Wednesday, March 3, 2010

"ಕನ್ನಡ ಪ್ರಭ ಲೇಖನ ನನ್ನದಲ್ಲ": ತಸ್ಲೀಮಾ | ದೇವೇಗೌಡರ ಅಮೇಧ್ಯ ತಿಂದು ಕೋಮು ಗಲಭೆಗೆ ಮುನ್ನುಡಿ ಬರೆದ ಕನ್ನಡಪ್ರಭ

ಕನ್ನಡ ಪ್ರಭದ ಸಂಪಾದಕೀಯ ಮಂಡಳಿಯ ಅಸಲೀ ರೂಪ ಬಯಲಾಗಿದೆ.

ಇಸ್ಲಾಮ್ ಮತ್ತು ಪ್ರವಾದಿಯ ಬಗ್ಗೆ ಹೀನಾಯಮಾನವಾಗಿ ಬರೆದು ಆ ಗಲೀಜನ್ನು ತಸ್ಲೀಮಾ ಬಾಯಿಗೆ ಒರೆಸಿ ಬಚಾವ್ ಆಗುತ್ತೇವೆಯೆಂದು ಕನ್ನಡ ಪ್ರಭದ ಎಣಿಸಿದ್ದರೆ ಈಗ ಆದದ್ದೇ ಬೇರೆ. ವೀಸಾ ನವೀಕರಣಕ್ಕಾಗಿ ಭಾರತದಲ್ಲಿರುವ ತಸ್ಲೀಮಾ ತಾನೆಂದೂ ಪ್ರವಾದಿ ಮತ್ತು ಬುರ್ಖಾ ಬಗ್ಗೆ ಬರೆದಿಲ್ಲವೆಂದು ಹೇಳಿರುವುದು ಕನ್ನಡ ಪ್ರಭ ಅಸಲಿಯತ್ತನ್ನು ತೋರಿಸುತ್ತದೆ.

ಆದದ್ದು ಇಷ್ಟೇ: ದೇವೇಗೌಡ ಮತ್ತು ತಲೆಹರಟೆ ಕಾಂಗ್ರೆಸಿಗ ಗವರ್ನರ್ ಭಾರಾಧ್ವಾಜ್ ಸೇರಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಲು ನಡೆಸಿರುವ ಸಂಚಿಗೆ ಕನ್ನಡ ಪ್ರಭ ಕೂಡಾ ತನ್ನ ಕಿರು ಕಾಣಿಕೆ ಸಲ್ಲಿಸಿದೆ. ಹೇಗೂ ಸಂಪಾದಕೀಯ ಮಂಡಳಿ ಸುವರ್ಣಕ್ಕೆ ಗುಳೇ ಹೋಗಿದೆ, ಸರ್ಕ್ಯುಲೇಷನ್ನೂ ಎಕ್ಕಟ್ಟಿ ಹೋಗಿದೆ. ಇಂದೋ ನಾಳೆಯೋ ಎಂಬಂತೆ ದಿನ ದೂಡುತ್ತಿರುವ ಕನ್ನಡ ಪ್ರಭದ ಸಂಪಾದಕೀಯ ಮಂಡಳಿಗೆ ದೇವೇಗೌಡರ "ಕಾಣಿಕೆ" ಎಷ್ಟು ಎಂದು ಕೇಳಬೇಕಾಗಿದೆ.

ಅತ್ತ ಲೇಖನ ಪ್ರಕಟವಾಗುತ್ತಿದ್ದಂತೆ ಇತ್ತ ಹಾಸನ ಶಿವಮೊಗ್ಗಾಕ್ಕೆ ಸಾವಿರಾರು ಜನರನ್ನು ಕಳಿಸಿದ್ದು ಯಾರು? ಕೆಲವೇ ಘಂಟೆಗಳಲ್ಲಿ ಗಲಭೆ ಆಯೋಜಿಸಿದ್ದು ಯಾರು? "ಸಿಂಧು" ಎಂಬ ಹೆಸರಲ್ಲಿ ಪ್ರಕಟವಾದ ಈ ಲೇಖನದ ಮೂಲ ಲೇಖಕ ಯಾರು?

ಪ್ರಾಯಶ: ತಸ್ಲೀಮಾ ನಾರ್ವೆಯೋ ಸ್ವೀಡನಲ್ಲೋ ಇದ್ದರೆ ಇದು ಬಯಲಾಗುತ್ತಿರಲಿಲ್ಲ. ಆದರೆ ಕನ್ನಡ ಪ್ರಭದ ದುರಾದೃಷ್ಟಕ್ಕೆ ಆಯಮ್ಮ ವೀಸಾ ಕೆಲಸಕ್ಕಾಗಿ ಇದೇ ಸಮಯದಲ್ಲಿ ದೆಹಲಿಯಲ್ಲಿದ್ದು ಕೂಡಲೇ ಸ್ಪಷ್ಟೀಕರಣ ನೀಡಿ ಕನ್ನಡ ಪ್ರಭದ ಅಸಲು ಬಯಲಾಗುವಂತಾಗಿದೆ.

ಖಾದ್ರಿ ಶಾಮಣ್ಣ, ವೈಯೆನ್ಕೆಯಂತಹವರ ಸಾರಥ್ಯದಲ್ಲಿ ಮೆರೆದಿದ್ದ, ಒಂದು ಕಾಲದಲ್ಲಿ ಸ್ವತಂತ್ರ ಪತ್ರಿಕೋದ್ಯಮಕ್ಕೆ ಹೆಸರಾಗಿದ್ದ ಕನ್ನಡ ಪ್ರಭಕ್ಕೆ ಗೌಡ-ಭಾರಾಧ್ವಾಜರಂತಹ ರಾಜಕಾರಣಿಗಳ ಅಮೇಧ್ಯ ತಿಂದು ಬದುಕುವಂತಹ ಪರಿಸ್ಥಿತಿ ಬಂದಿರುವುದು ಎಂಥಹಾ ವಿಪರ್ಯಾಸ ನೋಡಿ?

9 comments:

  1. ವಿಷಯ ಸತ್ಯವಾಗಿದ್ದರೆ ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಇನ್ನೊಂದಿಲ್ಲ!!!

    ReplyDelete
  2. ಹೌದಾ? ಎಂಥಾ ಹೊಲಸು ರಾಜಕೀಯ!

    ReplyDelete
  3. rafiqdurbar747@gmail.comMarch 05, 2010

    dirty politics, we shame to be live with these type of politiciens, these people think that they were living for a thousand years. they forget SATHYA, DHARMA, KARMA.
    These people live only for money n political adhikara.

    ReplyDelete
  4. ಹೀಗೂ ಉಂಟೆ ????....ಕೆಟ್ಟ ರಾಜಕೀಯ

    ReplyDelete
  5. shame....... shame.... kannada prabha....

    ReplyDelete
  6. ಶ್ಯೋಧMarch 06, 2010

    ಇದು ಮೂಲತಃ ತಸ್ಲಿಮ ಬರೆದಿದ್ದ ಲೇಖನ ಹೌದು. ಅವರಿಗೆ ತಿಳಿಸದೇ ಅನುವಾದ ಮಾಡಿ ಬರೆಸಿದ್ದಾರೆ ಅನ್ನಿಸುತ್ತೆ. ನಾನು ಮೂಲ ಲೇಖನವನ್ನೂ, ಕನ್ನಡ ಪ್ರಭ ಅನುವಾದವನ್ನೂ ಓದಿದ್ದೇನೆ. ಅನುವಾದ ಸರಿಯಾಗಿದೆ. ಎಲ್ಲೂ ತಸ್ಲಿಮ ಅವರು ಅರಬಸ್ತಾನಿಯವರು ಬೂರ್ಕ ವಿರೋಧಿಗಳು ಎಂದು ಹೇಳೇ ಇಲ್ಲವಲ್ಲ? ತಸ್ಲಿಮಾಗೆ ಯಾರೋ ಕನ್ನಡ ಲೇಖನದ ತಪ್ಪು ಅನುವಾದ ಕೊಟ್ಟಿರಬೇಕು.

    ReplyDelete
  7. http://www.gulfkannadiga.com/news-20180.html

    ReplyDelete
  8. ರಾಕೇಶ್.. ನೀವು ಬರೆದಿದ್ದು ನೂರಕ್ಕೆ ನೂರರಷ್ಟು ಸತ್ಯ. ನಾನು ಮೂಲ ಇಂಗ್ಲೀಷ್ ಹಾಗೂ ಕನ್ನಡ ಪ್ರಭ ಅನುವಾದ ಎರಡನ್ನೂ ಓದಿದ್ದೇನೆ. ತಸ್ಲೀಮಳ ಕೊಳಕು ಲೇಖನಕ್ಕೆ ಮತ್ತಷ್ಜು ಕೊಳಕು ಬೆರಸುವ ಕೆಲಸವನ್ನು ಕನ್ನಡ ಪ್ರಭ ಮಾಡಿದೆ. ಮೂಲಕ್ಕಿಂತ ಹೇಯ ಭಾಷೆಯನ್ನು ಅನುವಾದದಲ್ಲಿ ಬಳಸಿದೆ. ಖಂಡಿತ ಇದೊಂದು preplanned ಕೃತ್ಯ.

    ReplyDelete