First of all "ಪ್ರಜಾವಾಣಿ"ಗೆ ಭೇಷ್ ಅನ್ನಬೇಕಾಗಿದೆ. ಲೋಕಾಯುಕ್ತ ವರದಿ ಎಲ್ಲಾ ಮಾಧ್ಯಮಗಳಿಗೂ ಲಭ್ಯವಾಗಿದ್ದರೂ, "ಪ್ರಜಾವಾಣಿ’ಯೊಂದೇ systematic ಆಗಿ ವರದಿಯನ್ನು ಅವಲೋಕಿಸಿ ಎಳೆ ಎಳೆಯಾಗಿ ಅನಾವರಣ ಮಾಡುತ್ತಿದೆ.
ಹಿಂದೊಮ್ಮೆ ಈ ಬ್ಲಾಗಲ್ಲಿ ಗಣಿ ರೆಡ್ಡಿಗಳ ಎಂಜಲುಂಡಿರುವ ಪತ್ರಕರ್ತರ ಬಗ್ಗೆ ಬರೆದಿದ್ದೆ. ನೋಡಿ "ರೆಡ್ಡಿಗಳ ಕಪಿ ಮುಷ್ಠಿಯಿಂದ ಕರ್ನಾಟಕಕ್ಕೆ ಮುಕ್ತಿಯೆಂದು?ಮಾಧ್ಯಮಗಳಲ್ಲಿ ನಡೆಯುತ್ತಿರುವ ಭಿನ್ನಮತ - ರೆಡ್ಡಿಗಳ ಮುಷ್ಠಿಯಲ್ಲಿ ಕರ್ನಾಟಕದ ಮಾಧ್ಯಮ ಮಿತ್ರರು". ಅದೆಲ್ಲಾ ಇಂದು ನಿಜವಾಗಿದೆ.
ಇಂದಿನ "ಪ್ರಜಾವಾಣಿ" ನೋಡಿ:
- ಆರ್.ಬಿ. (ರವಿ?) - ರೂ ೧೦ ಲಕ್ಷ
- ವಿ.ಭಟ್ (ವಿಶ್ವೇಶ್ವರ?) - ರೂ ೨೫ ಲಕ್ಷ ಮತ್ತು 50 ಲಕ್ಷ (ಪ್ರಾಯಶ: ಇದರಲ್ಲೇ ಹೊಸ ಮನೆ ಕಟ್ಟಿದರೇನೋ?)
- ಬೆಂಗಳೂರು ಮಿರರ್ - ರೂ ೫ ಲಕ್ಷ
- ಡೆಕ್ಕನ್ ಕ್ರೋನಿಕಲ್ - ರೂ ೨೫ ಲಕ್ಷ
- ಪ್ರೆಸ್ ಕ್ಲಬ್ - ೫ ಲಕ್ಷ
ಭಾರೀ ಸಜ್ಜನರಂತೆ ಅಣ್ಣಾ ಹಜಾರೆ ಹೋರಾಟಕ್ಕೆ ಏಕ್ ದಂ ಪ್ರಚಾರ ಕೊಡುವ ಇದೇ ಪತ್ರಕರ್ತರು ಅತ್ತ ಗಣಿ ದೊರೆಗಳ ಎಂಜಲನ್ನೂ ಯಾವುದೇ ನಾಚಿಕೆಯಿಲ್ಲದೆ ಬಾಚಿಕೊಂಡದನ್ನು ನೋಡುವಾಗ ಅಸಹ್ಯವಾಗುತ್ತದೆ.
ಈ ದರಿದ್ರ side business ಪತ್ರಕರ್ತರಿಗೂ ಯಡ್ಯೂರಪ್ಪನವರಿಗೂ difference ಏನು?
I am shocked.
ReplyDeleteಇವತ್ತಿನ ಪ್ರ. ವಾ. ದಲ್ಲಿ ನೋಡಿ ನನಗೂ ಆಶ್ಚರ್ಯವಾಯ್ತು. ಯಾವ ಹುತ್ತದಲ್ಲಿ ಎಂತಹ ಹಾವಿರುತ್ತೋ !!
ReplyDelete