Showing posts with label thatskannada. Show all posts
Showing posts with label thatskannada. Show all posts
Saturday, August 20, 2011
ಪತ್ರಕರ್ತರಿಗೆ ಗಣಿ ಕಪ್ಪ: thatskannada.comನಲ್ಲಿ ಕೆಲವೇ ಘಂಟೆಗಳಲ್ಲಿ ಮಾಯವಾಯಿತೇಕೆ?
ಪತ್ರಕರ್ತರಿಗೆ ಗಣಿ ಕಪ್ಪದ ಸುದ್ದಿ ನಿನ್ನೆ ಅಂತರ್ಜಾಲದಲ್ಲಿ ಚೆನ್ನಾಗಿಯೇ ಹರಿದಾಡಿತು.
thatskannada.com ಪೋರ‍್ಟಲಿನಲ್ಲೂ ಈ ಸುದ್ದಿ publish ಆಗಿತ್ತು.
ಆದರೆ ಪ್ರಾಯಷ: ಎರಡೇ ಘಂಟೆ ಅವಧಿಯಲ್ಲಿ ಆ ಲಿಂಕ್ ಕ್ಲಿಕ್ ಮಾಡಿದಾಗ ಓದುಗರಿಗೆ ಸಿಕ್ಕಿದ್ದು "ಪುಟ ಸಿಗುತ್ತಿಲ್ಲ"ವೆಂಬ ಮೆಸೇಜ್. ಮತ್ತೊಂದು ಘಂಟೆಯಲ್ಲಿ ಆ ಲಿಂಕೇ ಪೂರ್ತಿ ಮಾಯವಾಗಿ ಬಿಟ್ಟಿತು.
thatskannadaದ ಶಾಮಿಯೂ ಲೋಕಾಯುಕ್ತ ವರದಿಯಲ್ಲಿ ಹೆಸರಿರುವ ಸಂಪಾದಕರೂ ಕ್ಲೋಸ್ ಫ್ರೆಂಡುಗಳಿರಬಹುದು. ಆದರೆ ಪತ್ರಿಕಾ ಧರ್ಮವನ್ನು ಮರೆತು ಮಿತ್ರರಿಗಾಗಿ ಅಥವಾ ಯಾವುದೋ ಒತ್ತಡಗೊಳಕ್ಕಾಗಿ ಶಾಮಿ ಹೀಗೆ ತನ್ನ ಎಡಿಟೋರಿಯಲ್ ಕತ್ತರಿ ಪ್ರಯೋಗ ಮಾಡಬಾರದಿತ್ತು.
ಏನಂತೀರಿ?
Labels:
ravi belagere,
s k shyamsundar,
thatskannada,
v bhat
Saturday, September 5, 2009
ರಜೆಯೆಂದರೆ ಮಾಧ್ಯಮ ಮಿತ್ರರಿಗೇಕೆ ಅಲರ್ಜಿ?
ಸಡನ್ನಾಗಿ ಕೆಲ ಕನ್ನಡ ಮಾಧ್ಯಮ ಮಿತ್ರರು YSR ನಿಧನಕ್ಕೆ ಕರ್ನಾಟಕದಲ್ಲಿ ರಜೆ ಯಾಕೆಯೆಂಬ ಚರ್ಚೆ ಶುರು ಮಾಡಿದ್ದಾರೆ.ಎಂದಿನಂತೆ "ವಿಜಯ ಕರ್ನಾಟಕ" ತನ್ನ ಕಚೇರಿಗೆ ಈ ರಜೆ ಯಾಕೆ ಬೇಕಿತ್ತು ಎಂದು ಕೇಳಿ ಬಹಳ ಕರೆಗಳು ಬಂದವು ಎಂದು ಹೇಳಿಕೊಂಡಿದೆ. ಕರೆ ಮಾಡಿದವರ ಹೆಸರು ಏನು, ಕೆಲಸವೇನು ಮುಂತಾದ details ಕೇಳಬೇಡಿ - ಕರ್ನಾಟಕದ ನಂ.೧ ಪತ್ರಿಕೆ ಪತ್ರಿಕಾಧರ್ಮದ basics ಮರೆತು ತನಗೆ ಬೇಕಾದ ಹಾಗೆ ಅನಾಮಧೇಯ SMS, ಫೋನ್, ಪತ್ರಗಳನ್ನು ಸೃಷ್ಟಿಸುವುದರಲ್ಲೂ ನಂ.೧ ಅಲ್ಲವೇ? ಕೆಲ ಪತ್ರಿಕೆಗಳ ಸಂಪಾದಕರು "ಹೆಸರು ಬೇಡ, ಊರು ಗೊತ್ತಿಲ್ಲ"ವೆಂಬ ವಾಚಕರ ಪತ್ರಗಳನ್ನು ಸೃಷ್ಟಿಸಿದಂತೆ.
Thaskannada.com ನ ಶ್ಯಾಮಸುಂದರ್ ಅಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ "ಶುಕ್ರವಾರದ ರಜೆ ನಮ್ಮ ಪ್ರಕಾರ ಅಸಿಂಧು" ಎಂದು ಷರಾ ಬರೆದುಬಿಟ್ಟಿದ್ದಾರೆ.ರಜೆ ಕೊಡಬೇಕಿತ್ತಾ ಇಲ್ಲವೋ ಚರ್ಚೆ ಈ ಬ್ಲಾಗ್ ಪೋಸ್ಟಿನ ಉದ್ಧೇಶವಲ್ಲ. ಆದರೆ ತಮಗೆ ಬೇಕಾದ ಹಾಗೆ ಹೇಗೆ ಒಂದು sentimentನ್ನು, opinionನ್ನು ಮಾಧ್ಯಮಗಳು out of the air ಹೇಗೆ ಸೃಷ್ಟಿ ಮಾಡುತ್ತವೆಯೆಂದು ತೋರಿಸಲಷ್ಟೇ.
____________________________________________________________
ರಜೆ ಕೊಟ್ಟರೆ ಯಾಕೆ ರಜೆ ಕೊಟ್ರಿ ಎಂಬ ಪ್ರಶ್ನೆ.
ಒಂದು ವೇಳೆ ಕರ್ನಾಟಕ ರಜೆ ಕೊಡದಿದ್ದರೆ ಪ್ರಶ್ನೆಗಳು ಹೀಗಿರುತ್ತಿದ್ದವೇನೋ? ನೀವೂ guess ಮಾಡಿ ಕಮೆಂಟಿನಲ್ಲಿ:
- ಅತ್ತ ತಮಿಳುನಾಡಿನಲ್ಲಿ ರಜೆ ಕೊಟ್ರು, ಕರ್ನಾಟಕದಲ್ಲೇಕೆ ರಜೆಯಿಲ್ಲ?
- ವೈ.ಎಸ್.ಆರ್. ಕಾಂಗ್ರೆಸ್, ಅದಕ್ಕೇ ಕರ್ನಾಟಕದ ಬಿಜೆಪಿ ಸರಕಾರ ರಜೆ ಕೊಡಲಿಲ್ಲಯೆಂಬ ಮೂದಲಿಕೆ.
- ವಿರೋಧ ಪಕ್ಷವಾದ ಕಾಂಗ್ರೆಸ್ಸಿನಿಂದ ರಜೆಗೆ ಒತ್ತಾಯಿಸಿ ಧರಣಿ, ಸತ್ಯಾಗ್ರಹ. ಒಂದೆರಡು ಬಸ್ ಭಸ್ಮ
- ನಾಯಕರು ಸತ್ತಾಗಲೂ ರಜೆ ಕೊಡದೆ ರಾಜಕೀಯ ಮಾಡುವ ಬಿಜೆಪಿ ಸರಕಾರವೆಂಬ ಆರೋಪ
- TV9 Breaking News "ಮರಣದಲ್ಲೂ ರಾಜಕೀಯ ಮಾಡುವ ಕರ್ನಾಟಕದ ಬಿಜೆಪಿ ಸರಕಾರ"
- ಈTV Breaking News "ರಜೆಯಿಲ್ಲದ ಈ YSR ಸಾವು ನ್ಯಾಯವೇ?"
- Churumuriಯಲ್ಲಿ "Ella OK, Worku Yaake?"
- ಬಳ್ಳಾರಿ ರೆಡ್ಡಿ ಕೃಪಾಪೋಷಿತ ಪತ್ರಕರ್ತರುಗಳ ವರದಿಗಳು ಹೀಗಿರುತ್ತಿದ್ದವೇನೋ - "YSR ನಿಧನಕ್ಕೆ ರಜೆ ಕೊಡದ ಕರ್ನಾಟಕ ಸರಕಾರದ ವಿರುದ್ಧ ಸಿಡಿದೆದ್ದ ಬಳ್ಳಾರಿ ಬ್ರದರ್ಸ್!"
- ಬ್ಲಾಗ್ ವಿಧುರ ಜೋಗಿ ಒಂದು ವೇಳೆ ಬ್ಲಾಗು ಬರೆಯುತ್ತಿದ್ದರೆ, ಹೇಗೆ ಇದೆಲ್ಲಾ Christian YSR ವಿರುದ್ಧ ಮಂಗಳೂರಿನ ಸಂಘ ಪರಿವಾರದ conspiracy ಎಂದೆಲ್ಲಾ "ಅವಧಿ"ಯಲ್ಲಿ ಬರೆಯುತ್ತಿದ್ದರೇನೋ.
Labels:
Churumuri,
Mouring Holiday,
thatskannada,
TV9,
Vijaya Karnataka,
YSR
Subscribe to:
Posts (Atom)
