದಲ್ಲಿ ಚುನಾವಣೆ ಮೂಲಕ ಆರಿಸಿ ಬಂದ ಮೋದಿಯನ್ನು ಬೆಂಬಲಿಸಿದ ಜನರಿಗೆ ಮಾಡಿದ ಅಪಮಾನವೆಂದು ಕಂಡು ಬರಲಿಲ್ಲ.

ಇದೇ ಮಾಧ್ಯಮಗಳಿಂದು ಅಮೆರಿಕಾಕ್ಕೆ ಪದೇ ಪದೇ "ಶೋ" ನೆಪದಲ್ಲಿ ಭೇಟಿ ನೀಡಿ ಕೋಟ್ಯಾಂತರ ರೂಪಾಯಿ ಕಮಾಯಿಸುವ ಶಾರುಖನ್ನು ಅಮೆರಿಕಾ ವಲಸೆ ಅಧಿಕಾರಿಗಳು ಪ್ರಶ್ನಿಸಿದ್ದನ್ನೇ ಇಡೀ ಭಾರತದ ಜನತೆಗೆ ಆದ ಅವಮಾನವೆಂದು ಬೊಬ್ಬೆ ಹಾಕುತ್ತಿವೆ.

ಅಮೆರಿಕಾಕ್ಕೆ ಹೋಗಿ ಬರುವ ನನ್ನ ಸಾಫ್ಟವೇರ್ ಮಿತ್ರರ ಪ್ರಕಾರ ಈ ೨ ಘಂಟೆ ಪ್ರಶ್ನೆ ಕೇಳಿರುವುದು ಪ್ರಾಯಷ: ಸರಿಯಾದ ವೀಸಾ ಇದೆಯೋವೆಂದು ತಿಳಿಯಲು - ಅಂದರೆ ವಿಸಿಟರ್ ವೀಸಾ ಅಥವಾ ಬಿಸಿನೆಸ್ ವೀಸಾ ಅಥವಾ models actors ಗಳಿಗಿರುವ ವೀಸಾ ಕೆಟಗೆರಿಯೋವೆಂದು ತಿಳಿಯಲು. ಉದಾಹರಣೆಗೆ ವಿಸಿಟರ್ ವೀಸಾದಲ್ಲಿ ಹೋದರೆ ಶಾರುಖ್ ಹಣಗಳಿಸುವಂತಿಲ್ಲ. ಸೋ ಅವರ ಪ್ರಕಾರ ಏನೋ bureaucratic / paperwork problem ಆಗಿರಬಹುದೇ ವಿನ: ಬೇರೇನೂ ಅಲ್ಲ. ಶಾರುಖ್ ಹೇಳಿರುವ ಪ್ರಕಾರ ವಲಸೆ ಅಧಿಕಾರಿಗಳು ಅವರು ಉಳಿಯುವ ಹೋಟೆಲ್ ಎಲ್ಲಿ, ಫೋನ್ ನಂಬರ್ ಕೇಳಿದ್ದಾರೆ - ಇದು ಯಾವುದೇ ದೇಶದ ವಲಸೆ ಅಧಿಕಾರಿಗಳು ಕೇಳುವ ಸ್ಟ್ಯಾಂಡರ‍್ಡ್ ಪ್ರಶ್ನೆಗಳು. ನಾನು ಬಹ್ರೇನ್ ಹೋಗಿದ್ದಾಗ ನಾನು ಯಾರ ಜೊತೆ ಉಳಿಯುತಿದ್ದೇನೆ, ಅವರ ಇತಿಹಾಸವೆಲ್ಲಾ ಕೇಳಿದ್ದರು.

ನನಗೇನೋ ಇದು ಸದ್ಯದಲ್ಲೇ ಹೊರಬರಲಿರುವ My name is Khan ಚಿತ್ರದ ಪಬ್ಲಿಸಿಟಿ ಸ್ಟಂಟೋವೆಂಬ ಗುಮಾನಿಯಾಗುತ್ತಿದೆ. ಈ ಸುದ್ದಿ ಹರಡಿದ ವೇಗ, timing ಎಲ್ಲಾ ಕುತೂಹಲಕರವಾಗಿದೆ. ಶಾರುಖ್ ಸ್ವತ: ಹೇಳಿದ ಪ್ರಕಾರ ಈ ಚಿತ್ರಕ್ಕೆ ಓಸ್ಕರ್ ಪ್ರಶಸ್ತಿ ಸಿಗಲು ಎಲ್ಲಾ ಪ್ರಯತ್ನ ಮಾಡುತ್ತಾರಂತೆ, ಸೋ ಅದಕ್ಕೇ ಎಲ್ಲಾ build-up ಮಾಡುತ್ತಿರುವಂತೆ ಕಂಡು ಬರುತ್ತಿದೆ.

ಏನೇ ಹೇಳಿ ಅಂದು ಒಬ್ಬ ಜನಪ್ರತಿನಿಧಿಯಾದ ನರೇಂದ್ರ ಮೋದಿಗೆ ವೀಸಾ ಕೊಡದಿದ್ದಾಗ ಸಂಭ್ರಮಿಸಿದ್ದವರು ಇಂದು ಒಬ್ಬ ಯಕ:ಶ್ಚಿತ್ ನಟನನ್ನು ವಲಸೆ ಅಧಿಕಾರಿಗಳು ಪ್ರಶ್ನಿಸಿದ್ದನ್ನೇ ದೇಶಕ್ಕಾದ ಅವಮಾನವೆಂದು ಹೇಳುವುದು ಹಾಸ್ಯಾಸ್ಪದ ಸಂಗತಿ.

ENGLISH SUMMARY:

When Narendra Modi was denied US visa India media celebrated the incident and hailed USA as world saviour. But same media is now making hue and cry about Shahrukh Khan incident in Newark Airport where he was questioned by immigration officials for more than 2 hours.

When a democratically elected leader like Narendra Modi was denied visa, even then Central Government led by Congress filed a diplomatic protest. But Indian media celebrated the incident. Now when a Bollywood showman was interrogated for reasons we don't know yet - but most likely related to whether Sharukh had proper visa or such paperwork - whole Indian media is creating a ruckus saying India has been insulted by USA as if interrogation by some lowly immigration clerk is threat to Indian sovereignity.

According to some of my software friends who visit USA regularly most likely explanation is that immigration authorities wanted to make sure Shahrukh has correct visa/paperwork. Afterall per his own admission Shahrukh visits USA many times in a year. There are business visa, visitor visa, showman visa and so on. If one is a visitor visa legally he can't work in US. And we all know why Bollywood actors frequent USA for shows where they make crores of rupees just showing their face to desi diaspora.

Personally I feel whole incident can be a publicity stunt to his new movie "My name is Khan" which has same theme as this incident. The timing, massive media "breaking news" on a national holiday, soundbytes by Karan Johar, Farah Khan within minutes of the so called incident and fact that Shahrukh himself has said this movie has been made keeping Oscar award in mind makes me think whole thing is a well oiled publicity stunt. It does not take much to upset immigration officers afterall - especially our stars and politicians used to VVIP treatment in airports behave arrogantly when questioned in foreign airports.

Back to the topic - it is laughable that our whole national pride is so shaky that some lowly immigration clerk interviewing Sharukh Khan can cause a breaking news whole day on Independence Day - espeically when same media celebrated denial of US visa to publically elected leader like Narendra Modi.

~~~~~

Wednesday, August 12, 2009

ಹುಡುಕಿಕೊಡಿ: ಎಲ್ಲಿ ಕಾಣೆಯಾಗಿದ್ದಾರೆ ಕರ್ನಾಟಕ ರಕ್ಕಸವೇದಿಕೆಯ ೪೦ ಲಕ್ಷ ಕಾರ್ಯಕರ್ತರು?ಆಗಸ್ಟ್ ೯ರಂದು ತಿರುವಳ್ಳುವಾರ್ ಪ್ರತಿಮೆ ಸ್ಥಾಪನೆ ವಿರೋಧಿಸಿ ಬೆಂಗಳೂರಲ್ಲಿ ಬಂದ್, ಗಲಭೆ ನಡೆಯುವುದು ಖಚಿತವೆಂದು ರಾಷ್ಟ್ರ‍ೀಯ ಮತ್ತು ರಾಜ್ಯ ಮಾಧ್ಯಮಗಳು ಬೆಳಗಿನಿಂದಲೂ ಕಾದು ಕೂತದ್ದೇ ಬಂತು.

ಊಹೂಂ..ಎಲ್ಲೋ ೨೦ ರಕ್ಕಸ ವೇದಿಕೆಯ ಕಾರ್ಯಕರ್ತರು ಕ್ರಿಕೆಟ್ ಆಡುವ ನೆಪದಲ್ಲಿ ಒಟ್ಟಾಗಿ ಅರೆಮನಸ್ಸಿನಿಂದ ರಸ್ತೆ ತಡೆ ಮಾಡಲು ತೊಡಗಿದ ನಿಮಿಷಗಳಲ್ಲೆ ಪೊಲೀಸರಿಂದ ಬಂಧನಕ್ಕೊಳಗಾದರು.

ನಾರಾಯಣ ಗೌಡರು ಮತ್ತವರ ಚೇಲಾಗಳು (ಕೆಲ ಮಾಧ್ಯಮ ಮಂದಿ ಕೂಡಾ) ಆಗಾಗ ಹೇಳುತ್ತಿರುತ್ತಾರೆ - ಕ.ರ.ವೇ.೪೦ ಲಕ್ಷ ಕಾರ್ಯಕರ್ತರ ಪಡೆ, ರಾಜ್ಯದೆಲ್ಲೆಡೆ ೪೦೦೦ ಕರವೇ ಶಾಖೆಗಳಿವೆ. ಗೌಡರು ಒಂದು ಮಾತು ಹೇಳಿದರೆ ಬೆಂಗಳೂರು ಹೊತ್ತಿ ಉರಿಯುತ್ತದೆ, ಸಾವಿರಾರು ಲಕ್ಷಾಂತರ ಮಂದಿ ಸಾಗರೋಪಾದಿಯಲ್ಲಿ ಕನ್ನಡಕ್ಕಾಗಿ ನುಗ್ಗಿ ಬರುತ್ತಾರೆ ಇತ್ಯಾದಿ ಇತ್ಯಾದಿ.

ಆಗಸ್ಟ್ ೯ರಂದು ಎಲ್ಲಿ ಹೋದರಯ್ಯಾ ಈ ಕಾರ್ಯಕರ್ತರು?

ಶಾಸಕರ ಭವನದಲ್ಲಿ, ಕಾರವಾರದಲ್ಲಿ ವೃದ್ಧ ಮುದುಕರ ಮುಖಕ್ಕೆ ಮಸಿ ಬೆಳೆದ ಕರವೇಯ ಪೌರುಷವೆಲ್ಲಿ ಕಳೆದು ಹೋಯಿತು?

ವಾರಾಂತ್ಯದಲ್ಲಿ ಖಾಸಗೀ ಪ್ರದೇಶದಲ್ಲಿ ಹುಟ್ಟು ಹಬ್ಬ ಆಚರಿಸುತ್ತಿದ್ದ ಯುವಕ ಯುವತಿಯರ ಮೇಲೆ ಕೈ ಮಾಡಿ ಅವರ ಲ್ಯಾಪ್ ಟಾಪ್, ಮೊಬೈಲ್ ಕದ್ದುಕೊಂಡ ಕರವೇ ಹೀರೋಗಳೆಲ್ಲಿದ್ದರು ಆಗಸ್ಟ್ ೯ರಂದು???

ಬೆಳಗಾವಿಯಲ್ಲಿ ಶಕ್ತಿಕಳೆದುಕೊಂಡ ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತು ಮೀಸಲಾತಿಯಿಂದಾಗಿ ಕನ್ನಡಿಗರು ಮೇಯರ್ ಆದರೆ ರಾಜ್ಯದೆಲ್ಲೆಡೆ ಗೌಡರ ಉದ್ದಿನ ವಡೆಯಂತಹ ಮುಖದ ಫ್ಲೆಕ್ಸ್ ಹಾಕಿ ಕ್ರ‍ೆಡಿಟ್ ತೆಗೆದುಕೊಂಡ ರಕ್ಕಸವೇದಿಕೆಯವರು ಈಗೆಲ್ಲಿದ್ದಾರೆ!???

ಒಂದಂತೂ ಸ್ಪಷ್ಟ - ಹಿಂದಿನ ಸರಕಾರಗಳಲ್ಲಿ ಮುಖ್ಯಮಂತ್ರಿಗಳನ್ನೇ ಬೆದರಿಸುವ, ಮಾಧ್ಯಮಗಳನ್ನು "ಸಾಕಿಕೊಂಡು" ಇದ್ದು, ಪೊಲೀಸರನ್ನು ಬಗ್ಗಿಸಿಡುವಷ್ಟು ಬೆಳೆದಿದ್ದ ರಕ್ಕಸ ವೇದಿಕೆಯ ಜೀರೋಗಳ ನಿಜವಾದ ತಾಕತ್ತು ಎಷ್ಟುವೆಂಬುದು ಅವರ ಯಾವುದೇ ಒತ್ತಡಕ್ಕೆ ಮಣಿಯದ ಯಡ್ಯೂರಪ್ಪ ಮತ್ತು ಪೊಲೀಸರು ತೋರಿಸಿದ್ದಾರೆ. ಸರಕಾರ ಮನಸ್ಸು ಮಾಡಿದರೆ ಇಂತಹ ಸಮಾಜದ್ರೋಹಿ ಸಂಘಟನೆಗಳನ್ನು ಬಗ್ಗು ಬಡಿಯಬಹುದು ಎಂಬುದೂ ಸ್ಪಷ್ಟವಾಗುತ್ತದೆ.

ನಿನ್ನೆ ಯಾವುದೋ ಪತ್ರಿಕೆಯಲ್ಲಿ ಓದಿದೆ - ಯಾವಾಗಲೂ ಬೆಳಿಗ್ಗೆ ಓಪನ್ ಜೈಲಿಗೆ ಹೋಗಿ ಬಿಟ್ಟಿ ಊಟ ತಿಂದು ತೇಗಿ ಸಂಜೆ ಹೊರಗೆ ಹೋಗುತ್ತಿದ್ದ ಈ ಉಟ್ಟು ಓರಾಟಗಾರರು ಜೈಲಿನಲ್ಲೆರಡು ದಿನ ಕಳೆದ ಕೂಡಲೇ ಇಲಿಯಂತಾಗಿದ್ದಾರೆ. ಒಬ್ಬ ಓರಾಟಗಾರರಂತೂ ಎಟ್ಯಾಚ್ಡ್ ಬಾತ್ ರೂಮ್ ಬೇಕು, ಬೆಳಿಗ್ಗೆ ಕೊಡುವ ಬ್ರೆಡ್ ಸರಿಯಿಲ್ಲ, ಜೈಲಿನಲ್ಲಿ ಸೊಳ್ಳೆ ಕಾಟ ವಿಪರೀತವೆಂದೆಲ್ಲಾ ಬಡಬಡಿಸಿದ್ದಾರೆ.

ಓಪನ್ ಜೈಲಿನಲ್ಲಿ ಸೆಲ್ ಫೋನಿಟ್ಟುಕೊಂಡು ಮಾಧ್ಯಮಗಳೊಂದಿಗೆ ಸಲೀಸಾಗಿ ಬೈಟ್ ಕೊಡುತ್ತಿದ್ದ ನಾರಾಯಣ ಗೌಡರಂತೂ ಈ ಬಾರಿ ಪರಪ್ಪನ ಅಗ್ರಹಾರದಲ್ಲಿ ಸೊಳ್ಳ ಕಡಿತ ತಿನ್ನುತ್ತಾ ತಾನು ಜೈಲಿನಲ್ಲಿದ್ದರೂ ಹೊರಗೆ ಲೋಕ ಎಂದಿನಂತೆ ನಡೆಯುತ್ತಿದೆಯೆಂದು ತಿಳಿದು ಉಗ್ರರಾಗಿ ಬಿಟ್ಟಿದ್ದಾರೆ. ಉಪಚುನಾವಣೆಯಲ್ಲಿ ವಿವಿಧ ಅಭ್ಯರ್ಥಿಗಳಿಂದ ತಿನ್ನಬಹುದಾಗಿದ್ದ opportunity ಮಿಸ್ ಆದಂತೆಯೇ ಎಂದು ಕೈ ಕೈ ಹಿಸಿಕಿಕೊಂಡಿದ್ದಾರಂತೆ.

ಈಗಿನ ಸುದ್ದಿಯ ಪ್ರಕಾರ ೧೩ರಂದು ಚೆನ್ನೈನಲ್ಲಿ ಸರ್ವಜ್ಞ ಪ್ರತಿಮೆ ಅನಾವರಣ ತನಕವೂ ಈ ಉಟ್ಟು ಓರಾಟಗಾರರು ಸೊಳ್ಳ ಕಡಿತ ತಿನ್ನುತ್ತಾ ಪರಪ್ಪನ ಅಗ್ರಹಾರದಲ್ಲೇ ಇರಬಹುದಂತೆ. ಪ್ರಾಯಶ: ಈ ಕೆಲ ದಿನಗಳಾದರೂ ಕರ್ನಾಟಕದ ಜನತೆ, MNCಗಳು ರಕ್ಕಸ ವೇದಿಕೆಯವರ ಕಾಟವಿಲ್ಲದೆ ಕಳೆಯಬಹುದೇನೋ.

ಇಡೀ ರಾಜ್ಯದ ಅಭಿಪ್ರಾಯದ ವಿರುದ್ಧ ಕೇವಲ ಪ್ರಚಾರಕ್ಕಾಗಿ ಹೋರಾಡಲು ಹೋಗಿ ಈಗ ಪರಪ್ಪನ ಅಗ್ರಹಾರದಲ್ಲಿ ಸೊಳ್ಳೆ ಕಡಿತ ತಿಂದುಕೊಂಡಿರುವ ರಕ್ಕಸ ವೇದಿಕೆ ಮತ್ತು ಗೌಡರ ಕಂಡು ಒಂದೆಡೆ ಕನಿಕರವೂ ಆಗುತ್ತದೆ. ಆದರೂ ಆಗುವುದೆಲ್ಲಾ ಒಳ್ಳೆಯದಕ್ಕಾಗಿ - ಈ ನೆಪದಿಂದಾದರೂ ಈ ಮದ್ದೂರು ವಡೆ ಸ್ವಲ್ಪ ಸ್ಲಿಂ ಆಗಬಹುದೇನೋ? ಏನಂತೀರಿ?
****
ಕೊನೆಯ ಗುಟುಕು: ಹಿಂದಿನ ಬ್ಲಾಗ್ ಪೋಸ್ಟಿಗೆ ಅಭಿಪ್ರಾಯ ಹಾಕಿದ ಎಲ್ಲರಿಗೂ ಧನ್ಯವಾದಗಳು. ಹಾಗೆಯೇ ಈ ಮೈಲ್ ಮುಖಾಂತರ "ಭೇಷ್" ಎಂದು ಬೆನ್ನು ತಟ್ಟಿದವರಿಗೂ ಥ್ಯಾಂಕ್ಸ್.

ಇನ್ನು ಇಮೈಲ್ ಮುಖಾಂತರ ಬೆದರಿಕೆ ಹಾಕಿದವರೂ, ವೈರಸ್ ಕಳಿಸಿದವರೂ, ಟ್ರ್ಯಾಕಿಂಗ್ ವೈರಸ್ ಕಳಿಸಿದವರೂ ಇದ್ದಾರೆ - ಆದರೆ ಆಶ್ಚರ್ಯವೇನೂ ಆಗಿಲ್ಲ. ನಾರಾಯಣ ಗೌಡರ ಬಳಿ ಅವರ ದೊಡ್ಡ ದೊಡ್ಡ ಐಷಾರಾಮಿ ಕಾರುಗಳ ಬಗ್ಗೆ ಕೇಳಿದಾಗ ಅವರ readymade ಉತ್ತರ ಯಾವಾಗಲೂ "ಪ್ರಪಂಚದೆಲ್ಲೆಡೆಯಿರುವ ಕನ್ನಡಿಗರು ನನಗ ಹಣ ಕಳಿಸುತ್ತಾರೆ" ಯೆಂದು. ಅಮೆರಿಕದಲ್ಲಿ, ಬ್ರಿಟನಿನಲ್ಲಿ ಕುಳಿತುಕೊಂಡು ತಾವೇ ಅನಿವಾಸಿಗಳಾಗಿದ್ದರೂ ಕರ್ನಾಟಕದಲ್ಲಿ ಹೊರಗಿನವರ ವಿರುದ್ಧ ಕೆಂಡ ಕಾರುವವರನ್ನು ಬೆಂಬಲಿಸುತ್ತಾರೆ ಈ ಅನಿವಾಸಿ ರಕ್ಕಸವೇದಿಕೆಯ ಬೆಂಬಲಿಗರು. ತಾವೇ ಇತರ ದೇಶದಲ್ಲಿ ಅನಿವಾಸಿಯಾಗಿ ದುಡಿದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರೂ ಅದೇನೋ ಅವ್ಯಕ್ತ long distance ಕನ್ನಡ ಪ್ರೇಮ ಈ ವರ್ಷಕ್ಕೊಂದು ಬಾರಿ ಝೂಮೆಂದು ಹಾರಿ ಬಂದು ಹೋಗುವ ಕಂಪ್ಯೂಟರ್ ಹೀರೋಗಳಿಗೆ. ಅಮೆರಿಕದಲ್ಲಿ ಆರ್ಥಿಕ ತಾಪತ್ರಯಗಳಿಂದಾಗಿ ಪ್ರಾಯಷ: ಕೆಲಸವಿಲ್ಲದೆ ಇಡೀ ದಿನ ಇಂಟರ್ನೆಟ್ಟಿನಲ್ಲಿ ಕನ್ನಡ ಹೀರೋಗಳಾಗುವ ದೊಡ್ಡ ಗುಂಪೇ ಇದ್ದಂತಿದೆ.

ಒಮ್ಮೆ ಈ ಪ್ರತಿಮೆ ಗಲಾಟೆ ಮುಗಿದ ನಂತರ ಮಾನ್ಯ ಯಡ್ಯೂರಪ್ಪನವರು ಈ ರಕ್ಕಸವೇದಿಕೆಯವರಿಗೆ ಹಣ ಕಳಿಸುವ ಅನಿವಾಸಿ ಕನ್ನಡಿಗರಾರು ಎಂದು ಗುರುತಿಸಿ "ಗೂಂಡಾಗಳ ಅನಿವಾಸಿ ಬೆಂಬಲಿಗರ" ಪಟ್ಟಿ ಪ್ರಕಟಿಸಿದರೆ ಪ್ರಾಯಷ: ಈ long distance NRIs (Non Reliable Indians) ಗಳ ಇಂಟರ್ನೆಟ್ ಆಟೋಟಾಪಕ್ಕೆ ಕಡಿವಾಣ ಬೀಳಬಹುದೇನೋ!
*****

Saturday, August 8, 2009

Karnataka Rakshana Vedike KRV - mob of jobless hoodlums . Unholy nexus between Bangalore media and KRV


Karnataka Rakshana Vedike (KRV) is in the news all over again by protesting against installation of Tiruvalluvar statue in Bangalore.

Intention of this post is to clarify that not all Kannadigas are fanatics like Karnataka Rakshana Vedike - KRV hoodlums.

Also to expose the unholy nexus between Karnataka Rakshana Vedike and media in Bangalore.

Facts on the statue are:


 • All political parties met and decided to support installation of statue. Just like TN, it is very rare in Karnataka that all parties meet and agree on something, but on this issue they did.

 • Well known Kannada leaders like Patil Puttappa attended the meeting and supported statue.

 • Many Kannada writers, literary figures including Jnanapeetha Award winner U.R.Ananathamurthy have given public statements supporting statue installation.

 • Almost all Kannada newspapers have writtern Editorials and published articles supporting Thiruvalluvar statue in Bangalore.

 • Even Karanataka Highcourt came down heavily on anti-statue protesters and basically asked them to mind their own business and warned that they will be responsible for any untoward incidents on August 9th.
So why Karnataka Rakshana Vedike KRV and other fringe groups are up in arms?

Karnataka Rakshana Vedike is a fringe violent group in Bangalore. By claiming to be fighting for Kannada there are many accusastions against this organisation for involving in blackmail, hafta collection - in general what locals call as "Roll Call" business.

These fringe groups like to be in news all the time as that is how they build their image as ruthless extortionists. So statue issue has come as a boon to these useless jobless goons.

KRV's business must be booming - because there are lot of infighting within organisation and there are groups like "Narayana Gowda faction KRV", "Praveen Shetty faction KRV", "Shivarame Gowda faction KRV" each trying to get foothold and mark their territories in the name of "fighting for Kannada".
Many of Karnataka Rakshana Vedike's office bearers are ex-criminals now donning the roll of Kannada fighters.

Yellow and red shawl of these goons has become a symbol in Bangalore for roll call business and extort money from business in the name of Kannada.


Interestingly during general elections time these factions don't contest elections but go with any political parties or candidates who can bid for them! If these thugs are truly interested in development of Karnataka and Kannada why are they not contesting in elections?

Narayana Gowda President of Karnataka Rakshana Vedike


All times of the year Bangalore is plastered with chubby smiling face of Narayana Gowda and Karnataka Rakshana Vedike is a brain child of Narayana Gowda.

Narayana Gowda, President of Karnataka Rakshana Vedike is a returnee from Mumbai (where he supposedly worked in Dance Bars) so one would think he appreciates how Mumbai offered him food at the end of the day despite him being an outsider in Mumbai. But no, he poses as a crusader against outsiders in Bangalore.

Narayana Gowda has no known means of income now. But he can be seen driving around in large posh SUVs with dozens of hanger ons and goons posing as body guards. If this person is truly fighting for Kannada one has to wonder why does he require goons as his body guards.

Narayana Gowda and his band of followers don't have a normal job like you and me. They just go around Bangalore meeting businessmen and business owners including MNCs and BPOs and harass them for not having Kannada board, for example and leave the place after collecting you know what. No wonder Karnataka Rakshana Vedike has now become another name for Roll Call.


In January 2009, Narayana Gowda organised a huge conference in Bangalore. Of course, stage is imcomplete without chubby smiling face of Narayana Gowda in center. Crores of rupees were collected in the name of conference by all and sundry in the name of KRV, but no one has been account books even after so many months.

So question is why no one in Karnataka Media challenge this goon Narayana Gowda who is running roll call business in the name of protecting Kannada? Answer is simple - many in the media world are in the pockets of Rakshana Vedike.

Relation between Bangalore media and Rakshana Vedike is so close that many a times Rakshana Vedike goons inform journalists well in advance of any so called "raid", "attack" on business, property and people.

See disgusting vidoe below where Rakshana Vedike goons attack party goers and girls in Bangalore. KRV claimed this was a "drug""rave" party but only tablets they show are used for common cold, fever!! Karnataka Rakshana Vedike goons also stole laptops, cell phones of these poor party goers and allegedly molested girls (in video you can see them tearing top of a lady who screams in horror). One has to note that police ultimately dropped all charges against these party goers, but this incident truly established KRV as an extortion organisation who now rule all business establishement in outskirts of Bangalore.

It's time people of Karnataka raise their voice against undemocratic ways of Karnataka Rakshana Vedike and demand that Karnataka Govt ban this organisation and declare it a terrorist organisation. So far we are afraid that Govt won't act on KRV, but in the case of statue it is clear that Govt, Courts have seen real intention of KRV.

KRV now stands exposed. Govt should immediately put its leaders in jail under goonda act and ban KRV and its blackmail business. Govt should also need to take a look and seize bank accounts of Narayana Gowda, Shetty and other sundry blackmail leaders.

On a side note, it is unfortunate that there are many non-resident Kannadigas who support these thugs of Karnataka Rakshana Vedike. Typical long distance NRI patriotism syndrome. Karnataka Rakshana Vedike's web presence is maintained by these NRI Kannadigas who themselves are outsiders in countries they live but preach that Bangalore should be closed for outsiders.

*****Kannada Blog Post below / Cross Posted to Kannada Journalists*****ಪ್ರತಿಮೆ ವಿವಾದ - ಜನಪ್ರತಿನಿಧಿಗಳಲ್ಲದ ಉಟ್ಟು ಓರಾಟಗಾರರಿಗೆ ಮಾಧ್ಯಮಗಳಲ್ಲೇಕಿಷ್ಟು ಪ್ರಚಾರ?

ಕರ್ನಾಟಕದ ಜನತೆಯ ಪ್ರತಿನಿಧಿಗಳಾದ ಕರ್ನಾಟಕದ ಸಮಸ್ತ ರಾಜಕೀಯ ಪಕ್ಷಗಳ ಮುಖಂಡರು ತಮ್ಮ ಎಂದಿನ ಗಲಾಟೆ ಬದಿಗಿಟ್ಟು ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ತಿರುವಳ್ಳವಾರ್ ಪ್ರತಿಮೆ ಸ್ಥಾಪನೆಗೆ ಒಪ್ಪಿರುವುದು ಶ್ಲಾಘನೀಯ ಸಂಗತಿ. ಏನೇ ಹೇಳಿ ಈ ವಿಷಯದಲ್ಲಂತೂ ಮಾನ್ಯ ಯಡ್ಯ್ರಪ್ಪನವರು ತಮ್ಮ ನಾಯಕತ್ವ ಮರೆದಿದ್ದಾರೆ.

ಅಂತೆಯೇ ಕನ್ನಡ ಸಂಸ್ಕೃತಿಯ ನಿಜವಾದ ಹರಿಕಾರರಾದ ಸಾಹಿತಿಗಳು, ಚಿಂತಕರು, ಪಾಟೀಲ್ ಪುಟ್ಟಪ್ಪರಂತಹ ಅಸಲೀ ಹೋರಾಟಗಾರರೂ ಒಮ್ಮತದಿಂದ ಸರಕಾರವನ್ನು ಬೆಂಬಲಿಸಿದ್ದಾರೆ. ಎಲ್ಲಾ ಮಾಧ್ಯಮ ಮತ್ತು ಪತ್ರಿಕೆ ಸಂಪಾದಕೀಯಗಳೂ ಇದನ್ನು ಸ್ವಾಗತಿಸಿವೆ.

ಆದರೆ ಬಹಳ ಸಮಯದಿಂದ ತಣ್ಣಗೆ ಕೆಲಸವಿಲ್ಲದೆ ಕುಳಿತಿದ್ದ ಕೆಲ "ಉಟ್ಟು ಓರಾಟಗಾರ"ರಿಗೆ ಬಹಳ ಸಿಟ್ಟು ಬಂದು ಬಿಟ್ಟಿದೆ. ಜನವರಿಯಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಸಮ್ಮೇಳನ ಮಾಡಿದ್ದ ಕ.ರಾ.ವೆ.ಯ ಗೌಡರೂ, ರೋಲ್ ಕಾಲ್ ಉದ್ದಿಮೆಯಲ್ಲಿ ತನ್ನದೇ ಅಸ್ತಿತ್ವ ಸ್ಥಾಪಿಸಲು ಒದ್ದಾಡುತ್ತಿರುವ ಇನ್ನೊಂದು "ಬಣ"ವೂ, ಸತತವಾಗಿ ಚುನಾವಣೆಯಲ್ಲಿ ಸೋತರೂ ಬುದ್ಧಿ ಬರದ ವಾಟಾಳರೂ ಸಡನ್ನಾಗಿ ಎದ್ದು ಬಿಟ್ಟಿದ್ದಾರೆ, ಕನ್ನಡ ಉಳಿಸುವ ಹೆಸರಲ್ಲಿ ಪ್ರತಿಮೆ ಸ್ಥಾಪನೆ ವಿರೋಧಿಸುತ್ತಿದ್ದಾರೆ. ಮುಖ್ಯಮಂತ್ರಿಗಳು ಕರೆದ ಸಭೆಯಲ್ಲಿ ಹಿರಿಯರೆದುರು ಸಭಾ ಮರ್ಯಾದೆಯನ್ನೂ ಮರೆತು ಯಕ:ಶ್ಚಿತ್ ಸ್ಟ್ರೀಟ್ ರೌಡಿಗಳಂತೆ ತಮ್ಮ ರೋಲ್ ಕಾಲ್ ಸ್ಟೈಲ್ ತೋರಿಸಿದ್ದು ತಾವು ಟಿ.ವಿ.ಯಲ್ಲಿ ನೋಡಿರಬಹುದು.

ನಾನು ಕೇಳಿದಂತೆ ಗೌಡರೂ, ಶೆಟ್ಟರೂ ಪ್ರತಿಭಟನೆಯ ಹೆಸರಲ್ಲಿ, ಪ್ರತಿಭಟನೆಗಾಗುವ ಖರ್ಚಿನ ಹೆಸರಲ್ಲಿ ಎಂದಿನಂತೆ ಈಗಾಗಲೇ ಎರಡೆರಡು ಬಾರಿ ದೊಡ್ಡ ಕುಳಗಳ ಹತ್ತಿರ ಚಂದಾ ವಸೂಲಿ ಮಾಡಿಯಾಗಿದೆ. ಜನವರಿಯ ಸಮ್ಮೇಳನಕ್ಕೆ ಕ.ರಾ.ವೇ.ಯಿಂದ ಬಲಾತ್ಕಾರವಾಗಿ ಚಂದಾ ವಸೂಲಿ ಮಾಡಿಕೊಡಲ್ಪಟ್ಟಿದ್ದ ಗಾಂಧೀನಗರದ ಮಿತ್ರರೊಬ್ಬರು ಆರು ತಿಂಗಳಾಗುವುದರೊಳಗೆ ಕ.ರಾ.ವೇ.ಯ ಇನ್ನೊಂದು ಡಿಮಾಂಡ್ ಬಂದದ್ದು ನೋಡಿ ಹೌಹಾರಿದ್ದಾರೆ. ನವೆಂಬರ್ ೧ ನ್ನೂ ದೂರವಿಲ್ಲ ನೋಡಿ.

ನನ್ನ ಪ್ರಶ್ನೆ ಸಿಂಪಲ್ - ರಾಜ್ಯದ ಎಲ್ಲಾ ಪಕ್ಷಗಳು ಒಪ್ಪಿರುವಾಗ ಕ್ಷುಲ್ಲುಕ ಕಾರಣಗಳಿಗೆ, ಪ್ರಚಾರಕ್ಕಾಗಿ ವಿರೋಧಿಸುತ್ತಿರುವ ಈ ಉಟ್ಟು ಓರಾಟಗಾರರಿಗೆ ನಾವೇಕೆ ಕ್ಯಾರ್ ಮಾಡಬೇಕು? ವಿರೋಧಿಸುವ ಹೆಸರಲ್ಲಿ ಬಿಟ್ಟಿ ಪ್ರಚಾರ ಪಡೆದುಕೊಂಡು ರೋಲ್ ಕಾಲ್ ಸಾಮ್ರಾಜ್ಯ ವಿಸ್ತರಿಸುತ್ತಿರುವ ಇವರಿಗೆ ಧಿಕ್ಕಾರ. ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಡದ ಈ ರೋಲ್ ಕಾಲ್ ಉದ್ದಿಮೆದಾರರು ಮೊದಲು ಚುನಾವಣೆಯಲ್ಲಿ ಸ್ಪರ್ಧಿಸಿ ನಂತರ ಮಾತನಾಡಲಿ.

ನಾಡಿದ್ದೂ ನೋಡಿ - ಪ್ರತಿಮೆ ಅನಾವರಣಕ್ಕಿಂತ ಈ ಗೌಡರ-ಶೆಟ್ಟರ-ವಾಟಾಳರ ಬೊಬ್ಬೆಗೇ ಪ್ರಚಾರ ಜಾಸ್ತಿ ಸಿಗಲಿದೆ. ಕೋಟ್ಯಾಂತರ ಕನ್ನಡಿಗರನ್ನು ಪ್ರತಿನಿಧಿಸುವ ರಾಜಕೀಯ ಪಕ್ಷಗಳಿಗಿಂತ ನಮ್ಮ ಮಾಧ್ಯಮಗಳಿಗೆ ಈ ಬೆರಳೆಣಿಕೆಯ "ಓರಾಟ"ಗಾರರು ಮುಖ್ಯವೆನಿಸಲಿದ್ದಾರೆ.

ರಾಜಕಾರಣಿಗಳಂತೆ ವೇದಿಕೆಯವರೂ ಮಾಧ್ಯಮದವರನ್ನು ಸಾಕಿಕೊಂಡಿದ್ದಾರಾ? ರಾಜಕಾರಣಿಗಳಿಗೆ, ಚಿತ್ರ ನಟ ನಟಿಯರಿಗೆ ಏನೆಲ್ಲಾ pointed question ಕೇಳುವ ನಮಗೆ ಜನವರಿಯಲ್ಲಿ ನಡೆದ ಕ.ರಾ.ವೇ.ಯ ಭರ್ಜರಿ ಸಮ್ಮೇಳನದ ಲೆಕ್ಕವನ್ನು ಗೌಡರ ಬಳಿ ಕೇಳುವಷ್ಟು ಧೈರ್ಯವಿದೆಯೇ? There is a big story out there - if you are interested!
*******

Monday, August 3, 2009

ಛೇ! ಉದಯವಾಣಿ ಈ ಮಟ್ಟಕ್ಕೆ ಇಳಿಯಬಾರದಿತ್ತು!

೭೭೦ ಕೋಟಿಗಳು ಮಾತನಾಡುತ್ತಿವೆಯೇ?
ಛೇ! ಉದಯವಾಣಿ ಈ ಮಟ್ಟಕ್ಕೆ ಇಳಿಯಬಾರದಿತ್ತು!


[UPDATE] Yet another nausceating report today in Udayavani.

ಕಳೆದ ಮೂರು ದಿನಗಳಿಂದ "ಉದಯವಾಣಿ" (ಬೆಂಗಳೂರು ಆವೃತ್ತಿ) ಯಲ್ಲಿ ಗೋವಿಂದರಾಜ ನಗರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಕೃಷ್ಣಾರನ್ನು ಹಿಗ್ಗಾಮುಗ್ಗಾ ಹಾಡು ಹೊಗಳಿ ಯಾವುದೇ ಇನ್ಫೋಮರ್ಷಿಯಲ್ಲಿಗೆ ಕಮ್ಮಿಯಿರದಂತೆ ಇರುವ ಸುದ್ದಿಗಳು ಪ್ರಕಟವಾಗುತ್ತಿವೆ.

ಪ್ರಿಯಕೃಷ್ಣಾರನ್ನು ಹೊಗಳುವ ಭರದಲ್ಲಿ ಉದಯವಾಣಿ ಉಪಯೋಗಿಸಿದ ಪದ ಪುಂಜಗಳನ್ನು ನೋಡಿದಾಗ ಈ ಸುದ್ದಿಗಳು ಪ್ರಾಯಷ: ಜಾಹಿರಾತುಗಳಿರಬೇಕೆಂದು ಭಾವಿಸಿದ್ದೆ - ಆದರೆ ಎಲ್ಲೂ ಜಾಹೀರಾತುವೆಂಬ ಡಿಸ್ಕ್ಲೇಮರುಗಳಾಗಲಿ, ಚಿಕ್ಕ ಅಕ್ಷರಗಳಲ್ಲಿ "ಜಾಹೀರಾತು" ಎಂಬ ಅಕ್ಷರಗಳನ್ನು ಕಾಣೆ!ಈ "ಸುದ್ದಿ"ಗಳು ಎರಡು ದಿನ ಮೊದಲ ಪುಟದಲ್ಲೇ ಬಂದಿವೆಯೆಂಬುದು ಗಮನಾರ್ಹ.ಚುನಾವಣಾ ದಿನ ಸಮೀಪಿಸಿದಂತೆ ಪತ್ರಿಕೆಗಳು ಕ್ಷೇತ್ರದ ಸಮೀಕ್ಷೆ, ಅಭ್ಯರ್ಥಿಗಳ ಸಂದರ್ಶನ, ಮತದಾರರ ಸಂದರ್ಶನ ಮಾಡಿ ಯಾವುದಾದರು ಅಲೆಯಿದೆಯೋ ಅಥವಾ ಟ್ರೆಂಡಿದೆಯೋವೆಂದು ಬರೆಯುವುದು ಸಹಜ. ಆದರೆ ನಾಮಪತ್ರ ಸಲ್ಲಿಸಿದ ಮರುಗಳಿಗೆಯಲ್ಲೇ, ಚುನಾವಣಾ ಪ್ರಚಾರ ಕಾವೇರದ ಸಮಯದಲ್ಲಿ, ಕಳೆದ ಮೂರು ದಿನಗಳಿಂದ ಮೇಲಿಂದ ಮೇಲೆ ಪ್ರಿಯಕೃಷ್ಣರನ್ನು ಹೊಗಳಿ ಅಟ್ಟಕ್ಕೇರಿಸುವ ವರದಿಗಳು ಬರುತ್ತಿರುವುದು ಸೋಜಿಗದ ಸಂಗತಿ.

ವರದಿಗಳಲ್ಲಿನ ಕೆಲವು ವಾಕ್ಯಗಳನ್ನು ಓದಿದಾಗ ಭಲೇ ಭಲೇ ವರದಿಗಾರವೆನ್ನುವಂತಿದೆ - ಗೋವಿಂದರಾಜ ನಗರದಲ್ಲಿ ಸುಮಾರು ೨.೪ ಲಕ್ಷ ಮತದಾರರಿದ್ದಾರೆ - ಅವರನ್ನೆಲ್ಲಾ "ಉದಯವಾಣಿ"ಯ ವರದಿಗಾರರು ಪರ್ಸನಲ್ಲಾಗಿ ಮೀಟಾಗಿ ಅಭಿಪ್ರಾಯ ಸಂಗ್ರಹಿಸಿದಂತಿದೆ!

ಬನ್ನಿ ನೋಡಿ ಉದಯವಾಣಿಯ ಕೆಲ "ಸುದ್ದಿ" ಸ್ಯಾಂಪಲುಗಳನ್ನು:


ಕ್ಷೇತ್ರದ ಎಲ್ಲೆಡೆ ಪ್ರಿಯಕೃಷ್ಣ ಅವರಿಗೆ ಅದ್ದೂರಿ ಸ್ವಾಗತ ದೊರೆಯುತ್ತಿದ್ದು ಮತದಾರರು ಸ್ವಯಂ
ಸ್ಫೂರ್ತಿಯಿಂದ ಸ್ವಾಗತಕೋರಿ ಆಶೀರ್ವಾದ ಮಾಡುತ್ತಿದ್ದಾರೆ.ಗೋವಿಂದರಾಜ ನಗರದಲ್ಲಿ ಪ್ರಿಯಕೃಷ್ಣ ಅವರನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಘೋಷಣೆ ಮಾಡಿದ ಕ್ಷಣದಿಂದಲೇ ಸಂಭ್ರಮಿಸಿದ್ದ ಯುವಕರಂತೂ ತಾವೇ ಚುನಾವಣೆಗೆ ಸ್ಪರ್ಧಿಸಿದಂತೆ ಸೈನಿಕರಂತೆ ಹಗಲಿರುಳು ಪ್ರಿಯಕೃಷ್ಣ ಅವರ ಪರವಾಗಿ ನಿರಂತರ ಪ್ರಚಾರದಲ್ಲಿ ತೊಡಗಿದ್ದಾರೆ. ಯುವಕ-ಯುವತಿಯರು ಮತದಾರರ ಮನೆಬಾಗಿಲಿಗೆ ಹೋಗಿ ಮತಯಾಚನೆ ಮಾಡುತ್ತಿದ್ದಾರೆ.ಕ್ಷೇತ್ರದ ಅಭಿವೃದ್ದಿಗಾಗಿ ಪಣ ತೊಟ್ಟಿರುವ ವಿದ್ಯಾವಂತ ಯುವ ತರುಣ ಪ್ರಿಯಕೃಷ್ಣ ಅವರ ಜನಪರ ಕಾಳಜಿ ಬಗ್ಗೆ ಮತದಾರರು ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತರು ಸೈನಿಕರ ರೀತಿಯಲ್ಲಿ ತಾವೇ ಚುನಾವಣೆಗೆ ಸ್ಪರ್ದಿಸಿರುವಂತೆ ನಿರಂತರವಾಗಿ ಮತದಾರರ ಮನೆಬಾಗಿಲಿಗೆ ತಲುಪುತ್ತಿದ್ದಾರೆ.(ಅಂದ ಹಾಗೆ ಹೊಗಳುವ ಭರದಲ್ಲಿ ಪದೇ ಪದೇ ಸೈನಿಕರನ್ನು ಉಲ್ಲೇಖ ಮಾಡಿದ್ದು ನೋಡಿದರೆ ವರದಿಗಾರ ಮಾಜಿ ಸೈನಿಕ ಅಥವಾ ಸೈನ್ಯದ backgroundನವರಿರಬೇಕೇನೋ!?)

ಕಳೆದ ಚುನಾವಣೆಯಲ್ಲಿ ಆಂಧ್ರಪ್ರದೇಶದಲ್ಲಿ ಮಾಧ್ಯಮಗಳು, ಪತ್ರಕರ್ತರು ಸಾರಾಸಗಟಾಗಿ ಪಕ್ಷಗಳಿಗೆ ಮಾರಿಕೊಂಡಿದ್ದರೆಂದು ಕೇಳಿದ್ದೆ, ನಮ್ಮಲ್ಲೂ ಸಂಜೆಪತ್ರಿಕೆಗಳಿಗೆ, ಒಂದು ವಾರ ಹುಟ್ಟಿ ಮರುವಾರ ಅದೃಶ್ಯವಾಗುವ ಪೀತ ಪತ್ರಿಕೆಗಳಿಗೆ ಇಂತಹ pay for news culture ಹೊಸದೇನಲ್ಲ.


ಆದರೆ ಪ್ರಾಯಷ: "ಉದಯವಾಣಿ"ಯಂತಹ Main Stream ಪತ್ರಿಕೆಯೊಂದು ಹೀಗೆ ಮಾಡುತ್ತಿರುವುದು ಕರ್ನಾಟಕ ಪತ್ರಿಕೋದ್ಯಮದಲ್ಲೊಂದು ಪ್ರಥಮವೇನೋ? ಟಿ.ಎ.ಪೈ.ಯವರು ಉಡುಪಿ ಲೋಕಸಭೆ ಚುನಾವಣೆಗೆ ನಿಂತಾಗ "ಉದಯವಾಣಿ" ಅವರ ಚುನಾವಣಾ pamphletನಂತೆ ವರದಿ ಮಾಡಿತ್ತು ಎಂದು ಮನೆ ಹಿರಿಯರು ಹೇಳುತ್ತಿದ್ದರು - ಆದರೆ ಅಲ್ಲಿ ತನ್ನ ಧಣಿಯೇ ಚುನಾವಣೆಗೆ ನಿಂತಾಗ ಅವರ ಬೆಂಬಲಕ್ಕೆ ಪತ್ರಿಕೆ ನಿಂತದ್ದು ಸಹಜವೆಂದು ಕ್ಷಮಿಸಬಹುದು - ಆದರೆ "ಉದಯವಾಣಿ" ಬೆಂಗಳೂರು ಆವೃತ್ತಿಗೆ ಪ್ರಿಯಕೃಷ್ಣಾರನ್ನು ಹೀಗೆ ಯದ್ವಾತದ್ವಾ ಬೆಂಬಲಿಸುವ ಯಾವ ಅನಿವಾರ್ಯತೆಯಿದೆಯೆಂದು ಕೇಳ ಬೇಕಾಗುತ್ತದೆ.

ಲೇಯೌಟ್ ಕೃಷ್ಣಪ್ಪ ಮತ್ತು ಅವರ ಮಗ ನಿಜಕ್ಕೂ ಜನಾನುರಾಗಿಗಳಿರಬಹುದು, ಜನಪ್ರಿಯರಿರಬಹುದು. ಆದರೆ ಅವರು ನೂರಾರು ಕೋಟಿಗಳ ಒಡೆಯರೂ ಎಂಬುದನ್ನು ಅಲ್ಲಗೆಳೆಯುವಂತಿಲ್ಲವಲ್ಲ? ಪ್ರಿಯಕೃಷ್ಣ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಆಸ್ತಿ ವಿವರ ಪ್ರಕಾರ ಈ ೨೬ ವರುಷದ ಬ್ರಹ್ಮಾಚಾರಿ ೭೭೦ ಕೋಟಿಯ ಒಡೆಯ.ಗೋವಿಂದರಾಜ ನಗರದಿಂದ ಸ್ಪರ್ಧಿಸಿರುವ ಮಂತ್ರಿ ಸೋಮಣ್ಣನವರೂ ಕೋಟ್ಯಾಧಿಪತಿಯೇ ಮತ್ತು "ಪತ್ರಕರ್ತರನ್ನು ಸಾಕಿಕೊಂಡವರೇ" - ಏನೇ ರಿಬ್ಬನ್ ಕಟ್ ಮಾಡುವ ಸಂಧರ್ಭವಿರಲಿ ಪತ್ರಕರ್ತ ಫೊಟೋಗ್ರಾಫರ್ ಪಡೆಗಳನ್ನು ಕರೆದುಕೊಂಡು ಹೋಗುವುದು ಸೋಮಣ್ಣನವರ ಸ್ಟೈಲ್. ಆದರೆ ಇತ್ತೀಚೆಗೆ ಬೆಂಗಳೂರು ನಗರ ಪಾಲಿಕೆಯ ಇಂಜಿನಿಯರೊಬ್ಬರಿಗೆ ಆಸ್ಪತ್ರೆ ಸೇರುವಂತೆ ಕಪಾಳ ಮೋಕ್ಷ ಮಾಡಿ ಸುದ್ದಿಯಾದ ನಂತರ ಸುದ್ದಿಮನೆಗಳಲ್ಲಿ ಸೋಮಣ್ಣ persona non grata ಆಗಿದ್ದಾರೆ.ಆದರೂ ಇಂತಹ ಕೋಟ್ಯಾಧಿಪತಿಗಳ ನಡುವಿನ ಕದನ ವರದಿ ಮಾಡಲು ತಾಮುಂದು ನಾಮುಂದು ಎಂದು ಸುದ್ದಿಮನೆಗಳಲ್ಲಿ ಸ್ಪರ್ಧೆ ನಡೆದಿರಬಹುದೇನೋ?

ಏನೇ ಇರಲಿ, "ಉದಯವಾಣಿ"ಯಂತಹ ಪತ್ರಿಕೆ, ಅದರಲ್ಲೂ ಪತ್ರಿಕೋದ್ಯಮದಲ್ಲಿ ಪಳಗಿದ, ಒಳ್ಳೇ ಹೆಸರಿರುವ ಅದರ ಬೆಂಗಳೂರಿನ ಸಂಪಾದಕ ಮಂಡಳಿ ಯಾಕೆ ಪತ್ರಿಕಾ ಧರ್ಮವನ್ನು ಮರೆತು ಇಂತಹ ಕೆಳಮಟ್ಟಕ್ಕಿಳಿಯಿತು ಎಂದು ಕೇಳಲು ವಿಷಾದವಾಗುತ್ತದೆ.

Sunday, July 19, 2009

ಉಂಡೂ ಹೋದ ಕೊಂಡೂ ಹೋದ ಕರ್ನಾಟಕದ ಭ್ರಷ್ಟ ಪತ್ರಕರ್ತರ ಬಗ್ಗೆ


ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ಮಾಧ್ಯಮ ಸಲಹಗಾರರಾಗಿದ್ದ ಧನಂಜಯ ಕುಲಕರ್ಣಿಯವರು ಕರ್ನಾಟಕದ ಮಾಧ್ಯಮ ಲೋಕದ ಇಂದಿನ ಹುಳುಕುಗಳನ್ನು ತೆಗೆದಿಟ್ಟು ಬಹಳ ಗಂಭೀರವಾದ ಆರೋಪ ಮಾಡಿದ್ದಾರೆ. ಮಾಧ್ಯಮ ಮಿತ್ರರು ಹಣ ಕೇಳಿದಾಗ ಕೇಳಿದಷ್ಟು ಚುಪ್ಪೆಂದು ಕೊಟ್ಟು ಈಗ ಚುನಾವಣೆಯಲ್ಲಿ ಸೋತ ಮೇಲೆ ಧನಂಜಯರು ಭಡಭಡಿಸುತ್ತಿದ್ದಾರೆ ಯಾಕೆಂದು ಗೊತ್ತಾಗುತ್ತಿಲ್ಲ. ತಾನು ತಪ್ಪು ಮಾಡಿರದಿದ್ದರೆ ಹಣ ಯಾಕೆ ಕೊಟ್ರಿ ಸ್ವಾಮೀ? ತಮ್ಮ ಹುಳುಕುಗಳನ್ನು ಆಗ ಮುಚ್ಚಿಕೊಳ್ಳಲು ತಮಗೆ ಇದೇ ಮಾಧ್ಯಮ ಮಿತ್ರರು ಬೇಕಾದರು, ತಮ್ಮ ಇಚ್ಚೆಯಂತ್ ಕೆಲಸವನ್ನೂ ಮಾಡಿದರು. ಆದರೂ ಧನಂಜಯರು ಎತ್ತಿರುವ ಪ್ರಶ್ನೆಗಳು ಬಹಳ ಮುಖ್ಯವೆಂದೆನಿಸುತ್ತದೆ.


ಧನಂಜಯರು ಮೂರು ಉದಾಹರಣೆಗಳ ಸಹಿತ ಮಾಡಿರುವ ಆರೋಪಗಳನ್ನು ನಂಬದಿರಲು ಸಾಧ್ಯವೇ ಇಲ್ಲ - ಬಹಳ ಸ್ಪೆಸಿಫಿಕ್ ಆದ ಆರೋಪ ಮಾಡಿದ್ದಾರೆ.

ಧನಂಜಯರ ಬ್ಲಾಗನ್ನು ಇಲ್ಲಿ ನೋಡಿ: http://kannadajournalists.ning.com/profiles/blogs/2792947:BlogPost:19201

ಕಮೆಂಟುಗಳಲ್ಲೂ ಧನಂಜಯರು ಇನ್ನಷ್ಟು ಉದಾಹರಣೆಗಳ ಮೂಲಕ ಇಂದಿನ ಪತ್ರಿಕಾಲೋಕದ ಹುಳುಕುಗಳನ್ನು ಎಳೀಳೆಯಾಗಿ ತೆರೆದಿಟ್ಟಿದ್ದಾರೆ.

ಚುನಾವಣಾ ಸಮಯದಲ್ಲಿ ಲಕ್ಷಗಟ್ಟಳೆ ಮಾಡಿಕೊಂಡಿರುವ, ಹೊಸ ಕಾರು ಬಂಗಲೆ ಮಾಡಿಕೊಂಡಿರುವ ಪತ್ರಕರ್ತರು ಬೆಂಗಳೂರಲ್ಲಿ ಡಜನುಗಟ್ಟಳೆ ಸಿಗುತ್ತಾರೆ. ಆದರೆ ಈ ರೀತಿಯ ಅನೈತಿಕ ಪತ್ರಿಕೋದ್ಯಮ ಜಿಲ್ಲಾ ತಾಲೂಕು ಮಟ್ಟದಲ್ಲೂ ನಡೆಯುತ್ತಿದೆಯೆಂದರೆ ನಮ್ಮ ಮಾಧ್ಯಮ ಲೋಕ ಹೇಗೆ ಗಬ್ಬೆದ್ದು ಹೋಗಿದೆಯೆಂದು ತಿಳಿದು ಬರುತ್ತದೆ.

ಪತ್ರಿಕೋದ್ಯಮವೆಂದರೆ ಯಾವುದೇ ಅರ್ಹತೆಯಿಲ್ಲದೆ ಸುಲಭವಾಗಿ ಮೇಯುವ ಕ್ಷೇತ್ರವೆಂದು ಸತ್ಯ ತಾನೇ? ಅತ್ತ ಶಾಲೆಗಳಲ್ಲಿ ಗುಡಿಸುವ ಕೆಲಸಕ್ಕೆ, ಕ್ಲರ್ಕ್ ಕೆಲಸಕ್ಕೆ, ಪೊಲೀಸ್ ಪೇದೆಯಾಗಲು ೭ನೇ ಕ್ಲಾಸೋ, ಎಸ್.ಎಸ್.ಎಲ್.ಸಿ.ಪಾಸಾಗಿರಬೇಕೆಂಬ ಕನಿಷ್ಠ ಅರ್ಹತೆ ಬೇಕು - ಆದರೆ ಎಂತಹ ವಿಪರ್ಯಾಸ ನೋಡಿ - ಇಂದು ಪತ್ರಿಕೋದ್ಯಮಿಯೆಂದೆನಿಸಿಕೊಳ್ಳಲು ಯಾವುದೇ ಅರ್ಹತೆ ಬೇಡ!

ನಾನು ಹಿಂದೆ ಬರೆದಂತೆ ಬೆಂಗಳೂರಿನಲ್ಲಿ ದಲ್ಲಾಳಿಗಳಂತೆ ಭೂಗಳ್ಳರ ಜೊತೆ, ರಾಜಕಾರಣಿಗಳ ಜೊತೆ ಡೀಲ್ ಮೇಕರುಗಳಂತೆ ರಾರಾಜಿಸುವ ಪತ್ರಿಕೋದ್ಯಮಗಳನ್ನು ನೋಡಿದರೆ ವಾಕರಿಕೆ ಬರುತ್ತದೆ. ಅತ್ತ ಬಳ್ಳಾರಿಯಲ್ಲಿ ಗಣಿ ಲೂಟಿಯಲ್ಲಿ ಭಾಗಿಯಾಗಿರುವ ಮಾಧ್ಯಮ ಮಿತ್ರರೂ ಬಹಳ ಮಂದಿ ಸಿಗುತ್ತಾರೆ. ಗಣಿ ಧಣಿಗಳು ಎಸೆದ ಲ್ಯಾಪ್ ಟಾಪ್ ಎಂಜಲಿಗೆ ತಮ್ಮನ್ನೇ ಮಾರಿಕೊಂಡು ಪತ್ರಿಕಾಧರ್ಮವನ್ನು ಮರೆತು ರಾಜ್ಯದ ಮತ್ತು ದೇಶದ ಜನರನ್ನು ಕತ್ತಲಲ್ಲಿಟ್ಟಿರುವ ಇಂತಹ ಮಾಧ್ಯಮ ಮಂದಿಯನ್ನು, ಮಾಧ್ಯಮಗಳನ್ನು ಜನರು ನಂಬುವ ಕಾಲ ಹೋಗಿದೆ.

ಪತ್ರಿಕೆಗಳಲ್ಲಿ ಬರುವುದೆಲ್ಲಾ ಸತ್ಯವೆಂದು ನಂಬುವವರು ಪ್ರಾಯಶ: ಕೆಲ ಹಳ್ಳಿಯಲ್ಲಿ ಮಾತ್ರ ಸಿಗಬಹುದು - ಸಿಚುವೇಶನ್ ಅಷ್ಟು ಸೀರಿಯಸ್ಸಾಗಿದೆ. ಮಾಧ್ಯಮ ಮಿತ್ರರು ಕಣ್ಣು ಮುಚ್ಚಿ ಕುಡಿಯಬಹುದು, ಎದುರು ಸಿಗುವ ಜನರು ತಮಗೆ ಬೇಶಾವರಿ ನಗು ಬೀರಬಹುದು - ಆದರೆ ಹಿಂದಿನಿಂದ ವ್ಯಾಕರಿಸಿ ಉಗುಳದಿದ್ದರೆ ನೋಡಿ!

ಥೂ ನಿಮ್ಮ!

Thursday, April 9, 2009

ಮಾಧ್ಯಮ ಮಿತ್ರರ ಕೋಳಿ ಜಗಳ ಭಾಗ ೨: ರವೀಂದ್ರ ರೇಷ್ಮೆ vs ವಿಶ್ವೇಶ್ವರ ಭಟ್


ವಿ.ಕ.ಭಟ್ಟರ ಮೇಲೆ ರವೀಂದ್ರ ರೇಷ್ಮೆ ಹೆಗಲ ಮೇಲಿಂದ ರವಿಕೃಷ್ಣಾ ರೆಡ್ಡಿಯ ಗುಂಡು!


ಕಳೆದ ವಾರ "ಮಾಧ್ಯಮ ಮಿತ್ರರ ಕೋಳಿ ಜಗಳ ನೋಡು ಬಾರಾ:ವಿಶ್ವೇಶ್ವರ ಭಟ್ vs ರವಿಕೃಷ್ಣಾ ರೆಡ್ಡಿ" ಕದನದ ಭಾಗ ೨ ಎಂದೇ ಹೇಳಿ ಬೇಕಾದರೆ, ಈ ವಾರ ವಿಕ್ರಾಂತ ಕರ್ನಾಟಕದ "ಗೌರವ ಸಂಪಾದಕ" ರವೀಂದ್ರ ರೇಷ್ಮೆಯವರು ನೇರವಾಗಿ ವಿಜಯ ಕರ್ನಾಟಕದ ಭಟ್ಟರ ಮೇಲೆ ಹರಿಹಾಯ್ದಿದ್ದಾರೆ. ಅಂತೂ ಸುದ್ದಿ ರಿಪೋರ್ಟ್ ಮಾಡಬೇಕಾದ ಪತ್ರಕರ್ತರೇ ತಮ್ಮೊಳಗೆ ಜಗಳ ಮಾಡಿಕೊಂಡು ತಾವೇ ಸುದ್ದಿಯಾಗುತ್ತಿದ್ದಾರೆ.

ಇದೆಲ್ಲಾ ಶುರುವಾದದ್ದು ರವಿಕೃಷ್ಣಾ ರೆಡ್ಡಿ, ವಿಜಯ ಕರ್ನಾಟಕದ ವಿಶ್ವೇಶ್ವರ ಭಟ್ಟರನ್ನು "ಅನಂತ ಕುಮಾರ ನಿಷ್ಠ ಭಟ್" ಎಂದು ಬಣ್ಣಿಸುವುದರಿಂದ. ಭಟ್ಟರು ಸುಮ್ಮನೆ ಬಿಡುತ್ತಾರೆಯೇ? ಸುದ್ದಿ ಮನೆಯ ಪ್ರೈವೆಸಿಗೆ ಮಣ್ಣು ಹಾಕಿ, ಹಿಂದಿನ ಚುನಾವಣೆಯಲ್ಲಿ ರವಿಕೃಷ್ಣಾ ರೆಡ್ಡಿ ತಮ್ಮ ಕಚೇರಿಗೆ ಬಂದದ್ದು, ಸಪೋರ್ಟ್ ಕೇಳಿದ್ದು, ತಾನು ಉಪದೇಶ ಮಾಡಿ ಹಿಂದೆ ನಕ್ಕಿದ್ದು ಎಲ್ಲವನ್ನೂ ಬಣ್ಣಿಸಿ, ರವಿಕೃಷ್ಣಾ ರೆಡ್ಡಿ "ಲೂಸು ಕೇಸ್" ಅಂತಾ ತಮ್ಮ ಭಾನುವಾರದ ಅಂಕಣದಲ್ಲಿ ಬರೆದುಬಿಟ್ಟರು.

ಅದಕ್ಕೆ ಉತ್ತರವಾಗಿ ರವಿಕೃಷ್ಣಾ ರೆಡ್ಡಿ ತನ್ನ ಪತ್ರಿಕೆಯ "ಗೌರವ ಸಂಪಾದಕ" (ಅಂದರೆ ಬಾಡಿಗೆ ಸಂಪಾದಕ ಅಥವಾ ಹೊರಗುತ್ತಿಗೆಯ ಸಂಪಾದಕವೆನ್ನೋಣವೇ?) ರವೀಂದ್ರ ರೇಷ್ಮೆಯ ಹೆಗಲ ಮೇಲೆ ಕುಳಿತು ಪ್ರತ್ಯುತ್ತರ ನೀಡಿದ್ದಾರೆ.

ರೇಷ್ಮೆಯವರೂ ಪತ್ರಿಕೋದ್ಯಮದ ಎಲ್ಲಾ ಕಟ್ಟುಪಾಡುಗಳನ್ನು ಅತ್ತ ಬದಿಗಿಟ್ಟು (ಹೇಗೂ "ಗೌರವ ಸಂಪಾದಕ"ರಲ್ಲಾ!), ತಮ್ಮ ಮತ್ತು ವಿಶ್ವೇಶ್ವರ ಭಟ್ಟರ ನಡುವೆ ನಡೆದ ಖಾಸಗಿ ದೂರವಾಣಿ ಸಂಭಾಷಣೆಯನ್ನೇ ಈ ವಾರದ ಸಂಪಾದಕೀಯ ಮಾಡಿ ಬಿಟ್ಟಿದ್ದಾರೆ. ತನ್ಮೂಲಕ ತನ್ನ ಮಾಲಿಕ ರವಿಕೃಷ್ಣಾ ರೆಡ್ಡಿ ವಿರುದ್ಧ ಬರೆದ ವಿಶ್ವೇಶ್ವರ ಭಟ್ಟರ ವಿರುದ್ಧ ಕಿಡಿಕಾರಿ ರವಿಕೃಷ್ಣಾ ರೆಡ್ಡಿಯ ಋಣ ತೀರಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಭರ್ಜರಿ ೨೦೦ ಮತ ಗಳಿಸಿ ಠೇವಣಿ ಕಳೆದುಕೊಂಡ ರವಿಕೃಷ್ಣಾ ರೆಡ್ಡಿಯನ್ನು "ಯುವ ಕನಸುಗಾರ", "ಪ್ರಾಮಾಣಿಕ ಹೋರಾಟಗಾರ"ಯೆಂದೆಲ್ಲಾ ತನ್ನ ಧಣಿಯನ್ನು ಸ್ವಲ್ಪ ಅತಿಯಾಗಿಯೇ ಹೊಗಳಿದ್ದಾರೆ.

ಒಟ್ಟಾರೆ ಹೇಳುವುದಾದರೆ, ಕರ್ನಾಟಕ ಪತ್ರಿಕೋದ್ಯಮದ ಘಟಾನುಘಟಿಗಳು ಈ ಪರಿ "ಇಗೋ" ಪ್ರದರ್ಶನ ಮಾಡುವುದನ್ನು ನೋಡಿ ನಗಬೇಕೋ ಅಳಬೇಕೋ ಗೊತ್ತಾಗುತ್ತಿಲ್ಲ. ಅಂತೂ ಇಬ್ಬರ ಜಗಳದಲ್ಲಿ ಕರ್ನಾಟಕದ ಸುದ್ದಿ ಮನೆಗಳಲ್ಲಿ ಏನು ನಡೆಯುತ್ತದೆ, ಜಾತೀಯತೆ, ಲಾಬಿಗಳು ಹೇಗೆ ಬೀಡು ಬಿಟ್ಟಿವೆ ಎಂಬುದೆಲ್ಲಾ ಹೊರಬರುತ್ತಿದೆ.

ಎಲ್ಲಾ ಬದಿಗಿಟ್ಟು ನೋಡಿದರೆ ಈ ಘಟಾನುಘಟಿಗಳ ನಡುವೆ ವ್ಯತ್ಯಾಸವೇನೂ ಇಲ್ಲ. ತತ್ವ ನಿಷ್ಠೆ, ಎಡ ಬಲ ಸಿದ್ಧಾಂತಗಳೆಲ್ಲಾ ಕೇವಲ ತೋರಿಕೆಗಾಗಿ ಮಾತ್ರ.

ಅತ್ತ ರವೀಂದ್ರ ರೇಷ್ಮೆ ಲಂಕೇಶರ ಹೆಸರಲ್ಲಿ, ತನಿಖಾ ಪತ್ರಿಕೋದ್ಯಮದ ಹೆಸರಲ್ಲಿ ಏನೆಲ್ಲಾ ಮಾಡಿದ್ದಾರೆ, ತಮಗೆ ಎಷ್ಟು ಮಾಡಿಕೊಂಡಿದ್ದಾರೆಯೆಂದು ತಿಳಿಯಬೇಕಾದರೆ ಹಿಂದಿನ "ಲಂಕೇಶ್ ಪತ್ರಿಕೆ"ಯ ಮಾಜಿ ಕೆಲಸಗಾರರನ್ನು ಕೇಳಿ ನೋಡಿ. ವಿಧಾನಸೌಧದ ಒಂದು ಕಚೇರಿಯಿಂದ ದಾಖಲೆ ಪತ್ರ ತರಿಸಿಕೊಳ್ಳುವುದು, ಅದರ ಪ್ರತಿಯನ್ನು ಮಂತ್ರಿಗಳಿಗೋ, ಇತರ ಅಧಿಕಾರಿಗಳಿಗೋ ಕಳಿಸಿ ಬ್ಲ್ಯಾಕ್ ಮೇಲ್ ಮಾಡುವುದು, ಪತ್ರಿಕಾ ವರದಿ ಪ್ರಕಟಿಸದಿರಲು ಎರಡೂ ಕಡೆಯಿಂದ ಇಕ್ಕಿಕೊಳ್ಳುವುದು ರೇಷ್ಮೆಯವರ "ತನಿಖಾ ಪತ್ರಿಕೋದ್ಯಮ"ದ ಸ್ಟೈಲ್! ಲಂಕೇಶರ ಹೋದ ಮೇಲಂತೂ ಜಿಲ್ಲಾ ಮಟ್ಟ, ತಾಲೂಕು ಹೋಬಳಿ ಮಟ್ಟದಲ್ಲೂ ರೇಷ್ಮೆಯವರ "ತನಿಖಾ ಪತ್ರಿಕೋದ್ಯಮ" ನಡೆದದ್ದೇ ನಡೆದದ್ದು. ಸಾಮಾಜಿಕ ನ್ಯಾಯವೆಂದೆಲ್ಲಾ ಬೋರು ಹೊಡೆಸುವ ರೇಷ್ಮೆ ಅದನ್ನೂ ಒಂಥರಾ ಮಾಡಿದ್ದಾರೆ - ತಮ್ಮ ಪತ್ರಿಕಾವರದಿಗಾರರೆಲ್ಲಾ ಅಡ್ಡೆ ಪಡ್ಡೆಯಂತಿದ್ದವರು ರೇಷ್ಮೆಯವರ "ತನಿಖಾ ಪತ್ರಿಕೋದ್ಯಮದ" ತರಬೇತಿಯಿಂದಾಗಿ ಪ್ರೊಫೆಷನಲ್ ಹಫ್ತಾ ಕಲೆಕ್ಟರುಗಳೂ ನಾಚುವಂತೆ ಬಂಗಲೆ ಕಾರುಗಳನ್ನು ಕೊಂಡಿದ್ದಾರೆ.

ಕಾಲೇಜಿನಲ್ಲಿ ಪ್ರೊಫೆಸರ ಆದರೂ ಸರಿಯಾಗಿ ಪಾಠ ಮಾಡುವ ಬದಲು ದಿನವಿಡೀ ಡೀಲ್ ಕುದರಿಸುವ ರವೀಂದ್ರ ರೇಷ್ಮೆ,, ಕಳೆದ ಕೆಲ ದಶಕಗಳಿಂದ "ಹವ್ಯಾಸೀ ಪತ್ರಕರ್ತ", "ಗೌರವ ಸಂಪಾದಕ", "ತನಿಖಾ ಪತ್ರಕರ್ತ"ನೆಂಬ ಸ್ವಘೋಷಿತ ಬಿರುದುಗಳಿಂದ ಹೊರಬಂದಂತಿಲ್ಲ. ಬಿರುದು ಬಾವಲಿ ಹಾಕಿಕೊಳ್ಳಲಿ, ಆದರೆ ಪ್ರತಿವಾರ ಪತ್ರಿಕೆ ಹೊರತರಲು ಯಾಕೆ ಒದ್ದಾಡುತ್ತಿದ್ದಾರೆಂಬುದೇ ಅರ್ಥವಾಗುತ್ತಿಲ್ಲ - ಊರಿಗೆಲ್ಲಾ ಉಪದೇಶ ಮಾಡುವ ಮೊದಲು ತಮ್ಮ ಪತ್ರಿಕೆ ಸರಿಯಾಗಿ ಪ್ರತಿವಾರ ಹೊರತನ್ನಿ ಸ್ವಾಮೀ!

ಅಲ್ಲಾ, ವಿಶ್ವೇಶ್ವರ ಭಟ್ಟರು ಅನಂತಕುಮಾರ್ ಪಿ.ಎ. ಆಗಿದ್ದರೆಂಬುದನ್ನೇ ದೊಡ್ಡ ಅಪರಾಧವೆಂಬಂತೆ ರೇಷ್ಮೆಯವರು ಬಿಂಬಿಸುತ್ತಾರಲ್ಲಾ, ೧೯೮೩ರಲ್ಲಿ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾದದ್ದೇ ತನ್ನಿಂದಾಗಿ, ನಜೀರ್ ಸಾಹೇಬರು ಗ್ರಾಮೀಣಾಭಿವೃದ್ಧಿ ಸಚಿವರಾಗಲು ಹೇಳಿದ್ದು ನಾನೇ, ದೇವೇಗೌಡರ ಅಪ್ಪ ಮಕ್ಕಳ ಪಕ್ಷದ ಪ್ರಣಾಳಿಕೆ ಬರೆದದ್ದು ನಾನೇ ಎಂದೆಲ್ಲಾ ಕೊಚ್ಚಿಕೊಳ್ಳುತ್ತಾರೆ. ಪ್ರಾಯಶ: ತಾನು ಮಾತ್ರ ರಾಜಕೀಯ ಮಾಡಬಹುದು (ಹೇಗೂ "ಗೌರವ ಸಂಪಾದಕ"ರಲ್ಲಾ!), ಅದನ್ನೇ ಇನ್ನೊಬ್ಬ ಸಂಪಾದಕ ಭಟ್ಟರು ಮಾಡಿದರೆ ತಪ್ಪೆಂಬುದು ಅವರ ಅಭಿಪ್ರಾಯವೇನೋ.

ಇನ್ನು ವಿಶ್ವೇಶ್ವರ ಭಟ್ಟರ ವಿಷಯಕ್ಕೆ ಬರುವುದಾದರೆ, ತಮ್ಮ ಹಿಂದಿನ ದಿನಗಳಲ್ಲಿ ಒಂದು ಸರಿಯಾದ ಕೆಲಸವಿಲ್ಲದೆ ಅಲೆಯುತ್ತಿದ್ದಾಗ ಅನಂತಕುಮಾರ್ ಸಚಿವನಾದ ಕೂಡಲೇ ಅವರ ಕೃಪೆಯಿಂದ ಡಜನುಗಟ್ಟಳೆ ದೇಶ ವಿದೇಶಗಳನ್ನು ಸರಕಾರಿ ಖರ್ಚಿನಲ್ಲಿ, ತೆರಿಗೆದಾರರ ಖರ್ಚಲ್ಲಿ ಸುತ್ತಿದ್ದಾರೆ. ಹೊಟೇಲ್ ಅಶೋಕಾ ಮಾರಾಟ ಹಗರಣದಲ್ಲಿ ಭಟ್ಟರ ಹೆಸರು ಕೇಳಿ ಬಂದದ್ದು ಸುಳ್ಳೇನಲ್ಲ. ಮತ್ತೆ "ಹುಡ್ಕೋ ಹಗರಣ"ದಲ್ಲೂ ವಿಶ್ವೇಶ್ವರ ಭಟ್ಟರ ಹೆಸರು ಕೇಳಿ ಬಂದಿತ್ತು - ಹುಡ್ಕೋ ಹೆಸರಿನಲ್ಲಿ ಬಾಡಿಗೆ ಪಡೆದುಕೊಂಡಿದ್ದ ಕಾರು ಬಂಗಲೆಗಳು ವಿಶ್ವೇಶ್ವರ ಭಟ್ಟರು ಉಪಯೋಗಿಸುತ್ತಿದ್ದರೆಂದೆಲ್ಲಾ ಬೆಂಗಳೂರಿನ ಕೆಲ ಹಿರಿ ಪತ್ರಕರ್ತರು ಹೇಳುತ್ತಿರುತ್ತಾರೆ. "ಅಕ್ಕ" ಸಮ್ಮೇಳನದ ಹೆಸರಲ್ಲಿ ಪ್ರತಿವರ್ಷ ಅಮೆರಿಕಾ ಸುತ್ತುವ ಭಟ್ಟರು, ರಾಜ್ಯದಲ್ಲೇ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಯಾವುದೋ ಜೂನಿಯರ್ ರಿಪೋರ್ಟರುಗಳನ್ನು ಕಳೆಸಿ ತಮ್ಮ ಸಾಹಿತ್ಯ ಪ್ರೇಮ ಮೆರೆಯುತ್ತಾರೆ.

ಭಟ್ಟರ ಮೇಲಿರುವ ಇನ್ನೊಂದು ದೊಡ್ಡ ಅಪವಾದವೆಂದರೆ, ತಮ್ಮ ಹೆಸರಿನಲ್ಲಿ ಬರುವ ಅಂಕಣಗಳನ್ನು, ಪುಸ್ತಕಗಳನ್ನು ಬೇರೆಯವರ ಕೈಯಲ್ಲಿ ಬರೆಸುತ್ತಾರೆಂದು. ದಿನವಿಡೀ ಬೆಂಗಳೂರಿನಲ್ಲಿ ಅದಾವುದೋ ಉದ್ಘಾಟನೆ, ಬಿಡುಗಡೆ, ಸನ್ಮಾನ, ಸಮಾರಂಭಗಳಲ್ಲೇ ಕಂಡುಬರುವ ವಿಶ್ವೇಶ್ವರ ಭಟ್ಟರಿಗೆ ಓದಲು, ಬರೆಯಲು ಸಮಯವೆಲ್ಲಿ ಸಿಗುತ್ತದೆಯೆಂಬ ಪ್ರಶ್ನೆ ಸಹಜ ತಾನೇ? ಕಾಲೇಜಿನಲ್ಲಿ ಫುಲ್ ಟೈಮ್ ಪ್ರೊಫೆಸರ್ ಆಗಿರುವ ರೇಷ್ಮೆಯವರಿಗೂ "ತನಿಖಾ ಪತ್ರಿಕೋದ್ಯಮ"ಕ್ಕೆ ಪುರುಸೊತ್ತೆಲ್ಲಿಯೆಂದೂ ಕೇಳಬೇಕಾಗುತ್ತದೆ. ದೂರದ ಅಮೆರಿಕದ ಟೆಕ್ಕಿ ರವಿಕೃಷ್ಣಾ ರೆಡ್ಡಿಗೆ ಚುನಾವಣಾ ಸಮಯದಲ್ಲಿ ವಾರಗಟ್ಟಳೆ ಕರ್ನಾಟಕದ ಊರು ಸುತ್ತಲು ಪುರುಸೊತ್ತು ಹೇಗೆ ಸಿಗುತ್ತದೆಯೆಂಬುದೂ ಸೋಜಿಗದ ಸಂಗತಿ.

ಒಳಹೊಕ್ಕು ನೋಡಿದರೆ, ಪತ್ರಕರ್ತರೆಂದೆಲ್ಲಾ ಬೀಗುವ ಈ ರೇಷ್ಮೆ, ರೆಡ್ಡಿ, ಭಟ್ ವಗೈರೆಗಳ ಸೈಡ್ ಬಿಜಿನೆಸ್ಸುಗಳು, "ತನಿಖಾ ವರದಿ" ಹೆಸರಲ್ಲಿ ನಡೆಸುವ ಬ್ಲ್ಯಾಕ್ ಮೈಲ್ ಉದ್ಯಮಗಳು, ಲ್ಯಾಂಡ್ ಮಾಫಿಯಾಗಳ ಪ್ರಾಕ್ಸಿಗಳಂತೆ ವರ್ತಿಸುವ ಪತ್ರಿಕಾ ವರದಿಗಾರರು, ಚುನಾವಣಾ ಸಮಯದಲ್ಲಿ ಎಲ್ಲಿ ಸಿಗುತ್ತದೋ ಅಲ್ಲಿ ಉಂಡುವ ಮಾಧ್ಯಮ ಮಿತ್ರರ ವರ್ತನೆ ನೋಡಿ ವಾಕರಿಕೆ ಬರುತ್ತದೆ. ಅಲ್ಲಾ ಇದ್ದ ಬದ್ದ ರಾಜಕಾರಣಿಗಳ ಬಗ್ಗೆ, ಸಮಾಜದ ಅನಿಷ್ಠಗಳ ಬಗ್ಗೆ ಉಪದೇಶ ಮಾಡುವ ಪತ್ರಕರ್ತರೇ ಹೀಗೆ ಲೇಖನಿಗಳ ಮೂಲಕ ಹೊಡೆದಾಡಿಕೊಂಡರೆ ರಾಜಕಾರಣಿಗಳ ಬಗ್ಗೆ ಉಪದೇಶ ಮಾಡಲು ಇವರಿಗೆ ನೈತಿಕ ಹಕ್ಕೆಲ್ಲಿದೆಯೆಂಬ ಪ್ರಶ್ನೆ ಉದ್ಭವಿಸುತ್ತದೆ.

ಆದರೂ ವಿಶ್ವೇಶ್ವರ ಭಟ್ ಮತ್ತು ರವೀಂದ್ರ ರೇಷ್ಮೆಯಂತಹ ಕನ್ನಡ ಪತ್ರಿಕೋದ್ಯಮದ ಘಟಾನುಘಟಿಗಳು ಶಾಲಾ ಹುಡುಗರಂತೆ ಜಗಳ ಮಾಡುತ್ತಿರುವುದರಿಂದ ಕನ್ನಡ ಪತ್ರಿಕೋದ್ಯಮದ ಒಳಗಿನ ಹುಳುಕಗಳೆಲ್ಲಾ (ಅದೇನೋ ಡಾರ್ಕ್ ಸೀಕ್ರೆಟ್ ಅಂತಾರಲ್ಲಾ) ಹೊರಬರುತ್ತಿರುವುದು ಕನ್ನಡ ಪತ್ರಿಕೋದ್ಯಮದ ದೃಷ್ಠಿಯಿಂದ ಒಳ್ಳೆಯ ಬೆಳವಣಿಗೆಯೆನ್ನೋಣವೇ?

Sunday, March 29, 2009

ಮಾಧ್ಯಮ ಮಿತ್ರರ ಕೋಳಿ ಜಗಳ ನೋಡೋ ಬಾರಾ: ವಿಶ್ವೇಶ್ವರ ಭಟ್ vs ರವಿಕೃಷ್ಣಾ ರೆಡ್ಡಿ!

ಮಾಧ್ಯಮ ಮಿತ್ರರ ಕೋಳಿ ಜಗಳ ನೋಡೋ ಬಾರಾ: ವಿಶ್ವೇಶ್ವರ ಭಟ್ vs ರವಿಕೃಷ್ಣಾ ರೆಡ್ಡಿ!


ಊರಿಗೆಲ್ಲಾ ಉಪದೇಶ ಮಾಡುವ ಮಾಧ್ಯಮ ಮಿತ್ರರು ತಮ್ಮೊಳಗೇ ಜಗಳ ಮಾಡಿಕೊಂಡು ಒಳಗಿನ ರಾಡಿಯನ್ನು ಹೊರಹಾಕುವುದನ್ನು ನೋಡುವುದೇ ಚೆಂದ.

ಒಂದೆಡೆ "ವಿಕ್ರಾಂತ ಕರ್ನಾಟಕ"ವೆಂಬ ಅನಿಯಮಿತ ವಾರಪತ್ರಿಕೆ - ಒಂದು ವಾರ ಮಾರುಕಟ್ಟೆಗೆ ಬಂದರೆ ಮತ್ತೆರಡು ವಾರ ನಾಪತ್ತೆ ಈ ಪತ್ರಿಕೆ! - ಸ್ಥಾಪಿಸಿದ ಅದೇ ಹಳಸಲು ಔಟ್ ಡೇಟೆಡ್ ಲಂಕೇಶ್ ಚಿಂತನೆಯ ಕೆಲಸವಿಲ್ಲದ ಟೆಕ್ಕಿ ರವಿಕೃಷ್ಣಾ ರೆಡ್ಡಿ.

ಇನ್ನೊಂದೆಡೆ "ವಿಜಯ ಕರ್ನಾಟಕ"ದ ಸಂಪಾದಕ ವಿಶ್ವೇಶ್ವರ ಭಟ್ಟರು.

ಇಬ್ಬರೂ ತಮ್ಮ ತಮ್ಮ ಪತ್ರಿಕೆಗಳಲ್ಲಿ ಇನ್ನೊಬ್ಬರ ವಿರುದ್ಧ ಬರೆದುಕೊಂಡು ಓದುಗರಿಗೆ ಪುಕ್ಕಟೆ ಮನೋರಂಜನೆ ನೀಡುತ್ತಿದ್ದಾರೆ.

ಮೊದಲ ಫಿರಂಗಿ ಸಿಡಿಸಿದ್ದು ರವಿಕೃಷ್ಣಾ ರೆಡ್ಡಿಗಾರು. ಯಡ್ಡ್ಯೂರಪ್ಪ ವಿರೋಧೀ ಪತ್ರಿಕಾವರದಿಗಳನ್ನು ಪ್ರಕಟಿಸುವುದರ ಮೂಲಕ ಅನಂತಕುಮಾರರ ಭಟ್ಟಂಗಿ ಕೆಲಸವನ್ನು ವಿಶ್ವೇಶ್ವರ ಭಟ್ ಮಾಡುತ್ತಿದ್ದಾರೆಯೆಂಬುದು ಅವರ ಮಾರ್ಚ್ ೨೦ರ ಅಂಕಣದ ತಿರುಳು. "ಅನಂತ ನಿಷ್ಠ ಭಟ್" ಎಂಬ ಹೆಡ್ಡಿಂಗ್ ಮೂಲಕ ಪ್ರಕಟವಾದ ಈ ಲೇಖನವನ್ನು ರವಿಕೃಷ್ಣಾ ರೆಡ್ಡಿಯ ಬ್ಲಾಗಲ್ಲೂ ನೋಡಬಹುದು.

ವಿಶ್ವೇಶ್ವರ ಭಟ್ಟರು ಸುಮ್ಮನೆ ಬಿಡುತ್ತಾರೆಯೇ? ತಮ್ಮದೇ ಶೈಲಿಯಲ್ಲಿ ಅವರ ಭಾನುವಾರದ ಅಂಕಣದಲ್ಲಿ ರವಿ ಕೃಷ್ಣಾ ರೆಡ್ಡಿಗೆ ಸರಿಯಾಗಿಯೇ ಜಡಿದಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಅದಾವುದೋ ಮೌಲ್ಯಾಗ್ರಹದ ಹೆಸರಲ್ಲಿ ದೊಡ್ಡದೊಡ್ಡ ಬಡಾಯಿ ಕೊಚ್ಚಿಕೊಂಡು, ಉಪವಾಸ ಮಾಡಿ ಬಿಟ್ಟಿ ಪ್ರಚಾರ ಪಡೆದುಕೊಂಡರೂ ಕೇವಲ ೨೦೦ ಮತಗಳನ್ನು ಪಡೆದ ರವಿಕೃಷ್ಣಾ ರೆಡ್ಡಿ ಬಗ್ಗೆ ಕನಿಕರ ವ್ಯಕ್ತಪಡಿಸಿದ್ದಾರೆ. ಚುನಾವಣೆಗೆ ಈ-ಮೇಲ್ ಮೂಲಕ ಸಂಗ್ರಹಿಸಿದ ೪.೨೦ ಲಕ್ಷ ರೂಪಾಯಿಗೇನಾಯಿತೆಂದು ಕೇಳಿದ್ದಾರೆ.

ಒಂದೆಡೆ ನೋಡಿದಾಗ ಭಟ್ಟರು ಈ ರೆಡ್ಡಿಗೆ ಜಡಿದದ್ದು ಕಮ್ಮಿಯೇ ಆಯಿತೆಂದೆನಿಸುತ್ತದೆ.

ಸ್ವಂತ ಯೋಚನೆಯಿಲ್ಲದೆ ಲಂಕೇಶ್ ಹಳಸಲು ಯೋಚನೆಗಳಿಗಿಂದ ಹೊರಬಾರದೆ, ದೂರದ ಅಮೆರಿಕಾದಲ್ಲಿ ಕುಳಿತು ಇಂಟರನೆಟ್ಟುಗಳಲ್ಲಿ ತನ್ನ ಪೆದ್ದು ಮುಖದ ವೀಡಿಯೋಗಳನ್ನು ತಾನೇ ಮಾಡಿಕೊಂಡು ಆದರ್ಶವಾದಿಯಂತೆ ಪೋಸು ಕೊಡುವ ರವಿಕೃಷ್ಣಾ ರೆಡ್ಡಿಯ ನೋಡಿದರೆ ನಗು ಬರುತ್ತದೆ.


ಅಮೆರಿಕದಲ್ಲಿ ಕೆಲಸವಿಲ್ಲದಾಗ ಭಾರತಕ್ಕೆ ಬಂದು ವಿಚಾರಗೋಷ್ಠಿಯ ಹೆಸರಲ್ಲಿ ತನ್ನಂತೆಯೇ ಲಂಕೇಶ್ ಪ್ರಪಂಚದಿಂದ ಹೊರಬರದ ಸಮಾನಮನಸ್ಕರ ಜೊತೆ ಕೂತು ಎಲ್ಲರನ್ನೂ ಬೋರು ಹೊಡೆಸುವ ಆಸಾಮಿ ಈ ರವಿಕೃಷ್ಣಾ ರೆಡ್ಡಿ.

ದೇಶ ದ್ರೋಹಿ ನಕ್ಸಲರೊಂದಿಗೆ ಈ-ಮೇಲ್ ಹಂಚಿಕೊಳ್ಳುವ ಈ ರವಿಕೃಷ್ಣಾ ರೆಡ್ಡಿ ಇವತ್ತೂ ಉಡುಪಿಯಲ್ಲಿ ಜನಪರ ವೇದಿಕೆಯೆಂಬ ನಕ್ಸಲ್ ಪ್ರೇಮಿ ಸಂಘಟನೆಯ ಜೊತೆ ಸೇರಿ ಅದಾವುದೋ ವಿಚಾರಗೋಷ್ಠಿ ಆಯೋಜಿಸಿದ್ದಾರೆ.

ಲೋಹಿಯಾವಾದ, ಲಂಕೇಶ್ ಹೆಸರಲ್ಲಿ ಬೋರು ಹೊಡೆಸುವ ರವಿಕೃಷ್ಣಾ "ರೆಡ್ಡಿ", ಕ್ಯಾಲಿಫೋರ್ನಿಯಾದಲ್ಲಿ ಕನ್ನಡ ಕೂಟದ ಅಧ್ಯಕ್ಷನಾಗಿದ್ದಾಗ ಕನ್ನಡ ಬಳಗವನ್ನು ಜಾತಿಯ ಆಧಾರದಲ್ಲಿ ವಿಭಜಿಸಿದನ್ನು ಅಲ್ಲಿಯ ಕನ್ನಡಿಗರು ಇಂದಿಗೂ ನೆನಪಿಟ್ಟುಕೊಂಡಿದ್ದಾರೆಯೆಂದು ಅಲ್ಲಿಂದ ಬಂದ ಓರ್ವ ಮಿತ್ರ ಹೇಳುತ್ತಿದ್ದ.

ಅಲ್ಲಾ ಭಟ್ಟರು ಅನಂತಕುಮಾರ್ ಭಟ್ಟಂಗಿ, ಪಕ್ಷಪಾತಿಗಳೆಂದೆಲ್ಲಾ ಹೇಳುವ ರೆಡ್ಡಿ, ತನ್ನ "ವಿಕ್ರಾಂತ ಕರ್ನಾಟಕ"ದ ಡಮ್ಮಿ ಸಂಪಾದಕನಾದ ತನ್ನ ಅಣ್ಣ ಜನತಾದಳದ ಸಕ್ರಿಯ ಕಾರ್ಯಕರ್ತ / ಪದಾಧಿಕಾರಿಯೆಂಬುದನ್ನು ಬಚ್ಚಿಡುವುದರ ರಹಸ್ಯವೇನು?

ಇನ್ನು ಲೋಕಕ್ಕೆಲ್ಲಾ ವಿಚಾರ ಹೇಳುವ ರವಿಕೃಷ್ಣಾ ರೆಡ್ಡಿಯ ಅಸಲು ಏನೆಂಬುದು "ವಿಕ್ರಾಂತ ಕರ್ನಾಟಕ"ವನ್ನು ನೋಡಿದರೆಯೇ ತಿಳಿಯುತ್ತದೆ. ಬೇರೆಯವರಿಗೆ ಉಚಿತ ಉಪದೇಶವನ್ನು ಪುಂಖಾನಪುಂಖವಾಗಿ ನೀಡುವ ಈ ರವಿಕೃಷ್ಣಾ ರೆಡ್ಡಿ ಮೊದಲು ತನ್ನ ಪತ್ರಿಕೆಯವನ್ನು ಪ್ರತಿ ವಾರ ಸರಿಯಾಗಿ ಹೊರತರಲಿ. ಇನ್ನೂ "ವಿಕ್ರಾಂತ ಕರ್ನಾಟಕ"ದ ಬಗ್ಗೆ, ಅದರ "ಗೌರವ ಸಂಪಾದಕ" "ರಾಮಕೃಷ್ಣ ಹೆಗಡೆ ಸರಕಾರ ಬಂದದ್ದೇ ನನ್ನಿಂದ" ರವೀಂದ್ರ ರೇಷ್ಮೆಯೆಂಬ ಇನ್ನೊಂದು ಲಂಕೇಶ್ ಪಳೆಯುಳಿಕೆ ಬಗ್ಗೆ ಬರೆಯುವುದು ಬಹಳಷ್ಟಿದೆ - ಇನ್ನೊಂದು ಬ್ಲಾಗ್ ಪೋಸ್ಟ್ ನಿರೀಕ್ಷಿಸಿ. ಸದ್ಯಕ್ಕೆ ಕಾಫಿ ಕುಡಿಯುತ್ತಾ ಈ ಇಬ್ಬರ ಜಗಳ ಎಂಜಾಯ್ ಮಾಡಿ.

ಅತ್ತ ಚುನಾವಣೆಯಲ್ಲೂ ಠೇವಣಿ ಉಳಿಸಿಕೊಳ್ಳಲಾಗದ ಈ ರೆಡ್ಡಿ ಇತ್ತ ಸರಿಯಾಗಿ ಪ್ರತಿವಾರ ಪತ್ರಿಕೆ ಹೊರತರಲಾರದೆ ಮಾಧ್ಯಮ ಲೋಕದಲ್ಲೂ ಫ್ಲಾಪ್. ಒಟ್ಟಾರೆ ರೆಡ್ಡಿಯಂತಹ ಜೋಕರುಗಳೂ ನಮಗೆ ಪುಕ್ಕಟೆ ಮನರಂಜನೆ ನೀಡುತ್ತಿದ್ದಾರೆಂಬುದು ನಿಜ!

ರವಿ ರೆಡ್ಡಿಯ ಕಭೀ ಹಾಂ ಕಭೀ ಹಾಂ ವಾರಪತ್ರಿಕೆಯ ಬೆರಳೆಣಿಕೆಯ ಓದುಗರೆದುರು, ಪ್ರತಿನಿತ್ಯ ಲಕ್ಷಗಟ್ಟಳೆ ಓದುಗರನ್ನು ಹೊಂದಿರುವ ವಿಶ್ವೇಶ್ವರ ಭಟ್ಟರು ಈ ರೌಂಡಿನಲ್ಲಿ "ವಿಜಯ" ಸಾಧಿಸಿದ್ದಾರೆಯೆಂದು ಹೇಳೋಣವೇ?

Thursday, March 19, 2009

ಇಂಟರನೆಟ್ಟಿನಲ್ಲೊಂದು ಕನ್ನಡ ಮಾಧ್ಯಮ ಮಿತ್ರರ ಗರ್ಭಗುಡಿ


ಮಾಧ್ಯಮ ಮಿತ್ರರ ಗರ್ಭ ಗುಡಿ

ಇತ್ತೀಚೆಗೆ ಕನ್ನಡ ಮಾಧ್ಯಮ ಮಿತ್ರರು ಒಂದು ಕಡೆ ಒಟ್ಟಾಗಿ "ಕನ್ನಡ ಜರ್ನಲಿಸ್ಟ್ಸ್ - ಇದು ಮಾಧ್ಯಮ ಮಿತ್ರರ ಸಮೂಹ ಮಾಧ್ಯಮ"ವೆಂಬ ಇ-ಗುಂಪೊಂದನ್ನು ಸ್ಥಾಪಿಸಿಕೊಂಡಿದ್ದಾರೆ.

ಉದ್ಧೇಶವೇನೋ ಒಳ್ಳೆಯದೇ, ಆದರೆ ಟಿಪಿಕಲ್ ಪ್ರೆಸ್ ಕ್ಲಬ್ಬುಗಳ ಹಾದಿ ಹಿಡಿಯುವ ಎಲ್ಲಾ ಲಕ್ಷಣಗಳಿವೆ.
ಮಾಧ್ಯಮಗಳ ಬಗ್ಗೆ ಟೀಕೆ ಬಿಡಿ, ಇ-ಗುಂಪನ್ನು ಸೇರುವುದೇ ಒಂದು ಸಾಹಸ. ಬರೀ ಈ ಎಕ್ಸಕ್ಲೂಸಿವ್ ಕ್ಲಬ್ ಒಳಗೆ ಹೋಗುವುದು ಸಾಮಾನ್ಯ ಜನರಿಗೆ ಬಿಡಿ, ಅವರ ಮಿತ್ರರಲ್ಲದವರ ಮಾಧ್ಯಮದವರಿಗೇ ಇಲ್ಲಿ ಎಂಟ್ರಿ ಇಲ್ಲ.

ಕನ್ನಡ ಮಾಧ್ಯಮ ಲೋಕದ ಟ್ರಾಜೆಂಡಿಯಂದರೆ ಇದೇ. ತಮ್ಮದೇ ಲೋಕದಲ್ಲಿದ್ದು ನಾವು ಹೇಳಿದ್ದೇ ಸರಿಯೆಂಬ ವರ್ತನೆ.

ಲೋಕದ ಎಲ್ಲಾ ವಿಷಯಗಳ ಮೇಲೆ ಟೀಕೆ ಕಮೆಂಟು ಮಾಡುತ್ತಾರಿವರು. ಇದ್ದ ಬದ್ದವರ ವಿಷಯದಲ್ಲಿ ಮೂಗು ಹಾಕಿ ಪತ್ರಿಕೋದ್ಯಮದ ಹೆಸರಲ್ಲಿ ಎಲ್ಲರನ್ನೂ ಟೀಕೆ ಮಾಡಿ ಉಪದೇಶ ಮಾಡುವ ಇವರ ಮೇಲೆ ಟೀಕೆ ಮಾಡಿ ನೋಡಿ?

ಪತ್ರಿಕಾ ಸ್ವಾತಂತ್ರದ ಹೆಸರಲ್ಲಿ ಘಂಟೆಗಟ್ಟಳೆ ಭಾಷಣ ಮಾಡುತ್ತಾರಿವರು, ಆದರೆ ಈ ಪತ್ರಕರ್ತರ ಬ್ಲಾಗುಗಳಲ್ಲಿ ಅವರ ಅಭಿಪ್ರಾಯಕ್ಕೆ ಭಿನ್ನವಾದ ಕಮೆಂಟು ಹಾಕಿ ನೋಡಿ? ಊಹೂಂ, ಅಲ್ಲಿ ಭಟ್ಟಂಗಿಗಳಿಗೆ ಮಾತ್ರ ಪ್ರವೇಶ.


ಪರಸ್ಪರ ಬೆನ್ನು ತಟ್ಟಿಕೊಳ್ಳುವ, ಸ್ವಪ್ರಶಂಸೆಯಲ್ಲೇ ಕಳೆದುಹೋಗುವುದಾದರೆ ಪ್ರೆಸ್ ಕ್ಲಬ್ಬಿನಲ್ಲೇ ಅದನ್ನು ಮಾಡಬಹುದಲ್ಲ?
ಈ ಇ-ಕನ್ನಡ ಮಾಧ್ಯಮ ಮಿತ್ರರ ಇ-ಗರ್ಭಗುಡಿಗೆ ಓರ್ವ ಮಾಧ್ಯಮದ ವಿದ್ಯಾರ್ಥಿಯಾಗಿ ಪ್ರವೇಶ ಬಯಸಿ ಎಪ್ಲಿಕೇಶನ್ ಹಾಕಿ ಒಂದು ವಾರವಾದರೂ ಎಂಟ್ರಿ ಸಿಗಲಿಲ್ಲವಾದರಿಂದ ನೊಂದು ಈ ಬ್ಲಾಗ್ ಪೋಸ್ಟ್ ಮಾಡಬೇಕಾಯಿತು.

ಹಾಗಂತಾ ಎಲ್ಲಾ ಬರೀ ಜೋಳು ಅಂತಲ್ಲ. ಚಾರ್ಲಿ ಚಾಪ್ಲಿನ್ ಪ್ರತಿಮೆ ವಿಷಯದಲ್ಲಿ ಮಾಧ್ಯಮಗಳು ವರ್ತಿಸಿದ ರೀತಿಯ ಬಗ್ಗೆ ಅವಿನಾಶ್ ಬಿ. ಯವರು "ಇಲ್ಲದ ಚಾರ್ಲಿ ಚಾಪ್ಲಿನ್ ಪ್ರತಿಮೆಗೆ ಧಾಳಿ"ಯೆಂದು ಬ್ಲಾಗಿಸಿ ಈ ವಿಷಯದಲ್ಲಿ ಮಾಧ್ಯಮಗಳು ವರ್ತಿಸಿದ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ.

Tuesday, March 17, 2009

ಕಡೆಗೂ ಜ್ಞಾನೋದಯವಾಯಿತೇ ಮಾಧ್ಯಮಗಳಿಗೆ ಇದು ಪ್ರಚಾರಪ್ರಿಯ ನಿರ್ದೇಶಕನ ಕುತಂತ್ರವೆಂದು? Charlie Chaplin Statue media fiasco Update - Director Hemant Hegde Exposed


ಯಾರೂ ಕೇಳಿರದ ಫ್ಲಾಪ್ ನಿರ್ದೇಶಕನಿಗೆ ಭರ್ಜರಿ ಬಿಟ್ಟಿ ಪ್ರಚಾರ ನೀಡಿದ ನಂತರ ಅಂತೂ ಇಂತೂ ಕಡೆಗೂ ಜ್ಞಾನೋದಯವಾಯಿತು ನಮ್ಮ ಮಾಧ್ಯಮಮಿತ್ರರಿಗೆ!

(ಎಡಕ್ಕೆ: "ವಿಜಯ ಕರ್ನಾಟಕ"ದಲ್ಲಿಂದು ಪ್ರಕಟವಾದ ವರದಿ)

ಕರಾವಳಿ ಜನರಿಗೆ "ಮೂಲಭೂತವಾದಿಗಳು", "ತಾಲಿಬಾನಿಗಳು" ಎಂದೆಲ್ಲಾ ಲೇಬಲ್ ಹಚ್ಚಿ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾನ ಹರಾಜು ಹಾಕಿದ ಈ ಮಾಧ್ಯಮ ವೀರರು ಈಗ ಚಾಕಲೇಟ್ ಕದ್ದು ಸಿಕ್ಕಿ ಬಿದ್ದ ಮಕ್ಕಳಂತೆ ತಾವೇ ಹೆಣೆದ ಬಲೆಯಲ್ಲಿ ಸಿಕ್ಕಿ ಹಾಕಿಕೊಂಡು ಹೊರಬರುವುದು ಹೇಗೆಯೆಂದು ಸ್ಕೆಚ್ ಹಾಕುತ್ತಿದ್ದಾರೆ!

ಅತ್ತ ಫ್ಲಾಪ್ ನಟ ಹಾಗೂ ನಿರ್ದೇಶಕನೆನಿಕೊಂಡ ಹೇಮಂತ ಹೆಗಡೆ, ಮೀಸೆ ಬಿದ್ದರೂ ಮಣ್ಣಾಗಲಿಲ್ಲವೆಂಬಂತೆ ರಾಷ್ಟ್ರೀಯ ಮಾಧ್ಯಮಗಳಿಗೆ, ಬಿಬಿಸಿ ಬಕ್ರಾಗಳಿಗೆ ಇನ್ನೂ ಸಂದರ್ಶನ ಕೊಡುತ್ತಿದ್ದಾರೆ. ಬೆಂಗಳೂರಿನಲ್ಲಿ "ಸಮಾನ ಮನಸ್ಕರೊಂದಿಗೆ" ಪ್ರತಿಭಟನೆಯೂ ಮಾಡ್ತಾರಂತೆ. ಪ್ರಾಯಶ: ವಾಸ್ತವ ಮತ್ತು ಸಿನಿಮಾ ನಡುವಿನ ವ್ಯತ್ಯಾಸವೇ ಈ ಭೂಪತಿಗೆ ಮರೆತು ಹೋದಂತಿದೆ. 

ಪ್ರತಿಭಟನೆಯಲ್ಲಿ ಎಂದಿನಂತೆ ನಮ್ಮ ಹೆಮ್ಮೆಯ ಡಬಲ್ "ಪೀಠಿ"ಗಳು (ಅನಂತಮೂರ್ತಿ ಮತ್ತು ಕಾರ್ನಾಡ್), ಜಿ.ಕೆ.ಗೋವಿಂದರಾವಿನಂತಹ ಪ್ರಗತಿಪರ ಚಿಂತಕರು (ಅಂದ ಹಾಗೆ ಪ್ರಗತಿಪರ ಲೇಬಲ್ಲು ಎಲ್ಲಿ ಸಿಗುತ್ತೇ ಸಾರ್?  ತಾವು ಚಿಂತಕರಾದರೆ ಉಳಿದವರೆಲ್ಲಾ ಆಲೋಚನೆ ಮಾಡದವರೇ?) ಭಾಗವಹಿಸುತ್ತಾರಂತೆ. ಹೆಗಡೆಯವರೆ ಅವರಷ್ಟೇ ಯಾಕೆ? ವಾಟಾಳೂ ಹೇಗೂ ಕೆಲಸವಿಲ್ಲದೆ ಇದ್ದಾರೆ - ಅವರನ್ನೂ ಅವರ ಕತ್ತೆಯನ್ನೂ ಕರೆಯಿರಿ ತಮ್ಮ ಪ್ರತಿಭಟನೆಗೆ!

##############

Charlie Chaplin Statue Media Fiasco Update

Finally Kannada media realised that whole issue of Hindus protesting against "Christian" Chaplin issue is nothing but a publicity stunt by a so called Director Hemant Hegde known for his horrible acting and director of few flop films (some did not even come out of the "cans")

LEFT: Flop Kannada Movie Director Hemant Hegde now trying to get free publicity by blaming Hindu organisations on Charlie Chaplin statue fiasco.

Times of India which threw away all journalistic norms in its hurry to blame Coastal Karnataka and Hindu organisations published this small news item today.

"Vijaya Karnataka", Karnataka's highest selling newspaper has raised questions about Hemant Hegde's intentions in blaming Hindu organisations. Rough translation below:

######BEGIN TRANSLATION#######

Charlie Chaplin:A publicity stunt?

Udupi: Did Director Hemant Hegde fool whole world to gain free publicity by claiming imaginary opposition by Hindu organisations to his proposed Charlie Chaplin statue in Ottinane?

Absolutely yes, tell our sources in Kannada filmworld. The chances of this movie coming out is highly unlikely as it is due to current economic conditions prevailing in Kannada film industry. 

Stars have lost value, no one is willing to fund Hemant Hegde and even with funding movie itself has no hopes of making money due to non-existent story line and talent in the movie. In this situation, claiming that he is spending 35 Lakh Rupees for a permanent statue of Charlie Chaplin is far fetched claim of Hemant Hegde and appears to be aimed at gaining cheap publicity (and perhaps more funding) at the cost of blaming Hindu organisations.

Moreover, Hemant Hegde did not receive permission from government authorities for the statue though he claims he has permission - that permission is for shooting a movie and not erecting a permanent statue of Charlie Chaplin. 

Even if everyone agrees for statue, it is highly unlikely or next to impossible that government will give permission as said area falls under CRZ (Coastal Regulatory Zone). Even with this, Hemant Hegde boasts that he will protest in Bangalore with "progressive" activists.

######END TRANSLATION########