Showing posts with label Vijaya Karnataka. Show all posts
Showing posts with label Vijaya Karnataka. Show all posts

Thursday, September 9, 2010

ಅತ್ಯಾಚಾರ ಪ್ರಕರಣ ಆರೋಪಿ ವಿ.ಕ.ಪತ್ರಕರ್ತನ ಬಂಧನ ಪತ್ರಿಕಾ ಸ್ವಾತಂತ್ರಹರಣವೇ?


ಅತ್ಯಾಚಾರ ಪ್ರಕರಣ ಆರೋಪಿ ವಿ.ಕ.ಪತ್ರಕರ್ತನ ಬಂಧನ ಪತ್ರಿಕಾ ಸ್ವಾತಂತ್ರಹರಣವೇ?

ಈ ಬ್ಲಾಗ್ ಪೋಸ್ಟಿನ ಹೆಡ್ಡಿಂಗು rhetorical ಅಲ್ಲ. ಎರಡು ದಿನಗಳ ಹಿಂದೆ ಕುಮಟಾದಲ್ಲಿ ನಡೆದ ಘಟನೆಯ ಅವಲೋಕನ.

ಒಂದು ಘಟನೆಯನ್ನು - ಅದರಲ್ಲೂ ಪತ್ರಕರ್ತನೇ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಾಗ ಅದನ್ನು ತಮಗೆ ಬೇಕಾದಂತೆ ಹೇಗೆ ತಿರುಚಬಹುದೆನ್ನುವುದಕ್ಕೆ ಇದೊಂದು ಉದಾಹರಣೆಯಷ್ಟೇ.



ಕುಮಟಾದ "ವಿಜಯ ಕರ್ನಾಟಕ"ದ ವರದಿಗಾರ ವಿ.ಡಿ.ಭಟ್ಟ ಒಂಟಿ ಮಹಿಳೆಯ ಮನೆಗೆ ನುಗ್ಗಿ ಮಹಿಳೆ ಕಿರುಚಿದಾಗ ಜಮಾಯಿಸಿದ ಜನರಿಂದ ಹಿಗ್ಗಾಮುಗ್ಗಾ ಥಳಿಸಿಕೊಂಡು ಪೊಲೀಸ್ ಅತಿಥಿಯಾದನೆಂದು ಒಂದು ವರದಿ. ಅದೇ ಪ್ರಕರಣ "ವಿಜಯ ಕರ್ನಾಟಕ"ದಲ್ಲಿ ಪ್ರಕಟವಾದ ಧಾಟಿಯೇ ಬೇರೆ. ಅತ್ಯಾಚಾರ ಪ್ರಕರಣದ ಆರೋಪಿಯನ್ನು ಪೊಲೀಸರು ಥಳಿಸಿದರಂತೆ, ಅದು ಮಾಧ್ಯಮ ಸ್ವಾತಂತ್ರ್ಯದ ಹರಣವಂತೆ! ಉ.ಕ.ದ ಉಸ್ತುವಾರಿ ಸಚಿವರು ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲವೆಂಬ ಒಗ್ಗರಣೆ ಬೇರೆ. ಅಲ್ಲಾ ಸ್ವಾಮೀ, ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾದವರನ್ನೆಲ್ಲಾ ಉಸ್ತುವಾರಿ ಸಚಿವರು ವಿಚಾರಿಸುತ್ತಾ ಕುಳಿತುಕೊಳ್ಳಲು ಅವರಿಗೇನು ತಿಗಣೆ ಕಚ್ಚಿದೆಯಾ ಸ್ವಾಮೀ?

ಮಹಿಳಾ ಸ್ವಾತಂತ್ರ್ಯದ ಬಗ್ಗೆ ಕೊರೆಯುವ ವಿ.ಕ. ಈಗ ಪತ್ರಕರ್ತನ ವಿರುದ್ಧ ದೂರು ನೀಡಿದ ಬಡಪಾಯಿ ಮಹಿಳೆಯನ್ನೇ ವೇಶ್ಯೆಯೆಂದು ಹೀಯಾಳಿಸಿದಷ್ಟೇ ಅಲ್ಲ, ಮಹಿಳೆಯ ಹೆಸರನ್ನು ವರದಿಯಲ್ಲಿ ಉಲ್ಲೇಖಿಸಿ ಮಾನಹರಣ ಮಾಡಿದೆ. ಒಂಥರಾ "ಮಹಿಳೆ provocative ಆಗಿ dress ಮಾಡಿಕೊಂಡರೆ ಅತ್ಯಾಚಾರಕ್ಕೆ ಆಹ್ವಾನಿಸಿದಂತೆ - ಅವಳದ್ದೇ ತಪ್ಪು" ಎಂಬ ತಾಲಿಬಾನಿಗಳ, ಕೆಲ Male Chauvinist Pigಗಳು ವಾದಿಸಿದಂತೆ. ಮಾಧ್ಯಮ ಸ್ವಾತಂತ್ರ್ಯವೆಂದರೆ ಪತ್ರಕರ್ತರು ಅತ್ಯಾಚಾರ ಮಾಡುವುದು OK ಎಂಬಲ್ಲಿಗೆ ಬಂದಿರುವುದು ನಮ್ಮ ದೌರ್ಭಾಗ್ಯವಷ್ಟೇ.

ಹಿಂದೆ ಯಾರೋ ಪೇದೆ ನೋಟೀಸ್ ಕೊಟ್ಟನೆಂದ ಮಾತ್ರಕ್ಕೆ ಮಾಧ್ಯಮ ಸ್ವಾತಂತ್ರ್ಯಹರಣವಾಯಿತೆಂದು ಗಣ್ಯರ ಹೆಸರಲ್ಲಿ ಏನೇನೋ ಪ್ರಕಟಿಸಿ ಸಿಕ್ಕಿ ಬಿದ್ದ (ಇಲ್ಲಿ ನೋಡಿ DGP ಅಜಯ ಸಿಂಹರ ಪತ್ರ) ವಿಜಯ ಕರ್ನಾಟಕದ Fake SMS, Fake Opinion generators ಇನ್ನೂ ಪಾಠ ಕಲಿತಂತಿಲ್ಲ.

ಅತ್ಯಾಚಾರಿ ಪ್ರಕರಣ ಆರೋಪಿ ವಿ.ಕ.ನ. ಪತ್ರಕರ್ತನ ಪರವಾಗಿ ರಾಜಕೀಯ ನಿರುದ್ಯೋಗಿಗಳಾದ ಆರ್.ವಿ.ದೇಶಪಾಂಡೆ, ಎಂ.ಸಿ.ನಾಣಯ್ಯ ಮತ್ತು ಹೊರಟ್ಟಿಗಳಂತಹವರಿಂದ ಹೇಳಿಕೆ ಕೊಡಿಸಿದೆ. ಶಿಕ್ಷಕರ ವರ್ಗಾವಣೆ ದಂಧೆಗೆ ತಡೆ ಹಾಕಿ ತಮ್ಮ ಖಮಾಯಿಗೆ ಕಲ್ಲು ಹಾಕಿದ ವಿಶ್ವೇಶ್ವರ ಹೆಗಡೆಯವರ ಮೇಲಿರುವ ಸಿಟ್ಟನ್ನು ಹೊರಟ್ಟಿ ಈಗ ಅತ್ಯಾಚಾರಿಯನ್ನು ಬೆಂಬಲಿಸಲು ಬಳಸಿಕೊಂಡದ್ದು ಹೊರಟ್ಟಿಯ ಸದ್ಯದ ಮಾನಸಿಕತೆಯನ್ನು ತೋರಿಸುತ್ತದೆಯೆಷ್ಟೇ.

ಇನ್ನು ಅತ್ಯಾಚಾರಿಯನ್ನು ಬಂಧಿಸಿದ್ದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದೆಗೆಟ್ಟಿರುವುದರ ಸಾಕ್ಷಿಯೆಂದು ನಾಣಯ್ಯನವರು ಹೇಳಿದನ್ನು ನಂಬಲು ಜನರೇನು ಕಿವಿ ಮೇಲೆ ಹೂವಿಟ್ಟುಕೊಂಡಿದ್ದಾರ ಸ್ವಾಮೀ? ಸಂಜೆ ೭ ಘಂಟೆಯ ಮೇಲೆ ನಾಣಯ್ಯನವರಿಗೆ ಫೋನ್ ಮಾಡಿದರೆ ಹೇಗೆ ಬೇಕಾಂದಂತಹ ಅಭಿಪ್ರಾಯವನ್ನೂ ಪಡೆಯಬಹುದೆಂಬುದನ್ನು ಬೆಂಗಳೂರಿನ ಹಿರಿ ಮರಿ ಪತ್ರಕರ್ತರಿಗೂ ತಿಳಿದಿರುವ ವಿಷಯ - ಇಂತಹ ಕುಡುಕ ಹೇಳಿದನ್ನು box item ಮಾಡಿ ಹಾಕಿ ತನ್ನ ಅತ್ಯಾಚಾರಿ ವರದಿಗಾರನನ್ನು ಬೆಂಬಲಿಸುವ ಪರಿಸ್ಥಿತಿ ವಿ.ಕ. ಸಂಪಾದಕೀಯ ಮಂಡಳಿಗೆ ಬರಬಾರದಿತ್ತು.

ಪತ್ರಕರ್ತನೆಂದ ಮಾತ್ರಕ್ಕೆ ಅತ್ಯಾಚಾರ ಆರೋಪಿಯನ್ನು ಪೊಲೀಸರು ಬಿಡುಗಡೆ ಮಾಡಬೇಕೆಂದು ವಿ.ಕ. ಅಭಿಪ್ರಾಯವೇ? ಅತ್ಯಾಚಾರಕ್ಕೂ ಮಾಧ್ಯಮ ಸ್ವಾತಂತ್ರ್ಯಕ್ಕಿರುವ ಸಂಬಂಧವೇನೆಂಬುದೇ ನನಗೆ ಅರ್ಥವಾಗುತ್ತಿಲ್ಲ. ಏನೆನ್ನುತ್ತೀರಿ?

Thursday, November 12, 2009

ಪೋಸ್ಟ್ ಮ್ಯಾನ್ ಕೆಲಸ ಮಾಡಿದ ಕಟ್ಟಾ, ಅಶೋಕ್ VKಯಲ್ಲಿ ಸಂಧಾನಕಾರರಾಗಿ ಪ್ರತ್ಯಕ್ಷ ಹೇಗೆ?

ವಿಚಿತ್ರ ನೋಡಿ. ಕಳೆದೆರಡು ವಾರಗಳ ಬಿಕ್ಕಟ್ಟಿನ ಸಮಯದಲ್ಲಿ ಸುದ್ದಿಯಿಲ್ಲದೇ ಮಾಯವಾಗಿ ಗಾಳಿ ಯಾವ ಕಡೆಗೆ ಬೀಸುತ್ತದೆಯೆಂದು ಎಲ್ಲೋ ಅಡಗಿ ಕುಳಿತಿದ್ದ ಬೆಂಗಳೂರಿನ ಸಚಿದ್ವಯರಾದ ಕಟ್ಟಾ ಸುಬ್ರಮಣ್ಯ ನಾಯ್ಡು ಮತ್ತು ಅಶೋಕ್ ಇದೀಗ ಅನಾಮತ್ತಾಗಿ "troubleshooter", "ಸಂಧಾನಕಾರ"ರಾಗಿ "ವಿಜಯ ಕರ್ನಾಟಕ"ದಲ್ಲಿ ಕಾಣಿಸಿಕೊಂಡಿದ್ದಾರೆ.

ವಿಜಯ ಕರ್ನಾಟಕದ ಸುದರ್ಶನ ಚನ್ನಂಗಿಹಳ್ಳಿ ಏಕ್ ದಮ್ ಈ ಸಚಿವರಿಗೆ ಬಕೆಟ್ಟು ಹಿಡಿದು ಬಿಟ್ಟಿದ್ದಾರೆ. ಕೆಲ ಅಣಿಮುತ್ತುಗಳ ಸ್ಯಾಂಪಲ್:
- ಈ ಸಚಿವದ್ವಯರು "ಎರಡೂ ಬಣಗಳ ನಡುವೆ ಸೇತುವೆಯಾಗಿ" ಓಡಾಡಿದ್ದಾರೆ.
- ಉಭಯ ಬಣದ ನಾಯಕರ ನಡುವೆ ರಾಜಿಗೆ ಯತ್ನಿಸಿದರು
- ವರಿಷ್ಠರ ಸಂದೇಶಗಳನ್ನು ರವಾನಿಸುವ ಕಾರ್ಯ ನಿರ್ವಹಿಸಿದರು.

ಕಡೆಯದಂತೂ ನಾವೀಗ ಶಿಲಾಯುಗದಲ್ಲಿ ಅಥವಾ ರಾಮಾಯಣದ ಜಮಾನಾದಲ್ಲಿ ಇದ್ದೇವೆಯೆಂಬ ಅಭಿಪ್ರಾಯ ಕೊಡುತ್ತದೆ. ಮೊಬೈಲ್ ಸೆಲ್ ಎಲ್ಲೆಡೆ ಇರುವಾಗ ಈ ಸಚಿವರು "ಸಂದೇಶ ರವಾನಿಸುವ ಕಾರ್ಯ ನಿರ್ವಹಿಸಿದರು" ಎಂದು ಸುದರ್ಶನ ಹೇಳಿ ಓದುಗರ ಕಿವಿ ಮೇಲೆ ಹೂ ಇಡಲು ಯತ್ನಿಸಿದ್ದಾರೆ.

ಯಡ್ಡಿ ರೆಡ್ಡಿ ಹೊಡೆದಾಡಿಕೊಳ್ಳುತ್ತಿರುವಾಗ ಎಲ್ಲೋ ಅಡಗಿ ಕುಳಿತಿದ್ದ ಮತ್ತು ಎಲ್ಲಾ activity ದೆಹಲಿಗೆ shift ಆಗಿದ್ದಾಗ ಬೆಂಗಳೂರಿನಲ್ಲೆ ಇದ್ದ ಕಟ್ಟಾ ಅಶೋಕ್ ರವರು ಈಗ ಎಲ್ಲಾ ಬಿಕ್ಕಟ್ಟು ಪರಿಹಾರವಾದ ನಂತರ ವಿ.ಕ.ದಲ್ಲಿ "ಮುತ್ಸದ್ಧಿ"ಗಳಾಗಿ ಕಂಡುಬರುವುದರ ಹಿಂದೆ ಏನು ಕೆಲಸ ಮಾಡಿರಬಹುದು? 24x7 ಟಿವಿ ಕವರೇಜಿನ ಕಾಲದಲ್ಲಿ ಹೀಗೆಲ್ಲಾ ಬರೆದರೆ ಜನ ನಂಬುತ್ತಾರಾ?

Saturday, September 5, 2009

ರಜೆಯೆಂದರೆ ಮಾಧ್ಯಮ ಮಿತ್ರರಿಗೇಕೆ ಅಲರ್ಜಿ?

ಸಡನ್ನಾಗಿ ಕೆಲ ಕನ್ನಡ ಮಾಧ್ಯಮ ಮಿತ್ರರು YSR ನಿಧನಕ್ಕೆ ಕರ್ನಾಟಕದಲ್ಲಿ ರಜೆ ಯಾಕೆಯೆಂಬ ಚರ್ಚೆ ಶುರು ಮಾಡಿದ್ದಾರೆ.

ಎಂದಿನಂತೆ "ವಿಜಯ ಕರ್ನಾಟಕ" ತನ್ನ ಕಚೇರಿಗೆ ಈ ರಜೆ ಯಾಕೆ ಬೇಕಿತ್ತು ಎಂದು ಕೇಳಿ ಬಹಳ ಕರೆಗಳು ಬಂದವು ಎಂದು ಹೇಳಿಕೊಂಡಿದೆ. ಕರೆ ಮಾಡಿದವರ ಹೆಸರು ಏನು, ಕೆಲಸವೇನು ಮುಂತಾದ details ಕೇಳಬೇಡಿ - ಕರ್ನಾಟಕದ ನಂ.೧ ಪತ್ರಿಕೆ ಪತ್ರಿಕಾಧರ್ಮದ basics ಮರೆತು ತನಗೆ ಬೇಕಾದ ಹಾಗೆ ಅನಾಮಧೇಯ SMS, ಫೋನ್, ಪತ್ರಗಳನ್ನು ಸೃಷ್ಟಿಸುವುದರಲ್ಲೂ ನಂ.೧ ಅಲ್ಲವೇ? ಕೆಲ ಪತ್ರಿಕೆಗಳ ಸಂಪಾದಕರು "ಹೆಸರು ಬೇಡ, ಊರು ಗೊತ್ತಿಲ್ಲ"ವೆಂಬ ವಾಚಕರ ಪತ್ರಗಳನ್ನು ಸೃಷ್ಟಿಸಿದಂತೆ.

Thaskannada.com ನ ಶ್ಯಾಮಸುಂದರ್ ಅಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ "ಶುಕ್ರವಾರದ ರಜೆ ನಮ್ಮ ಪ್ರಕಾರ ಅಸಿಂಧು" ಎಂದು ಷರಾ ಬರೆದುಬಿಟ್ಟಿದ್ದಾರೆ.

ರಜೆ ಕೊಡಬೇಕಿತ್ತಾ ಇಲ್ಲವೋ ಚರ್ಚೆ ಈ ಬ್ಲಾಗ್ ಪೋಸ್ಟಿನ ಉದ್ಧೇಶವಲ್ಲ. ಆದರೆ ತಮಗೆ ಬೇಕಾದ ಹಾಗೆ ಹೇಗೆ ಒಂದು sentimentನ್ನು, opinionನ್ನು ಮಾಧ್ಯಮಗಳು out of the air ಹೇಗೆ ಸೃಷ್ಟಿ ಮಾಡುತ್ತವೆಯೆಂದು ತೋರಿಸಲಷ್ಟೇ.

____________________________________________________________

ರಜೆ ಕೊಟ್ಟರೆ ಯಾಕೆ ರಜೆ ಕೊಟ್ರಿ ಎಂಬ ಪ್ರಶ್ನೆ.

ಒಂದು ವೇಳೆ ಕರ್ನಾಟಕ ರಜೆ ಕೊಡದಿದ್ದರೆ ಪ್ರಶ್ನೆಗಳು ಹೀಗಿರುತ್ತಿದ್ದವೇನೋ? ನೀವೂ guess ಮಾಡಿ ಕಮೆಂಟಿನಲ್ಲಿ:
  • ಅತ್ತ ತಮಿಳುನಾಡಿನಲ್ಲಿ ರಜೆ ಕೊಟ್ರು, ಕರ್ನಾಟಕದಲ್ಲೇಕೆ ರಜೆಯಿಲ್ಲ?
  • ವೈ.ಎಸ್.ಆರ್. ಕಾಂಗ್ರೆಸ್, ಅದಕ್ಕೇ ಕರ್ನಾಟಕದ ಬಿಜೆಪಿ ಸರಕಾರ ರಜೆ ಕೊಡಲಿಲ್ಲಯೆಂಬ ಮೂದಲಿಕೆ.
  • ವಿರೋಧ ಪಕ್ಷವಾದ ಕಾಂಗ್ರೆಸ್ಸಿನಿಂದ ರಜೆಗೆ ಒತ್ತಾಯಿಸಿ ಧರಣಿ, ಸತ್ಯಾಗ್ರಹ. ಒಂದೆರಡು ಬಸ್ ಭಸ್ಮ
  • ನಾಯಕರು ಸತ್ತಾಗಲೂ ರಜೆ ಕೊಡದೆ ರಾಜಕೀಯ ಮಾಡುವ ಬಿಜೆಪಿ ಸರಕಾರವೆಂಬ ಆರೋಪ
  • TV9 Breaking News "ಮರಣದಲ್ಲೂ ರಾಜಕೀಯ ಮಾಡುವ ಕರ್ನಾಟಕದ ಬಿಜೆಪಿ ಸರಕಾರ"
  • ಈTV Breaking News "ರಜೆಯಿಲ್ಲದ ಈ YSR ಸಾವು ನ್ಯಾಯವೇ?"
  • Churumuriಯಲ್ಲಿ "Ella OK, Worku Yaake?"
  • ಬಳ್ಳಾರಿ ರೆಡ್ಡಿ ಕೃಪಾಪೋಷಿತ ಪತ್ರಕರ್ತರುಗಳ ವರದಿಗಳು ಹೀಗಿರುತ್ತಿದ್ದವೇನೋ - "YSR ನಿಧನಕ್ಕೆ ರಜೆ ಕೊಡದ ಕರ್ನಾಟಕ ಸರಕಾರದ ವಿರುದ್ಧ ಸಿಡಿದೆದ್ದ ಬಳ್ಳಾರಿ ಬ್ರದರ್ಸ್!"
  • ಬ್ಲಾಗ್ ವಿಧುರ ಜೋಗಿ ಒಂದು ವೇಳೆ ಬ್ಲಾಗು ಬರೆಯುತ್ತಿದ್ದರೆ, ಹೇಗೆ ಇದೆಲ್ಲಾ Christian YSR ವಿರುದ್ಧ ಮಂಗಳೂರಿನ ಸಂಘ ಪರಿವಾರದ conspiracy ಎಂದೆಲ್ಲಾ "ಅವಧಿ"ಯಲ್ಲಿ ಬರೆಯುತ್ತಿದ್ದರೇನೋ.
ಏನ್ ಹೇಳ್ತೀರಾ ನೀವು?