ವಿಜಯ ಕರ್ನಾಟಕದ ಸಬ್ ಎಡಿಟರುಗಳಿಂದ ಹಿಡಿದು, ಅಂಕಣಕಾರರು ಸಂಪಾದಕರೆಲ್ಲಾ ವರ್ಗಾವಣೆ ದಂಧೆಯ ಸೈಡು ಬ್ಯುಸಿನೆಸ್ ನಡೆಸುವುದು ವಿಧಾನಸೌಧ ಯಡ ತಾಕುವವರೆಲ್ಲರಿಗೂ ಗೊತ್ತಿರುವಂತ್ತದ್ದೇ. ಯಾವಾಗ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂತೋ ಆ ದಿನದಿಂದಲೇ "ಈ ಸರ್ಕಾರ ಅಧಿಕಾರಕ್ಕೆ ಬಂದದ್ದು ನಮ್ಮ ಪತ್ರಿಕೆಯಿಂದಾಗಿಯೇ" ಎಂದು ವಿಜಯ ಕರ್ನಾಟಕದ ಅಂಕಣಕಾರರು, ಸಂಪಾದಕರು ಹೇಳಿಕೊಂಡು ತಿರುಗುತ್ತಿದ್ದಾರೆ ಎಂಬುದು ಸುಳ್ಳಲ್ಲ.
ಪ್ರಭಾವೀ ಖಾತೆಗಳ ಸಚಿವರ ಅಟೆಂಡರುಗಳು, ಪಿ.ಎ.ಗಳೇ "ಸಾರ್ ವಿಕ ಭಟ್ಟರ ಹತ್ತಿರ ಫೋನು ಮಾಡಿಸಿ" ಎಂದೋ, "ತ್ಯಾಗರಾಜ್ ಶೋಭಕ್ಕರಿಗೆ ಕ್ಲೋಸು, ಅವರ ಬಳಿ ಸಾಹೇಬ್ರಿಗೆ ಫೋನ್ ಮಾಡಿಸಿ"ಯೆಂದೋ ವಿ.ಕ.ಪತ್ರಕರ್ತರ ಅಂಕಣಕಾರರ ಖಾಸಗೀ ಮೊಬೈಲ್ ನಂಬರ್ ನೀಡುತ್ತಾರೆ.
ಇನ್ನು ಡಿ.ಆರ್.ಅಶೋಕರಾಮ್ ಎಂಬ ವಿ.ಆರ್.ಎಲ್.ಕಂಪೆನಿಯ ಕಾರಖೂನ ಕಮ್ "ವಿ.ಕ.ಅಂಕಣಕಾರ" ಅತ್ತ ಎಂ.ಎಲ್.ಸಿ. ವಿಜಯಾನಂದರೆ ಹೆಸರಲ್ಲಿ, ಇತ್ತ ಬಳ್ಳಾರಿ ರೆಡ್ಡಿಗಳ ಏಜೆಂಟರಂತೆ ಇದ್ದ ಬಿದ್ದ ಸಚಿವರ ಮನೆಗಳಲ್ಲಿ ಕಚೇರಿಗಳಲ್ಲಿ ಕಂಡು ಬರುತ್ತಾರೆ.
ಶಾಲಾ ಶಿಕ್ಷಕರ ವರ್ಗಾಣೆಯಿಂದ ಹಿಡಿದು ಉನ್ನತ ಶಿಕ್ಷಕ ಇಲಾಖೆ (ಹೇಗೂ ಲಿಂಬಾವಳಿ "ನಮ್ಮ ಎಬಿವಿಪಿ ಹುಡುಗ" ನೋಡಿ), ಶೋಭಕ್ಕ ಇದ್ದಾಗ ಪಂಚಾಯತಿ ಇಲಾಖೆ, ಪಶು ವೈದ್ಯಕೀಯ ಇಲಾಖೆ, ಸರಕಾರೀ ಮೆಡಿಕಲ್ ಕಾಲೀಜುಗಳ ಗುಮಾಸ್ತರಿಂದ ಹಿಡಿದು ಪೋಲಿಸ್ ಇಲಾಖೆಯ ವರ್ಗಾವಣೆಯಲ್ಲೂ ವಿ.ಕ.ದ ಪತ್ರಕರ್ತ ಮಿತ್ರರು ಕೈಯಾಡಿಸುವುದು ಖಮಾಯಿಸುವುದು ವಿಧಾನಮಂಡಲ ಬೀಟ್ ನ ಎಲ್ಲರಿಗೂ ತಿಳಿದಿರುವ ಸಂಗತಿ.

ಆದರೆ ಯಾವಾಗ ಸುಪ್ರೀಂ ಕೋರ್ಟ್ ಆದೇಶದಂತೆ ಸರಕಾರ ಪೋಲೀಸ್ ವರ್ಗಾವಣೆ ಬೋರ್ಡ್ ಸ್ಥಾಪಿಸಿತೋ, ಅಂದಿನಿಂದ ಈ ವಿ.ಕ. ಪತ್ರಕರ್ತ coterie ಗೆ ಪೋಲಿಸ್ ಇಲಾಖೆಯ ವರ್ಗಾವಣೆ ಕೆಲಸವಿಲ್ಲದಂತಾಗಿ ಹೋಗಿ ಮೈ ಪರೆಚುಕೊಳ್ಳುತ್ತಿದ್ದಾರೆ.
ಇದರ ಪರಿಣಾಮವೇ ಇದ್ದಕ್ಕಿದ್ದಂತೆ ಯಾವುದೋ ಅನಾಮಧೇಯ ಪತ್ರದ ಜಾಡು ಹಿಡಿದು ಪೇದೆ ವಿ.ಕ.ದ ಕಚೇರಿಗೆ ಹೋದದ್ದನ್ನೇ ನೆಪ ಹಿಡಿದು ಡಿ.ಜಿ. ಅಜಯ್ ಸಿಂಗರ ವಿರುದ್ಧ ಕೀಳಭಿರುಚಿಯ ವರದಿಗಳನ್ನು ವಿಜಯ ಕರ್ನಾಟಕ ಪ್ರಕಟಿಸಿ ನಮ್ಮ ಕಾನೂನು ಪಾಲಕರನ್ನು ಕುಗ್ಗಿಸುವ ಕೆಲಸ ಮಾಡುತ್ತಿರುವುದು ಖಂಡನೀಯ.
ಅದೂ ನಕ್ಸಲರಂತಹ ಹೇಡಿಗಳು ಪೋಲಿಸರ ರುಂಡ ಚೆಂಡಾಡುತ್ತಿರುವಾಗ ಪೋಲಿಸರ ಹಿಂದಿರುವ ಬದಲು ಕೇವಲ ತಮ್ಮ ವರ್ಗಾವಣೆ ಶಿಫಾರಸುಗಳಿಗೆ ಸೊಪ್ಪು ಹಾಕಿಲ್ಲವೆಂದು ಅಜಯ್ ಸಿಂಗರಂತಹ ಪ್ರಾಮಾಣಿಕ ಅಧಿಕಾರಿಗಳನ್ನು ಹೀಯಾಳಿಸಿ ಬರೆಯುವುದು "ವಿಜಯ ಕರ್ನಾಟಕ" ಸಂಪಾದಕೀಯ ಮಂಡಳಿಗೆ "ಶೋಭೆ" ತರುವ ವಿಷಯವಲ್ಲ.
ಕರ್ನಾಟಕ ಇತ್ತೀಚಿನ ದಿನಗಳಲ್ಲಿ ಕಂಡ ಸಭ್ಯ ಅಧಿಕಾರಿಗಳಲ್ಲಿ ಅಜಯ್ ಸಿಂಗ್ ಒಬ್ಬರು. ವರ್ಗಾವಣೆ ದಂಧೆಯನ್ನು ಯಕ:ಶ್ಚಿತ್ ನಿಲ್ಲಿಸಿರುವ ಅಜಯ್ ಸಿಂಗ್ CM ಕಚೇರಿಯಿಂದ ಬಂದ ಶಿಫಾರಸುಗಳನ್ನೇ ಕಡೆಗಣಿಸಿರುವಾಗ ವಿಜಯ ಕರ್ನಾಟಕದ ದಲ್ಲಾಳಿ ಪತ್ರಕರ್ತರನ್ನು ಸಂಪೂರ್ಣವಾಗಿ ಕಡೆಗಣಿಸಿರುವುದು ಸರಿಯಾಗಿಯೇ ಇದೆ.
ತಾವೇ ಸೂಪರ್ ಮಿನಿಸ್ಟರ್, ತಾವೇ ಸೂಪರ್ ಗವರ್ಮೆಂಟು ಎಂದು ಬೀಗುತ್ತಿದ್ದ ವಿ.ಕ.ದ ಭಟ್ಟರು, ತ್ಯಾಗರಾಜ್ ಅಶೋಕರಾಮ್ ರಂತಹ ದಲ್ಲಾಳಿಗಳು ಅಜಯ್ ಸಿಂಗರಂತಹ ಅಧಿಕಾರಿಗಳ ವಿರುದ್ಧ ಏನೇನೋ ದಿನಗಟ್ಟಳೆ ಬರೆದರೆ ಜನರು ನಂಬುತ್ತಾರೆ ಎಂಬ ಭ್ರಮೆಯಿಂದ ಹೊರಬಂದು ಆತ್ಮಾವಲೋಖನ ಮಾಡಿಕೊಳ್ಳಬೇಕಾಗಿದೆ.
**************
ಕೊನೆ ಮಾತು: ಶೋಭಕ್ಕನನ್ನು ಹಿಗ್ಗಾ ಮುಗ್ಗ ಹೊಗಳುವ ತ್ಯಾಗರಾಜ್, ಅಶೋಕರಾಮರಂತಹ ವರ್ಗಾವಣೆ ದಲ್ಲಾಳಿಗಳಿಗೊಂದು ಪ್ರಶ್ನೆ - ಶೋಭಕ್ಕ ಇತ್ತೀಚೆಗೆ ಮಾನಸ ಸರೋವರಕ್ಕೆ ಹೋಗಿ ಬಂದರು ತಾನೆ? ಅತ್ತ ಬಡ ಯಾತ್ರಿಕರು ಬಸ್ಸಿನಲ್ಲಿ, ಜೀಪಿನಲ್ಲಿ ಒದ್ದಾಡಿಕೊಂಡು ಮಾನಸ ಸರೋವರಕ್ಕೆ ಹೋದರೆ, ಶೋಭಕ್ಕ ಹೆಲಿಕಾಪ್ಟರಿನಲ್ಲಿ ಬುರ್ರೆಂದು ನೇಪಾಳ ಚೀನಾ ಹೋಗಲು ಆದ ಖರ್ಚು ಎಷ್ಟು ಎಂದು ಕೇಳುವ ಧೈರ್ಯ ತಮಗಿದೆಯೇ? ಯಾವುದೇ ಆದಾಯವಿಲ್ಲದೇ ಯಕ:ಶ್ಚಿತ್ ಎಂ.ಎಲ್.ಎ. ಆಗಿರುವ ಶೋಭಕ್ಕನಿಗೆ ಹೀಗೆ ಕೋಟ್ಯಾಂತರ ರೂಪಾಯಿ ಸಿಕ್ಕಿದ್ದು ಎಲ್ಲಿಂದ?ಯಾವುದೋ ಹಳಸಲು "ಸುದ್ದಿಮನೆ" ಬದಲು ಅಥವಾ "ಹಾಲಪ್ಪ tape" ಎಂಬ political manipulatative ಗೆ ಬಲಿಬಿದ್ದು "ನಮ್ಮದು ತನಿಖಾ ಪತ್ರಿಕೋದ್ಯಮ" ಎಂದು ಕೊಚ್ಚಿಕೊಳ್ಳುವ ಬದಲು, ಒಂದಿನಿತೂ ಆದಾಯವಿಲ್ಲದೆಯೂ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಮಾನಸ ಸರೋವರಕ್ಕೆ ಬುರ್ರೆಂದು ಹಾರಿಹೋದ ಶೋಭಕ್ಕರ finance ಮಾಡಿದ್ದು ಯಾರೆಂದು ಹುಡುಕಿ ನಿಜವಾದ ಪತ್ರಿಕೋದ್ಯಮ ಏನೆಂದು ತೀರಿಸುವ ತಾಖತ್ತು "ವಿಜಯ ಕರ್ನಾಟಕ"ದ ಪತ್ರಕರ್ತರೆಂಬ ವರ್ಗಾವಣೆ ಏಜೆಂಟರುಗಳಿಗಿದೆಯೇ?
&&&&&
ರಾಕೇಶ,
ReplyDeleteವಿ.ಕ.ದಲ್ಲಿ ಅಜಯಸಿಂಗರ ಬಗೆಗೆ ವಕ್ರ ವರದಿ ಬಂದಾಗ,ಓದಿ ಬೇಜಾರಾಗಿತ್ತು. ಅದರ ಹಿಂದೆ ಇಷ್ಟೆಲ್ಲ ಕುತಂತ್ರ ಇರುವದು ಗೊತ್ತಿರಲಿಲ್ಲ. ವಿ.ಕ.ದ ಬಗೆಗೆ ತುಂಬ ಅಸಮಾಧಾನವಾಗುತ್ತಿದೆ.
ಉತ್ತಮ ಲೇಖನಕ್ಕಾಗಿ ಧನ್ಯವಾದಗಳು. ಯಾವಾಗ ವಿಜಯ ಕರ್ನಾಟಕ ನೈಸ್ ವಿಚಾರದಲ್ಲಿ ದೇವೇ ಗೌಡರನ್ನು ಬೆಂಬಲಿಸಿ ಈಗಿನ ಸರಕಾರವನ್ನೆ ಹೊಣೆಯನ್ನಗಿಸಿತೋ ಅವತ್ತಿನಿಂದ ಇವತ್ತಿನ ವರೆಗೆ ಒಂದಲ್ಲ ಎರಡಲ್ಲ ಎಲ್ಲ ವಿಚರಗಳಲ್ಲೂ ವಿಕ ಎಡವಿದೆ. ನೈಸ್, ಹಾಲಪ್ಪ, ರೇಣುಕಾಚಾರ್ಯ ಅಥವಾ ಈಗಿನ ಮೂಗರ್ಜಿ ವಿಷಯವೇ ಆಗಲಿ ಯಾವ ವಿಚಾರಗಳೂ ಅಂಥಹ ಪ್ರಾಮುಖ್ಯದ್ದಲ್ಲ. ಪತ್ರಿಕೆ ಎಷ್ಟು ಕೀಳು ಮಟ್ಟಕ್ಕೆ ಇಳಿದಿದೆ ಅಂದರೆ ಹಾಲಪ್ಪ ಪ್ರಕರಣದ ಬಗ್ಗೆ ಸಾರ್ವಜನಿಕರ ಅಭಿಪ್ರಾಯವನ್ನು ಆಹ್ವಾನಿಸಿದೆ. ಇದೇನು ಸಂಜೆ ಪತ್ರಿಕೆಯೆ? ಒಂದು ಪತ್ರಿಕೆಗೆ ಬಹಳಷ್ಟು ಜವಾಬ್ದಾರಿ ಇದೆ. ಸರಕಾರದ ಪ್ರತಿಯೊಂದು ಕೆಟ್ಟ ನಿರ್ಧಾರ, ಕ್ರಮವನ್ನು ಟೀಕಿಸುವ ಹಕ್ಕು ಇದೆ. ಹಾಗಂತ ಮೇಲೆ ಹೇಳಿದಂತಹ ಕ್ಷುಲ್ಲಕ ವಿಚಾರಗಳ ಮೂಲಕ ಜನ ಮನ್ನಣೆ ಗಳಿಸಲು ಹೊರಟರೆ ನಮ್ಮ ಮನಸ್ಸಿನಲ್ಲಿ ಏನೊ ಸಂಶಯ ಮೂಡುತ್ತದೆ ಅಲ್ಲವೇ?
ReplyDelete