ಎಂದಿನಂತೆ "ವಿಜಯ ಕರ್ನಾಟಕ" ತನ್ನ ಕಚೇರಿಗೆ ಈ ರಜೆ ಯಾಕೆ ಬೇಕಿತ್ತು ಎಂದು ಕೇಳಿ ಬಹಳ ಕರೆಗಳು ಬಂದವು ಎಂದು ಹೇಳಿಕೊಂಡಿದೆ. ಕರೆ ಮಾಡಿದವರ ಹೆಸರು ಏನು, ಕೆಲಸವೇನು ಮುಂತಾದ details ಕೇಳಬೇಡಿ - ಕರ್ನಾಟಕದ ನಂ.೧ ಪತ್ರಿಕೆ ಪತ್ರಿಕಾಧರ್ಮದ basics ಮರೆತು ತನಗೆ ಬೇಕಾದ ಹಾಗೆ ಅನಾಮಧೇಯ SMS, ಫೋನ್, ಪತ್ರಗಳನ್ನು ಸೃಷ್ಟಿಸುವುದರಲ್ಲೂ ನಂ.೧ ಅಲ್ಲವೇ? ಕೆಲ ಪತ್ರಿಕೆಗಳ ಸಂಪಾದಕರು "ಹೆಸರು ಬೇಡ, ಊರು ಗೊತ್ತಿಲ್ಲ"ವೆಂಬ ವಾಚಕರ ಪತ್ರಗಳನ್ನು ಸೃಷ್ಟಿಸಿದಂತೆ.
Thaskannada.com ನ ಶ್ಯಾಮಸುಂದರ್ ಅಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ "ಶುಕ್ರವಾರದ ರಜೆ ನಮ್ಮ ಪ್ರಕಾರ ಅಸಿಂಧು" ಎಂದು ಷರಾ ಬರೆದುಬಿಟ್ಟಿದ್ದಾರೆ.
ರಜೆ ಕೊಡಬೇಕಿತ್ತಾ ಇಲ್ಲವೋ ಚರ್ಚೆ ಈ ಬ್ಲಾಗ್ ಪೋಸ್ಟಿನ ಉದ್ಧೇಶವಲ್ಲ. ಆದರೆ ತಮಗೆ ಬೇಕಾದ ಹಾಗೆ ಹೇಗೆ ಒಂದು sentimentನ್ನು, opinionನ್ನು ಮಾಧ್ಯಮಗಳು out of the air ಹೇಗೆ ಸೃಷ್ಟಿ ಮಾಡುತ್ತವೆಯೆಂದು ತೋರಿಸಲಷ್ಟೇ.
____________________________________________________________
ರಜೆ ಕೊಟ್ಟರೆ ಯಾಕೆ ರಜೆ ಕೊಟ್ರಿ ಎಂಬ ಪ್ರಶ್ನೆ.
ಒಂದು ವೇಳೆ ಕರ್ನಾಟಕ ರಜೆ ಕೊಡದಿದ್ದರೆ ಪ್ರಶ್ನೆಗಳು ಹೀಗಿರುತ್ತಿದ್ದವೇನೋ? ನೀವೂ guess ಮಾಡಿ ಕಮೆಂಟಿನಲ್ಲಿ:
- ಅತ್ತ ತಮಿಳುನಾಡಿನಲ್ಲಿ ರಜೆ ಕೊಟ್ರು, ಕರ್ನಾಟಕದಲ್ಲೇಕೆ ರಜೆಯಿಲ್ಲ?
- ವೈ.ಎಸ್.ಆರ್. ಕಾಂಗ್ರೆಸ್, ಅದಕ್ಕೇ ಕರ್ನಾಟಕದ ಬಿಜೆಪಿ ಸರಕಾರ ರಜೆ ಕೊಡಲಿಲ್ಲಯೆಂಬ ಮೂದಲಿಕೆ.
- ವಿರೋಧ ಪಕ್ಷವಾದ ಕಾಂಗ್ರೆಸ್ಸಿನಿಂದ ರಜೆಗೆ ಒತ್ತಾಯಿಸಿ ಧರಣಿ, ಸತ್ಯಾಗ್ರಹ. ಒಂದೆರಡು ಬಸ್ ಭಸ್ಮ
- ನಾಯಕರು ಸತ್ತಾಗಲೂ ರಜೆ ಕೊಡದೆ ರಾಜಕೀಯ ಮಾಡುವ ಬಿಜೆಪಿ ಸರಕಾರವೆಂಬ ಆರೋಪ
- TV9 Breaking News "ಮರಣದಲ್ಲೂ ರಾಜಕೀಯ ಮಾಡುವ ಕರ್ನಾಟಕದ ಬಿಜೆಪಿ ಸರಕಾರ"
- ಈTV Breaking News "ರಜೆಯಿಲ್ಲದ ಈ YSR ಸಾವು ನ್ಯಾಯವೇ?"
- Churumuriಯಲ್ಲಿ "Ella OK, Worku Yaake?"
- ಬಳ್ಳಾರಿ ರೆಡ್ಡಿ ಕೃಪಾಪೋಷಿತ ಪತ್ರಕರ್ತರುಗಳ ವರದಿಗಳು ಹೀಗಿರುತ್ತಿದ್ದವೇನೋ - "YSR ನಿಧನಕ್ಕೆ ರಜೆ ಕೊಡದ ಕರ್ನಾಟಕ ಸರಕಾರದ ವಿರುದ್ಧ ಸಿಡಿದೆದ್ದ ಬಳ್ಳಾರಿ ಬ್ರದರ್ಸ್!"
- ಬ್ಲಾಗ್ ವಿಧುರ ಜೋಗಿ ಒಂದು ವೇಳೆ ಬ್ಲಾಗು ಬರೆಯುತ್ತಿದ್ದರೆ, ಹೇಗೆ ಇದೆಲ್ಲಾ Christian YSR ವಿರುದ್ಧ ಮಂಗಳೂರಿನ ಸಂಘ ಪರಿವಾರದ conspiracy ಎಂದೆಲ್ಲಾ "ಅವಧಿ"ಯಲ್ಲಿ ಬರೆಯುತ್ತಿದ್ದರೇನೋ.
It is debatable issue. Every one know style of functioning of this government.
ReplyDelete1. What circumtances they decided to give holiday ?
2. Is it agaist policys of YSR ?
3. What is the standing rules on holiday ?
On media part.
Why you took this question ? That is why you raised question on VK report.
bla.. bla..
ಸರಿಯಾಗಿ ಹೇಳಿದ್ದೀರ.
ReplyDeletegood observation & analysis
ReplyDeleteಹಾಹಾಹಾ! ತುಂಟತನದ ಪ್ರಶ್ನೆ ಹಾಗು ಉತ್ತರಗಳು!!
ReplyDelete