ಮಾಧ್ಯಮ ಮಿತ್ರರ ಗರ್ಭ ಗುಡಿ
ಇತ್ತೀಚೆಗೆ ಕನ್ನಡ ಮಾಧ್ಯಮ ಮಿತ್ರರು ಒಂದು ಕಡೆ ಒಟ್ಟಾಗಿ "ಕನ್ನಡ ಜರ್ನಲಿಸ್ಟ್ಸ್ - ಇದು ಮಾಧ್ಯಮ ಮಿತ್ರರ ಸಮೂಹ ಮಾಧ್ಯಮ"ವೆಂಬ ಇ-ಗುಂಪೊಂದನ್ನು ಸ್ಥಾಪಿಸಿಕೊಂಡಿದ್ದಾರೆ.
ಉದ್ಧೇಶವೇನೋ ಒಳ್ಳೆಯದೇ, ಆದರೆ ಟಿಪಿಕಲ್ ಪ್ರೆಸ್ ಕ್ಲಬ್ಬುಗಳ ಹಾದಿ ಹಿಡಿಯುವ ಎಲ್ಲಾ ಲಕ್ಷಣಗಳಿವೆ.
ಮಾಧ್ಯಮಗಳ ಬಗ್ಗೆ ಟೀಕೆ ಬಿಡಿ, ಇ-ಗುಂಪನ್ನು ಸೇರುವುದೇ ಒಂದು ಸಾಹಸ. ಬರೀ ಈ ಎಕ್ಸಕ್ಲೂಸಿವ್ ಕ್ಲಬ್ ಒಳಗೆ ಹೋಗುವುದು ಸಾಮಾನ್ಯ ಜನರಿಗೆ ಬಿಡಿ, ಅವರ ಮಿತ್ರರಲ್ಲದವರ ಮಾಧ್ಯಮದವರಿಗೇ ಇಲ್ಲಿ ಎಂಟ್ರಿ ಇಲ್ಲ.
ಕನ್ನಡ ಮಾಧ್ಯಮ ಲೋಕದ ಟ್ರಾಜೆಂಡಿಯಂದರೆ ಇದೇ. ತಮ್ಮದೇ ಲೋಕದಲ್ಲಿದ್ದು ನಾವು ಹೇಳಿದ್ದೇ ಸರಿಯೆಂಬ ವರ್ತನೆ.
ಲೋಕದ ಎಲ್ಲಾ ವಿಷಯಗಳ ಮೇಲೆ ಟೀಕೆ ಕಮೆಂಟು ಮಾಡುತ್ತಾರಿವರು. ಇದ್ದ ಬದ್ದವರ ವಿಷಯದಲ್ಲಿ ಮೂಗು ಹಾಕಿ ಪತ್ರಿಕೋದ್ಯಮದ ಹೆಸರಲ್ಲಿ ಎಲ್ಲರನ್ನೂ ಟೀಕೆ ಮಾಡಿ ಉಪದೇಶ ಮಾಡುವ ಇವರ ಮೇಲೆ ಟೀಕೆ ಮಾಡಿ ನೋಡಿ?
ಪತ್ರಿಕಾ ಸ್ವಾತಂತ್ರದ ಹೆಸರಲ್ಲಿ ಘಂಟೆಗಟ್ಟಳೆ ಭಾಷಣ ಮಾಡುತ್ತಾರಿವರು, ಆದರೆ ಈ ಪತ್ರಕರ್ತರ ಬ್ಲಾಗುಗಳಲ್ಲಿ ಅವರ ಅಭಿಪ್ರಾಯಕ್ಕೆ ಭಿನ್ನವಾದ ಕಮೆಂಟು ಹಾಕಿ ನೋಡಿ? ಊಹೂಂ, ಅಲ್ಲಿ ಭಟ್ಟಂಗಿಗಳಿಗೆ ಮಾತ್ರ ಪ್ರವೇಶ.
ಪರಸ್ಪರ ಬೆನ್ನು ತಟ್ಟಿಕೊಳ್ಳುವ, ಸ್ವಪ್ರಶಂಸೆಯಲ್ಲೇ ಕಳೆದುಹೋಗುವುದಾದರೆ ಪ್ರೆಸ್ ಕ್ಲಬ್ಬಿನಲ್ಲೇ ಅದನ್ನು ಮಾಡಬಹುದಲ್ಲ?
ಈ ಇ-ಕನ್ನಡ ಮಾಧ್ಯಮ ಮಿತ್ರರ ಇ-ಗರ್ಭಗುಡಿಗೆ ಓರ್ವ ಮಾಧ್ಯಮದ ವಿದ್ಯಾರ್ಥಿಯಾಗಿ ಪ್ರವೇಶ ಬಯಸಿ ಎಪ್ಲಿಕೇಶನ್ ಹಾಕಿ ಒಂದು ವಾರವಾದರೂ ಎಂಟ್ರಿ ಸಿಗಲಿಲ್ಲವಾದರಿಂದ ನೊಂದು ಈ ಬ್ಲಾಗ್ ಪೋಸ್ಟ್ ಮಾಡಬೇಕಾಯಿತು.
ಹಾಗಂತಾ ಎಲ್ಲಾ ಬರೀ ಜೋಳು ಅಂತಲ್ಲ. ಚಾರ್ಲಿ ಚಾಪ್ಲಿನ್ ಪ್ರತಿಮೆ ವಿಷಯದಲ್ಲಿ ಮಾಧ್ಯಮಗಳು ವರ್ತಿಸಿದ ರೀತಿಯ ಬಗ್ಗೆ ಅವಿನಾಶ್ ಬಿ. ಯವರು "ಇಲ್ಲದ ಚಾರ್ಲಿ ಚಾಪ್ಲಿನ್ ಪ್ರತಿಮೆಗೆ ಧಾಳಿ"ಯೆಂದು ಬ್ಲಾಗಿಸಿ ಈ ವಿಷಯದಲ್ಲಿ ಮಾಧ್ಯಮಗಳು ವರ್ತಿಸಿದ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ.
No comments:
Post a Comment