ಮಿತ್ರನೊಬ್ಬ TV9 Delhi Bureau Chief Shivaprasad T.R. ಬ್ಲಾಗ್ ಲಿಂಕು ಕಳಿಸಿದ್ದ.
ಆ ಬ್ಲಾಗಿನಲ್ಲಿ ಈ ಶಿವಪ್ರಸಾದ್ ಟಿ.ಆರ್. ರವರು ಪಾಪ ಗೋಳೋ ಅಂದತ್ತಿಕೊಂಡಿದ್ದಾರೆ. ಯಾರೋ ಅವರ ಬಗ್ಗೆ ಗಾಸಿಪ್ ಹಬ್ಬಿಸುತ್ತಿದ್ದಾರಂತೆ, ಅವರು ದಿನಕ್ಕೆ ೧೮ ಘಂಟೆ ಕೆಲಸ ಮಾಡುತ್ತಾರಂತೆ, ಏನೋ ಬುಕ್ ಬರೆಯುತ್ತಿದ್ದಾರಂತೆ, ಬೇರೆ ಕೆಲಸಕ್ಕೆ ಪುರುಸೊತ್ತಿಲ್ಲವಂತೆ, ಆಫೀಸಿನಲ್ಲಿ ದೆಹಲಿ ನಂತರ ಎಲ್ಲಿ ಅಂತ ಗೊತ್ತಿಲ್ಲವಂತೆ ಎಂದೆಲ್ಲಾ ಏನೋ ಅಸಂಬದ್ಧವಾಗಿ ಪ್ರಲಾಪಿಸಿದ್ದಾರೆ. ತಮ್ಮ ತೊಂದರೆ ಸಂಸಾರ ತಾಪತ್ರಯವೆಲ್ಲಾ ಬರೆದುಕೊಂಡದ್ದು ಸಾಲದೆ ಕಡೆಗೆ ಯಾವುದೋ ಬ್ಲಾಗ್ ವಿರುದ್ಧ ದೆಹಲಿ ಪೊಲೀಸರ ಸೈಬರ್ ಕ್ರೈಮ್ ಡಿವಿಜನ್ನಿಗೆ ಕಂಪ್ಲೇಂಟ್ ಕೊಟ್ಟಿದ್ದೇನೆಂದು ಕೊಚ್ಚಿಕೊಂಡಿದ್ದಾರೆ.
ಯಾರೋ ಇಂಟರನೆಟ್ಟಿನಲ್ಲಿ ತನ್ನ ಬಗ್ಗೆ ಉಲ್ಲೇಖ ಮಾಡಿದ್ದಾರೆ ಅಥವಾ ಬರೆದಿದ್ದಾರೆಯೆಂಬುದನ್ನೇ ಶಿವಪ್ರಸಾದರು ಸೈಬರ್ ಕ್ರೈಮೆಂದು ತಿಳಿದಿರುವುದು ಬಹಳ ಆಶ್ಚರ್ಯಕರ. ಅದರಲ್ಲೂ ತಾನು ಟಿವಿಯಲ್ಲಿ ಯಾರ ಮೇಲೂ ಏನು ಬೇಕಾದರೂ ಹೇಳಬಹುದು, ಆದರೆ ತನ್ನ ಬಗ್ಗೆ ಯಾರೂ ಮಾತನಾಡಕೂಡದು ಎಂಬ ಶಿವಪ್ರಸಾದರ ಧೋರಣೆ ಮುಕ್ತ ಮಾಧ್ಯಮ ವಿರೋಧಿ ಮತ್ತು ಸಂವಿಧಾನ ಬದ್ಧ freedom of speech ವಿರೋಧಿಯಲ್ಲವೇ?
ಶಿವಪ್ರಸಾದರನ್ನೇ ತೆಗೆದುಕೊಳ್ಳಿ - ಪದ್ಮಪ್ರಿಯ ಕಾಣೆ ಪ್ರಕರಣದಲ್ಲಿ ಈ ಶಿವಪ್ರಸಾದ ಮತ್ತು ಅವರ TV9 ಹೇಗೆ ವರ್ತಿಸಿತು, ಹೇಗೆ ಪದ್ಮಪ್ರಿಯಾ ಬಗ್ಗೆ ಇಲ್ಲಸಲ್ಲದ ಸುದ್ದಿಯನ್ನು ಪ್ರಸಾರ ಮಾಡಿ ಕಡೆಗೆ ಅವರ ಜೀವವನ್ನೇ ತೆಗೆದುಕೊಳ್ಳುವ ಸ್ಥಿತಿ ಉಂಟುಮಾಡಿತು ಎಂಬುದನ್ನು ಹೇಗೆ ಮರೆಯಲು ಸಾಧ್ಯ? ಒಬ್ಬರ ಜೀವ ಮರಣದ ಪ್ರಶ್ನೆ ಬಂದಾಗ careless ಆಗಿ ವರ್ತಿಸಿ ಯಾರ್ಯಾರೋ ಮೇಲೆ ಕಮೆಂಟು ಮಾಡಿದ ಇವರು ಈಗ ಯಕ:ಶ್ಚಿತ್ ಇಂಟರನೆಟ್ಟು ಬ್ಲಾಗಿನಲ್ಲಿ ಯಾರೋ ತನ್ನ ಹೆಸರು ಬರೆದಿದ್ದಾರೆಂದ ಮಾತ್ರಕ್ಕೆ ಸೈಬರ್ ಕ್ರೈಮ್ ಡಿವಿಜನ್ನಿಗೆ ಹೋಗಿ ಕಂಪ್ಲೇಂಟ್ ಕೊಡುತ್ತಾರೆ!
ಆ ಪೊಲೀಸರು ಇವರು ಪತ್ರಕರ್ತರೆಂದು ರೋಪು ಹಾಕಿದಕ್ಕೇನೋ ಇವರ ಕಂಪ್ಲೇಂಟ್ ತೆಗೆದುಕೊಂಡಿರಬಹುದು - ಆದರೆ ಇಂದಿನ ಉಗ್ರವಾದಿಗಳ ತಾಂಡವವಾಡುವ ದಿನಗಳಲ್ಲಿ ಇಂತಹ ವೈಯಕ್ತಿಕ ಪುಟುಗೋಸಿ ವಿಷಯಕ್ಕೆ importance ಕೊಡುವಷ್ಟು ದೆಹಲಿ ಪೊಲೀಸರು ದಡ್ಡರಲ್ಲವೆಂದು ನನ್ನ ಅಭಿಪ್ರಾಯ.
ಏನ್ ವಿಪರ್ಯಾಸ ನೋಡಿ - ಶಿವ ಪ್ರಸಾದ್ ಟಿ.ಆರ್.ರ ಬಯೋಡಾಟಾ ಪ್ರಕಾರ ಅವರು ಸ್ವಾತಂತ್ರ್ಯ ಹೋರಾಟ, ಜಾಲಿಯಾನ್ ಬಾಗ್ ಹತ್ಯೆ ಬಗ್ಗೆ ಪುಸ್ತಕ ಬರೆದಿದ್ದಾರಂತೆ. ಇದೇ ಶಿವ ಪ್ರಸಾದರು ಯಾವ ಸ್ವಾತಂತ್ರ್ಯಕ್ಕಾಗಿ ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಬಲಿದಾನ ಮಾಡಿದರೋ ಅದೇ ಸ್ವಾತಂತ್ರ್ಯವನ್ನು ಪೊಲೀಸ್ ಕಂಪ್ಲೇಂಟ್ ಕೊಡುವುದರ ಮೂಲಕ, ಹೆದರಿಸುವುದರ ಮೂಲಕ ಕಸಿಯಲು ಹೊರಟಿದ್ದಾರೆ. ಒಟ್ಟಾರೆ ಮಾಧ್ಯಮದವರು ಏನು ಬೇಕಾದರೂ ಯಾರ ಮೇಲೂ ಏನೂ ಬರೆಯಬಹುದು, ಆದರೆ ಅವರ ದ್ವಂದ್ವ ನೀತಿಯನ್ನು ತಪ್ಪನ್ನು ಎತ್ತಿ ತೋರಿಸಿದರೆ ಪೊಲೀಸ್ ರಾಜ್ಯ ಹೇರಲು ಹೊರಟಿದ್ದಾರಿವರು. ತಾನು ದೆಹಲಿಯಲ್ಲಿದ್ದರೂ ಕರ್ನಾಟಕದ ಗುಪ್ತ ಇಲಾಖೆಯ ಆಫೀಸರ್ ಹೆಸರನ್ನು ಇವರು namedrop ಮಾಡುವ ಉದ್ದೇಶ ತಾನು ಎಷ್ಟು well connected ಎಂದು ತೋರಿಸುವುದಕ್ಕಲ್ಲದೇ ಮತ್ತೇನು?
ಎಂಥಹಾ ಪರಿಸ್ಥಿತಿ ಬಂದಿದೆ ನೋಡಿ ಕನ್ನಡ ಮಾಧ್ಯಮಗಳಿಗೆ - ದೆಹಲಿ posting ಅಂದರೆ ಮುಂಚೆಯೆಲ್ಲಾ ಎಂತಹ prestige ಇತ್ತು, ಗೌರವ ಇತ್ತು. ರಾಷ್ಟ್ರೀಯ ಅಂತರಾಷ್ಟ್ರೀಯ ವಿಚಾರ ತಿಳಿದಿರುವ, ಕನಿಷ್ಟ treaty, law ತಿಳಿದಿರುವ ವರದಿಗಾರರನ್ನು ದೆಹಲಿಗೆ ಕಳಿಸುತ್ತಿದ್ದರು. ಹೀಗಿರುವಾಗ ಶಿವಪ್ರಸಾದರಿಗೆ cyber law ತಿಳಿದಿರದಿದ್ದರೆ ಅದು ಅವರ ತಪ್ಪಲ್ಲ. ಒಂದು cyber complaint ಕೊಡಬೇಕಾದರೆ ಅಲ್ಲಿ ಏನೋ ಡ್ಯಾಮೇಜ್ ಆಗಿರಬೇಕು (cheating, ಹಣ ಕಳೆದುಕೊಳ್ಳುವುದು, ಮಾನ ನಷ್ಟ, ಅಶ್ಲೀಲ, threat ಇತ್ಯಾದಿ). ಆದರೆ ಶಿವಪ್ರಕಾಶರ ಪ್ರಕಾರ ಅವರ ಆಫೀಸಿನಲ್ಲಿ ಅಥವಾ ಮಾಧ್ಯಮ ಮಿತ್ರರು ಮಾಡುವ ಗಾಸಿಪ್ cyber crime ಅಂತೆ!
ಈಗ ಪತ್ರಿಕೆಗಳು, ಟಿವಿ ಚಾನೆಲ್ಲುಗಳು ಯಾರು ಕೈಗೆ ಸಿಗುತ್ತಾರೋ, ಯಾರಿಗೆ ಹಿಂದಿ ಇಂಗ್ಲಿಷ್ ಬರುತ್ತೋ ಅವರನ್ನು ದೆಹಲಿಗೆ ಕಳಿಸುವ ಪರಿಸ್ಥಿತಿ ಬಂದಿದೆ. ಇವರೂ ಕರ್ನಾಟಕ ಭವನದ ಇಡ್ಲಿ ದೋಸೆ ತಿನ್ನುತ್ತಾ ಅಲ್ಲಿನ ಕ್ಯಾಂಟೀನಿನ ಅಂದಿನ ಗಾಸಿಪ್ಪನ್ನೇ ವರದಿ ಮಾಡಿ ದಿನಕಳೆಯುತ್ತಿದ್ದಾರೆ. ದೆಹಲಿ ಬೈಲೈನ್ ಹಾಕಿ ಬೇರೆ ಬೇರೆ ಕನ್ನಡ ಪತ್ರಿಕೆಗಳ ವರದಿಗಳನ್ನೇ ನೋಡಿ - ವರದಿಗಳಲ್ಲಿ ಏನೂ ವಿಶೇಷವೇ ಇಲ್ಲ. ಎಲ್ಲವೂ identical. Sourceಗಳೂ ಒಂದೇ, ಸುದ್ದಿಯೂ ಒಂದೇ, ಗಾಸಿಪ್ಪೂ ಒಂದೇ.
ಪರಿಸ್ಥಿತಿ ಹೀಗಿರುವಾಗ ಶಿವಪ್ರಸಾದರು ಬ್ಲಾಗಿಗರ ಮೇಲೆ ಪೊಲೀಸ್ ಕಂಪ್ಲೇಂಟ್, ರೋಪ್ ಹಾಕಿರುವುದನ್ನು ಕಂಡು ಆಶ್ಚರ್ಯವಾಗಲಿಲ್ಲ. ಕರ್ನಾಟಕ ಭವನಕ್ಕೆ ಬರುವ ರಾಜಕಾರಣಿಗಳ ಜೊತೆ ಮಸಾಲೆ ದೋಸೆ ತಿಂದು ಕಾಫಿ ಕುಡಿದ ಮಾತ್ರಕ್ಕೆ ತಾವು well connected, powerful ಎಂಬ ಭಾವನೆ ಈ ಪತ್ರಕರ್ತರಲ್ಲಿ ಮೂಡುತ್ತದೆ. ಒಂಥರಾ arrogance ಬರುತ್ತದೆ. ಅದೇ arrogance ಶಿವಪ್ರಸಾದರು ಮಾಧ್ಯಮ ಮನೆಗಳ ಗಾಸಿಪ್ ವಿರುದ್ಧ cyber crime complaint ಕೊಡುವಂತೆ ಪ್ರೇರೇಪಿಸಿದೆ.
ನೀವೇ ಒಮ್ಮೆ ಅವರ ಅಸಂಬದ್ದ ಪ್ರಲಾಪ ಓದಿ ನೋಡಿ - ಏನೋ ಸ್ವಲ್ಪ ಆಚೀಚೆ ಆದಂತಿದೆ. ಏನೇ ಇರಲಿ ಅವರ ಎಲ್ಲಾ ಪರ್ಸನಲ್ ತೊಂದರೆಗಳು ಬಗೆಹರಿಯಲಿ ಎಂದು ಆಶಿಸೋಣ.
___________________________________________________________________
ಕೊನೆ ಗುಟುಕು: ಅಂದ ಹಾಗೆ ಈ ಬ್ಲಾಗ್ ಪೋಸ್ಟನ್ನು ನನ್ನ ಲಾಯರ್ ಗೆಳೆಯ (Rank Holder and Cyber Law Specialist) review ಮಾಡಿದ್ದಾನಲ್ಲದೆ ಈ ಪೋಸ್ಟ್ ಮಾಡುವುದು cyber crime ಅಲ್ಲ - ಸಂವಿಧಾನ ದತ್ತ ವ್ಯಕ್ತಿ ಸ್ವಾತಂತ್ರ್ಯದಡಿ ಬರುತ್ತದೆಯೆಂದು certify ಮಾಡಿದ್ದಾನೆ. ಅವನ ಮಾತಲ್ಲಿ ಒಂದು ಉದಾಹರಣೆ ಕೊಡಬೇಕಾದರೆ - ನನ್ನ ಪೋಸ್ಟಿನಲ್ಲಿ ಪದ್ಮಪ್ರಿಯ ಮತ್ತು TV9 ಉಲ್ಲೇಖವಿದೆ. ಆದರೆ ನಾನು ಬರೆದಿರುವುದು "ಶಿವಪ್ರಸಾದರು ಮತ್ತು TV9 ಪದ್ಮಪ್ರಿಯಾ ಮರಣಕ್ಕೆ ಕಾರಣವಾಗುವಂತಹ ಸುದ್ದಿ ಪ್ರಸಾರ ಮಾಡಿದರು". ಇದನ್ನೇ ನಾನು "ಪದ್ಮಪ್ರಿಯಾ ಮರಣಕ್ಕೆ ಶಿವಪ್ರಸಾದ ಮತ್ತು TV9 ಕಾರಣ" ಎಂದು ಬರೆದಿದ್ದರೆ ಅದು ಮಾನಹಾನಿಕರವಾಗುತಿತ್ತು. ಈ ಬ್ಲಾಗಿನ ಪ್ರತೀ ವಾಕ್ಯವು ಇಂತಹ ಪರಿಶೀಲನೆಗೆ ಒಳಗಾದ ನಂತರವೇ ಪ್ರಕಟಣೆ ಮಾಡುತ್ತಿದ್ದೇನೆ. ಶಿವಪ್ರಸಾದ ಮತ್ತವರ ದೆಹಲಿಯ powerful ಗೆಳೆಯರು ತಮ್ಮ ಸಂಸ್ಥೆಗಳ ಬಲ ಪ್ರಯೋಗಿಸಿ ಬೇರೆ ಬ್ಲಾಗು ಬಂದು ಮಾಡಬಹುದು. ಶಿವಪ್ರಸಾದರು ಈ ಬ್ಲಾಗಿನ ವಿರುದ್ಧವೂ ಕಂಪ್ಲೇಂಟ್ ಕೊಡಬಹುದು. ಆದರೆ ಅದನ್ನು ಎದುರಿಸಲು ನಾವು ಬೇಕಾದಂತಹ due diligence ಮಾಡಿದ್ದೇವೆಯೆಂದು ಹೇಳಲು ಈ ಸ್ಪಷ್ಟೀಕರಣವಷ್ಟೇ.
___________________________________________________________________
Subscribe to:
Post Comments (Atom)
ಭೇಷ್ ರಾಕೇಶ್! ಕನ್ನಡ ಬ್ಲಾಗುಗಳಲ್ಲೇ ತಮ್ಮ ಬರಹದ ಶೈಲಿ ವಿನೂತನವಾಗಿದೆ. ಭಾಷೆಯ ಮೇಲೆ ಒಳ್ಳೆ ಹಿಡಿತವಿದೆ. ವಾರಕ್ಕೊಂದು ಬಾರಿ ಕನ್ನಡ ಮಾಧ್ಯಮ ಲೋಕದ ಅನಾವರಣವನ್ನು ಮಾಡುತ್ತಿರುವ ತಮಗೆ ಅಭಿನಂದನೆಗಳು. Very professional blog and writing. I like it. It is good that you have taken precaution by getting your blog posts reviewed. Some senior journalists like Shiva Prasad T.R. and D.P.Satish think they can threaten by sending lawyer notices. Keep it up.
ReplyDelete