Wednesday, August 12, 2009

ಹುಡುಕಿಕೊಡಿ: ಎಲ್ಲಿ ಕಾಣೆಯಾಗಿದ್ದಾರೆ ಕರ್ನಾಟಕ ರಕ್ಕಸವೇದಿಕೆಯ ೪೦ ಲಕ್ಷ ಕಾರ್ಯಕರ್ತರು?ಆಗಸ್ಟ್ ೯ರಂದು ತಿರುವಳ್ಳುವಾರ್ ಪ್ರತಿಮೆ ಸ್ಥಾಪನೆ ವಿರೋಧಿಸಿ ಬೆಂಗಳೂರಲ್ಲಿ ಬಂದ್, ಗಲಭೆ ನಡೆಯುವುದು ಖಚಿತವೆಂದು ರಾಷ್ಟ್ರ‍ೀಯ ಮತ್ತು ರಾಜ್ಯ ಮಾಧ್ಯಮಗಳು ಬೆಳಗಿನಿಂದಲೂ ಕಾದು ಕೂತದ್ದೇ ಬಂತು.

ಊಹೂಂ..ಎಲ್ಲೋ ೨೦ ರಕ್ಕಸ ವೇದಿಕೆಯ ಕಾರ್ಯಕರ್ತರು ಕ್ರಿಕೆಟ್ ಆಡುವ ನೆಪದಲ್ಲಿ ಒಟ್ಟಾಗಿ ಅರೆಮನಸ್ಸಿನಿಂದ ರಸ್ತೆ ತಡೆ ಮಾಡಲು ತೊಡಗಿದ ನಿಮಿಷಗಳಲ್ಲೆ ಪೊಲೀಸರಿಂದ ಬಂಧನಕ್ಕೊಳಗಾದರು.

ನಾರಾಯಣ ಗೌಡರು ಮತ್ತವರ ಚೇಲಾಗಳು (ಕೆಲ ಮಾಧ್ಯಮ ಮಂದಿ ಕೂಡಾ) ಆಗಾಗ ಹೇಳುತ್ತಿರುತ್ತಾರೆ - ಕ.ರ.ವೇ.೪೦ ಲಕ್ಷ ಕಾರ್ಯಕರ್ತರ ಪಡೆ, ರಾಜ್ಯದೆಲ್ಲೆಡೆ ೪೦೦೦ ಕರವೇ ಶಾಖೆಗಳಿವೆ. ಗೌಡರು ಒಂದು ಮಾತು ಹೇಳಿದರೆ ಬೆಂಗಳೂರು ಹೊತ್ತಿ ಉರಿಯುತ್ತದೆ, ಸಾವಿರಾರು ಲಕ್ಷಾಂತರ ಮಂದಿ ಸಾಗರೋಪಾದಿಯಲ್ಲಿ ಕನ್ನಡಕ್ಕಾಗಿ ನುಗ್ಗಿ ಬರುತ್ತಾರೆ ಇತ್ಯಾದಿ ಇತ್ಯಾದಿ.

ಆಗಸ್ಟ್ ೯ರಂದು ಎಲ್ಲಿ ಹೋದರಯ್ಯಾ ಈ ಕಾರ್ಯಕರ್ತರು?

ಶಾಸಕರ ಭವನದಲ್ಲಿ, ಕಾರವಾರದಲ್ಲಿ ವೃದ್ಧ ಮುದುಕರ ಮುಖಕ್ಕೆ ಮಸಿ ಬೆಳೆದ ಕರವೇಯ ಪೌರುಷವೆಲ್ಲಿ ಕಳೆದು ಹೋಯಿತು?

ವಾರಾಂತ್ಯದಲ್ಲಿ ಖಾಸಗೀ ಪ್ರದೇಶದಲ್ಲಿ ಹುಟ್ಟು ಹಬ್ಬ ಆಚರಿಸುತ್ತಿದ್ದ ಯುವಕ ಯುವತಿಯರ ಮೇಲೆ ಕೈ ಮಾಡಿ ಅವರ ಲ್ಯಾಪ್ ಟಾಪ್, ಮೊಬೈಲ್ ಕದ್ದುಕೊಂಡ ಕರವೇ ಹೀರೋಗಳೆಲ್ಲಿದ್ದರು ಆಗಸ್ಟ್ ೯ರಂದು???

ಬೆಳಗಾವಿಯಲ್ಲಿ ಶಕ್ತಿಕಳೆದುಕೊಂಡ ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತು ಮೀಸಲಾತಿಯಿಂದಾಗಿ ಕನ್ನಡಿಗರು ಮೇಯರ್ ಆದರೆ ರಾಜ್ಯದೆಲ್ಲೆಡೆ ಗೌಡರ ಉದ್ದಿನ ವಡೆಯಂತಹ ಮುಖದ ಫ್ಲೆಕ್ಸ್ ಹಾಕಿ ಕ್ರ‍ೆಡಿಟ್ ತೆಗೆದುಕೊಂಡ ರಕ್ಕಸವೇದಿಕೆಯವರು ಈಗೆಲ್ಲಿದ್ದಾರೆ!???

ಒಂದಂತೂ ಸ್ಪಷ್ಟ - ಹಿಂದಿನ ಸರಕಾರಗಳಲ್ಲಿ ಮುಖ್ಯಮಂತ್ರಿಗಳನ್ನೇ ಬೆದರಿಸುವ, ಮಾಧ್ಯಮಗಳನ್ನು "ಸಾಕಿಕೊಂಡು" ಇದ್ದು, ಪೊಲೀಸರನ್ನು ಬಗ್ಗಿಸಿಡುವಷ್ಟು ಬೆಳೆದಿದ್ದ ರಕ್ಕಸ ವೇದಿಕೆಯ ಜೀರೋಗಳ ನಿಜವಾದ ತಾಕತ್ತು ಎಷ್ಟುವೆಂಬುದು ಅವರ ಯಾವುದೇ ಒತ್ತಡಕ್ಕೆ ಮಣಿಯದ ಯಡ್ಯೂರಪ್ಪ ಮತ್ತು ಪೊಲೀಸರು ತೋರಿಸಿದ್ದಾರೆ. ಸರಕಾರ ಮನಸ್ಸು ಮಾಡಿದರೆ ಇಂತಹ ಸಮಾಜದ್ರೋಹಿ ಸಂಘಟನೆಗಳನ್ನು ಬಗ್ಗು ಬಡಿಯಬಹುದು ಎಂಬುದೂ ಸ್ಪಷ್ಟವಾಗುತ್ತದೆ.

ನಿನ್ನೆ ಯಾವುದೋ ಪತ್ರಿಕೆಯಲ್ಲಿ ಓದಿದೆ - ಯಾವಾಗಲೂ ಬೆಳಿಗ್ಗೆ ಓಪನ್ ಜೈಲಿಗೆ ಹೋಗಿ ಬಿಟ್ಟಿ ಊಟ ತಿಂದು ತೇಗಿ ಸಂಜೆ ಹೊರಗೆ ಹೋಗುತ್ತಿದ್ದ ಈ ಉಟ್ಟು ಓರಾಟಗಾರರು ಜೈಲಿನಲ್ಲೆರಡು ದಿನ ಕಳೆದ ಕೂಡಲೇ ಇಲಿಯಂತಾಗಿದ್ದಾರೆ. ಒಬ್ಬ ಓರಾಟಗಾರರಂತೂ ಎಟ್ಯಾಚ್ಡ್ ಬಾತ್ ರೂಮ್ ಬೇಕು, ಬೆಳಿಗ್ಗೆ ಕೊಡುವ ಬ್ರೆಡ್ ಸರಿಯಿಲ್ಲ, ಜೈಲಿನಲ್ಲಿ ಸೊಳ್ಳೆ ಕಾಟ ವಿಪರೀತವೆಂದೆಲ್ಲಾ ಬಡಬಡಿಸಿದ್ದಾರೆ.

ಓಪನ್ ಜೈಲಿನಲ್ಲಿ ಸೆಲ್ ಫೋನಿಟ್ಟುಕೊಂಡು ಮಾಧ್ಯಮಗಳೊಂದಿಗೆ ಸಲೀಸಾಗಿ ಬೈಟ್ ಕೊಡುತ್ತಿದ್ದ ನಾರಾಯಣ ಗೌಡರಂತೂ ಈ ಬಾರಿ ಪರಪ್ಪನ ಅಗ್ರಹಾರದಲ್ಲಿ ಸೊಳ್ಳ ಕಡಿತ ತಿನ್ನುತ್ತಾ ತಾನು ಜೈಲಿನಲ್ಲಿದ್ದರೂ ಹೊರಗೆ ಲೋಕ ಎಂದಿನಂತೆ ನಡೆಯುತ್ತಿದೆಯೆಂದು ತಿಳಿದು ಉಗ್ರರಾಗಿ ಬಿಟ್ಟಿದ್ದಾರೆ. ಉಪಚುನಾವಣೆಯಲ್ಲಿ ವಿವಿಧ ಅಭ್ಯರ್ಥಿಗಳಿಂದ ತಿನ್ನಬಹುದಾಗಿದ್ದ opportunity ಮಿಸ್ ಆದಂತೆಯೇ ಎಂದು ಕೈ ಕೈ ಹಿಸಿಕಿಕೊಂಡಿದ್ದಾರಂತೆ.

ಈಗಿನ ಸುದ್ದಿಯ ಪ್ರಕಾರ ೧೩ರಂದು ಚೆನ್ನೈನಲ್ಲಿ ಸರ್ವಜ್ಞ ಪ್ರತಿಮೆ ಅನಾವರಣ ತನಕವೂ ಈ ಉಟ್ಟು ಓರಾಟಗಾರರು ಸೊಳ್ಳ ಕಡಿತ ತಿನ್ನುತ್ತಾ ಪರಪ್ಪನ ಅಗ್ರಹಾರದಲ್ಲೇ ಇರಬಹುದಂತೆ. ಪ್ರಾಯಶ: ಈ ಕೆಲ ದಿನಗಳಾದರೂ ಕರ್ನಾಟಕದ ಜನತೆ, MNCಗಳು ರಕ್ಕಸ ವೇದಿಕೆಯವರ ಕಾಟವಿಲ್ಲದೆ ಕಳೆಯಬಹುದೇನೋ.

ಇಡೀ ರಾಜ್ಯದ ಅಭಿಪ್ರಾಯದ ವಿರುದ್ಧ ಕೇವಲ ಪ್ರಚಾರಕ್ಕಾಗಿ ಹೋರಾಡಲು ಹೋಗಿ ಈಗ ಪರಪ್ಪನ ಅಗ್ರಹಾರದಲ್ಲಿ ಸೊಳ್ಳೆ ಕಡಿತ ತಿಂದುಕೊಂಡಿರುವ ರಕ್ಕಸ ವೇದಿಕೆ ಮತ್ತು ಗೌಡರ ಕಂಡು ಒಂದೆಡೆ ಕನಿಕರವೂ ಆಗುತ್ತದೆ. ಆದರೂ ಆಗುವುದೆಲ್ಲಾ ಒಳ್ಳೆಯದಕ್ಕಾಗಿ - ಈ ನೆಪದಿಂದಾದರೂ ಈ ಮದ್ದೂರು ವಡೆ ಸ್ವಲ್ಪ ಸ್ಲಿಂ ಆಗಬಹುದೇನೋ? ಏನಂತೀರಿ?
****
ಕೊನೆಯ ಗುಟುಕು: ಹಿಂದಿನ ಬ್ಲಾಗ್ ಪೋಸ್ಟಿಗೆ ಅಭಿಪ್ರಾಯ ಹಾಕಿದ ಎಲ್ಲರಿಗೂ ಧನ್ಯವಾದಗಳು. ಹಾಗೆಯೇ ಈ ಮೈಲ್ ಮುಖಾಂತರ "ಭೇಷ್" ಎಂದು ಬೆನ್ನು ತಟ್ಟಿದವರಿಗೂ ಥ್ಯಾಂಕ್ಸ್.

ಇನ್ನು ಇಮೈಲ್ ಮುಖಾಂತರ ಬೆದರಿಕೆ ಹಾಕಿದವರೂ, ವೈರಸ್ ಕಳಿಸಿದವರೂ, ಟ್ರ್ಯಾಕಿಂಗ್ ವೈರಸ್ ಕಳಿಸಿದವರೂ ಇದ್ದಾರೆ - ಆದರೆ ಆಶ್ಚರ್ಯವೇನೂ ಆಗಿಲ್ಲ. ನಾರಾಯಣ ಗೌಡರ ಬಳಿ ಅವರ ದೊಡ್ಡ ದೊಡ್ಡ ಐಷಾರಾಮಿ ಕಾರುಗಳ ಬಗ್ಗೆ ಕೇಳಿದಾಗ ಅವರ readymade ಉತ್ತರ ಯಾವಾಗಲೂ "ಪ್ರಪಂಚದೆಲ್ಲೆಡೆಯಿರುವ ಕನ್ನಡಿಗರು ನನಗ ಹಣ ಕಳಿಸುತ್ತಾರೆ" ಯೆಂದು. ಅಮೆರಿಕದಲ್ಲಿ, ಬ್ರಿಟನಿನಲ್ಲಿ ಕುಳಿತುಕೊಂಡು ತಾವೇ ಅನಿವಾಸಿಗಳಾಗಿದ್ದರೂ ಕರ್ನಾಟಕದಲ್ಲಿ ಹೊರಗಿನವರ ವಿರುದ್ಧ ಕೆಂಡ ಕಾರುವವರನ್ನು ಬೆಂಬಲಿಸುತ್ತಾರೆ ಈ ಅನಿವಾಸಿ ರಕ್ಕಸವೇದಿಕೆಯ ಬೆಂಬಲಿಗರು. ತಾವೇ ಇತರ ದೇಶದಲ್ಲಿ ಅನಿವಾಸಿಯಾಗಿ ದುಡಿದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರೂ ಅದೇನೋ ಅವ್ಯಕ್ತ long distance ಕನ್ನಡ ಪ್ರೇಮ ಈ ವರ್ಷಕ್ಕೊಂದು ಬಾರಿ ಝೂಮೆಂದು ಹಾರಿ ಬಂದು ಹೋಗುವ ಕಂಪ್ಯೂಟರ್ ಹೀರೋಗಳಿಗೆ. ಅಮೆರಿಕದಲ್ಲಿ ಆರ್ಥಿಕ ತಾಪತ್ರಯಗಳಿಂದಾಗಿ ಪ್ರಾಯಷ: ಕೆಲಸವಿಲ್ಲದೆ ಇಡೀ ದಿನ ಇಂಟರ್ನೆಟ್ಟಿನಲ್ಲಿ ಕನ್ನಡ ಹೀರೋಗಳಾಗುವ ದೊಡ್ಡ ಗುಂಪೇ ಇದ್ದಂತಿದೆ.

ಒಮ್ಮೆ ಈ ಪ್ರತಿಮೆ ಗಲಾಟೆ ಮುಗಿದ ನಂತರ ಮಾನ್ಯ ಯಡ್ಯೂರಪ್ಪನವರು ಈ ರಕ್ಕಸವೇದಿಕೆಯವರಿಗೆ ಹಣ ಕಳಿಸುವ ಅನಿವಾಸಿ ಕನ್ನಡಿಗರಾರು ಎಂದು ಗುರುತಿಸಿ "ಗೂಂಡಾಗಳ ಅನಿವಾಸಿ ಬೆಂಬಲಿಗರ" ಪಟ್ಟಿ ಪ್ರಕಟಿಸಿದರೆ ಪ್ರಾಯಷ: ಈ long distance NRIs (Non Reliable Indians) ಗಳ ಇಂಟರ್ನೆಟ್ ಆಟೋಟಾಪಕ್ಕೆ ಕಡಿವಾಣ ಬೀಳಬಹುದೇನೋ!
*****

3 comments:

 1. ಭೇಷ್ ಮಗಾ... ನೀನು ಇದೇ ರೀತಿ ಬರೀತಾ ಇರು. ಖಂಡಿತಾ ನಿನಗೊಂದು ಕನ್ನಡ ನ್ಯೂಸ್ ಪೇಪರ್ನಲ್ಲಿ ಕೆಲಸ ಸಿಗುತ್ತೆ.

  ಜೈ ಹಿಂದ್

  ReplyDelete
 2. But, nobody will give you work in TV channels. Why this irrespossible TV channel news desk people respossible for giving undue coverage to this hooligans...

  ReplyDelete
 3. I cant under stand channel like ETV also focus on so called protest gimmick by this narayana gowda or whatever.
  UDAYA..sick

  ReplyDelete