ವಿ.ಕ. ವರದಿಗೆ ಡಿ.ಜಿ.ಅಜಯ ಸಿಂಗ್ ಪ್ರತ್ಯುತ್ತರ-ಪತ್ರದ ಪೂರ್ಣಪಾಠ ಪ್ರಕಟಿಸದ ವಿ.ಕ. ಸಂಪಾದಕೀಯ ಮಂಡಳಿಯ ಬೃಹಳ್ಳನೆಯರು!
Irony - ವಿಕ ಬೆಂಬಲಕ್ಕೆ "ಅಂಡೆ ಪಿರ್ಕಿ" ಬಿವಿ ಸೀತಾರಾಮ ಮಾತ್ರ
ಕಳೆದ ಬ್ಲಾಗ್ ಪೋಸ್ಟಿನಲ್ಲಿ ವಿ.ಕ.ದ "ವರ್ಗಾವಣೆ ದಂಧೆ" fixer ಪತ್ರಕರ್ತರು ಖಡಕ್ ಅಧಿಕಾರಿ ಅಜಯ ಸಿಂಗರ ವಿರುದ್ಧ ಸಾರಿರುವ ಯುದ್ಧದ ಕುರಿತು ಬರೆದಿದ್ದೆ.
ಅನಾಮಧೇಯ ಪತ್ರದ ಹಿನ್ನೆಲೆಯಲ್ಲಿ ಯಾರೋ ಕಾರಖೂನ ಮಾಡಿದ ಪ್ರೊಸೀಜರಲ್ ತಪ್ಪಿಗಾಗಿ ಕರ್ನಾಟಕದ ಡಿ.ಜಿ./ಐಜಿಪಿಯ ವಿರುದ್ಧ ಯಕ:ಶ್ಚಿತ್ ಯುದ್ಧ ಸಾರಿ, "ಪತ್ರಿಕಾ ಸ್ವಾತಂತ್ರ್ಯ ಹರಣ" ಎಂದೆಲ್ಲಾ ಬಡಬಡಿಸಿದ ವಿ.ಕ.ದ ಸಂಪಾದಕೀಯ ಮಂಡಳಿಯ ಅಸಲೀತನವನ್ನು ಅಜಯ್ ಸಿಂಗರು ತಮ್ಮ ಪತ್ರದಲ್ಲಿ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ.
ಆದರೆ ಮೊದಲ ಪುಟದಲ್ಲಿ ಐಜಿಯನ್ನು ಹಿಗ್ಗಾ ಮುಗ್ಗಾ ಅವಹೇಳನ ಮಾಡಿದ ವಿ.ಕ.ದ ವರ್ಗಾವಣೆ ಪತ್ರಕರ್ತ ಏಜೆಂಟರ ಪೌರುಷ, ಐಜಿ ಅಜಯ ಸಿಂಗರ ಪತ್ರ ಪ್ರಕಟಿಸುವಲ್ಲಿ ಕಂಡು ಬಂದಿಲ್ಲ - ಎಲ್ಲೋ "ಹೆಸರು ಗೊತ್ತಿಲ್ಲ ಊರು ಬೇಡ"ದಂತಹ ಪತ್ರಗಳನ್ನು ಪ್ರಕಟಿಸುವ "ಓದುಗರ ಓಲೆ" ವಿಭಾಗದಲ್ಲಿ ಅಜಯ ಸಿಂಗರ ಪತ್ರವನ್ನು - ಅದೂ ಅರ್ಧ ಕತ್ತರಿಸಿ ಪ್ರಕಟಿಸಿ - ತಾವೆಂತಹ ಹೇಡಿಗಳು ಎಂದು ಭಟ್-ತ್ಯಾಗರಾಜ್-ರಾಘವೇಂದ್ರ ಭಟ್-ವಗೈರೆಗಳು ತೋರಿಸಿವೆ.
ಆದರೆ ಪ್ರಪಂಚ ಬದಲಾಗಿದೆ ಎಂದು ಈ ಕೂಪ ಮಂಡೂಕಗಳು ಅರಿತಂತಿಲ್ಲ! ಇಂಟರನೆಟ್ ಎಂಬ ಮಾಧ್ಯಮ ಎಷ್ಟು ಪ್ರಭಾವಶಾಲಿ ಎಂದು ಪೊಲೀಸರ ವರ್ಗಾವಣೆ ದಂಧೆಯಲ್ಲಿ ಮುಳುಗಿರುತ್ತಿದ್ದ ಈ ಪತ್ರಕರ್ತ ಶಿಖಾಮಣಿಗಳು ಅರಿತಂತಿಲ್ಲ. ಇಲ್ಲದಿದ್ದರೆ ಅಜಯ ಸಿಂಗರಂತಹ tech savvy ಸಜ್ಜನ ಅಧಿಕಾರಿಯ ವಿರುದ್ಧ ಹಿಗ್ಗಾಮುಗ್ಗಾ ಬರೆಯುತ್ತಿದ್ದರೆ?
ವಿ.ಕ. ಸಂಪಾದಕರಿಗೆ ಕಳಿಸಿದ ಪತ್ರದ ಮೂಲ ಪ್ರತಿಯನ್ನು ಕರ್ನಾಟಕ ಪೋಲಿಸ್ ವೆಬ್ ಸೈಟಿನಲ್ಲಿ ಕಾಣ ಬಹುದು (ಇಲ್ಲಿ ನೋಡಿ - http://media.ksp.diqtech.com/files/DO_to_VK.pdf)
ತಮ್ಮ ಪತ್ರವನ್ನು ಕತ್ತರಿಸಿದಲ್ಲದೆ, ಹೇಡಿಗಳಂತೆ ಎಲ್ಲೋ ಒಳಪುಟದಲ್ಲಿ ಪ್ರಕಟಿಸಿರುವ ಬಗ್ಗೆಯೂ ಅಜಯ ಸಿಂಗರು ಆಕ್ರೋಶ ಪಟ್ಟು follow-up ಪತ್ರ ಕಳಿಸಿದ್ದಲ್ಲದೆ ಕಾನೂನು ಕ್ರಮ ಕೈಗೊಳ್ಳಬೇಕಾಗಬಹುದು ಎಂದೂ ಎಚ್ಚರಿಸಿದ್ದಾರೆ.
ಅಜಯ ಸಿಂಹರ ಮೂಲ ಪತ್ರದಲ್ಲಿದ್ದ ಆದರೆ ವಿಕದಲ್ಲಿ ಕತ್ತರಿ ಪ್ರಯೋಗಕ್ಕೊಳಗಾದ ಒಂದು ಪ್ಯಾರಾಗ್ರಾಫ್ ಉಲ್ಲೇಖನೀಯ: "ತಪ್ಪು ಮಾಹಿತಿಯ ಆಧಾರದ ಮೇಲೆ ಕೆಲವು ಮುಖ್ಯ ವ್ಯಕ್ತಿಗಳ ಅಭಿಪ್ರಾಯವನ್ನು ಪಡೆದುಕೊಂಡಿರುತ್ತೀರಿ ಎಂದು ಸ್ಪಷ್ಟವಾಗಿರುತ್ತದೆ. ಅದರಲ್ಲಿ ಕೆಲವರು ನನ್ನನ್ನು ನಿನ್ನೆಯಿಂದ ದೂರವಾಣಿ ಮೂಲಕ ಸಂಪರ್ಕಿಸಿ ಅವರು ಹೇಳಿದ್ದು ಒಂದಾದರೆ, ನಿಮ್ಮ ಪತ್ರಿಕೆಯಲ್ಲಿ ಪ್ರಕಟವಾಗಿರುವುದೇ ಬೇರೆ ಎಂದು ತಿಳಿಸಿದ್ದಾರೆ. ಇದು ಪತ್ರಿಕೆಯ ಸಂಪಾದಕರಾಗಿ ನಿಮ್ಮ ಸ್ವಾತಂತ್ರ್ಯ? ನೀವು ನ್ಯಾಯಯುತ, ಆತ್ಮಸಾಕ್ಷಿಯುಳ್ಳ ಸಜ್ಜನ ವ್ಯಕ್ತಿಯಾಗಿದ್ದರೆ, ವಾಸ್ತವಾಂಶವನ್ನು ವಿವರಿಸಿ ಪೊಲೀಸ್ ಆಯುಕ್ತರು, ಬೆಂಗಳೂರು ನಗರ ಮತ್ತು ನಮ್ಮ ಕಚೇರಿಯಿಂದ ಕಳುಹಿಸಲಾದ ಪತ್ರಗಳನ್ನು ಪ್ರಕಟಿಸಿ ನಂತರ ಸಾರ್ವಜನಿಕ ಅಭಿಪ್ರಾಯವನ್ನು ಪಡೆಯಬಹುದಾಗಿತ್ತು"
ಹೋಗಿ ಆ ಮೂಲ ಪತ್ರವನ್ನು ನೋಡಿ, ನಿಜಕ್ಕೂ ಅಜಯ ಸಿಂಗರ ಪತ್ರ ಒಂದು Class Act - ವಿಕದ ಒಳಹೂರಣವನ್ನು ಚೆನ್ನಾಗಿ ಬಯಲಿಗೆಳೆದಿದ್ದಾರೆ ಮತ್ತು ವಿಶ್ವೇಶ್ವರ ಭಟ್ಟರ ಆತ್ಮ ಸಾಕ್ಷಿಯನ್ನೇ ಪ್ರಶ್ನಿಸಿದ್ದಾರೆ. "ಪತ್ರಿಕಾ ಸ್ವಾತಂತ್ರ್ಯವೆಂದರೆ ಕೊಲ್ಲಲು ಪರವಾನಿಗೆ ಅಲ್ಲ"ವೆಂಬ ಪದಗಳ ಹಿಂದಿರುವ ಅಜಯ ಸಿಂಹರ ನೋವನ್ನು ವಿಕದ ವರ್ಗಾವಣೆ ಏಜೆಂಟ್ ಗಡಣ, fixerಗಳು ಇನ್ನಾದರೂ ಅರ್ಥ ಮಾಡಿಕೊಳ್ಳಬಹುದೇ?
ವಿಕ ಪ್ರಮುಖ ವ್ಯಕ್ತಿಗಳ ಅಭಿಪ್ರಾಯವನ್ನು ತಿರುಚಿ ಬರೆದು ಡಿಜಿ ವಿರುದ್ಧ ಜನಾಭಿಪ್ರಾಯ ರೂಪಿಸಲು ಪ್ರಯತ್ನಿಸಿದರೆ, ವಿಶ್ವೇಶ್ವರ ಭಟ್ಟರ ಈ ಓರಾಟಕ್ಕೆ ಇತರ main stream ಪತ್ರಿಕೆಗಳಿಂದ, ಮಾಧ್ಯಮಗಳಿಂದ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ.
ವಿಶ್ವೇಶ್ವರ ಭಟ್ಟರನ್ನು ಬೆಂಬಲಿಸಿದ ಏಕೈಕ ಸಂಪಾದಕ ಯಾರು ಗೊತ್ತೇ? ಮಂಗಳೂರಿನಲ್ಲಿ "ಕರಾವಳಿ ಅಲೆ"ಯೆಂಬ ಸೆಕ್ಸ್ ಪತ್ರಿಕೆ ನಡೆಸುತ್ತಿರುವ ಬಿ.ವಿ.ಸೀತಾರಾಮ್ ಮಾತ್ರ! ಎಂತಹ ವಿಪರ್ಯಾಸ ನೋಡಿ! ಯಾವ ಬಿವಿ ಸೀತಾರಾಂನ್ನು "ಅಂಡೆ ಪಿರ್ಕಿ"ಯೆಂದು ಬಣ್ಣಿಸಿದ್ದ ವಿಶ್ವೇಶ್ವರ ಭಟ್ಟರ ಬೆಂಬಲಕ್ಕೆ ಈಗ ನಿಂತಿರುವುದು ಅದೇ ಅಂಡೆ ಪಿರ್ಕಿ ಸೀತಾರಾಮ!
ವಿಕದ, ವಿಶ್ವೇಶ್ವರ ಭಟ್ಟರ ಅಧ:ಪತನಕ್ಕೆ ಬೇರೇನು ಸಾಕ್ಷಿ ಬೇಕು!??
Saturday, June 26, 2010
ವಿ.ಕ. ವರದಿಗೆ ಡಿ.ಜಿ.ಅಜಯ ಸಿಂಗ್ ಪ್ರತ್ಯುತ್ತರ ಪತ್ರದ ಪೂರ್ಣಪಾಠ ಪ್ರಕಟಿಸದ ವಿ.ಕ. ಸಂಪಾದಕೀಯ ಮಂಡಳಿಯ ಬೃಹಳ್ಳನೆಯರು! Irony - ವಿಕ ಬೆಂಬಲಕ್ಕೆ "ಅಂಡೆ ಪಿರ್ಕಿ" ಬಿವಿ ಸೀತಾರಾಮ
Labels:
ಅಜಯ್ ಸಿಂಗ್,
ಬಿವಿ ಸೀತಾರಾಂ,
ವರ್ಗಾವಣೆ ದಂಧೆ,
ವಿಜಯ ಕರ್ನಾಟಕ,
ವಿಶ್ವೇಶ್ವರ ಭಟ್
Subscribe to:
Post Comments (Atom)
ಪ್ರಿಯ ರಾಕೇಶ,
ReplyDeleteಸತ್ಯವನ್ನು ತೋರಿಸಬೇಕಾದ ಪತ್ರಿಕೆಗಳೇ, ಸ್ವಾರ್ಥಪ್ರೇರಿತರಾಗಿ ಅಸತ್ಯವನ್ನು ಹರಡತೊಡಗಿದರೆ, ಏನು ಮಾಡುವದು?
ಅಜಯಸಿಂಗರ ವಿರುದ್ಧ ವಿ.ಕ.ದವರು ನಡೆಸುತ್ತಿರುವ ಈ ನೀಚ ಪ್ರಕರಣವನ್ನು ಬಯಲಿಗೆಳೆದಿದ್ದಕ್ಕಾಗಿ ನಿಮಗೆ ಧನ್ಯವಾದಗಳು.
With proof ನೀವು ಮಂಡಿಸಿರುವ ವಿಚಾರ ಸ್ಪಷ್ಟವಾಗಿದೆ. ಅದೇರೀತಿ "ಡಿ.ಜಿ. ಸುತ್ತಮುತ್ತ ಹೆಡ್-ಲೆಸ್ ಚಿಕನ್" ಅಂತ ಬರೆದಿರುವುದನ್ನೂ ಓದ್ದೆ. ಯಾರು ತಲೆ ಇಲ್ಲದ ಕೋಳಿಗಳು ? ಕಾನ್ಸ್ಟೇಬಲ್ ಗಳೇ ? ಗುಮಾಸ್ತರೆ ? ಯಾರು ? ವೈಯಕ್ತಿಕ ವ್ಯಕ್ತಿನಿಂದನೆ ಮಾಡುವುದಾದರೆ ’ವಿಕ’ ದಲ್ಲಿರುವ ಸಮಸ್ತರನ್ನೂ ಟೀಕೆ ಮಾಡಬಹುದು. ಕನ್ನಡದ ಪತ್ರಿಕೆ ಎಂಬ ಕಾರಣದಿಂದ ಜನ ಅಭಿಮಾನವಿರಿಸಿಕೊಂಡಿದ್ದಾರೆ. ಅದನ್ನು ಭಟ್ಟಂಗಿಗಳು ಹಾಳುಮಾಡಿಕೊಳ್ಳತ್ತಿದ್ದಾರೆ !.
ReplyDeleteರಾಕೇಶರಿಗೆ ಮೊದಲನೆಯದಾಗಿ ಅಭಿನಂದನೆಗಳು. ಕೆಲವು ತಿಂಗಳುಗಳಿಂದ ವಿಕ ದ ವರದಿಗಳನ್ನು ಗಮನಿಸಿದಾಗ ಎನೋ ಒಂದು ರೀತಿಯ ಸಂಚು ನಡೆಯುವ ಬಗ್ಗೆ ಮನದಲ್ಲಿ ಸಂಶಯ ಮೂಡಿತ್ತು. ಮೂಗರ್ಜಿ ಪ್ರಕರಣ ಅದಕ್ಕೆ ಇನ್ನೂ ಪುಷ್ಟಿ ನೀಡಿತು. ಇದರ ಬಗ್ಗೆ ವಿವರ ನೀಡಿದ ನಿಮಗೆ ಧನ್ಯವಾದಗಳು. ಬಹುಶಃ ಸದ್ಯದಲ್ಲೆ ವಿಕ ಓದುವುದನ್ನು ನಿಲ್ಲಿಸುತ್ತೇನೆ.
ReplyDeleteಜಯಸಿಂಗರ ವಿರುದ್ಧ ವಿ.ಕ.ದವರು ನಡೆಸುತ್ತಿರುವ ಈ ನೀಚ ಪ್ರಕರಣವನ್ನು ಬಯಲಿಗೆಳೆದಿದ್ದಕ್ಕಾಗಿ ನಿಮಗೆ ಧನ್ಯವಾದಗಳು. ಜೊತೆಗೆ ಬ್ಲಾಗ್-ಮೂಲಕ ಮಾಧ್ಯಮದ ಹುರನವನ್ನು ಬಯಲು ಮಾಡುತ್ತಿರುವ ತಮಗೆ ಧನ್ಯವಾದಗಳು.
ReplyDeleteನಿಮ್ಮ ಮೊದಲ ಬರಹವನ್ನು ನಾನು ಪೂರ್ಣ ನಂಬಿರಲಿಲ್ಲ. ಆದರೆ ಈಗ ಅಭಿಪ್ರಾಯ ಬದಲಾಗಿದೆ.
ReplyDeleteಭಟ್ಟರ ಅಧ:ಪತನ ಕ್ಕೆ ಬೇರೆ ಸಾಕ್ಷಾ ಬೇಕಿಲ್ಲ.
ಒಳ್ಳೆಯ ಬರಹ ರಾಕೇಶ ಅವರೇ.
ನಿಮ್ಮ ಮೊದಲ ಬರಹವನ್ನು ನಾನು ಪೂರ್ಣ ನಂಬಿರಲಿಲ್ಲ. ಆದರೆ ಈಗ ಅಭಿಪ್ರಾಯ ಬದಲಾಗಿದೆ.
ReplyDeleteಭಟ್ಟರ ಅಧ:ಪತನ ಕ್ಕೆ ಬೇರೆ ಸಾಕ್ಷಾ ಬೇಕಿಲ್ಲ.
ಒಳ್ಳೆಯ ಬರಹ ರಾಕೇಶ ಅವರೇ.