Sunday, February 7, 2010

Villanization - then Shivaraj Patil, now Sharad Pawar - why is media giving free pass to Sonia Gandhi and Manmohan Singh?



I first noticed this trend during Mumbai attacks.

When a hunt for suitable scapegoat started after the attacks, media started focusing on Shivaraj Patil (and his dressing habits)

Now when there appears to be no end to price increase of basic commodities, media has started ganging up on Sharad Pawar.

Can you notice what is common in both cases?

Yes, absolute free pass given to UPA President Sonia Gandhi and Prime Minister Manmohan Singh by the media! It is as if these two people who literally run India today, have no responsibility at all for appointing useless ministers such as Patil and Pawar.

Agreed, there is issue of coalition partners and keeping region/caste balance in the ministry. But as leaders who appointed these persons in the first place why media is not asking any accountability on part of Sonia Gandhi and Manmohan Singh?

Why is media being soft on Sonia and Manmohan? Why is no one asking Sonia or MM "Why did you appoint these useless people to these posts"? In any company those who hire bad employees are taken to task, why not with Govt? Or is this an example of excellent media management by Congress?

Any government which allowed attacks like 26/11 - where someone could use a boat to beat our bluewater Navy and Coast Guard and land undetected on our shores - would have been shown the door in any democracy. But Congress with media's help, nicely diverted all attacks towards Shivaraj Patil painting him as a villain. Job well done because Congress won both Loksabha and then state elections in Maharastra.

Congress party's handling of media then and today when common man is upset against price rise is excellent example of how media can be manipulated by those in power.

Rakesh Mathias
6 February 2010
rakesh.mathias AT gmail.com

Wednesday, January 13, 2010

1 Crore Rs to Bahrain Kannada Sangha - why should poor tax payers of Karnataka fund rich NRI association?

As I suspected in my earlier blog post, BJP Government in Karnataka has again surrendered to a powerful Kannada newspaper Editor.

1 Crore Rupees has been released to Bahrain Kannada Sangha by Karnataka Government (subject to RBI) after above mentioned Editor returned to Bangalore from a fresh "sanmana" and lambasted CM for not keeping his words to Bahrain Kannada Association on 1 Crore Rupees.

In other words, poor tax payers of Karnataka will be subsidizing weekend kitty parties of NRIs in one of the world's richest country. Bahrain's per capita income is almost $18,000 compared to approx $500 per capita income of Karnataka. Can there be bigger irony than this?

Our CM is known to announce 1-2 crore rupees to every religious or cultural place he visits. While in principle I oppose government grants to any religious institutions, I understand how these donation may help social service done by temples. At least one can assume money is spent within India.

But donating 1 Crore to an NRI association in one of the world's richest countries?

Especially when Karnataka is still to recover from one of the worst floods in centuries?

Why send 1 crore to Bahrain when various "Academies" established by Karnataka govt are in coma because other than announcing Presidents to the academies, Chief Minister (who also holds Kannada & Cultural portfolio) has done nothing to rejuvenate them?

As I explained in my earlier post, I've been to Bahrain and don't doubt sincerity of Kannada Sangha there. But Kannadigas in Bahrain are no exception to what we see in Karnataka or for that matter Indian diaspora.

Anyone who has been to NRI events knows what takes place there - weekend parties, kitty parties, usual Bharatanatyam and Carnatic music with bored second generation enduring those torture sessions. NRIs of course think that by attending these events (and making bored teenagers sit through the boring concerts), they are keeping Kannada culture "alive".

Even though Kannadigas form a tiny portion of Bahrain's population, there are already so many associations along caste and community lines - Billavas Association, Bunts Association, Konkani Association, Gowdas Bahrain, Mangalore Catholics, Karnataka Muslims Association among others.

Today it is 1 Crore for Kannada Sangha. Tomorrow if some other association invites CM and presents tacky 10 Dinar souvenir and honours him, will he announced 1 Crore rupees to them as well?

Lastly, what mechanism does Karnataka govt have to monitor fund utilization outside the country? Even inside the country in front of citizens we know how govt funds are spent - that being the case how can one make sure this 1 Crore is not misused once it leaves India?

Monday, January 11, 2010

ವಿ.ಕ.ಭಟ್ಟರ ನಿಗೂಢ ನಡೆಗಳು - ಎರಡು ಸ್ಯಾಂಪಲ್

ಕಳೆದೆರಡು ವಾರದಿಂದ ನೋಡುತ್ತಿದ್ದೇನೆ. "ವಿಜಯ ಕರ್ನಾಟಕ"ದ ವಿಶ್ವೇಶ್ವರ ಭಟ್ಟರು ಓದುಗರ ಬುದ್ಧಿಮತ್ತೆಯನ್ನು ಸ್ವಲ್ಪ underestimate ಮಾಡಿದಂತಿದೆ. ಇಲ್ಲವಾದರೆ ಓದುಗರ ಕಿವಿ ಮೇಲೆ ಹೂವಿಡಲು ಯಾಕೆ ಯತ್ನಿಸುತ್ತಿದ್ದಾರೆ ಇವರು?

ಸ್ಯಾಂಪಲ್ ನಂ.೧: ವಿ.ಕೆ.ಮತ್ತು ರೇಣುಕಾ ನಡುವೆ ಡೀಲ್?

ಅತ್ತ ರೋಮಿಯೋ ರೇಣುಕಾಚಾರ್ಯ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಮೊದಲ ಪುಟದ ಸಂಪಾದಕೀಯದಲ್ಲೇ ಶೇಮ್ ಎಂದು ವಿಶ್ವೇಶ್ವರ ಭಟ್ಟರು ಷರಾ ಬರೆದರು. ಅದೂ ಸಾಲದಂತೆ ಸತತ ಎರಡು ಮೂರು ದಿನ ರೇಣುಕಾಚರ್ಯ ಬಗ್ಗೆ usual SMS ಮೆಸೇಜುಗಳನ್ನು ಸಂಗ್ರಹಿಸಿ (ಅಥವಾ "ಸೃಷ್ಟಿಸಿ") ಪೇಜುಗಟ್ಟಳೆ ಬರೆದರು. ಆದರೆ ನಾಲ್ಕನೇ ದಿನ ಇದ್ದಕ್ಕಿದ್ದಂತೆ ಇದೆಲ್ಲಾ ಬಂದ್ - ರೇಣುಕಾಚಾರ್ಯ ವಿರೋಧೀ ಕಮೆಂಟು ಬಿಡಿ, ರೇಣುಕಾಚಾರ್ಯರು ತಮ್ಮ ಇಲಾಖೆಗೆ ಸಂಬಂಧಿಸಿದ ಹೇಳಿಕೆಗಳನ್ನೇ prime ಜಾಗದಲ್ಲಿ position ಮಾಡಿ ಓದುಗರಿಗೆ ಅಚ್ಚರಿ ಮೂಡಿಸಿದರು.
ಎಲ್ಲವೂ ಉಲ್ಟಾ ಪಲ್ಟಾ! ದಿನಗಟ್ಟಳೆ ರೇಣುಕಾಚಾರ್ಯ ವಿರುದ್ಧ ಬರೆದು ಇದ್ದಕ್ಕಿದ್ದಂತೆ ರೇಣುಕಾಚಾರ್ಯರ ಹಳಸಿದ ಹೇಳಿಕೆಗಳಿಗೆ prime spot ಕೊಟ್ಟಿರುವುದರ ರಹಸ್ಯವೇನಿರಬಹುದು? ಇದೇ trend ಮುಂದುವರೆದಿದೆ. ಪ್ರತಿನಿತ್ಯವೆಂಬಂತೆ ರೇಣುಕಾಚಾರ್ಯ ಏನೋ ಹೇಳಿದ್ದನ್ನೇ ಪರಮಾನ್ನವೆಂದು ವಿ.ಕೆ.ಪ್ರಕಟಿಸುತ್ತಿದೆ. ಮುಖ್ಯಮಂತ್ರಿಯ ಬಳಿಕ ಮಂತ್ರಿಗಳಲ್ಲಿ ವಿ.ಕೆ.ಯಲ್ಲಿ ಪ್ರಾಯಷ: ರೇಣುಕಾಚಾರ್ಯರ ಹೇಳಿಕೆಗಳದ್ದೇ ಭರಾಟೆ. ಹೀಗೆ ಸಡನ್ನಾಗಿ ತನ್ನ position ಬದಲಿಸಲು ಕಾರಣವೇನಿರಬಹುದು? ವಿ.ಕೆ.ಮತ್ತು ರೇಣುಕಾಚಾರ್ಯ ನಡುವೆ ಡೀಲ್ ಕುದುರಿತೇ? ಹೀಗೆಂದು ಓದುಗರು ಭಾವಿಸಿದರೆ ತಪ್ಪೇನಿಲ್ಲ.

ಕರ್ನಾಟದ ಹಿರಿಯ ಪತ್ರಕರ್ತರಾದ ದು.ಗು.ಲಕ್ಷ್ಮಣರೂ ಇದನ್ನೇ ಕಳೆದ ವಾರ ಹೇಳಿದ್ದಾರೆ ("ರೇಣುಕಾಚಾರ್ಯ ಮಂತ್ರಿಯಾಗಿದ್ದು "ಶೇಮ್" ಎಂದು ಮುಖಪುಟದಲ್ಲಿ ಸಂಪಾದಕೀಯ ಬರೆದು ಅನಂತರ ಒಂದೆರಡು ದಿನ ಈ ಪ್ರಕರಣಕ್ಕೆ ಭರ್ಜರಿ ಪ್ರಚಾರ ನೀಡಿದ್ದ "ವಿ"ಖ್ಯಾತ ಪತ್ರಿಕೆಯೊಂದು ಆಮೇಲೆ ತಣ್ಣಗಾಗಿದೆ! ಈ ಮಧ್ಯೆ ಅದೇನು "ಡೀಲ್" ನಡೆಯಿತೋ ಗೊತ್ತಿಲ್ಲ!" - ಹೊಸದಿಗಂತ ಜನವರಿ ೪ ೨೦೧೦) ಮಾಧ್ಯಮ ಲೋಕದಲ್ಲಿ ನಡೆಯುತ್ತಿರುವ ಭೃಷ್ಟಾಚಾರದ ಬಗ್ಗೆ ಬರೆಯುತ್ತಾ ರೇಣುಕಾಚಾರ್ಯ ಪ್ರಕರಣದಲ್ಲಿ ವಿ.ಕೆ. ಡೀಲ್ ಮಾಡಿಕೊಂಡಿದೆಯೆಂದು ನೇರವಾಗಿ ಹೇಳಿದ್ದಾರೆ.

ಸ್ಯಾಂಪಲ್ ನಂ.೨: ಕೋಟ್ಯಾಧಿಪತಿ ಬಹರೇನಿನ ಅನಿವಾಸಿ ಭಾರತೀಯರಿಗೇಕೆ ಖಜಾನೆ ಖಾಲಿಯಾಗಿರುವ ಕರ್ನಾಟಕ ಸರಕಾರದ ಭಿಕ್ಷೆ?

ಜನವರಿ ಹತ್ತರ ಅಂಕಣದಲ್ಲಿ ಬಹರೇನ್ ಕನ್ನಡ ಸಂಘಕ್ಕೆ ಕರ್ನಾಟಕ ಸರಕಾರ ಒಂದು ಕೋಟಿ ಅನುದಾನ ಕೊಟ್ಟಿಲ್ಲವೆಂದು ಕೊರೆದಿದ್ದಾರೆ. ಅಲ್ಲಾ ಸ್ವಾಮಿ, ಇಡೀ ಉತ್ತರ ಕರ್ನಾಟಕ ನೆರೆಯಲ್ಲಿ ಕೊಚ್ಚಿ ಹೋಗಿದೆ, ಅತ್ತ ಸರಕಾರದ ಖಜಾನೆ ಖಾಲಿಯಾಗಿದೆ. ಹೀಗಿರುವಾಗ ಬಹರೇನ್ ಎಂಬ ಸಂಪತ್ಭರಿದ ದೇಶಕ್ಕೆ ಒಂದು ಕೋಟಿ ರೂಪಾಯಿಯನ್ನೇಕೆ ನಾವು ತೆರಿಗೆದಾರರು ಕೊಡಬೇಕು?
ನಾನೂ ಬಹರೇನ್ ಹೋಗಿದ್ದೇನೆ (ಎರಡು ವರುಷಗಳ ಹಿಂದೆ ಅಕ್ಕನ ಮನೆಗೆ). ಅಲ್ಲಿ ಕರ್ನಾಟಕ ಸಂಘ ಬಹಳ active ಇದೆ ಎಂಬುದು ಸತ್ಯ - ಆದರೆ ಪ್ರ‍ಾಯಷ ಎಲ್ಲಾ NRI ಗಳಂತೆ weekend ನಲ್ಲಿ ಮಾತ್ರ ಎಲ್ಲಾ activity. ಅಲ್ಲೂ ಈಗ ಹಿಂದೂ-ಮುಸ್ಲಿಂ-ಕ್ಯೆಥೋಲಿಕ್-ಕರಾವಳಿ ಕನ್ನಡಿಗರು-ಗೌಡರು-ಶೆಟ್ಟರು-ಬಿಲ್ಲವರು ಎಂದೆಲ್ಲಾ ಗುಂಪುಗಳಿವೆ. ಕೆಲ ಲಿಂಕುಗಳನ್ನು ನೋಡಿ ಮೊಗವೀರ ಬಹರೇನ್, ಬಿಲ್ಲವಾಸ್ ಬಹರೇನ್, ಬಂಟ್ಸ್ ಬಹರೇನ್, ಕೊಂಕಣ ಅಸೋಸಿಯೇಶನ್, ಮುಸ್ಲಿಂ ಅಸೋಸಿಯೇಶನ್. ಇವತ್ತು ಒಬ್ಬರಿಗೆ ಕೊಟ್ಟರೆ ನಾಳೆ ಇನ್ನೊಬ್ಬರು ಸನ್ಮಾನ ಮಾಡಿ ಒಂದು ಕೋಟಿಗೆ ಡಿಮಾಂಡ್ ಇಡುವುದಿಲ್ಲವಲ್ಲವೇ?

ಮರುಭೂಮಿಯಲ್ಲಿ tax free ಹಣ ಕಮಾಯಿಸಲು ಹೋಗಿರುವ ಈ ಅನಿವಾಸಿಗಳಿಗೆ time pass ಮಾಡಲು ಮಾಲುಗಳನ್ನು ಬಿಟ್ಟರೆ ಬೇರೇನೂ ಇಲ್ಲ. ಅದಕ್ಕೇ ಕರ್ನಾಟಕದಿಂದ ರಾಜಕಾರಣಿಗಳನ್ನು, ಕಲಾವಿದರನ್ನು ಕರೆಯಿಸಿ ಪ್ರತಿವಾರವೆಂಬಂತೆ ಕಾರ್ಯಕ್ರಮವಿಟ್ಟುಕೊಂಡಿರುತ್ತಾರೆ. ಇಂತಹ long distance ಕನ್ನಡಿಗರಿಂದ, picnic typeನ boredom busterಇಂದ ಕರ್ನಾಟಕದ ಉದ್ದಾರವಾಗುತ್ತದೆಯೆಂಬುದು ಭ್ರಮೆಯಷ್ಟೇ! ಇಂಗ್ಲಿಷ್ ಬೋರ‍್ಡಿಗೆ ಕಲ್ಲು ಹೊಡೆಯುವುದರಿಂದ ಕನ್ನಡ ಉಳಿಯುತ್ತದೆ ಎಂಬ ಕರ್ನಾಟಕ ರಕ್ಕಸ ವೇದಿಕೆಯ ಪಡ್ಡೆಗಳ ಭ್ರಮೆಯಂತೆ.

ಬಹರೇನ್ ಕನ್ನಡಿಗರು ಮನಸು ಮಾಡಿದರೆ ಒಂದು ಕೋಟಿಯನ್ನು ಒಂದು weekend party ಅಥವಾ kitty partyಯಲ್ಲೇ ಒಟ್ಟು ಮಾಡಬಹುದು. ಕನ್ನಡಿಗರಲ್ಲೇ ಬಹರೇನಿನಲ್ಲಿ ನೂರಾರು ಕೋಟ್ಯಾಧಿಪತಿಗಳಿದ್ದಾರೆ - ಹೀಗಿರುವಾಗ ತನ್ನನ್ನು ಕರೆದು ಸನ್ಮಾನಿಸಿದರು ಎಂದ ಮಾತ್ರಕ್ಕೆ ಅದರ ಋಣ ತೀರಿಸಲು ವಿಶ್ವೇಶ್ವರ ಭಟ್ಟರು ಕರ್ನಾಟಕ ಸರಕಾರವನ್ನು, ಮುಖ್ಯಮಂತ್ರಿಗಳನ್ನು, NRI Cellನ ಗಣೇಶ್ ಕಾರ್ಣಿಕರನ್ನು ಹೀಗೆಳೆದದ್ದು ಸರಿ ಕಾಣಲಿಲ್ಲ. ಕರ್ನಾಟಕದ ಎಷ್ಟೋ ಹಳ್ಳಿಗಳು ನೀರು ವಿದ್ಯುತ್ ಶಾಲೆಗಳಿಲ್ಲದೆ ಜನರು ಒದ್ದಾಡುತ್ತಿರುವಾಗ ಬಹರೇನಿನಂತಹ ಶ್ರೀಮಂತ ರಾಷ್ಟ್ರದ ಶ್ರೀಮಂತ ಕನ್ನಡಿಗರ weekend party ಗಳಿಗೆ ಬಡ ಬೋರೇ ಗೌಡನ ತೆರಿಗೆ ಕಳಿಸಬೇಕಾದ ಪ್ರಾರಬ್ಧವೇನಿದೆ?

ವಿ.ಭಟ್ಟರ ನಿಜವಾದ ಟಾರ್ಗೆಟಿಲ್ಲಿ ಗಣೇಶ್ ಕಾರ್ಣಿಕ್! ಕೆಲ ವಾರಗಳ ಹಿಂದೆ ಇದೇ ಗಣೇಶ್ ಕಾರ್ಣಿಕ್ ಮೇಲೆ ವಿ.ಕ. ಹಿಗ್ಗಾ ಮುಗ್ಗ ಬರೆದಿತ್ತು. ನನ್ನ ಮೂಲಗಳ ಪ್ರಕಾರ, ಭಟ್ಟರಿಗೆ ಯಡ್ಯೂರಪ್ಪನವರು ತಾನು ಹೇಳಿದ ಕ್ಯಾಂಡಿಡೇಟ್ ವಿ.ಕ. ಅಂಕಣಕಾರ ಅಮೆರಿಕದ ಶ್ರೀವತ್ಸ ಜೋಶಿಯನ್ನು NRI Cellನ coordinator ಮಾಡಿಲ್ಲವೆಂಬ ಆಕ್ರೋಶವಿದೆ. Wikipediaದಿಂದ ಲೇಖನಗಳನ್ನು ಭಟ್ಟಿ ಇಳಿಸಿದ್ದನ್ನೇ "ಪರಾಗ ಸ್ಪರ್ಶ"ವೆಂದು ಬಡಿಸುವ ಶ್ರೀವತ್ಸ ಜೋಶಿಯನ್ನು NRI Cell Coordinator ಮಾಡಬೇಕೆಂದು ಭಟ್ಟರು ಬಹಳ ಪ್ರಯತ್ನಿಸಿದ್ದರೆಂದು ಹೇಳಲಾಗಿದೆ.

ಚಿತ್ರದುರ್ಗದ ಎಂ.ಪಿ. ಅಭ್ಯರ್ಥಿಯಾಗಿ NRI ಜನಾರ್ಧನ ಸ್ವಾಮಿಯನ್ನು ಭಟ್ಟರು ಅದೇ ಅಂಕಣದಲ್ಲಿ ಜನಾರ್ಧನ ಸ್ವಾಮಿ ಅಮೆರಿಕ ಬಿಟ್ಟು ದೇಶ ಸೇವೆಗೆ ಬರುತ್ತಿದ್ದಾರೆ, ಆದರ್ಶವಾದಿ ಎಂದೆಲ್ಲಾ ಪ್ರಮೋಟ್ ಮಾಡಿದ್ದನ್ನು ನೆನೆಪಿಸಿಕೊಳ್ಳಬೇಕಾಗಿದೆ. ಈ NRI ಆಸಾಮಿ "ಆದರ್ಶವಾದಿ" ಜನಾರ್ಧನ ಸ್ವಾಮಿ, ಎಂ.ಪಿ.ಯಾದ ಕೂಡಲೇ ಮಾಡಿದ ಮೊದಲ ಕೆಲಸ ಮುಖ್ಯಮಂತ್ರಿಯ ಖೋಟಾದಡಿ BDA site sanction ಮಾಡಿಸಿಕೊಂಡದ್ದು. ಅಲ್ಲಾ ಈ NRI ಗಳು ಎಲ್ಲೆಲ್ಲೋ ಹೋಗಿ ಕೋಟಿಗಟ್ಟಳೆ ಕಮಾಯಿಸಿದರೂ ಭಾರತದ ಬಡ ಜನರ, ಭಾರತದ ತೆರಿಗೆದಾರರ ಜೀವ ಹಿಂಡಲು ಪುನ: ಮರಳಿ ಬಂದು ಯಾಕೆ ಒಕ್ಕರಿಸುತ್ತಾರೋ ನನಗೆ ಅರ್ಥವಾಗುತ್ತಿಲ್ಲ. ಏನೇ ಇರಲಿ ಕರ್ನಾಟಕದ ಜನತೆ ಈ NRIಗಳ ಬಗ್ಗೆ, NRIಗಳ ಸನ್ಮಾನ ಸ್ವೀಕರಿಸಿ ಅವರ ಪರ ವಾದಿಸುವ ಭಟ್ಟರಂಥವರಾ ಬಗ್ಗೆ ಜಾಗ್ರತೆಯಿಂದಿರಬೇಕಾಗಿದೆ.


ಏನೇ ಇರಲಿ ಕರ್ನಾಟಕದ ಜನತೆ ಈ NRIಗಳ ಬಗ್ಗೆ, NRIಗಳ ಸನ್ಮಾನ ಸ್ವೀಕರಿಸಿ ಅವರ ಪರ ವಾದಿಸುವ ಭಟ್ಟರಂಥವರಾ ಬಗ್ಗೆ ಜಾಗ್ರತೆಯಿಂದಿರಬೇಕಾಗಿದೆ.

Saturday, December 26, 2009

೨೧ನೇ ಶತಮಾನದಲ್ಲಿ ರಾಜ್ಯಪಾಲ, ರಾಷ್ಟ್ರಪತಿಗಳೆಂಬ ಉತ್ಸವ ಮೂರ್ತಿಗಳ ಪ್ರಸ್ತುತತೆ Relevancy of President and Governor posts in 21st Century

ಆಂಧ್ರಪ್ರದೇಶದ ರಾಜ್ಯಪಾಲ ಎನ್.ಡಿ.ತಿವಾರಿಯ ರಾಜಭವನದ ಕಾಮಕೇಳಿ ಪ್ರಸಂಗ ಮತ್ತೊಮ್ಮೆ ಈ ರಾಜ್ಯಪಾಲಗಿರಿಯೆಂಬ retirement home ನ ಪ್ರಸ್ತುತೆಯನ್ನು ಪ್ರಶ್ನಿಸುವಂತಾಗಿದೆ.

ರಾಜ್ಯಪಾಲರ ಬೆಡ್ ರೂಂ ಅವರ ವೈಯಕ್ತಿಕ ವ್ಯಾಪಾರ, ಟಿ.ವಿ.ಚಾನೆಲ್ ರೇಟಿಂಗಿಗೋಸ್ಕರ ಈ ಸ್ಟಂಟು ಮಾಡಿದೆ ಎಂದೆಲ್ಲಾ ಹೇಳುವವರು ಪ್ರಾಯಶ: ರಾಜಭವನಕ್ಕೆ ಹೋಗಿಲ್ಲ. ರಾಜಭವನಕ್ಕೆ ಹೋಗುವುದೆಂದರೆ ಜೋಕಲ್ಲ. ಜನಸಾಮಾನ್ಯರು ಬಿಡಿ, ರಾಜ್ಯಪಾಲರನ್ನು ಭೇಟಿಯಾಗಲು ಸ್ವತ: ಮುಖ್ಯಮಂತ್ರಿಯೇ appointment time ತೆಗೆದುಕೊಂಡು ಹೋಗಬೇಕಾಗುತ್ತದೆ. ಹೀಗಿರುವಾಗ ಕಾಲ್ ಗರ್ಲುಗಳು ರಾಜಭವನಕ್ಕೆ ಹೀಗೆ ಹೋಗಿ ಹಾಗೆ ಬರುತ್ತಾರೆಂದರೆ ಗಂಭೀರವಾದ ವಿಷಯ.

ಅಷ್ಟಕ್ಕೂ ಇಡೀ ಆಂಧ್ರವೇ ತೆಲಂಗಾಣದ ವಿಷಯದಲ್ಲಿ ಹೊತ್ತಿ ಉರಿಯುತ್ತಿರುವಾಗ ಎನ್.ಡಿ.ತಿವಾರಿ ಏನು ಮಾಡುತ್ತಿದ್ದಾರೆ? ನಮ್ಮ ಮಂಗಳೂರಿನ ಪಬ್ ಗಲಾಟೆಯನ್ನೊಮ್ಮೆ ನೆನಪು ಮಾಡಿಕೊಳ್ಳಿ - ಪಬ್ಬಿನ ಗಬ್ಬಿನ ಸಮಯದಲ್ಲಿ ಯಾರೋ ಕೆಲ ಅನೈತಿಕ ಚಟುವಟಿಕೆಯಲ್ಲಿ ನಿರತರಾದ ಹುಡುಗಿಯರ ಮೇಲೆ ಕೈ ಮಾಡಿದ ಮಾತ್ರಕ್ಕೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರುವ ಬೆದರಿಕೆಯನ್ನು ಕೇಂದ್ರ ಸರಕಾರ ಮಾಡಿತ್ತು. ಆದರೆ ಈಗ ಇಡೀ ಆಂಧ್ರ ಹೊತ್ತಿ ಉರಿದಿದೆ, ಎಷ್ಟೋ ಜನರು ಪ್ರಾಣ ಕಳೆದುಕೊಂಡಿದ್ದಾರೆ, ನೂರಾರು ಬಸ್ಸುಗಳು ಸಾರ್ವಜನಿಕ ಆಸ್ತಿ ಉರಿದು ಭಸ್ಮವಾಗಿವೆ, ಆಡಳಿತ ವಿರೋಧ ಪಕ್ಷಗಳೂ divide ಆಗಿ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗಿದೆ. ರಾಷ್ಟ್ರಪತಿ ಆಡಳಿತಕ್ಕೆ fit case ಇದ್ದರೆ ಅದು ಇಂದಿನ ಆಂಧ್ರಪ್ರದೇಶದ ದು:ಸ್ಥಿತಿ. ಆದರೆ ಇದನ್ನೆಲ್ಲಾ ರಾಷ್ಟ್ರ‍ಪತಿಗೆ "report" ಮಾಡುವ ರಾಜ್ಯಪಾಲ (೨೧ನೇ ಶತಮಾನದ ಲೈವ್ ಟಿ.ವಿ., ಇಂಟರನೆಟ್ಟು ಝಮಾನಾದಲ್ಲೂ ರಾಜ್ಯಪಾಲರು ರಿಪೋರ‍್ಟನ್ನು ಪೋಸ್ಟ್, FAX ಮಾಡುವುದು ಹಾಸ್ಯಾಸ್ಪದ) ಬೆಡ್ ರೂಂಮಿನಲ್ಲಿ ಬ್ಯುಸಿಯಾಗಿದ್ದಾರೆ.
&&
ಇನ್ನು ನಮ್ಮ ಕರ್ನಾಟಕದ ರಾಜ್ಯಪಾಲ ಹಂಸರಾಜ ಭಾರಾಧ್ವಾಜ್ ಎಂಬ ಜೋಕರ್ ಬಗ್ಗೆ ಬರೆಯದಿರುವುದೇ ಲೇಸೇನೋ. ಕೇಂದ್ರದಲ್ಲಿ ಈ ಬಾರಿ ಮಂತ್ರಿ ಹುದ್ದೆ ಸಿಗದೆ ಕರ್ನಾಟಕದ ರಾಜ್ಯಪಾಲನೆಂಬ ಗಂಜಿ ಕೇಂದ್ರಕ್ಕೆ ಒಕ್ಕರಿಸಿರುವ ಇವರು ಇನ್ನೂ ಪಕ್ಕಾ active politician ನಂತೆ ಹೇಳಿಕೆ ಕೊಡುವುದರಲ್ಲೇ ಬ್ಯುಸಿಯಾಗಿದ್ದಾರೆ. ರಾಜ್ಯ ಕಾಂಗ್ರೆಸ್ ಮುಖಂಡರುಗಳಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ರಾಜ್ಯ ಸರಕಾರದ ಬಗ್ಗೆ ಆರೋಪ ಮಾಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ.

ಇತ್ತೀಚೆಗೆ ಮಾನವ ಹಕ್ಕು ದಿನದ ಸಂದರ್ಭದಲ್ಲಿ ಈ ಹಂಸರಾಜ್ ಭಾರಧ್ವಾಜ್ ಮಾನವ ಹಕ್ಕುಗಳ ಬಗ್ಗೆ ಭಾಷಣ ಮಾಡಿದ್ದನ್ನು ಪತ್ರಿಕೆಗಳಲ್ಲಿ ಓದಿ ನಗು ಬಂತು. ಇಂದಿರಾ ಗಾಂಧಿ ಪ್ರಜಾಪ್ರಭುತ್ವವನ್ನು ಕೊಲೆ ಮಾಡಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಇಂದಿರಾ ಗಾಂಧಿ ಮತ್ತು ಸಂಜಯ ಗಾಂಧಿ ಮಾನವ ಹಕ್ಕು, ಮಾಧ್ಯಮ ಸ್ವಾತಂತ್ರ್ಯವನ್ನು ಕೊಲೆ ಮಾಡಿದಾಗ ಅವರ ಬೆನ್ನ ಹಿಂದಿನ legal brain ಮತ್ತಾರೂ ಅಲ್ಲ, ಇದೇ ಭಾರಧ್ವಾಜ್! ಇಂತಹ ಭಾರಧ್ವಾಜನ್ನು ಮಾನವ ಹಕ್ಕು ದಿನಾಚರಣೆಗೆ ಇನ್ನೊಂದು ಗಂಜಿ ಕೇಂದ್ರದ ನಿವೃತ್ತ ನ್ಯಾಯಮೂರ್ತಿ ಎಚ್.ಆರ್.ನಾಯಕ್ ಯಾವ ಆಧಾರದ ಮೇಲೆ ಮುಖ್ಯ ಅತಿಥಿಯಾಗಿ ಕರೆದರೋ!
&&
ಸೋನಿಯಾ ಅಡಿಯಾಳಾಗಿ ರಾಷ್ಟ್ರ‍ಪತಿ ಸ್ಥಾನವೇರಿದ ಪ್ರತಿಭಾ ಪಾಟೀಲ್ Guinness Records ಹುಚ್ಚಿಗೆ ಬಿದ್ದಂತಿದೆ. ರಾಷ್ಟ್ರದ ಪ್ರಮುಖ ರಾಜ್ಯವಾದ ಆಂಧ್ರ ಪ್ರದೇಶ ಹೊತ್ತಿ ಉರಿಯುತ್ತಿದ್ದರೂ ಈಯಮ್ಮ ಯುದ್ಧ ವಿಮಾನಗಳಲ್ಲಿ, ನೌಕೆಗಳಲ್ಲಿ ಫೋಟೋ session ನಲ್ಲಿ ಬ್ಯುಸಿ. ಅಫ್ಜಲ್ ಗುರು ಮತ್ತು ಇತರ ಪಾತಕಿಗಳ ಮರಣದಂಡನೆಗಳ ಆದೇಶಗಳ ಮೇಲೆ ಕೂತಿರುವ ಪ್ರತಿಭಾ ಪಾಟೀಲ್ ದೇಶ ದ್ರೋಹಿಗಳ ವಿರುದ್ಧ ಯಾವುದೇ action ತೆಗೆದುಕೊಳ್ಳದೆ ಯುದ್ಧ ನೌಕೆಗಳ ಮೇಲಿ ನಿಂತು ಪೋಸ್ ಕೊಟ್ಟರೆ ಉಪಯೋಗವೇನು? ಅದು ಸಾಲದಂತೆ Christmas ರಜೆಗೆ ಲಕ್ಷದ್ವೀಪಕ್ಕೆ ತನ್ನ ಸಂಸಾರದೊಂದಿಗೆ ಸಾಗಿದ ಪ್ರತಿಭಾ ಪಾಟೀಲ್ ಮಂಗಳೂರಿನಲ್ಲಿ ಯಕ:ಶ್ಚಿತ್ ವಿಮಾನ ಬದಲಾವಣೆಗೋಸ್ಕರ ೫ ನಿಮಿಷದ ಭೇಟಿಗೆ ಇಡೀ ಜಿಲ್ಲಾಡಳಿತವೇ ಒಂದು ವಾರದಿಂದ ಸ್ಥಭ್ದವಾಗಿತ್ತು ಎಂದು ಮಂಗಳೂರಿನ ಮಾಧ್ಯಮಗಳು ವರದಿ ಮಾಡಿವೆ.

ಬ್ರಿಟಿಷರೇನೋ ಭಾರತೀಯರನ್ನು ಅಡಿಗೆ ಹಾಕಲು ಪ್ರೊಟೋಕಾಲ್ ಎಂಬ ಗುಮ್ಮ ಉಪಯೋಗಿಸುತ್ತಿದ್ದರು. ಆದರೆ ೨೧ನೇ ಶತಮಾನದಲ್ಲಿ ಕೇವಲ protocol ಹೆಸರಲ್ಲಿ ರಾಜ್ಯಪಾಲರು, ರಾಷ್ಟ್ರಪತಿಗಳು ಮಾಡುವ ದುಂದುವೆಚ್ಚವನ್ನು ನೋಡಿ ನಾವೇಕೆ ಸುಮ್ಮನಿರಬೇಕು? ಅಂಬೇಡ್ಕರ್ ಎಂಬ ಬ್ರ‍ಿಟಿಷ್ ಗುಲಾಮ ಬ್ರ‍ಿಟನಿನ ಸಂವಿಧಾನ copy ಮಾಡಿದರಿಂದ ಇಂತಹ ರಾಜ್ಯಪಾಲ, ರಾಷ್ಟ್ರಪತಿಯೆಂಬ ಉತ್ಸವ ಮೂರ್ತಿಗಳು ನಮ್ಮ ಮೇಲೆ ಸವಾರಿ ಮಾಡುತ್ತಿದ್ದಾರೆ. ಇಂದು ಹಳ್ಳಿ ಹಳ್ಳಿಯಲ್ಲೂ ನಾವು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತೇವೆ. ಗ್ರಾಮ ಪಂಚಾಯತ್ ಮತ್ತಿತರ ಸ್ಥಳೀಯ ಸಂಸ್ಥೆಗಳು ಬಲಿಷ್ಟವಾಗುತ್ತಿವೆ. ಹೀಗಿರುವಾಗ ಪ್ರಜಾಪ್ರಭುತ್ವದ ಆಶಯಕ್ಕೆ ಮಾರಕವಾಗಿರುವ ರಾಷ್ಟ್ರಪತಿ, ರಾಜ್ಯಪಾಲ ಹುದ್ದೆಗಳನ್ನು ಕಿತ್ತೊಸೆಯುವ ಸಮಯ ಬಂದಿದೆಯೆನಿಸುತ್ತದೆ.
&&

Relevancy of Governor and President posts in 21st century:

A.P.Governor N.D.Tiwari is knee deep in sleaze scandal where he is accused of using call girls in Raj Bhavan. Those who say "It is his own private business dammit" have perhaps not visited Raj Bhavan or Governor. Even Chief Minister of the state has to go through ADC of Governor and seek appointment. So it is indeed serious that call girls can go in and out of Raj Bhavan without any problem if news coming of Hyderabad is indeed true.

Keeping aside the sleaze case, one has to ask what exactly is Governor of Andhra Pradesh is doing when whole state is in the brink of anarchy due to Telangana issue. Government properties are being destryoed, state transport has virtually shutdown for weeks, ruling parties and opposition parties are split so much no one knows who is still MLA or not due to all the resignation drama.

One is reminded of threat of President's Rule in Karnataka during "pub issue" when few girls involved in immoral acts were trashed and it became a national issue. What is Central Govt doing now when whole AP is on the brink of anarchy and scores have died due to violence? If there was ever a valid President's Rule candidate, then that is current day Andhra Pradesh.Why are there no talks of President's Rule? Or is President still waiting for "report" or FAX from State Governor who apparently is busy in his bedroom?

Speaking of Governors, it is unfortunate that Karnataka also has not been spared of joker of a Governor in Mr. Hansraj Bhardwaj. H.R.Bhardwaj who was denied cabinet birth in Central this time was sent packing to Karnataka as Governor. Mr.Bharadwaj seems to have forgotten that Governor post is apolitical. Some of his statements embrassing state government even beats opposition Congress leaders blame on ruling party.

I was amused when I read news item of H.R.Bharadwaj speaking eloquently about Human Rights during World Human Rights Day. For those who are not aware of Bharadwaj, he was the "legal brain" behind Indira Gandhi and was instrumental in (mis)guiding her and allowing imposition of Emergency which effectively halted world's largest democracy for couple of years with untold human rights viloations of millions. Now same Bharadwaj is speaking about Human Rights - isn't it ironic?

Speaking of irony, our President Prathibha Patil seems to be obsessed with breaking Guinness Records (on tax payers money). What is ironic is Mrs.Patil posing with fighter jets or naval ship when same Patil is sitting pretty on hanging Afjal and other anti-nationals. What is the point in posing with war machines when she can't even act on obvious anti-nationals?

Coastal media have reported how lakhs of rupees were spent on 5 minute visit of Prathibha Patil to change planes in Mangalore on her way to Lakshadweep for private vacation. Whole district administration of Dakshina Kannada was on a stand still for at least a week preparing for this 5 minutes event and normal flight operations were disrupted in Mangalore airport for four hours due to Patil's visit.

Ambedkar, who was perhaps inspired by British Constitution or monarchy included ceremonial heads like President and Governor's in our constitution. But haven't we taken all these protocol bullshit too seriously? What is the point in all these protocols when a governor is romping with call girls in Raj Bhavan? It's time to get rid of these ceremonial retirement institutions called President and Governors.

Wednesday, December 9, 2009

ನಿವೃತ್ತ ನ್ಯಾಯಾಧೀಶರೆಂಬ ಬಿಳಿಯಾನೆಗಳು - ಅಧಿಕಾರಕ್ಕಾಗಿ ಆಯೋಗ ಅಧ್ಯಕ್ಷತೆ, ಲೋಕಾಯುಕ್ತ, ಸರಕಾರಿ ಹುದ್ದೆಗಳಿಗೆ ಜೋತು ಬೀಳುವ ನಿತ್ಯ ಸುಮಂಗಲಿಯರು!

ರಾಜಕಾರಣಿಗಳು, ಪತ್ರಕರ್ತರ ಬಗ್ಗೆ ಈ ಬ್ಲಾಗಿನಲ್ಲಿ ಬಹಳಷ್ಟು ಬರೆದಿದ್ದೇನೆ. ಬಹಳ ಸಮಯದಿಂದ ನಮ್ಮ ಪ್ರಜಾಪ್ರಭ್ಹುತ್ವದ ಇನ್ನೊಂದು ಅಂಗವಾದ ನ್ಯಾಯಾಂಗದ ಬಗ್ಗೆ ಬರೆಯಬೇಕೆಂದಿದ್ದೆ.

ಇಂದಿನ (Dec.9) "ವಿಜಯ ಕರ್ನಾಟಕ"ದಲ್ಲಿ ವಿನಾಯಕ ಭಟ್ಟರು ಬರೆದ "ತನಿಖಾ ಆಯೋಗ:ನಿವೃತ್ತರಿಗೆ ಸುಯೋಗ"ದಲ್ಲಿ ನಾನು ಇತ್ತೀಚೆಗೆ ಏನು ಯೋಚಿಸುತ್ತಿದ್ದೇಯೋ ಅದರ ಬಗ್ಗೆಯೇ ಬಹಳ ಚೆನ್ನಾಗಿ ಬರೆದಿದ್ದಾರೆ.

ಲಿಬಾರಾನ್ ಆಯೋಗ ಬಾಬರಿ ಮಸೀದಿ ಧ್ವಂಸ ಕುರಿತು ೧೭ ವರ್ಷಗಳಷ್ಟು ಸುಧೀರ್ಘ ವಿವಾರಣೆಯೆಂಬ ನಾಟಕ ನಟಿಸಿ ಕಡಿದು ಹಾಕಿದ್ದೇನೆಂದು ಇಡೀ ದೇಶ ಕೇಳುತ್ತಿದೆ.

ಪ್ರಾಯಶ: ದೆಹಲಿಯಲ್ಲಿ, ರಾಜ್ಯ ರಾಜಧಾನಿಗಳಲ್ಲಿ ನಮ್ಮ ರಾಜಕಾರಣಿಗಳನ್ನೂ ಮೀರಿಸುವಷ್ಟು ಕೊಬ್ಬಿ ಬೆಳೆದಿರುವವರೆಂದರೆ ಸುಪ್ರೀಂ ಮತ್ತು ಹೈಕೋರ‍್ಟ್ ನ್ಯಾಯಾಧೀಶರು. ನಾನು ಉಡುಪಿಯ ಪಿ.ಪಿ.ಸಿ.ಯಲ್ಲಿ ಓದುತ್ತಿದ್ದಾಗ ಕೃಷ್ಣನ ದರ್ಶನ ಮಾಡಲು ಬರುತ್ತಿದ್ದ ಈ ನ್ಯಾಯಾಧೀಶರ ಧೂಂಧಾಂ ಭೇಟಿ ಯಾವುದೇ ರಾಜಕೀಯ ಪುಢಾರಿಯ ಮೆರವಣಿಗೆಗಿಂತ ಕಮ್ಮಿಯಿರಲಿಲ್ಲ. ೩-೪ (ಸರಕಾರಿ ಗೂಟದ) ಕಾರುಗಳು, ಎದುರು ಹಿಂದೆ ಪೊಲೀಸ್ ಜೀಪುಗಳ ಮೆರವಣಿಗೆ ಕಣ್ಣು ಬಾಯಿ ಬಿಟ್ಟು ನೋಡುತ್ತಿದ್ದ ನಾವು ಯಾರೋ ದೊಡ್ಡ ಮಂತ್ರಿಗಳು ಬಂದಿದ್ದಾರೆಯೇ ಎಂದು ಮಠದ ಮಾಣಿಗಳನ್ನು ಕೇಳಿದರೆ "ಇಲ್ಲ ಮಾರಾಯ, ಯಾರೋ ಆಂಧ್ರದ, ಸಿಕ್ಕಿಂನ ಹೈಕೋರ‍್ಟ್ ಜಡ್ಜ್" ಅಂತೆಯೋ ಇಲ್ಲಾ ನಿವೃತ್ತ ಸುಪ್ರೀಂ ಕೋರ್ಟ್ ಜಡ್ಜಂತೆಯೆಂದು ಮಾಣಿಗಳು ಉತ್ತರಿಸುತ್ತಿದ್ದರು.

ಒಮ್ಮೊಮ್ಮೆ ನ್ಯಾಯಾಧೀಶರುಗಳು ಸರಕಾರದ ವಿರುದ್ಧ, ಮಂತ್ರಿಗಳ ವಿರುದ್ಧ ಬಾಯಿಗೆ ಬಂದಂತೆ ಬಯ್ಯುವುದುಂಟು - ಅದನ್ನು ನಮ್ಮ ಮಾಧ್ಯಮ ಮಿತ್ರರೂ ಯಥಾವತ್ತಾಗಿ ಹೆಡ್ ಲೈನ್ ಹಾಕುವುದೂ ಉಂಟು (ಇತ್ತೀಚೆಗಿನ ಉದಾಹರಣೆ ವಿಶ್ವೇಶ್ವರ ಹೆಗಡೆಯವರು ಭಾಷಾ ನೀತಿಯ ಬಗ್ಗೆ ಉಗುಳಿಸಿಕೊಂಡದ್ದು). ಈಗ ಭ್ರಷ್ಟಾಚಾರದ ಅರೋಪ ಹೊತ್ತಿರುವ ದಿನಕರನ್ ಕೂಡಾ ಕರ್ನಾಟಕಕ್ಕೆ ಬಂದ ಶುರುವಿನಲ್ಲಿ ಮಾಡಿದ್ದು ಅದನ್ನೇ - ಅದೇನೋ ಇಂಗ್ಲಿಷಿನಲ್ಲಿ "playing for the gallery" ಅಂಥಾರಲ್ಲಾ ಹಾಗೆ. ಅಂದ ಹಾಗೆ ದೂರದ ತಮಿಳುನಾಡಿನ ಮಾಧ್ಯಮ ಮಿತ್ರರು ದಿನಕರನ್ ಆಸ್ತಿ ಬಗ್ಗೆ research ಮಾಡಿದಷ್ಟೂ ಕನ್ನಡದ ಮಾಧ್ಯಮ ಹೀರೋಗಳು ಯಾಕೆ ಮಾಡಿಲ್ಲ? ದಿನಕರನ್ ಕೆಲ ಸೆಕೆಂಡುಗಳ ವಿಚಾರಣೆಯಲ್ಲಿ ಗಣಿಗಳಿಗೆ ಬೇಕಾಬಿಟ್ಟೀ ಪರವಾನಿಗೆ, ಕೊಲೆಗಡುಕರ ಬಿಡುಗಡೆ ಮಾಡಿ ತೀರ್ಪು ಕೊಡುತ್ತಿದ್ದಾಗ ಕನ್ನಡದ ಮಾಧ್ಯಮ ಮಿತ್ರರಿಗೆ corruption ವಾಸನೆ ಯಾಕೆ ಹೊಡೆಯಲಿಲ್ಲ?

ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆಯಷ್ಟು ಗಬ್ಬೆಟ್ಟು ಹೋದ ನ್ಯಾಯಾಂಗ ವ್ಯವಸ್ಥೆ ಬೇರೆ ಯಾವ ದೇಶದಲ್ಲೂ ಇರಲಿಕ್ಕಿಲ್ಲ. ನಮ್ಮ ನ್ಯಾಯಾಧೀಶರು ಎಷ್ಟು ಕೊಬ್ಬಿ ಹೋಗಿದ್ದಾರೆ ಎಂಬುದನ್ನು ತಿಳಿಯಲು ಬೆಂಗಳೂರಿನಲ್ಲಿ ಮಂತ್ರಿಗಳ ಮನೆಗಳನ್ನೂ ನಾಚಿಸುವಂತ್ತಿರುವ ನ್ಯಾಯಾಧೀಶರ official ಬಂಗ್ಲೆಗಳನ್ನು ನೋಡಿ. ಯಡ್ಯೂರಪ್ಪನವರ ಬೆಡ್ ರೂಮಿನ ಬಗ್ಗೆ ಯಾರೋ ಪುಣ್ಯಾತ್ಮ RTI ಹಾಕಿ ವಿವರ ಪಡೆದುಕೊಂಡ - ಆದರೆ ಅದೇ ಕರ್ನಾಟಕ ಹೈಕೋರ್ಟ್ ಜಡ್ಜುಗಳ ಅರಮನೆಯಂತಹ ಸರಕಾರಿ ಬಂಗ್ಲೆಗಳ ಖರ್ಚಿನ ಬಗ್ಗೆ RTI ಹಾಕಲೂ ಅವಕಾಶವಿಲ್ಲದಂತೆ ಈ ನ್ಯಾಯಾಧೀಶರುಗಳು ನೋಡಿಕೊಂಡಿದ್ದಾರೆ - ನ್ಯಾಯಾಧೀಶರುಗಳ ಆಸ್ತಿ ಪಾಸ್ತಿ ವಿವರಣೆ ನೀಡಲು ಇದೇ ಬಿಳಿಯಾನೆಗಳು ಬಯಸುತ್ತಿಲ್ಲ.

ಸರಕಾರೀ ಬಂಗಲೆ, ಆಳು ಕಾಳು, ಹೆಂಡತಿ ಮಕ್ಕಳಿಗೊಂದು ಸರಕಾರೀ ಕಾರು ಬಳಸಿ ಐಷಾರಾಮಿ ಜೀವನ ನಡೆಸುವ ನ್ಯಾಯಾಧೀಶರೆಂಬ ಬಿಳಿಯಾನೆಗಳ ಕೆಲಸದ ಶೈಲಿ ನಮ್ಮ ಕೋರ್ಟುಗಳಲ್ಲಿ ರಾಶಿ ಬಿದ್ದಿರುವ ಕೇಸುಗಳನ್ನು ನೋಡಿದರೆ ಗೊತ್ತಾಗುತ್ತದೆ. ರಾಜಕಾರಣಿಗಳಾದರೋ ಪ್ರತಿ ಐದು ವರ್ಷಕ್ಕೊಮ್ಮೆ ಊರೂರು ತಿರುಗಾಡಿ ಇಲೆಕ್ಷನ್ ಎಂಬ ಪರೀಕ್ಷೆ ಪಾಸಾಗಬೇಕು. ಆದರೆ ಒಮ್ಮೆ ನ್ಯಾಯಾಧೀಶರಾದರೆ ಸಾಕು, ನಿವೃತ್ತಿ ತನಕವೂ ಸರಕಾರೀ ಖರ್ಚಿನಲ್ಲಿ ಮಜಾ ಉಡಾಯಿಸಬಹುದು.

ರಾಜಕಾರಣಿಗಳಾದರೆ ಐದು ವರ್ಷಕ್ಕೊಮ್ಮೆ ಮತದಾರ ಪ್ರಭುವಿಗೆ ಉತ್ತರ ಕೊಡಬೇಕು, ಆದರೆ ನ್ಯಾಯಾಧೀಶರೆಂಬ ಬಿಳಿಯಾನೆಗಳಿಗೆ accountability ಯೇ ಇಲ್ಲ! Stay order issue ಮಾಡುವುದು, ಕೇಸುಗಳನ್ನು ವಿನಾಕಾರಣ adjourn ಮಾಡಿ ಗೋಲ್ಫ್ ಕೋರ್ಸಿನಲ್ಲಿ ಕಾಲಕಳೆಯುವುದನ್ನೇ ತಮ್ಮ ಕೆಲಸವೆಂದು ಈ ಬಿಳಿಯಾನೆಗಳು ತಿಳಿದಂತಿದೆ.


ನಿವೃತ್ತಿಯ ನಂತರ


ಇನ್ನು ನಿವೃತ್ತಿಯ ನಂತರ ಈ ನ್ಯಾಯಾಧೀಶರೆಂಬ ಬಿಳಿಯಾನೆಗಳು ತಮ್ಮ ಮುಂಚಿನ ಗತ್ತು ವೈಭವ ಉಳಿಸಿಕೊಳ್ಳಲು ಯಾವುದಾದರೂ ಸರಕಾರೀ ಹುದ್ದೆ ಪಡೆಯಲು ಮಾಡುವ ಸರ್ಕಸ್ ಯಾವುದೇ ರಾಜಕೀಯ ಪುಢಾರಿಯನ್ನೂ ನಾಚಿಸುವಂತ್ತಿರುತ್ತದೆ. ಮರಿ ಪುಢಾರಿಗಳು ನಿಗಮ ಮಂಡಳಿಯೆಂದೆಲ್ಲಾ ಓಡಾಡಿದರೆ ಈ ನಿವೃತ್ತ ನ್ಯಾಯಾಧೀಶರುಗಳು "ನ್ಯಾಯಾಂಗ ಆಯೋಗ", "ವಿಚಾರಣಾ ಆಯೋಗ", "ಲೋಕಾಯುಕ್ತ", "ಮಾನವ ಹಕ್ಕುಗಳ ಆಯೋಗ"ಗಳೆಂಬ ಗಂಜೀ ಕೇಂದ್ರಗಳಲ್ಲಿ ಆಶ್ರಯ ಪಡೆಯಲು ಅಧಿಕಾರಸ್ಥ ರಾಜಕಾರಣಿಗಳ ಮುಂದೆ ಮಾನ ಮರ್ಯಾದೆ ಎಲ್ಲವನ್ನೂ ಬದಿಗಿಟ್ಟು ಸಾಲಲ್ಲಿ ನಿಂತಿರುತ್ತಾರೆ.

ಕರ್ನಾಟಕದಲ್ಲಿ ಇತ್ತೀಚೆಗಿನ "ನಿವೃತ್ತ ನ್ಯಾಯಾಧೀಶರ ಆಯೋಗ"ವೆಂಬ ಮುಗಿಯದ ನಾಟಕ ಪ್ರಹಸನವನ್ನೇ ನೋಡಿ. ಹಾವೇರಿ ಗೋಲೀಬಾರ್ ತನಿಖೆ ಮಾಡುತ್ತಿರುವ ಜಗನ್ನಾಥ ಶೆಟ್ಟಿ, ಕರಾವಳಿಯ ಚರ್ಚ್ ಧಾಳಿ ತನಿಖೆ ಮಾಡುತ್ತಿರುವ ಬಿ.ಕೆ.ಸೋಮಶೇಖರ ವರ್ಷ ಕಳೆದರೂ ಕೋಟಿಗಟ್ಟಳೆ ಖರ್ಚು ಮಾಡಿದರೂ ಇನ್ನೂ ತಮ್ಮ ವರದಿ ಸಲ್ಲಿಸಿಲ್ಲ. ಇಂದಿನ 24x7 ಮಾಧ್ಯಮಗಳ ಕಾಲದಲ್ಲಿ ಹಾವೇರಿ ಮತ್ತು ಮಂಗಳೂರು ಚರ್ಚ್ ಧಾಳಿಗಳೆರಡನ್ನೂ ಟಿ.ವಿ.ಮಾಧ್ಯಮಗಳು visuals ಪ್ರಸಾರ ಮಾಡಿವೆ - ಇವೆರಡೂ ಒಂಥರಾ open and shut caseಗಳು. ಹಾವೇರಿ ಘಟನೆಯಲ್ಲಿ ರೈತರ ಹೆಸರಲ್ಲಿ ಯಾರು ಗಲಾಟೆ ಮಾಡಿದರು, ಯಾರು ಪೊಲೀಸ್ ವ್ಯಾನಿಗೆ ಬೆಂಕಿ ಹಚ್ಚಲು ಹೋದರು, ಕಲ್ಲು ಹೊಡೆಯುತ್ತಿದ್ದ "ರೈತ"ರ ಅಸಲುತನ ಎಲ್ಲಾ ಟಿವಿಯಲ್ಲಿ ಬಂದಿದೆ. ಆದರೂ ಈ ಬಿಳಿಯಾನೆಗಳು ವಿಚಾರಣೆಯ ನೆಪದಲ್ಲಿ ರಾಜ್ಯವಿಡೀ ಸರಕಾರಿ ಖರ್ಚಿನಲ್ಲಿ ಹೆಂಡತಿ ಮಕ್ಕಳೊಂದಿಗೆ ಸರಕಾರೀ ಖರ್ಚಿನಲ್ಲಿ ಗೂಟದ ಕಾರುಗಳಲ್ಲಿ ತಿರುಗುತ್ತಿದ್ದಾರೆ.
ಇನ್ನು ಲೋಕಾಯುಕ್ತ ಹುದ್ದೆ ಅಲಂಕರಿಸಿರುವ ಸಂತೋಷ್ ಹೆಗ್ಡೆಯವರ ಬಗ್ಗೆ ಬರೆಯದಿರುವುದೇ ವಾಸಿಯೇನೋ. ಹೈಕೋರ್ಟ್ ಜಡ್ಜಾಗಿ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಸೇವೆ ಸಲ್ಲಿಸಿದರೂ ನ್ಯಾಯಾಧೀಶರಾಗಿ ಹೇಳಿಕೊಳ್ಳುವಂತಹ achievement ಇಲ್ಲ ಹೆಗ್ಡೆಯವರದ್ದು. ನಿವೃತ್ತಿ ನಂತರ ಕರ್ನಾಟಕಕ್ಕೆ ಹಿಂತಿರುಗಿದ ಹೆಗ್ಡೆಯವರಿಗೆ ಲೋಕಾಯುಕ್ತ ಹುದ್ದೆ ಅವರ ತಂದೆ ಕೆ.ಎಸ್.ಹೆಗ್ಡೆಯವರು ಬಿಜೆಪಿ ಧುರೀಣರಾಗಿದ್ದರೆಂಬ ಕಾರಣಕ್ಕೆ ದಕ್ಕಿತು.

ಲೋಕಾಯುಕ್ತರಾಗಿ ಪ್ರತಿ ನಿತ್ಯವೆಂಬಂತೆ ಪತ್ರಿಕಾ ಹೇಳಿಕೆ ಕೊಡುವುದು, ತಾನು ಬಿಜೆಪಿಯ ದಾಕ್ಷಿಣ್ಯಕ್ಕೆ ಬಿದ್ದಿಲ್ಲವೆಂದು ತೋರಿಸಲು ದಿನಬೆಳಗಾದರೆ ರಾಜ್ಯ ಸರಕಾರವನ್ನು ದೂರುವುದು, ಲೋಕಾಯುಕ್ತಕ್ಕೆ ಸರಕಾರ ಸಿಬ್ಬಂದಿ ಕೊಡುತ್ತಿಲ್ಲವೆಂದೋ, ಲೋಕಾಯುಕ್ತಕ್ಕೆ ಸರಕಾರ power ಕೊಡುತ್ತಿಲ್ಲವೆಂದು ಇದ್ದ ಬಿದ್ದ ಸಭೆ ಸಮಾರಂಭಗಳಲ್ಲಿ, ಪತ್ರಿಕಾಗೋಷ್ಠಿಗಳಲ್ಲಿ ಹೇಳಿಕೆ ಕೊಡುವುದನ್ನೇ ಲೋಕಾಯುಕ್ತರ ಕೆಲಸವೆಂದು ಹೆಗ್ಡೆಯವರು ತಿಳಿದಂತಿದೆ. ಇಂತಹ ಪ್ರಭಾವಿ ಹುದ್ದೆಯನ್ನು ನಿವಾರಿಸಲು ಆಗದಿದ್ದರೆ ಬೇರೆ ಯಾವುದೇ ಸೀದಾಸಾದಾ ಜನರು ಯಾವಾಗಲೋ ಒಂದೋ ರಾಜೀನಾಮೆ ಬಿಸಾಕಿ ಹೋಗುತ್ತಿದ್ದರು ಅಥವಾ ಹುದ್ದೆಯಲ್ಲಿದ್ದೇ ಸಾಧ್ಯವಾದಷ್ಟು ಬದಲಾವಣೆ ತರುತ್ತಿದ್ದರು. ಟಿ.ಎನ್.ಶೇಷನ್ ಎಂಬಾ ಮಹಾಪುರುಷ ಒಂದು ಕಾಲದಲ್ಲಿ ಚುನಾವಣಾ ಆಯೋಗವೆಂಬ ಅಕ್ಷರಷ: ಹಲ್ಲಿಲ್ಲದ ಶಿಖಂಡೀ ಆಯೋಗವನ್ನು ಯಾವುದೇ additional power ಯಾ ಕಾನೂನು ಯಾ legislative ಬದಲಾವಣೆಯಿಲ್ಲದೇ ಹೇಗೆ ಸಂಪೂರ್ಣವಾಗಿ ಬದಲಿಸಿದರು ಎಂಬುದನ್ನು ಒಮ್ಮೆ ನೆನಪಿಸಿಕೊಳ್ಳಿ.

ಸಂತೋಷ್ ಹೆಗ್ಡೆಯವರಿಗೆ ಮನಸ್ಸಿದ್ದರೆ ಈಗಿನ ಲೋಕಾಯುಕ್ತ ಚೌಕ್ಕಟ್ಟಿನಲ್ಲೇ ಬದಲಾವಣೆ ಮಾಡಬಹುದು ಇಲ್ಲಾ ರಾಜೀನಾಮೆ ಬಿಸಾಕಿ ಹೋಗಬಹುದು - ಆದರೆ ದಶಕಗಳಷ್ಟು ಕಾಲ ನ್ಯಾಯಾಧೀಶರಾಗಿ ಸಕಲ ಸರಕಾರೀ ಸೌಲಭ್ಯಗಳನ್ನು ಉಪಯೋಗಿಸಿರುವ ಹೆಗ್ಡೆಯವರು typical Indian judge ನಂತೆ status quo ನಲ್ಲೇ forever ಇರಲು ಬಯಸಿದಂತಿದೆ. ತಾನು ಜೀವವಿದ್ದೇನೆ ಎಂದು ತೋರಿಸಿಕೊಳ್ಳಲು ವಾರಕ್ಕೊಮ್ಮೆ ಸರಕಾರದ ವಿರುದ್ಧ ಕಿಡಿ, ತನಗೆ ಸಂಬಂಧವೇ ಇಲ್ಲದ ವಿಷಯದ ಬಗ್ಗೆ ಕೊರೆಯುವುದು, ತಿಂಗಳಿಗೊಮ್ಮೆ raid ನಲ್ಲೇ ಹೆಗ್ಡೆಯವರು ತೃಪ್ತಿ ಕಂಡಂತಿದೆ. ನಿವೃತ್ತಿಯ ನಂತರವೂ ಸವಲತ್ತು, ಸರಕಾರೀ ಕಾರು, ಆಳು ಕಾಳುಗಳು ಸಿಗುವಾಗ ಯಾರು ಬೇಡ ಹೇಳುತ್ತಾರೆ ಹೇಳಿ?
ಹೆಗ್ಡೆಯವರಂತೆ ಇರುವ ಇನ್ನೊಂದು ಬಿಳಿಯಾನೆ ಕರ್ನಾಟಕ ಮಾನವ ಹಕ್ಕು ಆಯೋಗದ ಅಧ್ಯಕ್ಷ ಎಸ್.ಆರ್.ನಾಯಕ್. ಇವರೂ ರಿಟೈರ‍್ಡ್ ಜಸ್ಟಿಸ್. ಮನಸ್ಸಿದ್ದರೆ ಮಾನವ ಹಕ್ಕು ಆಯೋಗದ ಅಧ್ಯಕ್ಷರಾಗಿ ಬಹಳಷ್ಟು ಸಾಧಿಸಬಹುದು. ಎಲ್ಲಾ ಅಧಿಕಾರವಿದ್ದರೂ ಸಂತೋಷ್ ಹೆಗ್ಡೆಯವರಂತೆ ಸರಕಾರವನ್ನು ಟೀಕಿಸುವುದರಲ್ಲೇ time waste ಮಾಡುತ್ತಿದ್ದಾರಿವರು. ನೆರೆ ಪರಿಹಾರದ ಬಗ್ಗೆ ಬೆಂಗಳೂರಿನಲ್ಲಿ ಕೂತು ವಸ್ತುಸ್ಥಿತಿ ತಿಳಿಯದೆ ಪುಂಖಾನುಗಟ್ಟಳೆ ಹೇಳಿಕೆ ಕೊಟ್ಟು ಉಗುಳಿಸಿಕೊಂಡ ಈ ಆಸಾಮಿ ಮಾನವ ಹಕ್ಕುಗಳ ಬಗ್ಗೆ ಇದುವರೆಗೆ ಸಾಧಿಸಿದ್ದೇನೂ ಇಲ್ಲ. ತನ್ನ ವ್ಯಾಪ್ತಿಗೆ ಸಂಬಂಧಪಡದ ವಿಷಯದ ಬಗ್ಗೆ ಕೊರೆಯುವ ಈ ಭೂಪ ಚಪ್ಪಾಳೆಗಾಗಿ ಪಕ್ಕಾ ರಾಜಕಾರಣಿಗಳಂತೆ ಹೇಳಿಕೆ ಕೊಡುತ್ತಿರುತ್ತಾರೆ. ಗಣಿ ವಿಷಯವಿರಲಿ, ನೆರೆ ಪರಿಹಾರವಿರಲಿ, ಪ್ರಿಯಾಂಕ ಗರ್ಭಿಣಿಯಾದ ವಿಷಯವಿರಲಿ - ಬೆಂಗಳೂರಿನಲ್ಲಿ ಕುಳಿತು ರಾಜಮರ್ಯಾದೆ ಅನುಭವಿಸುತ್ತಾ ಪ್ರಚಾರಕ್ಕಾಗಿ ಹೇಳಿಕೆ ಕೊಡುವ ನಾಯಕ್ ಮನಸ್ಸಿದ್ದರೆ ತನಗೀಗವಿರುವ ವ್ಯಾಪ್ತಿಯಲ್ಲೇ ಬಹಳಷ್ಟು ಸಾಧಿಸಬಹುದು. ಸುಮ್ಮನೆ ಹೇಳಿಕೆ ಕೊಡಬೇಕಾದರೆ ಆಮ್ನೆಸ್ಟಿ, HRW ನಂತಹ NGOಗಳು ಅಂತಹ ಕೆಲಸವನ್ನು ಈಗಾಗಲೇ ಮಾಡುತ್ತವೆ. ಅದು ಬಿಟ್ಟು ಸರಕಾರ ತನಗೆ ನೀಡಿರುವ ಎಲ್ಲಾ ಸೌಲಭ್ಯಗಳನ್ನು ಅನುಭವಿಸುತ್ತಾ ತೆರಿಗೆದಾರರ ಹಣವನ್ನು ಪೋಲು ಮಾಡುತ್ತಿರುವ ನಾಯಕರಂತಹವರು ಇದ್ದರೇನು ಹೋದರೇನು?

ಎಲ್ಲಾ ನ್ಯಾಯಾಧೀಶರು ಹೀಗೆಂದು ಹೇಳುತ್ತಿಲ್ಲ. ವಕೀಲರು ಇದಕ್ಕಿಂತ ಇನ್ನೂ ಹಾಳು - ಇತ್ತೀಚೆಗೆ ಹೈಕೋರ್ಟಿನಲ್ಲಿ ನಡೆದ ಹೊಯ್ ಕೈ ಗಲಭೆಯೇ ವಕೀಲರ ಸಾಚಾತನವನ್ನು ಬಯಲು ಮಾಡಿದೆ. ತಾಲೂಕು ಮಟ್ಟದಲ್ಲೂ ರಾಶಿ ರಾಶಿ ಬಿದ್ದಿರುವ ಕೋರ್ಟು ಕೇಸುಗಳನ್ನು ಕಂಡಾಗ ನ್ಯಾಯಾಂಗ ವ್ಯವಸ್ಥೆಯ ಬಗ್ಗೆಯೇ ಹೇಸಿಕೆಯಾಗುತ್ತದೆ. ನ್ಯಾಯಾಂಗ ನಿಂದನೆಗೆ ಹೆದರಿ ಮಾಧ್ಯಮಗಳೂ ಜನರೂ ಸುಮ್ಮನ್ನಿದ್ದಾರೆ. The Emperor has no clothes ಎಂದು ಹೇಳಲು ಜನರೀಗ ಹೆದರಬಹುದು. ಆದರೆ ದಿನಕರನ್ ಪ್ರಕರಣದಲ್ಲಿ ನೋಡಿದಂತೆ ಜನರ ಸಹನೆಯ ಕಟ್ಟೆಒಡೆಯುವ ಕಾಲ ದೂರವಿಲ್ಲ. ನ್ಯಾಯಾಂಗ ನಿಂದನೆ ಎಂಬ ಗುಮ್ಮವನ್ನು ಎದುರಿಟ್ಟುಕೊಂಡು ತಾವು ಏನಾದರೂ ಮಾಡಬಹುದು, ಕಣ್ಣೂ ಮುಚ್ಚಿ ಭ್ರಷ್ಟಾಚಾರ ಮಾಡಬಹುದು, ತಾವು ಯಾರಿಗೂ accountable ಅಲ್ಲವೆಂದು ಬೀಗುವ ನ್ಯಾಯಾಧೀಶರು ಜನರ ತಾಳ್ಮೆಗೂ ಮಿತಿಯಿದೆಯೆಂಬುದನ್ನು ಅರಿಯಬೇಕಾಗಿದೆ.

Thursday, November 12, 2009

ಪೋಸ್ಟ್ ಮ್ಯಾನ್ ಕೆಲಸ ಮಾಡಿದ ಕಟ್ಟಾ, ಅಶೋಕ್ VKಯಲ್ಲಿ ಸಂಧಾನಕಾರರಾಗಿ ಪ್ರತ್ಯಕ್ಷ ಹೇಗೆ?

ವಿಚಿತ್ರ ನೋಡಿ. ಕಳೆದೆರಡು ವಾರಗಳ ಬಿಕ್ಕಟ್ಟಿನ ಸಮಯದಲ್ಲಿ ಸುದ್ದಿಯಿಲ್ಲದೇ ಮಾಯವಾಗಿ ಗಾಳಿ ಯಾವ ಕಡೆಗೆ ಬೀಸುತ್ತದೆಯೆಂದು ಎಲ್ಲೋ ಅಡಗಿ ಕುಳಿತಿದ್ದ ಬೆಂಗಳೂರಿನ ಸಚಿದ್ವಯರಾದ ಕಟ್ಟಾ ಸುಬ್ರಮಣ್ಯ ನಾಯ್ಡು ಮತ್ತು ಅಶೋಕ್ ಇದೀಗ ಅನಾಮತ್ತಾಗಿ "troubleshooter", "ಸಂಧಾನಕಾರ"ರಾಗಿ "ವಿಜಯ ಕರ್ನಾಟಕ"ದಲ್ಲಿ ಕಾಣಿಸಿಕೊಂಡಿದ್ದಾರೆ.

ವಿಜಯ ಕರ್ನಾಟಕದ ಸುದರ್ಶನ ಚನ್ನಂಗಿಹಳ್ಳಿ ಏಕ್ ದಮ್ ಈ ಸಚಿವರಿಗೆ ಬಕೆಟ್ಟು ಹಿಡಿದು ಬಿಟ್ಟಿದ್ದಾರೆ. ಕೆಲ ಅಣಿಮುತ್ತುಗಳ ಸ್ಯಾಂಪಲ್:
- ಈ ಸಚಿವದ್ವಯರು "ಎರಡೂ ಬಣಗಳ ನಡುವೆ ಸೇತುವೆಯಾಗಿ" ಓಡಾಡಿದ್ದಾರೆ.
- ಉಭಯ ಬಣದ ನಾಯಕರ ನಡುವೆ ರಾಜಿಗೆ ಯತ್ನಿಸಿದರು
- ವರಿಷ್ಠರ ಸಂದೇಶಗಳನ್ನು ರವಾನಿಸುವ ಕಾರ್ಯ ನಿರ್ವಹಿಸಿದರು.

ಕಡೆಯದಂತೂ ನಾವೀಗ ಶಿಲಾಯುಗದಲ್ಲಿ ಅಥವಾ ರಾಮಾಯಣದ ಜಮಾನಾದಲ್ಲಿ ಇದ್ದೇವೆಯೆಂಬ ಅಭಿಪ್ರಾಯ ಕೊಡುತ್ತದೆ. ಮೊಬೈಲ್ ಸೆಲ್ ಎಲ್ಲೆಡೆ ಇರುವಾಗ ಈ ಸಚಿವರು "ಸಂದೇಶ ರವಾನಿಸುವ ಕಾರ್ಯ ನಿರ್ವಹಿಸಿದರು" ಎಂದು ಸುದರ್ಶನ ಹೇಳಿ ಓದುಗರ ಕಿವಿ ಮೇಲೆ ಹೂ ಇಡಲು ಯತ್ನಿಸಿದ್ದಾರೆ.

ಯಡ್ಡಿ ರೆಡ್ಡಿ ಹೊಡೆದಾಡಿಕೊಳ್ಳುತ್ತಿರುವಾಗ ಎಲ್ಲೋ ಅಡಗಿ ಕುಳಿತಿದ್ದ ಮತ್ತು ಎಲ್ಲಾ activity ದೆಹಲಿಗೆ shift ಆಗಿದ್ದಾಗ ಬೆಂಗಳೂರಿನಲ್ಲೆ ಇದ್ದ ಕಟ್ಟಾ ಅಶೋಕ್ ರವರು ಈಗ ಎಲ್ಲಾ ಬಿಕ್ಕಟ್ಟು ಪರಿಹಾರವಾದ ನಂತರ ವಿ.ಕ.ದಲ್ಲಿ "ಮುತ್ಸದ್ಧಿ"ಗಳಾಗಿ ಕಂಡುಬರುವುದರ ಹಿಂದೆ ಏನು ಕೆಲಸ ಮಾಡಿರಬಹುದು? 24x7 ಟಿವಿ ಕವರೇಜಿನ ಕಾಲದಲ್ಲಿ ಹೀಗೆಲ್ಲಾ ಬರೆದರೆ ಜನ ನಂಬುತ್ತಾರಾ?

Monday, November 2, 2009

ರೆಡ್ಡಿಗಳ ಕಪಿ ಮುಷ್ಠಿಯಿಂದ ಕರ್ನಾಟಕಕ್ಕೆ ಮುಕ್ತಿಯೆಂದು?ಮಾಧ್ಯಮಗಳಲ್ಲಿ ನಡೆಯುತ್ತಿರುವ ಭಿನ್ನಮತ - ರೆಡ್ಡಿಗಳ ಮುಷ್ಠಿಯಲ್ಲಿ ಕರ್ನಾಟಕದ ಮಾಧ್ಯಮ ಮಿತ್ರರು

ರಾಜಶೇಖರ ರೆಡ್ಡಿಯ ಹೆಲಿಕಾಪ್ಟರ್ ಪರ್ವತಕ್ಕಪ್ಪಳಿಸಿ ಬಾಡಿ ಸಿಗುವುದರೊಳಗೆ ಜಗನ್ ತನ್ನ ಟಿ.ವಿ. ಮತ್ತು ದಿನಪತ್ರಿಕೆಯ ಮೂಲಕ ಆಂಧ್ರ ಮತ್ತು ದೇಶದಾದ್ಯಂತ create ಮಾಡಿದ emotion ಭಾರತದ ಮಾಧ್ಯಮಗಳ ಸುದ್ದಿ coverage ಮಟ್ಟಿಗೆ ಒಂದು turning point. ದಿಢೀರನೆ ಎಲ್ಲಿಂದಲೋ ಬಂದ ನೂರಾರು ಜನರು ಜಿಲ್ಲೆ ಜಿಲ್ಲೆಗಳ ಕಾಂಗ್ರೆಸ್ ಕಚೇರಿ ಮುಂದೆ ಅರ್ತನಾದಿಸಿದ್ದೇನು, ಆತ್ಮಹತ್ಯೆ ಮಾಡಿಕೊಳ್ಳುತ್ತೇವೆಯೆಂದು ಬೊಬ್ಬೆ ಹಾಕಿದ್ದೇನು, ಜಗನ್ ಬಿಟ್ಟರೆ ಇನ್ನು ರಾಜ್ಯಕ್ಕೆ ಉಳಿಗಾಲವಿಲ್ಲವೆಂದು ಟಿ.ವಿ.ಯಲ್ಲಿ ಪ್ರದರ್ಶಿಸಿದ್ದೇನು!

ಇದೇ ಮಾಧ್ಯಮ strategyಯನ್ನು ಬಳ್ಳಾರಿಯ ಮಣ್ಣು ಮಾರಿ ಬದುಕುತ್ತಿರುವ ರೆಡ್ಡಿ ಬ್ರದರ್ಸ್ ಈಗ ಕರ್ನಾಟಕದಲ್ಲಿ ಭಿನ್ನಮತ ರಾಜಕಾರಣಕ್ಕೆ ಉಪಯೋಗಿಸುತ್ತಿದ್ದಾರೆ. ಹೇಗೂ ಜಗನ್ ರೆಡ್ಡಿಯ ಖಾಸಾ ದೋಸ್ತಿಗಳು ನೋಡಿ?

ಈ ರೆಡ್ಡಿಗಳು ಬಿಸಾಕುತ್ತಿರುವ ಬ್ರೆಡ್ ತಿನ್ನಲ್ಲು ನಾಮುಂದೆ ತಾಮುಂದೆಯೆಂದು ಜೊಲ್ಲು ಸುರಿಸಿ ತಿನ್ನುತ್ತಿರುವವರು MLAಗಳು ಮಾತ್ರವಲ್ಲ, ಮಾಧ್ಯಮ ಮಿತ್ರರೂ ಎಂದು ಹೇಳಲು ವಿಷಾದವಾಗುತ್ತದೆ.

ಇಡೀ ಬಳ್ಳಾರಿಯನ್ನು ಗಣಿಗಾರಿಕೆ ನೆಪದಲ್ಲಿ ಅಗೆದು ಮಾರಿ ತಮ್ಮ ಮನೆ, ಹೆಲಿಕಾಪ್ಟರ್, MLAಗಳನ್ನು ಇಟ್ಟುಕೊಂಡಿರುವ ಈ ಬಳ್ಳಾರಿ ರೆಡ್ಡಿಗಳು ಬಳ್ಳಾರಿಯ ಪತ್ರಕರ್ತ ಮಿತ್ರರಿಗೆ ಪ್ರತಿ ವರ್ಷ laptop, ಕೆಮರಾಗಳನ್ನು ಭಿಕ್ಷೆಯಾಗಿ ನೀಡುತ್ತಾ ಇಟ್ಟುಕೊಂಡಿರುವುದು ಎಲ್ಲರಿಗೂ ತಿಳಿದಿದೆ. ಆದರೆ ರಾಜ್ಯ ಮಟ್ಟದಲ್ಲೂ ಈ ರೆಡ್ಡಿಗಳು ಪ್ರಾಯಶ: ಎಲ್ಲಾ ಪ್ರಮುಖ ಮಾಧ್ಯಮ ಮಿತ್ರರನ್ನು "ಸಾಕಿಕೊಂಡಿರುವುದು" ಇತ್ತೀಚಿನ ಭಿನ್ನಮತ ಸ್ಪೋಟದಲ್ಲಿ ಸ್ಪಷ್ಟವಾಗಿದೆ.

ಇಲ್ಲದಿದ್ದರೆ ಯಾವ ಮಾಧ್ಯಮ ಮಿತ್ರರೂ ಈ ರೆಡ್ಡಿಗಳಿಗೆ ಕೆಳಗಿನ ಪ್ರಶ್ನೆಗಳನ್ನೇಕೆ ಕೇಳುತ್ತಿಲ್ಲ:
  • ಇಡೀ ರಾಜ್ಯವೇ ನೆರೆಯಲ್ಲಿ ಕೊಚ್ಚಿ ಹೋಗಿರುವಾಗ ಭಿನ್ನಮತದ ಕಹಳೆ ಊದುವುದು ಯಾವ ಜನಪರ ಕಾರ್ಯ?
  • ತಾವು ಮಂತ್ರಿಗಳಾಗಿ ೧೬ ತಿಂಗಳಾಯಿತು - ತಮ್ಮ ಸಾಧನೆ ಏನು?
  • ಶ್ರೀರಾಮುಲು - ಈ ಮಹಾನುಭವ ಆರೋಗ್ಯ ಖಾತೆಯಂತಹ ಪ್ರಮುಖ ಖಾತೆ ಇಟ್ಟುಕೊಂಡಿದ್ದರೂ ಹಂದಿ ಜ್ವರದಂತಹ ಹೆಮ್ಮಾರಿ ಬಂದಿರುವಾಗ ಅಲ್ಲೇ ಬಳ್ಳಾರಿ ಹೈದರಾಬಾದಿಗೆ ತನ್ನ ಮೇಕಪ್ಪಿಗಾಗಿ ಹಾರಾಡುತ್ತಿದ್ದ ವಿನ: ವಿಧಾನಮಂಡಳದಲ್ಲಿ ಕಂಡು ಬಂದದ್ದು ಬೆರಳೆಣಿಕೆಯ ದಿನಗಳಲ್ಲಷ್ಟೇ. ಇತ್ತೀಚೆಗೆ ರಾಜ್ಯದ ಸರಕಾರೀ ವೈದ್ಯರು ರಾಜೀನಾಮೆ ಬೆದರಿಕೆ ಹಾಕಿದ್ದಾಗ ಕಾಣೆಯಾಗಿದ್ದ ಈ ಆಸಾಮಿಯ ಕೆಲಸವನ್ನು ಕಡೆಗೆ ಅದೇ ಯಡ್ಡಿ, ರಾ.ಗೌಡ, ಆಚಾರ್ಯರಂತವರು ಮಾಡಿ ಬಿಕ್ಕಟ್ಟು ಪರಿಹಾರ ಮಾಡಿದರು. ಜನರು ನೆರೆಯಲ್ಲಿ ಮುಳುಗಿರುವಾಗ ಶ್ರೀರಾಮುಲು ತನ್ನ ಮಿತ್ರರೊಂದಿಗೆ ಹೆಲಿಕಾಪ್ಟರಿನಲ್ಲಿ ಹಾರಾಡುತ್ತಾ ಅತ್ತ ಸಿನೆಮಾ ನೋಡುತ್ತಿದ್ದದ್ದು ಸರಿಯೇ?
  • ಕರುಣಾಕರ ರೆಡ್ಡಿ - ಕಂದಾಯದಂತಹ ಅತಿ ಪ್ರಮುಖ ಖಾತೆಯನ್ನು ಹೊಂದಿರುವ ಈ ಆಸಾಮಿ ರಾಜ್ಯವಿಡೀ ನೆರೆ ನೀರಿನಲ್ಲಿ ಮುಳುಗಿರುವಾಗ ಕೆಲ ಫೊಟೋಗಳಲ್ಲಿ ಮಿಂಚಿದರೇ (ಅದೂ ತನ್ನ ಮನೆಯಿರುವ ಬಳ್ಳಾರಿಯಲ್ಲಿ) ವಿನ: ತಾನು ರಾಜ್ಯದ ಕಂದಾಯ ಮಂತ್ರಿಯೆಂಬುದನ್ನು ಮರೆತು ಬಳ್ಳಾರಿಯಲ್ಲೇ ವಾರಗಟ್ಟಳೆ ಕೂತು ತನ್ನ ಗಣಿ ವ್ಯವಹಾರವನ್ನು ನೋಡಿ ಕೊಳ್ಳುತ್ತಿರುವುದು ಸರಿಯೇ?
  • ಇನ್ನು ಜನಾರ್ಧನ ರೆಡ್ಡಿ ಒಮ್ಮೆ ತಮ್ಮನ್ನು ಕುಮಾರಸ್ವಾಮಿ, ಚೆನ್ನಿಗಪ್ಪರ ವೀಡಿಯೋ ಇದೆ ಎಂದೆಲ್ಲಾ fool ಮಾಡಿದ್ದನ್ನು ಪತ್ರಕರ್ತ ಮಿತ್ರರು ಮರೆತಂತಿದೆ. ಇವತ್ತು ಗಣಿ ಲಂಚದ ವೀಡಿಯೋ ತೋರಿಸುತ್ತೇನೆ, ನಾಳೆ ತೋರಿಸುತ್ತೇನೆ ಎಂದೆಲ್ಲಾ ಹೇಳಿ ಬೆಂಗಳೂರು ಬಳ್ಳಾರಿ ನಡುವೆ ಪತ್ರಕರ್ತರನ್ನು ಓಡಾಡಿಸಿದ ಈ ಆಸಾಮಿ ಬರೀ ಟೊಳ್ಳುವೆಂದು ಜನರಿಗೆ ಯಾವಾಗಲೋ ಅರ್ಥವಾಗಿದೆ.
  • ಇನ್ನು ಜಗದೀಶ ಶೆಟ್ಟರ್ ಎಂಬ ಹುಬ್ಬಳ್ಳಿಯಾಂವನ ಬಗ್ಗೆಯೇನು ಹೇಳಬೇಕು? ಕುಮಾರಸ್ವಾಮಿಯ ೧೮ ತಿಂಗಳ ಸರಕಾರದಲ್ಲಿ ಕಂದಾಯ ಮಂತ್ರಿಯಾಗಿ ಅವರ ಸಾಧನೆಯೇನು ಎಂದು ಕೇಳಬೇಕಾಗುತ್ತದೆ. ಎಷ್ಟೇ ನೆನೆದರೂ ಈ ಶೆಟ್ಟರ್ ಕಂದಾಯ ಮಂತ್ರಿಯಾಗಿ ಏನು ಕಡೆದು ಹಾಕಿದರು ಎಂದು ನೆನಪಾಗುತ್ತಿಲ್ಲ. ಒಂದು ಮೂಲದ ಪ್ರಕಾರ ಆ 16 ತಿಂಗಳಲ್ಲಿ ಶೆಟ್ಟರ್ ಹಾಗೂ ಅವರ ಸಹೋದರ "ದುಡಿದು ಹಾಕಿದಷ್ಟು" ಕರ್ನಾಟಕದ ಯಾವ ಕಂದಾಯ ಮಂತ್ರಿಯೂ ದುಡಿದಿಲ್ಲವಂತೆ. ಅದೇ ಸುದ್ದಿ ಕೇಂದ್ರದ ಬಿಜೆಪಿ ನಾಯಕರುಗಳಿಗೆ ತಲುಪಿ ಅವರನ್ನು ಮುಂದಿನ ಸರಕಾರದಲ್ಲಿ ಮಂತ್ರಿ ಮಾಡದಿರುವ ತೀರ್ಮಾನ ಮಾಡಿದ್ದಾರೆಂದು ಕಳೆದ ವರ್ಷ ಕೇಳಿಬಂದಿತ್ತು. ಸದಾ ನಿದ್ದೆಯಿಂದ ಹೊರಬರದಿರುವ ಶೆಟ್ಟರ್ ಮುಖ್ಯಮಂತ್ರಿ ಕ್ಯಾಂಡಿಡೇಟ್ ಎಂದು ಯಾವ ಬಿಜೆಪಿ ಕಾರ್ಯಕರ್ತರೂ ನಂಬುವುದಿಲ್ಲ - ಕೇವಲ ರೆಡ್ಡಿಗಳಿಂದ ಕೃತಾರ್ಥರಾದ ಮಾಧ್ಯಮ ಮಂದಿಗಳಷ್ಟೇ ಅದನ್ನು ಹೇಳುತ್ತಿರುತ್ತಾರಷ್ಟೇ. ಇನ್ನು ರೆಡ್ಡಿಗಳ ಬೆಂಬಲದಿಂದ ಮುಖ್ಯಮಂತ್ರಿಯಾದರೂ ಆ ರೆಡ್ದಿಗಳ ಗಣಿ ಮಣ್ಣಿನ ಧೂಳು ತೆಗೆಯಲು ಕಾರ್ಪೆಟ್ ಆಗಬೇಕಷ್ಟೇ ಎಂದು ತಿಳಿಯದಷ್ಟು ಶೆಟ್ಟರ್ ದಡ್ಡರೇನಲ್ಲ.

ಈ ರೆಡ್ಡಿಗಳು ರಾಜ್ಯದ ಭೂಮಿಯನ್ನು ಲೂಟಿ ಮಾಡಿ ರಾಜ್ಯದ ರಸ್ತೆಗಳನ್ನು, ಬಂದರುಗಳನ್ನು ತಿಂದು ಕುಡಿದಾಗಿದೆ. ವಿಧಾನಸೌಧವಿರುವ ಜಾಗದಲ್ಲಿ ಖನಿಜ ಕಂಡುಬಂದರೆ ಅದನ್ನು ಅಗೆದು ಚೀನಾಕ್ಕೆ ಮಾರಲು ಹೇಸದ ಜನರು ಇವರು. ವರ್ಷಕ್ಕೊಮ್ಮೆ ಸಾಮೂಹಿಕ ವಿವಾಹ, ಸುಷ್ಮಾ ಸ್ವರಾಜ್ ಜೊತೆ ವರಮಹಾಲಕ್ಷ್ಮಿ ಪೂಜೆ ಮಾಡಿದ ಕೂಡಲೇ ರಾಜ್ಯದಲ್ಲಿ ತಮ್ಮ ಮೀರುವ ನಾಯಕರು ಇಲ್ಲ, ತಮ್ಮ ಗುರಿ ಮುಖ್ಯಮಂತ್ರಿ ಖುರ್ಚಿಯೆಂದೆಲ್ಲಾ ಹೇಳಿಸಿಕೊಳ್ಳುವ ಈ ರೆಡ್ಡಿಗಳು ಕರ್ನಾಟಕದ ಜನತೆಯ ತಾಳ್ಮೆ ಪರಿಶೀಲಿಸುತ್ತಿದ್ದಾರೆ.

ಇಷ್ಟೆಲ್ಲಾ ತಮ್ಮ ಕಣ್ಣ ಮುಂದೆಯಿದ್ದರೂ ರೆಡ್ಡಿಗಳು ಹೇಳಿದ್ದೇ ಪಂಚಾಮೃತವೆಂದು ಬರೆಯುವ ದೊಡ್ಡ ಪತ್ರಕರ್ತರ ಗುಂಪೇ ಇದೆ. ಇದೇ ಗುಂಪಿಗೆ ೨೬ MLAಗಳು ೮೦ MLAಗಳಂತೆ ಕಾಣುತ್ತಾರೆ. ಪದೇ ಪದೇ ಯಡ್ಯೂರಪ್ಪನವರ ಬಗ್ಗೆ ಬರೆದದ್ದನ್ನೇ ಬೇರೆ ಬೇರೆ ರೀತಿಯಲ್ಲಿ ಬರೆದು (ಯಡ್ಯೂರಪ್ಪ ಸಿಡುಕ, ಸಹ ಮಂತ್ರಿಗಳ ಜೊತೆ ನಗುವುದಿಲ್ಲ, ಶೋಭಾ show ಇತ್ಯಾದಿ) ತಮ್ಮ ಕಾಲಂಗಳನ್ನು ತುಂಬಿಸಿಕೊಳ್ಳುತ್ತಿದ್ದಾರೆ. ಅವರು ಯಡ್ಯೂರಪ್ಪನವರ ಬಗ್ಗೆ ಬರೆಯುವುದೆಲ್ಲಾ ನಿಜವಿರಬಹುದು, ಆದರೆ ಆ ವಿಷಯಗಳನ್ನೆತ್ತಲು ಇದು ಸರಿಯಾದ ಸಮಯವೇ?

ಅತ್ತ ಜಗನ್ ತನ್ನ ತಂದೆ ಹೆಲಿಕಾಪ್ಟರ್ ದುರಂತದಲ್ಲಿ ಮಡಿದು ಬಾಡಿ ಸಿಗುವ ಮೊಡಲೇ ಟಿವಿ ಪತ್ರಿಕೆಗಳಲ್ಲಿ ತನ್ನನ್ನು ಮುಂದಿನ ಮುಖ್ಯಮಂತ್ರಿಯಾಗಿ project ಮಾಡಿಕೊಂಡು ಈಗ ಎಲ್ಲಿದ್ದಾರೆಯೆಂಬುದನ್ನು ಹುಡುಕುವ ಸ್ಥಿತಿ ಬಂದಿದೆ. ಯಾವ ಮಾಧ್ಯಮಗಳು ಪತ್ರಕರ್ತರು ಜಗನ್ ರೆಡ್ಡಿಯನ್ನು ಆಂಧ್ರದ ಮುಖ್ಯಮಂತ್ರಿಯೆಂದು project ಮಾಡಿದರೋ ಅದೇ ಮಾಧ್ಯಮಗಳು ಈಗ ಜಗನ್ ರೆಡ್ಡಿಯನ್ನು ಮೂಸಿ ನೋಡುತ್ತಿಲ್ಲ.

ಮಾಧ್ಯಮಗಳ ಮೂಲಕವೇ ರಾಜಕೀಯ ನಡೆಸಬಹುದು, ಪತ್ರಕರ್ತರನ್ನು ತಮ್ಮ ಎಜೆಂಡಾಗೆ ತಕ್ಕಂತೆ ಬಳಸಿಕೊಳ್ಳಬಹುದು, ಜನರನ್ನು ವರಿಷ್ಠರನ್ನು ತಮ್ಮ ದಾರಿಗೆ ತರಬಹುದು ಎಂದು ರೆಡ್ಡಿಗಳು ಭಾವಿಸಿದ್ದರೆ ಅತ್ತ ಆಂಧ್ರದಲ್ಲಿ ಜಗನ್ ರೆಡ್ಡಿಗಾದ ಪರಿಸ್ಥಿತಿಯನ್ನು ನೋಡಿಯಾದರೂ ಕಲಿಯುವುದೊಳಿತು.