Wednesday, August 26, 2009

ಬ್ಲಾಗು ಕಮೆಂಟು ಜಂಜಾಟ - ಹೋಗಿ ಬನ್ನಿಯಲ್ಲ, ಹೋಗಿ ಹೋಗಿ ಜೋಗಿ..

ಕನ್ನಡ ಬ್ಲಾಗೋಸ್ಫೀಯರಲ್ಲಿ ಅನಾಮಿಕ ಬ್ಲಾಗುಗಳ ವಿರುದ್ಧ ಟೀ ಕಪ್ಪಿನಲ್ಲಿ ಚಂಡಮಾರುತದಂತೆ (Storm in a tea cup) ಅಲ್ಲೋಲ ಕಲ್ಲೋಲವುಂಟಾಗಿದೆ. ಬ್ಲಾಗುಗಳ ಹಿಂದಿರುವವರು ಯಾರು, IP Address ಟ್ರಾಕ್ ಮಾಡುವುದು (Proxy Serverಗಳ ಬಗ್ಗೆ ಕೇಳಿದ್ದಾರೋ ಇಲ್ಲವೋ ಈ Modern ಸೈಬರ್ Sherlock Homes ಗಳು) ಇವುಗಳ ಕುರಿತೇ ಇಡೀ ದಿನ ಚಿಂತಿಸುತ್ತಾ ಆಕಾಶವೇ ತಲೆ ಮೇಲೆ ಬಿದ್ದಂತೆ ಕುಳಿತಿದೆ ಕನ್ನಡ ಬ್ಲಾಗಿನ ವರ್ಗವೊಂದು.

ಕನ್ನಡ ಬ್ಲಾಗ್ ಲೋಕದ ಜನಪ್ರಿಯ ಜೋಗಿಯವರು ಬ್ಲಾಗು ಬಂದು ಮಾಡುತ್ತಾರಂತೆ, ಅವರಿಗೆ ಬುದ್ಧಿ ಹೇಳಬೇಕೆಂದೆಲ್ಲಾ ತಮ್ಮ fan boisಗಳಿಂದ ಹೇಳಿಸಿಕೊಳ್ಳುತ್ತಿದ್ದಾರೆ.

ಜೋಗಿಯವರು ಅದ್ಭುತ ಬರಹಗಾರ ಮತ್ತು ಜನಪ್ರಿಯ ಬರಹಗಾರ ಮತ್ತು ಬ್ಲಾಗಿಗನೆಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅವರು ಈ permanent victim complex ಗೊಳಗಾಗಿ ಪದೇ ಪದೇ ಬ್ಲಾಗ್ ಬಂದ್ ಮಾಡುವುದು, ಬ್ಲಾಗ್ ಡಿಲೀಟ್ ಮಾಡುವುದು, ಅವರ fan boiಗಳು ಸಾರ್ ಬ್ಲಾಗ್ ಬಂದ್ ಮಾಡಬೇಡಿಯೆಂದು ದಮ್ಮಯ್ಯ ದಕ್ಕಯ್ಯ ಹಾಕುವುದರ ಮರ್ಮ ಅರಿವಾಗುತ್ತಿಲ್ಲ.

ಕೆಲ ಸಮಯದ ಹಿಂದೆ ಬೈಂದೂರಿನಲ್ಲಿ ಚಾರ್ಲಿ ಚಾಪ್ಲಿನ್ ಪ್ರತಿಮೆಗೆ ವಿರೋಧವುಂಟಾದಾಗ ತಾನು ದಕ್ಷಿಣ ಕನ್ನಡದವನೆಂಬ ಒಂದೇ ಕಾರಣಕ್ಕೆ ತಾನು ಕರಾವಳಿಯವನೆಂದು ಹೇಳಲು ನಾಚಿಕೆಯಾಗುತ್ತದೆಂದು ಗೋಳೋ ಎಂದು ಅತ್ತು, ಏನೇನೋ ಬರೆದು ತನ್ನ fan boisಗಳೆದುರು ಹೀರೋ ಆಗಿ ತನ್ನ ಗೆಳೆಯ ಹೇಮಂತ ಹೆಗಡೆಯ ಚಿತ್ರಕ್ಕೆ ಪುಕ್ಕಟೆ ಪ್ರಚಾರವನ್ನು ಜೋಗಿ ಒದಗಿಸಿದ್ದು ಹೇಗೆ ಮರೆಯಲು ಸಾಧ್ಯ ಹೇಳಿ? ಅದೇ techniqueನ್ನು ಪುನ: ಪುನ: ಉಪಯೋಗಿಸಿ ತನ್ನ ಹೆಸರು ಪ್ರಚಾರದಲ್ಲಿಡಲು ಈಗ ಈ ಬ್ಲಾಗ್ ಲೋಕಕ್ಕೆ ವಿದಾಯವೆಂಬ ನಾಟಕ ಬೇಕಿತ್ತಾ?

ಅಲ್ಲಾ ಅಪ್ಪ ಅಮ್ಮ ಇಲ್ಲದ ಅನಾಮಿಕ ಕಮೆಂಟುಗಳಿಗೆ ಇಷ್ಟು ತಲೆ ಬಿಸಿ ಮಾಡುವ ಇವರು ಈ ಮೇಲ್ ನಲ್ಲಿ ಬರುವ Spamಗಳನ್ನು ಹೇಗೆ ಹ್ಯಾಂಡಲ್ ಮಾಡುತ್ತಾರೋ? ಗುರ್ತವಿಲ್ಲದವರು ಈ ಮೇಲ್ ಮಾಡಿದರೆಂದು ಹುಚ್ಚು ಹಿಡಿದು ಹೋಗುತ್ತಾರೋ? ಯಾರೋ ನೈಜೀರಿಯಾದವನು ಈ ಮೇಲ್ ಕಳಿಸಿದಾ ಅಂತಾ ಈ-ಮೇಲ್ ಅಕೌಂಟುಗಳನ್ನೇ ಬಂದ್ ಮಾಡುತ್ತಾರಾ ಇವರು? ಒಂದು ಸಿಂಪಲ್ DELETE ಬಟನ್ ಒತ್ತುವುದಕ್ಕೇಕೆ ನಾಚಿಕೆ ಇವರಿಗೆ? ನಿಜಕ್ಕೂ DELETE ಬಟನ್ ಒತ್ತುವುದು ಇಷ್ಟು ಕಷ್ಟವೆಂದು ತಿಳಿದಿರಲಿಲ್ಲಾ.

ಸರಿಯಾಗಿ storm in the tea cup ಇದು. ಕಳೆದ ವಾರದ ಜಿ.ಎನ್.ಮೋಹನರ "ಮೀಡಿಯಾ ಮಿರ್ಚಿ" ಅಂಕಣಕ್ಕೆ ನಾನು ಪ್ರತಿಕ್ರಿಯೆಯಲ್ಲಿ ಹೇಳಿದಂತೆ (ಇಡೀ ಪ್ರತಿಕ್ರಿಯೆ ಕೆಳಗಿದೆ), ಕಮೆಂಟುಗಳ ಬಗ್ಗೆ, ಬ್ಲಾಗುಗಳ ಬಗ್ಗೆ ಇದ್ದಕಿದ್ದಂತೆ ಕಿಡಿಕಾರಲು ಮೂಲಕಾರಣ ಕನ್ನಡ ಮಾಧ್ಯಮ ಲೋಕವನ್ನು ವಿಶ್ಲೇಷಿಸುವ ಕೆಲ ಬ್ಲಾಗುಗಳು ಜನ್ಮ ತೆಳೆದದ್ದು. ಯಾವಾಗಲೂ ಇತರರ ಬಗ್ಗೆ ಕಮೆಂಟು ಮಾಡುವ ಕೆಲ ಸ್ಥಾಪಿತ ಮಾಧ್ಯಮ ಮಿತ್ರರಿಗೆ ಈ ಬ್ಲಾಗುಗಳು ಅಪಥ್ಯವಾದಂತಿದೆ. ಆ ಬ್ಲಾಗುಗಳು ಎತ್ತಿರುವ ವಿಷಯಗಳ ಬಗ್ಗೆ ಚರ್ಚೆ ಮಾಡುವ ಬದಲು ಬ್ಲಾಗ್ ಹಿಂದಿರುವವರು ಯಾರು, ಅವರ ಉದ್ಧೇಶವೇನು ಮುಂತಾದ ಅನಗತ್ಯತ ವಿಷಯಗಳ ಬಗ್ಗೆಯೇ ಚರ್ಚೆಯನ್ನು misdirect ಮಾಡಲು ಕನ್ನಡದ ಕೆಲ ಹಿರಿ ಮಾಧ್ಯಮ ಮಿತ್ರರು ಟೊಂಕ ಕಟ್ಟಿದಂತಿದೆ.

****
ನಾನು ಯಾರು? ನಾನು ನಾನೇ?

ಡಿ.ಪಿ.ಸತೀಶ್ ಎಂಬ CNN-IBNನವರು ನನ್ನ "ರಾಕೇಶ್ ಮಥಾಯಸ್" ಹೆಸರಿನ ಬಗ್ಗೆಯೇ ಸಂಶಯ ವ್ಯಕ್ತಪಡಿಸಿದ್ದಾರೆ. ನಾನು ನಾನೆಂದು ಹೇಗೆ ತೋರಿಸಲಿ ಇಂಟರನೆಟ್ಟಲ್ಲಿ? ಅಥವಾ ಕೆಲ ಮಿತ್ರರು ಮಾಡುವಂತೆ Shaadi.comನಲ್ಲಿ ನಕಲಿ ಫೊಟೋ ಹಾಕುವಂತೆ ಯಾರದೋ ಫೊಟೋ ನನ್ನದೆಂದು ಹಾಕಿದರೆ satisfy ಆಗುತ್ತಾರೇನೋ? ಇದೆಲ್ಲಾ ಮಾಧ್ಯಮ ಲೋಕದ ಒಂಥರಾ ಗರ್ಭ ಗುಡಿ ಸಂಸ್ಕೃತಿಯಂತೆ ಕಾಣುತ್ತದೆ. ಹಿಂದೆಲ್ಲಾ ಜನಿವಾರವಿದ್ದರೂ ಬ್ರಾಹ್ಮಣರೆಂದು ಪ್ರೂವ್ ಮಾಡಲು ಮಠಗಳಲ್ಲಿ ಶ್ಲೋಕ ಹೇಳಿ ತಮ್ಮ ಸಂಸ್ಕಾರ prove ಮಾಡಬೇಕಿತ್ತಂತೆ - ಈಗ ಬ್ಲಾಗ್ ಲೋಕದಲ್ಲಿ ಇಂತಹದೇ system ಬಂದರೂ ಆಶ್ಚರ್ಯವಿಲ್ಲವೇನೋ?

ಇದೇ ಸತೀಶ್ ಯಾವುದೋ ಇನ್ನೊಂದು ಬ್ಲಾಗ್ ಬಗ್ಗೆ ಬಡಬಡಿಸಿದ್ದಾರೆ - ಅವರೂ victim ಅಂತೆ. ನಾನು ಅದನ್ನು Churumuriಯಲ್ಲಿ ಓದಿದ ನೆನಪು - ಲಿಂಕ್ ಇಲ್ಲಿದೆ ನೋಡಿ - ಅಲ್ಲಿನ ಕಮೆಂಟುಗಳನ್ನು ಓದಿದರೆ ತಾನು ಹೆಣೆದ ಬಲೆಯಲ್ಲೇ ಸಿಕ್ಕಿಬಿದ್ದು ಈ D.P.Satish expose ಆಗಿರುವುದನ್ನು ನೋಡಬಹುದು. ಇನ್ನೂ ಸ್ವಲ್ಪ Google ಮಾಡಿ ನೋಡಿದರೆ ಇದೇ D.P.Satish ಇನ್ನೊಂದು ಬ್ಲಾಗಿಗೆ threat ಹಾಕಿದನ್ನೂ ನೋಡಿ - ಆ ಬ್ಲಾಗಿಗ ಮಾಡಿದ ತಪ್ಪು D.P.Satish ವರದಿಯಲ್ಲಿನ ತಪ್ಪು ತೋರಿಸಿದು. ಆ ಬ್ಲಾಗಿಗ ಯಾರೆಂದು ಗೊತ್ತಿಲ್ಲ - ಆದರೆ CNN-IBN, D.P.Satish threat ಗಳಿಗೆ ಹೆದರದೆ ತನ್ನ stanceಗೆ ನಿಂತದ್ದು ಅಭಿನಂದನೀಯ. ವಿವರಗಳಿಗೆ ಇಲ್ಲಿ ನೋಡಿ - CNN-IBN Reporter D.P.Satish threatens blogger for exposing factual error in his report. “Freedom of media” applies only to Main Stream Media and not bloggers?

D.P.Satish ಈಗ ಏನೇ boast ಮಾಡಬಹುದು, ಆದರೆ ಆ ಬ್ಲಾಗಿಗ ಸತೀಶರ ಅಥವಾ CNN-IBN threat ಗೆ ಮಣಿದಂತೆ ಕಾಣಲಿಲ್ಲ.

ಅನಾಮಧೇಯ ಬ್ಲಾಗ್ ವಿರುದ್ದ ಸಮರವಾಯಿತು, ಈಗ ನಾನು ನನ್ನ ನಿಜ ಹೆಸರು ಹಾಕಿ ಬ್ಲಾಗ್ ನಡೆಸುತ್ತಿದ್ದರೂ ಅದೂ ಸಾಲದಂತೆ! ತಮ್ಮ ಖುಷಿ ಪಡೆಸಲು ಬೇರೇನು ಮಾಡಬೇಕು ಸಾರ್? ನನ್ನ ಹೆಸರು ಜೊತೆ Son Of, Brother Of, Home Address, Office Address, Phone Number, Religion, Church, ID card scan, ನಾನು ವಾಸವಿರುವ ಹಾಸ್ಟೆಲ್ ರೂಮ್ ನಂಬರ್ರು ಕೊಡಬೇಕಾ? ತಮ್ಮ ಬ್ಲಾಗಲ್ಲಿ ಅದೆಲ್ಲಾ ಹಾಕಿದ್ದೀರಾ? ಅಥವಾ ನಾನು ತಮ್ಮಂತೆ big name ಕಂಪೆನಿಯಲ್ಲಿ ಕೆಲಸದಲಿಲ್ಲವೆಂದ ಮಾತ್ರಕ್ಕೆ ಈ ಎಲ್ಲಾ requirementಆ? Talk about double standards.

****

ಶ್ರೀ ಜಿ.ಎನ್.ಮೋಹನರ ಕಳೆದ ವಾರದ "ಮೀಡಿಯಾ ಮಿರ್ಚಿ" ಅಂಕಣಕ್ಕೆ ನನ್ನ ಪ್ರತಿಕ್ರಿಯೆ ಕೆಳಗಿದೆ. ಬೇಸರದ ಸಂಗತಿಯೆಂದರೆ ನಾನೆತ್ತಿರುವ ವಿಷಯಗಳ ಬಗ್ಗೆ ಚರ್ಚಿಸುವ ಬದಲು ಮೋಹನರು ನಾನು ಯಾರು ಎಂಬುದರ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ ಮತ್ತು ವಿಷಯಕ್ಕೇ ಸಂಬಂಧವೇ ಇಲ್ಲದ D.P.Satish ರ ಕಮೆಂಟನ್ನು replyಯಾಗಿ ಪೋಸ್ಟ್ ಮಾಡಿದ್ದಾರೆ. ಕಳೆದ ವಾರ ತನ್ನ ಕಾಲಮಿನಲ್ಲಿ ನನ್ನ ಹೆಸರನ್ನು ಉಪಯೋಗಿಸುವಾಗ ಅದೇಕೆ ಹೊಳೆಯಲಿಲ್ಲವೋ? ಏನೇ ಇರಲಿ ಈ ದೊಡ್ಡ ಕಂಪೆನಿಗಳ ದೊಡ್ಡ ಜನರ ಕೆಲ ವಿಷಯ ಅರ್ಥವಾಗುತ್ತಿಲ್ಲ - ಪ್ರಾಯಶ: ಕಾಲ ಕಳೆದಂತೆ ಕಲಿಯುತ್ತೇನೇನೋ.

ನಿಜಾ ಹೇಳಬೇಕೆಂದರೆ ತಮ್ಮ ಈ ಅಂಕಣ ಪ್ರಾಯಷ: "ವಿಜಯ ಕರ್ನಾಟಕ"ದ ಸಾವಿರಕ್ಕಿಂತಲೂ ಕಡಿಮೆ ಓದುಗರಿಗೆ ಅರ್ಥವಾಗಿರಬಹುದೇನೋ? ತಟ್ಟಿರಬಹುದೇನೋ? ಒಮ್ಮೆ ತಮ್ಮ ಬ್ಲಾಗ್ ಗೆಳೆಯರ, "ಅವಧಿ"ಯ ಪರಿಮಿತಿಯಿಂದ ಹೊರಬಂದು ತಮ್ಮದೇ ಅಂಕಣವನ್ನು ಇನ್ನೊಮ್ಮೆ ಓದಿ.

ವಿಜಯ ಕರ್ನಾಟಕದ ಓದುಗರಾದ ರಾಯಚೂರಿನ ನಿರುದ್ಯೋಗಿ, ಬಳ್ಳಾರಿಯ ಗಣಿ ಕೊರೆಯುವ ಲಾರಿ ಡ್ರೈವರ್, ವಿಟ್ಲದ ಅಡಿಕೆ ಕೃಷಿಕ, ಬೆಂಗಳೂರಿನ ದರ್ಶಿನಿಯ ಅಡುಗೇ ಭಟ್ಟ, ವಿಧಾನಸೌಧದ ಜವಾನ ತಾವೆಂದು ಭಾವಿಸಿ ಒಮ್ಮೆ ಓದಿ - ಅಂಕಣದ ತಲೆಬುಡ ಅಥವಾಯಿತೇ? ಊಹೂಂ? ಬ್ಲಾಗ್ ಲೋಕವೇ ಸರ್ವಸ್ವವೆಂದು ತಿಳಿದಿರುವ ಜನರಿದ್ದಾರೆ ನಿಜ, ಆದರೆ "ವಿಜಯ ಕರ್ನಾಟಕ" ಒಂದು ಸರ್ವೇ ಮಾಡಿದರೆ ಹೆಚ್ಚೆಂದರೆ ೧೦% ಓದುಗರಿಗೆ ಬ್ಲಾಗ್ ಅಂದರೇನೆಂದು ತಿಳಿದಿರಬಹುದೇನೋ? ಮತ್ತದರಲ್ಲಿ ೧-೫% ಜನರು ರೆಗ್ಯುಲರ್ರಾಗಿ ಕನ್ನಡ ಬ್ಲಾಗುಗಳನ್ನು ಓದಬಹುದೇನೋ?

ತಾವೆತ್ತಿದ ವಿಷಯಗಳೆಲ್ಲಾ ಗಂಭೀರವಾದವು ಮತ್ತು ಚರ್ಚೆಗೆ ಅರ್ಹವೆಂಬುದರಲ್ಲಿ ಎರಡು ಮಾತಿಲ್ಲ. ಎಲ್ಲಾ ಬ್ಲಾಗಿಗರೂ ಕಮೆಂಟುಗಳ ಕಿರಿಕಿರಿ ಎದುರಿಸಿದವರೇ. ಆದರೆ ಇಡೀ ಮಾಧ್ಯಮ ಪ್ರಪಂಚದಲ್ಲಿ ಬ್ಲಾಗುಗಳ penetration ಅದರಲ್ಲೂ ಕರ್ನಾಟಕದಲ್ಲಿ negligible. "ಕನ್ನಡ ಬ್ಲಾಗಿಗರ" ಕೂಟವನ್ನೇ ತೆಗೆದುಕೊಳ್ಳಿ - ಎಷ್ಟು chain mail ಕಳಿಸಿದರೂ, ರವಿ ಹೆಗಡೆಯಂತವರು ಮತ್ತಿತರು ಪತ್ರಿಕೆಗಳಲ್ಲಿ ಬರೆದು ಪ್ರಚಾರ ಮಾಡಿದರೂ membership ಪುಟುಗೋಸಿ ೧೭೦೦ ದಾಟಿಲ್ಲ. ಇದು ಐ.ಟಿ. ಕ್ಯಾಪಿಟಲಿರುವ ಕರ್ನಾಟಕದ ಕತೆ. ಬ್ಲಾಗುಗಳಿಂದ ಕ್ರಾಂತಿ ಸಾಧಿಸುತ್ತೇವೆಯೆಂಬುದು ನಮ್ಮ ಮಟ್ಟಿಗೆ ಭ್ರಮೆಯಷ್ಟೇ. (ರವಿ ಕೃಷ್ಣಾ ರೆಡ್ಡಿಯ ಇಲೆಕ್ಶನ್ campaign ನೆನಪಿಸಿಕೊಳ್ಳಿ)

ಹೀಗಿರುವಾಗ ಬ್ಲಾಗುಗಳು, ಕಮೆಂಟುಗಳ ಬಗ್ಗೆಯೇ ಎರಡೆರಡು ಅಂಕಣಗಳ ಅಗತ್ಯವಿತ್ತೇ? ಮಾಧ್ಯಮಲೋಕದಲ್ಲಿದ್ದವರು ಮೊದಲಿನಿಂದಲೂ ಅನಾಮಧೇಯರ ಕಿರಿಕಿರಿ ಎದುರಿಸಿದ್ದಾರೆ - ಪತ್ರಿಕೆಗಳಿಗೆ ಪ್ರತಿನಿತ್ಯ ಹೆಸರು, ಊರಿಲ್ಲದ ಅಂಚೆ ಬರುತ್ತವೆ, ಸೀದಾ ಕಸದ ಬುಟ್ಟಿಗೆ ಹೋಗುತ್ತವೆ. ಇದೇ attitude ನಮ್ಮ ಬ್ಲಾಗರುಗಳಿಗೇಕಿಲ್ಲ? ಯಾಕೋ ಕಮೆಂಟಿಗರ ಬಗ್ಗೆ care ತೋರಿಸುವುದು ಜಾಸ್ತಿಯಾಯಿತೇನೋ ಎಣಿಸುತ್ತದೆ ಅಥವಾ ಕನ್ನಡ ಬ್ಲಾಗಿಗರು extra sensitive ಆಗಿಬಿಟ್ಟಿದ್ದಾರೇನೋ?

ಎಲ್ಲಾ ಬದಿಗಿಟ್ಟು ನೋಡಿದರೆ ತಮ್ಮ ಅಂಕಣಗಳ ಮತ್ತು ಕೆಲ ಕನ್ನಡ ಬ್ಲಾಗಿಗರ ಈ ಸಡನ್ನಾಗಿ ಕಮೆಂಟುಗಳ ಬಗೆಗಿನ concernನ target ಯಾರೆಂಬುದು ಸ್ಪಷ್ಟ. ಮಾಧ್ಯಮಗಳನ್ನು ವಿಷ್ಲೇಶಿಸುವ, ತಪ್ಪುಗಳನ್ನು ಎತ್ತಿ ತೋರಿಸುವ ಎರಡು ಮೂರು ಬ್ಲಾಗುಗಳು ಶುರುವಾದದ್ದೇ ಕೆಲ mainstream mediaದವರಿಗೆ ಕಿರಿಕಿರಿಯಾದಂತಿದೆ. ಮಾಧ್ಯಮದಲ್ಲಿರುವವರು ರಾಜಕಾರಣಿಗಳಂತೆ public eyeಯಲ್ಲಿರುವವರೇ. ಇದುವರೆಗೆ ಅದನ್ನು ಮರೆತು ಯಾವುದೇ ಜವಾಬ್ದಾರಿಯಿಲ್ಲದೆ, accountability ಇಲ್ಲದೆ ಕೆಲ ಕನ್ನಡ ಮಾಧ್ಯಮ ಮಿತ್ರರು ಈ ಪತ್ರಿಕಾ ಸ್ವಾತಂತ್ರ್ಯವನ್ನು ದುರುಪಯೋಗಿಸಿರುವುದನ್ನು ಈಗ ಬ್ಲಾಗುಗಳು ಅವನ್ನು ಎತ್ತಿ ತೋರಿಸುತ್ತಿರುವುದು ಕೆಲವರಿಗೆ ಅಪಥ್ಯವಾದಂತಿದೆ.

ಅದೇನೋ ಇಂಗ್ಲಿಷಿನಲ್ಲಿದೆಯಲ್ಲ - If you can't take the heat, get out of the kitchen - ಕಮೆಂಟಿಗರ ಕಿರಿಕಿರಿ ಬೇಡವೆಂದರೆ Invite Only ಬ್ಲಾಗ್ ಮಾಡಿ, ಆದರೆ ಅದು ಇಡೀ ಇಂಟರ್ನೆಟ್ಟು ಮಾಧ್ಯಮದ openness, information sharing conceptಗೆ ವಿರುದ್ಧವೆಂಬುದೂ ತಿಳಿದಿರಲಿ.

"ಮೀಡಿಯಾ ಮಿರ್ಚಿ" ಅಂಕಣವನ್ನು ವಿಶ್ವೇಶ್ವರ ಭಟ್ಟರು introduce ಮಾಡುವಾಗ ಹೇಳಿರುವುದೇನೋ, ತಾವೀಗ ಬರೆಯುತ್ತಿರುವುದೇನೋ! ನಿಜ, ಪತ್ರಿಕಾ ಅಂಕಣದ word count ನಂತಹ ಕಟ್ಟು ಪಾಡುಗಳಿವೆ. ಆದರೆ ಎಲ್ಲೋ ತಮ್ಮ ಅಂಕಣ ಸೀಮಿತ ಪ್ರಪಂಚದಿಂದ ಹೊರಬಂದಂತಿಲ್ಲ. ತಮ್ಮ ಈ ಎರಡು ಅಂಕಣಗಳು ತಮ್ಮ ಅಂತರಂಗ ಕೆಲ ಮಿತ್ರರಿಗೆ, ಜೈ ಹೋ ಎನ್ನುವವರಿಗೆ ಮತ್ತು ೧೭೦೦ ಕನ್ನಡ ಬ್ಲಾಗಿಗರಿಗೆ ಅರ್ಥವಾಗಬಹುದೇ ಹೊರತು ಕರ್ನಾಟಕದ ನಂ.೧ ಪತ್ರಿಕೆಯ ಲಕ್ಷಾಂತರ ಓದುಗರಿಗೆ ತಾವು ಬರೆದಿರುವುದೇನೆಂದು ತಿಳಿಯದಿರುವ ಸಾಧ್ಯತೆಗಳೇ ಜಾಸ್ತಿ.

ನನ್ನ ಈ honest opinionನಿಂದ ಯಾರಿಗಾದರೂ ಬೇಜಾರಾದರೆ ದಯವಿಟ್ಟು ಕ್ಷಮೆಯಿರಲಿ.

****

3 comments:

  1. ರಾಕೇಶ ಮಥಾಯಸ್ ಅವರೆ,
    ‘ಅಮರ’ರ share ಮೂಲಕ ನಿಮ್ಮ blog ನೋಡಿದೆ. ಖುಶಿಯಾಯಿತು. ನೀವು ಬರೆದದ್ದು ಸರಿಯಾಗಿದೆ ಎಂದು ನನ್ನ ಭಾವನೆ.
    ಸತ್ಯವನ್ನು ತಿಳಿಯಲು ಪ್ರತಿಯೊಬ್ಬ ಓದುಗನಿಗೂ ಆಸಕ್ತಿ ಇರುತ್ತದೆ. ನೀವು ಆ ಕಾರ್ಯವನ್ನು ಮಾಡುತ್ತಿದ್ದರೆ, ನಾವು ಬೆಂಬಲಿಸಲೇ ಬೇಕು!

    ReplyDelete
  2. ರಾಕೆಶ್ ಮಾಥಾಯಿಸ್ ಅವರೆ,
    ನಿವು ಬರೆದಿರುವುದು ಸರಿಯಾಗಿದೆ. ಕೆಲವು ಬ್ಲಾಗಿಗರಿಗೆ ಕಾಮೆ೦ಟ್ ಕ೦ಡರೆ ಭಯ ಎನಿಸುತ್ತದೆ, ಅವರು ಅವುಗಳನ್ನು ಡಿಲಿಟ್ ಮಾಡುವುದನ್ನು ಕಲಿತರೆ ಉತ್ತಮ. ಅದರ ಬದಲು ಲಕ್ಷಾ೦ತರ ಜನ ಒದುವ ವಿಜಯ ಕರ್ನಾಟಕ ದಲ್ಲಿ ಬಾಯಿ ಬಾಯಿ ಬಡಿದು ಕೊ೦ಡರೆ ಎನು ಪ್ರಯೊಜನ?

    ಇ೦ದಿನ ಮೀಡಿಯ ಮಿರ್ಚಿಯಲ್ಲು ಬ್ಲಾಗುಗಳ ಬಗ್ಗೆ ಇದೆ.

    ನಿಮ್ಮ ಬರವಣಿಗೆ ಮು೦ದುವರಿಯಲಿ.

    ReplyDelete
  3. Vested interets dont wont Discussion.
    They afraid of truth.
    ಜೊಗಿ blog ಬ0ದ್ No. NO. Suddimatu, yes.yes.
    THis is double standard. let the discussiom continue..

    ReplyDelete