Monday, January 11, 2010

ವಿ.ಕ.ಭಟ್ಟರ ನಿಗೂಢ ನಡೆಗಳು - ಎರಡು ಸ್ಯಾಂಪಲ್

ಕಳೆದೆರಡು ವಾರದಿಂದ ನೋಡುತ್ತಿದ್ದೇನೆ. "ವಿಜಯ ಕರ್ನಾಟಕ"ದ ವಿಶ್ವೇಶ್ವರ ಭಟ್ಟರು ಓದುಗರ ಬುದ್ಧಿಮತ್ತೆಯನ್ನು ಸ್ವಲ್ಪ underestimate ಮಾಡಿದಂತಿದೆ. ಇಲ್ಲವಾದರೆ ಓದುಗರ ಕಿವಿ ಮೇಲೆ ಹೂವಿಡಲು ಯಾಕೆ ಯತ್ನಿಸುತ್ತಿದ್ದಾರೆ ಇವರು?

ಸ್ಯಾಂಪಲ್ ನಂ.೧: ವಿ.ಕೆ.ಮತ್ತು ರೇಣುಕಾ ನಡುವೆ ಡೀಲ್?

ಅತ್ತ ರೋಮಿಯೋ ರೇಣುಕಾಚಾರ್ಯ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಮೊದಲ ಪುಟದ ಸಂಪಾದಕೀಯದಲ್ಲೇ ಶೇಮ್ ಎಂದು ವಿಶ್ವೇಶ್ವರ ಭಟ್ಟರು ಷರಾ ಬರೆದರು. ಅದೂ ಸಾಲದಂತೆ ಸತತ ಎರಡು ಮೂರು ದಿನ ರೇಣುಕಾಚರ್ಯ ಬಗ್ಗೆ usual SMS ಮೆಸೇಜುಗಳನ್ನು ಸಂಗ್ರಹಿಸಿ (ಅಥವಾ "ಸೃಷ್ಟಿಸಿ") ಪೇಜುಗಟ್ಟಳೆ ಬರೆದರು. ಆದರೆ ನಾಲ್ಕನೇ ದಿನ ಇದ್ದಕ್ಕಿದ್ದಂತೆ ಇದೆಲ್ಲಾ ಬಂದ್ - ರೇಣುಕಾಚಾರ್ಯ ವಿರೋಧೀ ಕಮೆಂಟು ಬಿಡಿ, ರೇಣುಕಾಚಾರ್ಯರು ತಮ್ಮ ಇಲಾಖೆಗೆ ಸಂಬಂಧಿಸಿದ ಹೇಳಿಕೆಗಳನ್ನೇ prime ಜಾಗದಲ್ಲಿ position ಮಾಡಿ ಓದುಗರಿಗೆ ಅಚ್ಚರಿ ಮೂಡಿಸಿದರು.
ಎಲ್ಲವೂ ಉಲ್ಟಾ ಪಲ್ಟಾ! ದಿನಗಟ್ಟಳೆ ರೇಣುಕಾಚಾರ್ಯ ವಿರುದ್ಧ ಬರೆದು ಇದ್ದಕ್ಕಿದ್ದಂತೆ ರೇಣುಕಾಚಾರ್ಯರ ಹಳಸಿದ ಹೇಳಿಕೆಗಳಿಗೆ prime spot ಕೊಟ್ಟಿರುವುದರ ರಹಸ್ಯವೇನಿರಬಹುದು? ಇದೇ trend ಮುಂದುವರೆದಿದೆ. ಪ್ರತಿನಿತ್ಯವೆಂಬಂತೆ ರೇಣುಕಾಚಾರ್ಯ ಏನೋ ಹೇಳಿದ್ದನ್ನೇ ಪರಮಾನ್ನವೆಂದು ವಿ.ಕೆ.ಪ್ರಕಟಿಸುತ್ತಿದೆ. ಮುಖ್ಯಮಂತ್ರಿಯ ಬಳಿಕ ಮಂತ್ರಿಗಳಲ್ಲಿ ವಿ.ಕೆ.ಯಲ್ಲಿ ಪ್ರಾಯಷ: ರೇಣುಕಾಚಾರ್ಯರ ಹೇಳಿಕೆಗಳದ್ದೇ ಭರಾಟೆ. ಹೀಗೆ ಸಡನ್ನಾಗಿ ತನ್ನ position ಬದಲಿಸಲು ಕಾರಣವೇನಿರಬಹುದು? ವಿ.ಕೆ.ಮತ್ತು ರೇಣುಕಾಚಾರ್ಯ ನಡುವೆ ಡೀಲ್ ಕುದುರಿತೇ? ಹೀಗೆಂದು ಓದುಗರು ಭಾವಿಸಿದರೆ ತಪ್ಪೇನಿಲ್ಲ.

ಕರ್ನಾಟದ ಹಿರಿಯ ಪತ್ರಕರ್ತರಾದ ದು.ಗು.ಲಕ್ಷ್ಮಣರೂ ಇದನ್ನೇ ಕಳೆದ ವಾರ ಹೇಳಿದ್ದಾರೆ ("ರೇಣುಕಾಚಾರ್ಯ ಮಂತ್ರಿಯಾಗಿದ್ದು "ಶೇಮ್" ಎಂದು ಮುಖಪುಟದಲ್ಲಿ ಸಂಪಾದಕೀಯ ಬರೆದು ಅನಂತರ ಒಂದೆರಡು ದಿನ ಈ ಪ್ರಕರಣಕ್ಕೆ ಭರ್ಜರಿ ಪ್ರಚಾರ ನೀಡಿದ್ದ "ವಿ"ಖ್ಯಾತ ಪತ್ರಿಕೆಯೊಂದು ಆಮೇಲೆ ತಣ್ಣಗಾಗಿದೆ! ಈ ಮಧ್ಯೆ ಅದೇನು "ಡೀಲ್" ನಡೆಯಿತೋ ಗೊತ್ತಿಲ್ಲ!" - ಹೊಸದಿಗಂತ ಜನವರಿ ೪ ೨೦೧೦) ಮಾಧ್ಯಮ ಲೋಕದಲ್ಲಿ ನಡೆಯುತ್ತಿರುವ ಭೃಷ್ಟಾಚಾರದ ಬಗ್ಗೆ ಬರೆಯುತ್ತಾ ರೇಣುಕಾಚಾರ್ಯ ಪ್ರಕರಣದಲ್ಲಿ ವಿ.ಕೆ. ಡೀಲ್ ಮಾಡಿಕೊಂಡಿದೆಯೆಂದು ನೇರವಾಗಿ ಹೇಳಿದ್ದಾರೆ.

ಸ್ಯಾಂಪಲ್ ನಂ.೨: ಕೋಟ್ಯಾಧಿಪತಿ ಬಹರೇನಿನ ಅನಿವಾಸಿ ಭಾರತೀಯರಿಗೇಕೆ ಖಜಾನೆ ಖಾಲಿಯಾಗಿರುವ ಕರ್ನಾಟಕ ಸರಕಾರದ ಭಿಕ್ಷೆ?

ಜನವರಿ ಹತ್ತರ ಅಂಕಣದಲ್ಲಿ ಬಹರೇನ್ ಕನ್ನಡ ಸಂಘಕ್ಕೆ ಕರ್ನಾಟಕ ಸರಕಾರ ಒಂದು ಕೋಟಿ ಅನುದಾನ ಕೊಟ್ಟಿಲ್ಲವೆಂದು ಕೊರೆದಿದ್ದಾರೆ. ಅಲ್ಲಾ ಸ್ವಾಮಿ, ಇಡೀ ಉತ್ತರ ಕರ್ನಾಟಕ ನೆರೆಯಲ್ಲಿ ಕೊಚ್ಚಿ ಹೋಗಿದೆ, ಅತ್ತ ಸರಕಾರದ ಖಜಾನೆ ಖಾಲಿಯಾಗಿದೆ. ಹೀಗಿರುವಾಗ ಬಹರೇನ್ ಎಂಬ ಸಂಪತ್ಭರಿದ ದೇಶಕ್ಕೆ ಒಂದು ಕೋಟಿ ರೂಪಾಯಿಯನ್ನೇಕೆ ನಾವು ತೆರಿಗೆದಾರರು ಕೊಡಬೇಕು?
ನಾನೂ ಬಹರೇನ್ ಹೋಗಿದ್ದೇನೆ (ಎರಡು ವರುಷಗಳ ಹಿಂದೆ ಅಕ್ಕನ ಮನೆಗೆ). ಅಲ್ಲಿ ಕರ್ನಾಟಕ ಸಂಘ ಬಹಳ active ಇದೆ ಎಂಬುದು ಸತ್ಯ - ಆದರೆ ಪ್ರ‍ಾಯಷ ಎಲ್ಲಾ NRI ಗಳಂತೆ weekend ನಲ್ಲಿ ಮಾತ್ರ ಎಲ್ಲಾ activity. ಅಲ್ಲೂ ಈಗ ಹಿಂದೂ-ಮುಸ್ಲಿಂ-ಕ್ಯೆಥೋಲಿಕ್-ಕರಾವಳಿ ಕನ್ನಡಿಗರು-ಗೌಡರು-ಶೆಟ್ಟರು-ಬಿಲ್ಲವರು ಎಂದೆಲ್ಲಾ ಗುಂಪುಗಳಿವೆ. ಕೆಲ ಲಿಂಕುಗಳನ್ನು ನೋಡಿ ಮೊಗವೀರ ಬಹರೇನ್, ಬಿಲ್ಲವಾಸ್ ಬಹರೇನ್, ಬಂಟ್ಸ್ ಬಹರೇನ್, ಕೊಂಕಣ ಅಸೋಸಿಯೇಶನ್, ಮುಸ್ಲಿಂ ಅಸೋಸಿಯೇಶನ್. ಇವತ್ತು ಒಬ್ಬರಿಗೆ ಕೊಟ್ಟರೆ ನಾಳೆ ಇನ್ನೊಬ್ಬರು ಸನ್ಮಾನ ಮಾಡಿ ಒಂದು ಕೋಟಿಗೆ ಡಿಮಾಂಡ್ ಇಡುವುದಿಲ್ಲವಲ್ಲವೇ?

ಮರುಭೂಮಿಯಲ್ಲಿ tax free ಹಣ ಕಮಾಯಿಸಲು ಹೋಗಿರುವ ಈ ಅನಿವಾಸಿಗಳಿಗೆ time pass ಮಾಡಲು ಮಾಲುಗಳನ್ನು ಬಿಟ್ಟರೆ ಬೇರೇನೂ ಇಲ್ಲ. ಅದಕ್ಕೇ ಕರ್ನಾಟಕದಿಂದ ರಾಜಕಾರಣಿಗಳನ್ನು, ಕಲಾವಿದರನ್ನು ಕರೆಯಿಸಿ ಪ್ರತಿವಾರವೆಂಬಂತೆ ಕಾರ್ಯಕ್ರಮವಿಟ್ಟುಕೊಂಡಿರುತ್ತಾರೆ. ಇಂತಹ long distance ಕನ್ನಡಿಗರಿಂದ, picnic typeನ boredom busterಇಂದ ಕರ್ನಾಟಕದ ಉದ್ದಾರವಾಗುತ್ತದೆಯೆಂಬುದು ಭ್ರಮೆಯಷ್ಟೇ! ಇಂಗ್ಲಿಷ್ ಬೋರ‍್ಡಿಗೆ ಕಲ್ಲು ಹೊಡೆಯುವುದರಿಂದ ಕನ್ನಡ ಉಳಿಯುತ್ತದೆ ಎಂಬ ಕರ್ನಾಟಕ ರಕ್ಕಸ ವೇದಿಕೆಯ ಪಡ್ಡೆಗಳ ಭ್ರಮೆಯಂತೆ.

ಬಹರೇನ್ ಕನ್ನಡಿಗರು ಮನಸು ಮಾಡಿದರೆ ಒಂದು ಕೋಟಿಯನ್ನು ಒಂದು weekend party ಅಥವಾ kitty partyಯಲ್ಲೇ ಒಟ್ಟು ಮಾಡಬಹುದು. ಕನ್ನಡಿಗರಲ್ಲೇ ಬಹರೇನಿನಲ್ಲಿ ನೂರಾರು ಕೋಟ್ಯಾಧಿಪತಿಗಳಿದ್ದಾರೆ - ಹೀಗಿರುವಾಗ ತನ್ನನ್ನು ಕರೆದು ಸನ್ಮಾನಿಸಿದರು ಎಂದ ಮಾತ್ರಕ್ಕೆ ಅದರ ಋಣ ತೀರಿಸಲು ವಿಶ್ವೇಶ್ವರ ಭಟ್ಟರು ಕರ್ನಾಟಕ ಸರಕಾರವನ್ನು, ಮುಖ್ಯಮಂತ್ರಿಗಳನ್ನು, NRI Cellನ ಗಣೇಶ್ ಕಾರ್ಣಿಕರನ್ನು ಹೀಗೆಳೆದದ್ದು ಸರಿ ಕಾಣಲಿಲ್ಲ. ಕರ್ನಾಟಕದ ಎಷ್ಟೋ ಹಳ್ಳಿಗಳು ನೀರು ವಿದ್ಯುತ್ ಶಾಲೆಗಳಿಲ್ಲದೆ ಜನರು ಒದ್ದಾಡುತ್ತಿರುವಾಗ ಬಹರೇನಿನಂತಹ ಶ್ರೀಮಂತ ರಾಷ್ಟ್ರದ ಶ್ರೀಮಂತ ಕನ್ನಡಿಗರ weekend party ಗಳಿಗೆ ಬಡ ಬೋರೇ ಗೌಡನ ತೆರಿಗೆ ಕಳಿಸಬೇಕಾದ ಪ್ರಾರಬ್ಧವೇನಿದೆ?

ವಿ.ಭಟ್ಟರ ನಿಜವಾದ ಟಾರ್ಗೆಟಿಲ್ಲಿ ಗಣೇಶ್ ಕಾರ್ಣಿಕ್! ಕೆಲ ವಾರಗಳ ಹಿಂದೆ ಇದೇ ಗಣೇಶ್ ಕಾರ್ಣಿಕ್ ಮೇಲೆ ವಿ.ಕ. ಹಿಗ್ಗಾ ಮುಗ್ಗ ಬರೆದಿತ್ತು. ನನ್ನ ಮೂಲಗಳ ಪ್ರಕಾರ, ಭಟ್ಟರಿಗೆ ಯಡ್ಯೂರಪ್ಪನವರು ತಾನು ಹೇಳಿದ ಕ್ಯಾಂಡಿಡೇಟ್ ವಿ.ಕ. ಅಂಕಣಕಾರ ಅಮೆರಿಕದ ಶ್ರೀವತ್ಸ ಜೋಶಿಯನ್ನು NRI Cellನ coordinator ಮಾಡಿಲ್ಲವೆಂಬ ಆಕ್ರೋಶವಿದೆ. Wikipediaದಿಂದ ಲೇಖನಗಳನ್ನು ಭಟ್ಟಿ ಇಳಿಸಿದ್ದನ್ನೇ "ಪರಾಗ ಸ್ಪರ್ಶ"ವೆಂದು ಬಡಿಸುವ ಶ್ರೀವತ್ಸ ಜೋಶಿಯನ್ನು NRI Cell Coordinator ಮಾಡಬೇಕೆಂದು ಭಟ್ಟರು ಬಹಳ ಪ್ರಯತ್ನಿಸಿದ್ದರೆಂದು ಹೇಳಲಾಗಿದೆ.

ಚಿತ್ರದುರ್ಗದ ಎಂ.ಪಿ. ಅಭ್ಯರ್ಥಿಯಾಗಿ NRI ಜನಾರ್ಧನ ಸ್ವಾಮಿಯನ್ನು ಭಟ್ಟರು ಅದೇ ಅಂಕಣದಲ್ಲಿ ಜನಾರ್ಧನ ಸ್ವಾಮಿ ಅಮೆರಿಕ ಬಿಟ್ಟು ದೇಶ ಸೇವೆಗೆ ಬರುತ್ತಿದ್ದಾರೆ, ಆದರ್ಶವಾದಿ ಎಂದೆಲ್ಲಾ ಪ್ರಮೋಟ್ ಮಾಡಿದ್ದನ್ನು ನೆನೆಪಿಸಿಕೊಳ್ಳಬೇಕಾಗಿದೆ. ಈ NRI ಆಸಾಮಿ "ಆದರ್ಶವಾದಿ" ಜನಾರ್ಧನ ಸ್ವಾಮಿ, ಎಂ.ಪಿ.ಯಾದ ಕೂಡಲೇ ಮಾಡಿದ ಮೊದಲ ಕೆಲಸ ಮುಖ್ಯಮಂತ್ರಿಯ ಖೋಟಾದಡಿ BDA site sanction ಮಾಡಿಸಿಕೊಂಡದ್ದು. ಅಲ್ಲಾ ಈ NRI ಗಳು ಎಲ್ಲೆಲ್ಲೋ ಹೋಗಿ ಕೋಟಿಗಟ್ಟಳೆ ಕಮಾಯಿಸಿದರೂ ಭಾರತದ ಬಡ ಜನರ, ಭಾರತದ ತೆರಿಗೆದಾರರ ಜೀವ ಹಿಂಡಲು ಪುನ: ಮರಳಿ ಬಂದು ಯಾಕೆ ಒಕ್ಕರಿಸುತ್ತಾರೋ ನನಗೆ ಅರ್ಥವಾಗುತ್ತಿಲ್ಲ. ಏನೇ ಇರಲಿ ಕರ್ನಾಟಕದ ಜನತೆ ಈ NRIಗಳ ಬಗ್ಗೆ, NRIಗಳ ಸನ್ಮಾನ ಸ್ವೀಕರಿಸಿ ಅವರ ಪರ ವಾದಿಸುವ ಭಟ್ಟರಂಥವರಾ ಬಗ್ಗೆ ಜಾಗ್ರತೆಯಿಂದಿರಬೇಕಾಗಿದೆ.


ಏನೇ ಇರಲಿ ಕರ್ನಾಟಕದ ಜನತೆ ಈ NRIಗಳ ಬಗ್ಗೆ, NRIಗಳ ಸನ್ಮಾನ ಸ್ವೀಕರಿಸಿ ಅವರ ಪರ ವಾದಿಸುವ ಭಟ್ಟರಂಥವರಾ ಬಗ್ಗೆ ಜಾಗ್ರತೆಯಿಂದಿರಬೇಕಾಗಿದೆ.

6 comments:

 1. ಎಂತೆಂಥಾ ಹುತ್ತದಲ್ಲಿ ಎಂತೆಂಥಾ ಹಾವುಗಳು ಇರ್ತಾವೆ ಎಂದು ವಿಸ್ಮಯವಾಗುತ್ತಿದೆ.
  ವಿ.ಕೆ.ಭಟ್ಟರು ‘ಸಂಪನ್ನ ಪತ್ರಕರ್ತ’ ಎಂದು ತಿಳಿದಿದ್ದೆ. ಒಳಗಿನ ಹೂರಣ ಈಗ ತಿಳಿದಂತಾಯ್ತು.

  ReplyDelete
 2. ಪತ್ರಿಕಾರಂಗ ಹಳಿತಪ್ಪಿ ಎಷ್ಟೋ ವರ್ಷಗಳಾದವು. ಭಟ್ಟರ ಬಗ್ಗೆ ಇಷ್ಟು ಬರೆದಿದ್ದೀರಿ. ಇನ್ನು ಟೈಮ್ಸ್ ಆಫ್ ಇಂಡಿಯಾ, ಪ್ರಜಾವಾಣಿ, ಹಿಂದೂ ಇತ್ಯಾದಿಗಳನ್ನು ಬಿಡಬೇಡಿ. ಅವರ ಪ್ರವರಗಳ ಬಗ್ಗೆಯೂ ಬರೆಯಿರಿ. ಇಲ್ಲಾಂದ್ರೆ ಈ ಬ್ಲಾಗಿನಲ್ಲಿ ಬರೆಯಲೂ ಡೀಲು ಇರಬಹುದು ಎಂದು ಓದುಗರು ತಿಳಿದುಕೊಳ್ಳಬೇಕಾಗುತ್ತದೆ!!!

  ReplyDelete
 3. ವಾಸ್ತವಕ್ಕೆ ಕನ್ನಡಿ ಹಿಡಿದಿರುವುದಕ್ಕೆ ಧನ್ಯವಾದಗಳು ಒಂದೊಂದು ದಿನಪತ್ರಿಕೆಗಳು ಒಂದು ಜಾತಿಯ ಅಥವಾ ಒಂದು ಪಕ್ಷದ ವಾರಸ್ತಾರರಾಗಿರುವುದು ನಮ್ಮ ದುರದೃಷ್ಟಕರ, ಬರಹಗಾರರಿಂದ ಹಿಡಿದು, ಓದುಗರವರೆಗೂ ಅದು ಮುಂದುವರೆಯುತ್ತಿರುವುದು ನಮ್ಮ ದೌರ್ಬಾಗ್ಯ.

  ReplyDelete
 4. superb....sakattagide..

  ReplyDelete
 5. Dont care for anonymous comment. Can you write about other publications as Bhat used to create rubish things..

  ReplyDelete
 6. ನಿಮ್ಮ ಲೇಖನ ನನಗೆ ಇಷ್ಟವಾಯಿತು,, ಆದ್ರೇ,, ಜನಾಧ೯ನ ಸ್ವಾಮಿ ನಿಜಾವಾಗಿಯು ತಮ್ಮ ಕ್ಷೇತ್ರದ development ಮಾಡ್ತಾ ಇದಾರೆ.. ೧೫೦೦೦ಕೋಟಿ ರುಪಾಯಿಗಳ investment ಕೇ೦ದ್ರ ಸಕಾ೯ರದ ಕ೦ಪನಿಗಳನ್ನು ಚಿತ್ರದುಗ೯ಕ್ಕೆ sanction ಮಾಡ್ಸಿದಾರೆ,,,,

  ReplyDelete