Thursday, November 12, 2009

ಪೋಸ್ಟ್ ಮ್ಯಾನ್ ಕೆಲಸ ಮಾಡಿದ ಕಟ್ಟಾ, ಅಶೋಕ್ VKಯಲ್ಲಿ ಸಂಧಾನಕಾರರಾಗಿ ಪ್ರತ್ಯಕ್ಷ ಹೇಗೆ?

ವಿಚಿತ್ರ ನೋಡಿ. ಕಳೆದೆರಡು ವಾರಗಳ ಬಿಕ್ಕಟ್ಟಿನ ಸಮಯದಲ್ಲಿ ಸುದ್ದಿಯಿಲ್ಲದೇ ಮಾಯವಾಗಿ ಗಾಳಿ ಯಾವ ಕಡೆಗೆ ಬೀಸುತ್ತದೆಯೆಂದು ಎಲ್ಲೋ ಅಡಗಿ ಕುಳಿತಿದ್ದ ಬೆಂಗಳೂರಿನ ಸಚಿದ್ವಯರಾದ ಕಟ್ಟಾ ಸುಬ್ರಮಣ್ಯ ನಾಯ್ಡು ಮತ್ತು ಅಶೋಕ್ ಇದೀಗ ಅನಾಮತ್ತಾಗಿ "troubleshooter", "ಸಂಧಾನಕಾರ"ರಾಗಿ "ವಿಜಯ ಕರ್ನಾಟಕ"ದಲ್ಲಿ ಕಾಣಿಸಿಕೊಂಡಿದ್ದಾರೆ.

ವಿಜಯ ಕರ್ನಾಟಕದ ಸುದರ್ಶನ ಚನ್ನಂಗಿಹಳ್ಳಿ ಏಕ್ ದಮ್ ಈ ಸಚಿವರಿಗೆ ಬಕೆಟ್ಟು ಹಿಡಿದು ಬಿಟ್ಟಿದ್ದಾರೆ. ಕೆಲ ಅಣಿಮುತ್ತುಗಳ ಸ್ಯಾಂಪಲ್:
- ಈ ಸಚಿವದ್ವಯರು "ಎರಡೂ ಬಣಗಳ ನಡುವೆ ಸೇತುವೆಯಾಗಿ" ಓಡಾಡಿದ್ದಾರೆ.
- ಉಭಯ ಬಣದ ನಾಯಕರ ನಡುವೆ ರಾಜಿಗೆ ಯತ್ನಿಸಿದರು
- ವರಿಷ್ಠರ ಸಂದೇಶಗಳನ್ನು ರವಾನಿಸುವ ಕಾರ್ಯ ನಿರ್ವಹಿಸಿದರು.

ಕಡೆಯದಂತೂ ನಾವೀಗ ಶಿಲಾಯುಗದಲ್ಲಿ ಅಥವಾ ರಾಮಾಯಣದ ಜಮಾನಾದಲ್ಲಿ ಇದ್ದೇವೆಯೆಂಬ ಅಭಿಪ್ರಾಯ ಕೊಡುತ್ತದೆ. ಮೊಬೈಲ್ ಸೆಲ್ ಎಲ್ಲೆಡೆ ಇರುವಾಗ ಈ ಸಚಿವರು "ಸಂದೇಶ ರವಾನಿಸುವ ಕಾರ್ಯ ನಿರ್ವಹಿಸಿದರು" ಎಂದು ಸುದರ್ಶನ ಹೇಳಿ ಓದುಗರ ಕಿವಿ ಮೇಲೆ ಹೂ ಇಡಲು ಯತ್ನಿಸಿದ್ದಾರೆ.

ಯಡ್ಡಿ ರೆಡ್ಡಿ ಹೊಡೆದಾಡಿಕೊಳ್ಳುತ್ತಿರುವಾಗ ಎಲ್ಲೋ ಅಡಗಿ ಕುಳಿತಿದ್ದ ಮತ್ತು ಎಲ್ಲಾ activity ದೆಹಲಿಗೆ shift ಆಗಿದ್ದಾಗ ಬೆಂಗಳೂರಿನಲ್ಲೆ ಇದ್ದ ಕಟ್ಟಾ ಅಶೋಕ್ ರವರು ಈಗ ಎಲ್ಲಾ ಬಿಕ್ಕಟ್ಟು ಪರಿಹಾರವಾದ ನಂತರ ವಿ.ಕ.ದಲ್ಲಿ "ಮುತ್ಸದ್ಧಿ"ಗಳಾಗಿ ಕಂಡುಬರುವುದರ ಹಿಂದೆ ಏನು ಕೆಲಸ ಮಾಡಿರಬಹುದು? 24x7 ಟಿವಿ ಕವರೇಜಿನ ಕಾಲದಲ್ಲಿ ಹೀಗೆಲ್ಲಾ ಬರೆದರೆ ಜನ ನಂಬುತ್ತಾರಾ?

2 comments:

  1. ರಾಕೇಶ,
    ಈ ರಾಜಕಾರಣ ನನಗಂತೂ ತಿಳಿಯದು. ಆದರೆ ನೀವು ವಿ.ಕ.ದ ರಾಜಕಾರಣವನ್ನು ಥಟ್ಟನೆ ಹಿಡಿದುಬಿಟ್ಟು ನಮಗೆ ತೋರಿಸಿದ್ದೀರಿ. ಧನ್ಯವಾದಗಳು.

    ReplyDelete
  2. ನಿಮ್ಮ ಬ್ಲಾಗ್ ನಾನು ಪ್ರಥಮಬಾರಿಗೆ ವಿಸಿಟ್ ಮಾಡಿದ್ದೇನೆ. ತುಂಬಾ ಚೆನ್ನಾಗಿದೆ. ನಿಮ್ಮ ಪ್ರಯತ್ನ ಸಫಲವಾಗಿ. ಮಾಧ್ಯಮ ಕ್ಷೇತ್ರವು ಹಳಸಿದ ಅನ್ನವಾಗಿರುವ ಇಂದಿನ ಸಂದರ್ಭದಲ್ಲಿ ತಾವು ವಸ್ತುನಿಷಠತೆಯಿಂದ ಮಾಧ್ಯಮ ಮೇಲೆ ಬೆಳಕನ್ನು ಚೆಲ್ಲುವ ಕೆಲಸ ಮಾಡುತ್ತಿದ್ದೀರೆ. ಥ್ಯಾಂಕ್ಸ ಕ್ಷ-ಕಿರಣ

    ReplyDelete