Saturday, November 5, 2011

F1 ರೇಸಿಗೆ ಬಿಟ್ಟಿ ಟಿಕೆಟ್ ಕೊಡದ Airtel ವಿರುದ್ಧ ಕನ್ನಡಪ್ರಭದ ರಣ ಕಹಳೆ!







ಕಳೆದ ಕೆಲ ದಿನಗಳಿಂದ ಕನ್ನಡಪ್ರಭದಲ್ಲಿ ಏತಪ್ರೋತವಾಗಿ ಬರುತ್ತಿರುವ Airtel ಕಂಪೆನಿ ವಿರೋಧೀ ವರದಿಗಳ ಹಿಂದೆ ಹೋಗಿ ನೋಡಿದರೆ ಕಂಡು ಬಂದದ್ದು ಅದೇ ಹಳೆ ಮುಖಗಳ "ಬಿಟ್ಟಿ" ಪ್ರೀಯತೆ.
ಮೊದಲೇನೋ "ಕನ್ನಡಪ್ರಭ"ದ ದೊರೆ ರಾಜೀವ ಚಂದ್ರಶೇಖರ್ - ಒಂದು ಕಾಲದಲ್ಲಿ BPL Mobile ಮಾಲಕ - ಅವರ ವೃತ್ತಿ ಮತ್ಸರಕ್ಕೆ ಭಟ್ ಮತ್ತು ಗುಂಪು ಈ ವರದಿಗಳನ್ನು ಸೃಷ್ಟಿ ಮಾಡುತ್ತಿದೆಯೆಂದು ನಂಬಿದ್ದೆ.

ಆದರೆ ಸ್ವಲ್ಪ ಕೇಳಿ ನೋಡಿದಾಗ ಕಂಡು ಬಂದದ್ದು ಸೈಟು, ಪ್ರಶಸ್ತಿ ದೋಚುವಲ್ಲಿ ಕಂಡುಬಂದಂತಹ ಆಸೆಬುರುಕುತನ.

ಇತ್ತೀಚೆಗೆ ನಮ್ಮ ದೇಶದಲ್ಲಿ ಅದ್ದೂರಿಯಾಗಿ ನಡೆದ Formula 1 ರೇಸಿನ ಪ್ರಮುಖ ಪ್ರಾಯೋಜಕ Airtel. ಕನ್ನಡಪ್ರಭದ non-ಮೂಲವಾಸಿಗಳ Facebook, Twitter ಗಳನ್ನು ಓದಿದವರಿಗೆ ಭಟ್, ಪ್ರತಾಪಸಿಂಹ ವಗೈರೆಗಳ F1 ಪ್ರೀತಿ ತಿಳಿದಿರುವಂತದ್ದೆ.
ಸೋ ಈ ಭಟ್, ಸಿಂಹಗಳು F1 ರೇಸಿನ ಬಿಟ್ಟಿ ಟಿಕೆಟುಗಳಿಗೆ Airtel ಬಳಿ ಬೇಡಿಕೆ ಇಟ್ಟಿವೆ. ಆದರೆ Formula 1 ನಂತಹ ಅಂತರಾಷ್ಟ್ರೀಯ ರೇಸುಗಳ ಟಿಕೆಟುಗಳು ಎಂದೋ ಮಾರಾಟ ಆಗಿ ಹೋಗಿರುತ್ತವೆ ಅಥವಾ ಪ್ರಾಯೋಜಕರಿಗೆ ಇಷ್ಟೇ ಎಂಬ ಮಿತಿ ಇರುತ್ತದೆ. ಅಷ್ಟಕ್ಕೂ ಕಳ್ಳೇಪುರಿಯಂತೆ ಹಂಚಲು F1 ಟಿಕೆಟುಗಳು BDA ಅಥವಾ MUDA ಸೈಟುಗಳಲ್ಲವಲ್ಲ? ಭಟ್ಟರು UK, Finland ಹೋಗಲು ಉಪಯೋಗಿಸಿದ ವಿಮಾನ ಕಂಪೆನಿಗಳಿಂದ ಸಿಗುವಂತಹ ಬಿಟ್ಟಿ ಟಿಕೆಟುಗಳಂತೂ ಅಲ್ಲವೇ ಅಲ್ಲ.

Airtel ನವರು ನಿಮಗೆ ಬಿಟ್ಟಿ ಟಿಕೆಟುಗಳನ್ನು ಕೊಡಲು ಆಗಲ್ಲ ಎಂದಿದ್ದಾರೆ.

ನಾವೂ ನೋಡ್ತೀವಿ ಅಂದಿದೆ ಕ.ಪ್ರ. ಗ್ಯಾಂಗು. ಹೇಗೂ ಏನೇನ್ ಮಾಡ್ತೀವೀ ನೋಡ್ತಾ ಇರಿ ಎನ್ನೋವ್ರು ನೋಡಿ!

ನಿಮಗೆ ನಾವು ಈಗಾಗಲೇ ಜಾಹಿರಾತು ಕೊಡುತ್ತಿದ್ದೇವೆ, ಇದಕ್ಕೆಲ್ಲಾ ಯಾಕೆ ಗಲಾಟೆ ಎಂದರೂ ತಣ್ಣಗಾಗದ ಕ.ಪ್ರ. ನಿಮ್ಮ ಜಾಹಿರಾತು ನಿಮ್ಮಲ್ಲೇ ಇರಲಿ, ಮೊದಲು ಟಿಕೆಟ್ ಕೊಡಿ ಎಂದು ಹಠಕ್ಕೆ ಬಿದ್ದರೂ Airtel ಅದಕ್ಕೆ ಸೊಪ್ಪು ಹಾಕಿಲ್ಲ. ಗಾಯಕ್ಕೆ ಉಪ್ಪು ಸವರಿದಂತೆ ಇವರ ದುರಾಶೆ ನೋಡಿ already schedule ಆಗಿದ್ದ ಜಾಹಿರಾತುಗಳನ್ನು ಹಿಂಪಡೆದಿದೆ.

ಅಲ್ಲಿಗೆ ಶುರುವಾಯ್ತು ನೋಡಿ "ಕನ್ನಡಪ್ರಭ"ದಲ್ಲಿ Airtel ಬಗ್ಗೆ ಪುಂಖಾನುಪುಂಖವಾಗಿ ಸರಣಿಯಂತೆ ಅಪ್ಪ ಅಮ್ಮ ಇಲ್ಲದ "ವಿಶೇಷ ವರದಿ"ಗಳು!

So now you know!

******************
English summary:

Kannada daily "Kannada Prabha" has been publishing series of so called "Special Reports" against Airtel for past few days.

On investigating what caused this rag to suddenly go after Airtel, I found usual hypocrisy of journalists in India - asking for freebies. In this instance Kannada Prabha Editorial Team demanded free passes to F1 Race held recently in India of which Airtel was the main sponsor. When that was denied Kannada Prabha team started this series against Airtel.

It has to be noted that Kannada Prabha is owned by Rajeev Chandrashekhar - Rajya Sabha MP - and former owner of BPL Mobile so there is probably some business jealousy in play here as well. It is a pity that journalists have fallen so low to demand freebies as if it is their birth right.

********

4 comments:

  1. ಹೀಗಾ ಸಮಾಚಾರ! ಪತ್ರಿಕಾಮಾಧ್ಯಮದ ದುರುಪಯೋಗವಲ್ಲವೆ ಇದು? ವಿಶ್ವೇಶ್ವರ ಭಟ್ಟರು ವಿ.ಕ.ದಲ್ಲಿದ್ದಾಗ, ತಮಗೆ ನೋಟೀಸ ಸರ್ವ್ ಮಾಡಲು ಪೋಲೀಸ್ ಪೇದೆ ಬಂದಾಗ, ಅದು ತಮ್ಮ ಮಾನಕ್ಕೆ ಕಡಿಮೆ ಎಂದು ಹಾರಾಡಿ, ವಿ.ಕ.ದಲ್ಲಿ ಮುಖಪುಟದಲ್ಲಿ ಹಾಕಿದಂತೆ ನೆನಪು. ಇವರ ಯೋಗ್ಯತೆ ಗೊತ್ತಾಯಿತು ಬಿಡಿ!

    ReplyDelete
  2. ನನ್ನ ಅನುಭವದಂತೆ ಏರ್ಟೆಲ್ ಕಂಪೆನಿಯು ಹೆಚ್ಚು ಪಾರದರ್ಶಕವಾಗಿಯೇ ಕೆಲಸ ಮಾಡುತ್ತಿದೆ ( ಬೇರೆಯದಕ್ಕೆ ಹೋಲಿಸಿದರೆ). ಸ್ವಾರ್ಥ ಸಾಧನೆಗೆ ಏನು ಬೇಕಾದರೂ ಮಾಡುವ ದಿಗ್ಗಜಗಳನ್ನು ತಡೆಯುವವರು ಯಾರು ? . ಮನೋಜ್ ಕುಮಾರ್ ಸೊಂತಾಲಿಯಾನೇ ಹೇಳಬೇಕು !.

    ReplyDelete
  3. ಲೇಖನ ಚೆನ್ನಾಗಿಯೇ ಇದೆ. ಒಳ ರಾಜಕೀಯಗಳು ಜನಸಾಮಾನ್ಯನ ಅರಿವಿಗೆ ಬರುವುದೇ ಇಲ್ಲ ಆದರೂ AIR TEL ಪೂರ್ಣ ಪ್ರಾಮಾಣಿಕ ಎಂದು ಅನಿಸುವುದಿಲ್ಲ. ಮೂರು ಸಲ ಸಿಮ್ ತೆಕ್ಕೊಂಡು ಮೂರು ಸಲ ಅದನ್ನು ಬೇಡ ಎಂದು ಬಿಟ್ಟಿದ್ದೇನೆ. ಅನಾವಶ್ಯಕ ಚಾರ್ಜೆಸ್ ಕಟ್ ಆಗುವುದು. ಗ್ರಾಹಕರ ಕೇಂದ್ರ ಕ್ಕೆ ಮಾಡಿದರೆ ಅದಕ್ಕು ಚಾರ್ಜ್ ಬೇರೆ .. ಕಾಲರ್ ಟೋನ್ ನಮಗರಿವಿಲ್ಲದೆ, ನಮಗೆ ಬೇಡದೇ ಇದ್ದರು ಹಾಕಿ ಅದರ ಮೌಲ್ಯವನ್ನು ಕಡಿತ ಗೊಳಿಸುವುದು.. ಹಾಗಾಗಿ AIRTEL ಪೂರ್ಣ ಸಾಚಾ ಎಂದು ನಂಬಬೇಡಿ..

    ReplyDelete
  4. ಕನ್ನಡ ಪ್ರಭ ಒಂದು ಉಪಯೋಗ ಇಲ್ಲದ ಪತ್ರಿಕೆ. ಹಾಗೆ ಏರ್ ಟೆಲ್ ಒಂದು ಗ್ರಾಹಕರಿಗೆ ನೇರವಾಗಿ ಮಕಮಲ್ ಟೋಪಿ ಇಡುವ ದೂರವಾಣಿ ಕಂಪನಿ. ಕಪ್ರ ವರದಿ ತಪ್ಪಿಲ್ಲ. ಆದರೆ ಟಿಕೆಟ್ ಗೋಸ್ಕರ ಬರೆದಿದ್ದರೆ .... ಯಾರು ಕ್ಷಮಿಸಲಾರರು.

    ReplyDelete