Sunday, November 18, 2012

ನಿನ್ನೆ ನವೀನ ಶೆಟ್ಟಿ ಸೂರಿಂಜೆಯ ಜಾಮೀನನ್ನು ನ್ಯಾಯಾಲಯ ರಿಜೆಕ್ಟ್ ಮಾಡಿದಾಗ ಅನಿಸಿದ್ದು ಇಷ್ಟು....

Court rejects bail plea of fake journalist, Mangalore home stay attack kingpin Naveen Shetty Soorinje


ನವೀನ್ ಶೆಟ್ಟಿಯ ಜಾಮೀನು ಅರ್ಜಿಯನ್ನು ನ್ಯಾಯಾಲಯ ನಿನ್ನೆ ವಜಾ ಮಾಡುವುದರೊಂದಿಗೆ  ಮಂಗಳೂರಿನ ಹೋಮ ಸ್ಟೇ ಧಾಳಿಯ ಸೂತ್ರಧಾರಿ ನಕಲಿ ಪತ್ರಕರ್ತ ನವೀನ್ ಶೆಟ್ಟಿ ಸೂರಿಂಜೆಯೆಂಬುದು ಸಾಬೀತಾಗಿದೆ.

ಮಾಧ್ಯಮ ಲೋಕದಲ್ಲಿ ಹೀರೋ ಆಗಬೇಕೆಂದು ಪಬ್ ಧಾಳಿಯ ರೀತಿಯಲ್ಲೇ ತನ್ನ ಗೂಂಡಾ ಮಿತ್ರರೊಂದಿಗೆ ಸೇರಿ ಹೋಮ್ ಸ್ಟೇ ಸ್ಕೆಚ್ ಹಾಕಿ ನಂತರ ಹಿಂದು ಸಂಘಟನೆಗಳ ತಲೆಗೆ ಕಟ್ಟುವ ನವೀನ್ "ಶೆಟ್ಟಿ"ಯ ಪ್ಲಾನುಗಳೆಲ್ಲಾ ಉಲ್ಟಾಪುಲ್ಟಿಯಾಗಿ ಜೈಲಲ್ಲಿ ಮುದ್ದೆ ತಿನ್ನುವ ಪರಿಸ್ಥಿತಿ ಬಂದಿರುವುದು ಸಾಮಾಜಿಕ ನ್ಯಾಯವೆನ್ನೋಣವೇ?

"ಕರಾವಳಿ ಅಲೆ"ಯಲ್ಲಿದ್ದಾಗಲೇ ಎಸ್.ಈ.ಜಡ್. ವಿಚಾರದಲ್ಲಿ ಅತ್ತ ಸಂತ್ರಸ್ತರೊಂದಿಗೆ, ಇತ್ತ ಎಸ್.ಇ.ಜಡ್/ ಕೆ.ಐ.ಎ.ಡಿ.ಬಿ. ಯವರೊಂದಿಗೆ ಡೀಲ್ ಮಾಡಿಕೊಂಡು ತನ್ನ ಚೋರ ಗುರು ಬಿ.ವಿ.ಸೀತಾರಾಮನಿಗೇ ಟೊಪ್ಪಿ ಹಾಕಿದ ಈ ನವೀನ ಶೆಟ್ಟಿಯನ್ನು ಕಡೆಗೆ ಬಿ.ವಿ.ಸೀತಾರಾಮನೇ  ಅಶ್ಲೀಲ ಎಸ್.ಎಂ.ಎಸ್. ವಿಚಾರದಲ್ಲಿ ನವೀನನನ್ನು "ಅಲೆ"ಯಿಂದ ಹೊರದಬ್ಬಿದ್ದು ಬೈಕಂಪಾಡಿಯಲ್ಲಿ ದೊಡ್ಡ ಸುದ್ದಿಯಾಗಿತ್ತು. (ತಮ್ಮೊಳಗಿನ ಬ್ಲಾಕ್ ಮೇಲ್ ಡೀಲುಗಳನ್ನು ಗುಪ್ತವಾಗಿರಿಸಬೇಕಾದುದರಿಂದ ಹೊರ ಜಗತ್ತಿಗೆ ತಾವಿನ್ನೂ ಜೊತೆಗಾರರೆಂಬ ಪೋಸನ್ನು ಸೀತಾರಾಮ ಮತ್ತು ನವೀನ ಶೆಟ್ಟಿ ಕೊಡುತ್ತಿದ್ದಾರೆಂಬುದು ಬೇರೆ ವಿಷಯ.)

Naveen Shetty Soorinje provoking fight between villagers, swamijis and SEZ contractors in 2008
ಇನ್ನು ಬಜ್ಪೆ ಕುಡುಬಿ ಪದವಿಗೆ ಎಸ್.ಇ.ಜಡ್. ವಿರೋಧಿ ಆಂದೋಲನದ ಸಮಯದಲ್ಲಿ ಪೇಜಾವರ ಶ್ರೀಗಳೂ ಸೇರಿದಂತೆ ಇತರ ಸ್ವಾಮಿಗಳನ್ನು ಕರೆಸಿ ಎಸ್.ಎ.ಜಡ್. ಗೋಡಾಗಳಿಂದ ಹಲ್ಲೆ ಮಾಡಲು ಪ್ರಚೋದಿಸಿದ್ದೂ ನವೀನ್ ಶೆಟ್ಟಿಯೆಂದು ಮಂಗಳೂರಿನ ಕೆಲ ಪತ್ರಕರ್ತರೇ ಹೇಳುತ್ತಾರೆ.

ಹೊರಗಿನಿಂದ ಎಸ್.ಇ.ಜಡ್. ವಿರೋಧೀ ಹೋರಾಟಗಾರ ಅದರೆ ಸಂಜೆ ನಂತರ ಅದೇ ಎಸ್.ಇ.ಜಡ್. ಕಂಟ್ರಾಕ್ಟರುಗಳೊಂದಿಗೆ ಇದೇ ನವೀನ ಬಾರುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ. ಈ 2008ರ ಫೋಟೋ ನೋಡಿ - ಗೂಂಡಾಗಳನ್ನು ಸ್ವಾಮಿಯವರ ಮೇಲೆ ಛೂ ಬಿಡುತ್ತಿರುವ ನವೀನ ಶೆಟ್ಟಿ ಸೂರಿಂಜೆ.   

ಅತ್ತ ಡಿ.ವೈ.ಎಫ್.ಐ. ಮತ್ತು ನಕ್ಸಲರು, ಇತ್ತ ಹಿಂದು ಸಂಘಟನೆಯೆಂದು ಹೇಳಿಕೊಳ್ಳುವ ಕೆಲ ಪುಡಿ ಗೂಂಡಾಗಳೊಂದಿಗೂ ಕಂಠಸ್ಯ ಗಳಸ್ಯವಿರುವ ನವೀನನ ಈ ಓತೀಕೇತನ ನಾಟಕ ಮೆಚ್ಚುವಂತದ್ದೇ. ಆದರೆ ಹೋಮ್ ಸ್ಟೇ ವಿಚಾರದಲ್ಲಿ ಹೀರೋ ಆಗಲು ಹೋಗಿ ಮರು ಪುಢಾರಿಯ ಫೋನ್ ವೀಡಿಯೋದಲ್ಲಿ ನವೀನ "ಹುಡುಗಿಯ ಮುಖ ಕೆಮರಾಕ್ಕೆ ತೋರಿಸು" ಎಂದು ನಿರ್ದೆಶನ ಮಾಡುವುದು ದಾಖಲಾಗಿದೆ.

ನಾಗರಿಕ ಜಗತ್ತು ಕೇಳುವ ಪ್ರಶ್ನೆಗಳಿಷ್ಟೇ:


೧. ಮಂಗಳೂರಿನಲ್ಲಿ ಏನಿಲ್ಲವೇಂದರೂ ನೂರಕ್ಕಿಂತಲೂ ಹೆಚ್ಚು ವರದಿಗಾರರಿದ್ದಾರೆ. ಆದರೆ ಗೂಂಡಾಗಳು ನವೀನನಿಗೆ ಮಾತ್ರ ಫೋನ್ ಮಾಡಿ ಕರೆಸಿಕೊಂಡದ್ದು ಯಾಕೆ?

೨. ಮರಿ ಪುಢಾರಿಯ ಪೋನ್ ಕೆಮರಾದಲ್ಲಿ (ಈಗ ಪೊಲೀಸರ ಬಳಿ ಇದೆಯೆನ್ನಲಾದ) ನವೀನನ ಧ್ವನಿ ಹುಡುಗಿಯರ ಮುಖ ತೋರಿಸಲು ಹೇಳುವುದು ಮತ್ತು ಬಟ್ಟೆ ಹರಿಯಲು ಹೇಳುವುದು ಪತ್ರಕರ್ತನೊಬ್ಬನ ಕೆಲಸವೇ? ಯಾವ ಪತ್ರಿಕೋದ್ಯಮದಲ್ಲಿ ರೇಪ್ ಮಾಡಲು ಪ್ರಚೋದಿಸುವುದನ್ನು ಹೇಳಿ ಕೋಡುತ್ತಾರೆ?

೩. ಧಾಳಿಯ ಬಳಿಕ ಟಿ.ವಿ. ಸ್ಟುಡಿಯೋದಲ್ಲಿ ತಾನು ಮಹಿಳೆಯರನ್ನು ಗೌರವಿಸುತ್ತೇನೆಯೆಂದೆಲ್ಲಾ ಒದರಿದ ಈ ನವೀನ ಶೆಟ್ಟಿ ಇದ್ದ ಬದ್ದ ಹುಡಿಗಿಯರಿಗೆ, ಗೃಹಿಣಿಯರಿಗೆ ಅಶ್ಲೀಲ ಎಸ್.ಎಂ.ಎಸ್. ಕಳಿಸಿ "ಕರಾವಳಿ ಅಲೆ"ಯಿಂದ ಹೋರದಬ್ಬಿಕೊಂಡದ್ದನ್ನು ಬಚ್ಚಿಡುವುದೇಕೆ?

೪. ಹೋಮ್ ಸ್ಟೇ ವಿಚಾರದಲ್ಲಿ ನವೀನನ ಬಂಧನವಾದಾಗ ನಾಮ್ ಕ ವಾಸ್ತೆಗೆಯಾದರೂ ಮಂಗಳೂರಿನ ಪತ್ರಕರ್ತ ಸಂಘ ಪ್ರತಿಭಟನೆ ಮಾಡಿದಾಗ ಕೇವಲ ೫-೬ ಪತ್ರಕರ್ತರು ಭಾಗವಹಿಸಿದ್ದು ಏನು ಹೇಳುತ್ತದೆ? ಪ್ರಾಯಶ: ಮಂಗಳೂರಿನ ಪತ್ರಕರ್ತರಿಗೆ ನವೀನನ ಒಳಹೂರಣವೆಲ್ಲಾ ಗೊತ್ತು.

ರವಿ ಕೃಷ್ಣಾ ರೆಡ್ಡಿಯೆಂಬ failed ನಕ್ಸಲ್/ ಕ್ರಾಂತಿಕಾರೀ wannabe

ಇನ್ನು ನವೀನನನ್ನು ಬೆಂಬಲಿಸಿ ಓತಪ್ರೋತವಾಗಿ "ವರ್ತಮಾನ.ಕಾಂ" ಬ್ಲಾಗಿನಲ್ಲಿ ಬ್ಲಾಗ್ ಪೋಸ್ಟ್ ಮಾಡಿ ಅದಕ್ಕೆ ತಾನೇ ಕಮೆಂಟು ಬರೆಯುವ ರವಿ ಕೃಷ್ಣಾ ರೆಡ್ಡಿಯೆಂಬ ನಕ್ಸಲನ ಜಾತಕ ಪೄಜ್ನಾವಂತರಿಗೆಲ್ಲಾ ತಿಳಿದಿರುವಂತದ್ದೇ.

ರವಿಕೃಷ್ಣಾ ರೆಡ್ಡಿಯೆಂಬ ಎನ್.ಆರ್.ಐ., ಅಮೆರಿಕದಿಂದ ಹೊರಹಾಕಿಸಿಕೊಂಡು (ಡಿಪೋರ್ಟೆಡ್?) ಬೆಂಗಳೂರಿಗೆ ಬಂದು ಇಲೆಕ್ಷನ್ನಿಗೆ ನಿಂತು ಠೇವಣಿ ಉಳಿಸಿಕೊಳ್ಳಲೂ ಆಗದ ಕ್ರಾಂತಿಕಾರಿ. ಕೊಪ್ಪ, ಶಿವಮೊಗ್ಗ, ಆಗುಂಬೆಯಲ್ಲಿ ನಕ್ಸಲರನ್ನು ಭೇಟಿಯಾಗುವುದನ್ನು, ಯುಟ್ಯೂಬಿನಲ್ಲಿ ತನ್ನ ಪೆದ್ದು ಮುಖ ತೋರಿಸಿ ಬಡಬಡಿಸುವುದನ್ನೇ "ಕ್ರಾಂತಿ"ಯೆಂದು ಭಾವಿಸುವ ಅವಿವೇಕಿ. "ಲಂಕೇಶ್ ಪತ್ರಿಕೆ" ಓದಿದ ಕೂಡಲೇ ತಾನೇ ಸ್ಮಾರ್ಟ್ ಎಂದು ಭಾವಿಸುತ್ತಿದ್ದ ಹಿಂದಿನ "ಕ್ರಾಂತಿಕಾರಿ"ಗಳಂತೆ! ಜಾತಿ ವ್ಯವಸ್ಥೆ ಬಗ್ಗಿ ಕೊರೆಯುವ ಈ ರವಿಕೃಷ್ಣಾ ರೆಡ್ಡಿ ತಾನು ಅಮೆರಿಕ ಕನ್ನಡ ಸಂಘದ ಅಧ್ಯಕ್ಷನಾಗಿದ್ದಾಗ ಮಾಡಿದ ಜಾತೀಯ ಕೆಲಸ ಅದುವರೆಗೆ ಅಮೆರಿಗನ್ನಡರಲ್ಲಿ ಯಾರೂ ಮಾಡಿರಲಿಲ್ಲವೆಂದು ಮಿತ್ರನೊಬ್ಬ ಹೇಳಿದ್ದು ನೆನಪು.

ಇಂತಹ "ಅರ್ಹತೆ" ಹೊಂದಿದ ರೆಡ್ಡಿ ಈಗ ನವೀನ್ ಶೆಟ್ಟಿಗೆ ಬೆಂಬಲಿಸುವುದರ ಹಿಂದೆ ಸಿದ್ದಾಂತಕ್ಕಿಂತ ತನ್ನ ಪ್ರಸ್ತುತತೆ, ಕರೆನ್ಸಿ ಚಲಾವಣೆಯಲ್ಲಿರಬೇಕೆಂಬ ಹಪಹಪಿಯೇ ಕಾಣಬರುತ್ತದೆ.

ಹೋಮ್ ಸ್ಟೇ ಧಾಳಿ ರೂವಾರಿ ನವೀನ್ ಶೆಟ್ಟಿ ಸೂರಿಂಜೆಗೆ ದಿನೇಶ್ ಅಮೀನ್ ಮಟ್ಟುವೆಂಬ ಜಾತೀವಾದಿ ಪತ್ರಕರ್ತನ ಬೆಂಬಲ!


ಇನ್ನು ದಿನೇಶ್ ಅಮೀನ್ ಮಟ್ಟು ಬಗ್ಗೆ ಕರ್ನಾಟಕದ ಪತ್ರಕರ್ತರೆಲ್ಲರಿಗೂ ಗೊತ್ತಿರುವಂತ್ತದ್ದೆ. ಹಿಂದುಳಿದ ಜಾತಿಯವರನ್ನು ಸಮರ್ಥಿಸುವ ಬರದಲ್ಲಿ, ಎಲ್ಲಾ ಮೇಲ್ಜಾತಿಯವರನ್ನು ಹೀಯಾಳಿಸುವುದನ್ನೇ ಪತ್ರಿಕೋದ್ಯಮವೆಂದು ನಂಬಿರುವ ದಿನೇಶ್ ಅಮೀನ್ ಮಟ್ಟು, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಎಲ್ಲಾ ಸುಖ ಬಳಸಿ ಅದೆಷ್ಟೋ ಬಾರಿ ಬಿಟ್ಟಿ ವಿದೇಶೀ ಪ್ರಯಾಣವನ್ನು ಬಡ ಬೋರೆ ಗೌಡನ ತೆರಿಗೆ ಹಣದಲ್ಲಿ ಮಾಡಿ ಇತ್ತ ಕಾಂಗ್ರೇಸೇತರ ಪಕ್ಷಗಳು ಅಧಿಕಾರ ಹಿಡಿದ ಕೂಡಲೇ ಪ್ರತಿಪಕ್ಷ ಕಾಂಗ್ರೆಸ್ಸಿಗಿಂತಲೂ ಜೋರಾಗಿ ಗೋಳೋ ಎಂದು ಕಮೆಂಟು ಮಾಡುವುದು ನೋಡಿದರೆ ನಗು ಬರುತ್ತದೆ.
Dinesh Amin Mattu - a casteist journalist supporting fake journalist like Naveen Shetty Soorinje is not really surprising.

ಇದೇ ದಿನೇಶ್ ಅಮೀನ್ ಮಟ್ಟು ಪ್ರಜಾವಾಣಿಯ ದೆಹಲಿ ವರದಿಗಾರನಿದ್ದಾಗ ಹರಿಪ್ರಸಾದ್, ಆಸ್ಕರ್, ಮೊಯ್ಲಿ ಮತ್ತಿತರರ ಮನೆ ಕಾಯುವುದನ್ನೇ, ವಿದೇಶೀ ಪ್ರಯಾಣಕ್ಕೆ, ಪ್ರಶಸ್ತಿಗಾಗಿ, ಸೈಟಿಗಾಗಿ, ಟ್ರಾನ್ಸಫರ್, ದಲ್ಲಾಳಿ ಕೆಲಸ ಮಾಡುವುದನ್ನೇ, ಮಸ್ಕಾ ಹಾಕುವುದನ್ನೇ ಪತ್ರಿಕೋದ್ಯಮವೆಂದು ತಿಳಿದ ಭೂಪ! ತನ್ನ ಜಾತಿ ಬಾಂಧವೆರೆಂಬ ಏಕೈಕ ಕಾರಣಕ್ಕೆ ಹರಿಪ್ರಸಾದ್, ಬಂಗಾರಪ್ಪನಂತಹವರು ಕೋಟಿಗಟ್ಟಳೆ ಉಂಡದ್ದು ಈ ದಿನೇಶ್ ಅಮೀನ್ ಮಟ್ಟುವಿಗೆ ಕಾಣಿಸಲೇ ಇಲ್ಲ. ಕಾಣಿಸಿದರೂ ಅದು "ಸಾಮಾಜಿಕ ನ್ಯಾಯ"ವೆಂದು ಪ್ರತಿಪಾದಿಸಿದ ಈ ದಿನೇಶ್ ಅಮೀನ್ ಮಟ್ಟು ಈಗ ನವೀನ್ ಶೆಟ್ಟಿ ಸೂರಿಂಜೆಯಂತಹವರನ್ನು ಬೆಂಬಲಿಸುವುದು ಕಂಡಾಗ ಆಶ್ಚರ್ಯ ಪಡಬೇಕಾಗಿಲ್ಲ.

ದಿನೇಶ್ ಅಮೀನ್ ಮಟ್ಟು ಸವಕಲು ನಾಣ್ಯವೆಂಬುದು ಪ್ರಜಾವಾಣಿ ಮ್ಯಾನೇಜ್ಮೆಂಟೇ ಎಂದೋ ನಿರ್ಧರಿಸಿಯಾಗಿದೆ. ಸರಕಾರಿ ಪ್ರಾಯೋಜಿತ ದೇವರಾಜ ಅರಸು ಪ್ರಶಸ್ತಿಯಂತಹ ಬಿರುದು ಬಾವಲಿ, ವಿಶ್ವವಿದ್ಯಾಲಯಗಳಲ್ಲಿ ಲೆಕ್ಚರ್ ಟಿಎ,ಡಿಎಗಳಿಗೆ ಸೀಮಿತವಾಗಿರುವ ದಿನೇಶ್ ಅಮೀನ್ ಮಟ್ಟು ನೈಜ ಪತ್ರಿಕೋದ್ಯಮದ ಟಚ್ಚನ್ನು ಎಂದೋ ಕಳೆದುಕೊಂಡಾಗಿದೆ. ಆದರೂ ಹಿರಿಯವರು. ಇಂತಹವರಿಗೆ ನವೀನ್ ಶೆಟ್ಟಿ ಸೂರಿಂಜೆಯಂತಹ ನಕಲಿ ಪತ್ರಕರ್ತರ ಬೆಂಬಲಕ್ಕೆ ಪತ್ರಿಕೋದ್ಯಮ, ಪತ್ರಿಕಾ ಸ್ವಾತಂತ್ರ್ಯದ ಹೆಸರಲ್ಲಿ ನಿಲ್ಲುವಂತಹ ಪರಿಸ್ಥಿತಿ ಬಂದಿರುವುದು ಶೋಚನೀಯ.
*********************

ನನ್ನ ಪಾಯಿಂಟ್ ಇಷ್ಟೇ / Mangaloreans need to unite and fight against likes of Naveen Shetty Soorinje, B.V.Seetharam.


ಹೋಮ್ ಸ್ಟೇ ಧಾಳಿ ತಪ್ಪೆಂಬುದನ್ನು ಯಾರೂ ಅಲ್ಲೆಗೆಳೆಯುವುದಿಲ್ಲ. ಆದರೆ ಒಬ್ಬ ಪತ್ರಕರ್ತನೇ ಮುಂದೆ ನಿಲ್ಲಿಸಿ ಮಾಡಿಸಿದ ಈ ಹೇಸಿಗೆ ಕೆಲಸವನ್ನು "ಪತ್ರಿಕಾ ಸ್ವಾತಂತ್ರ್ಯ"ದ ಹೆಸರಲ್ಲಿ ಸಮರ್ಥಿಸುವುದು ಸರಿಯೇ?

ಮಂಗಳೂರಿನ ಜನರನ್ನು ಕೋಮುವಾದಿಗಳೆಂದು ರಾಷ್ಟ್ರ ಮಟ್ಟದಲ್ಲಿ ಈಗಾಗಲೇ ಮಾಧ್ಯಮಗಳು ಬಣ್ಣಿಸಿಯಾಗಿದೆ. ಮಂಗಳೂರು ಪೊಲೀಸರು ಕೋಮುವಾದಿಗಳು, ಮಂಗಳೂರಿನ ಜಿಲ್ಲಾಡಳಿತ, ಪತ್ರಕರ್ತರು ಸಂಘ ಪರಿವಾರದ ಬಂಟರು ಎಂದೂ ಅವರನ್ನು ಮೂದಲಿಸಲಾಗಿದೆ.

ಈಗ ನ್ಯಾಯಾಲಯ ನವೀನ ಶೆಟ್ಟಿಯ ಜಾಮೀನು ತಿರಸ್ಕರಿಸಿದೆ. ಈಗ ಮಂಗಳೂರಿನ ನ್ಯಾಯಾಧೀಶರೂ ಕೋಮುವಾದಿಗಳು ಎಂದು ರವಿಕೃಷ್ಣಾ ರೆಡ್ಡಿಯಂತಹವ ಬ್ಲಾಗಿಗರು, ದಿನೇಶ್ ಅಮೀನಿನಂತಹ ಜಾತಿವಾದಿ ಪತ್ರಕರ್ತರು ಬರೆದರೂ ಆಶ್ಚರ್ಯ ಪಡಬೇಕಿಲ್ಲ. ಏನಿದ್ದರೂ ಕ್ರಾಂತಿಕಾರಿಗಳು ನೋಡಿ - ಸಿಸ್ಟಮ್ಮೇ ಸರಿಯಿಲ್ಲ - ನಕ್ಸಲ್ ಹೋರಾಟದಂತಹುದೇ ಇದಕ್ಕೆಲ್ಲ ಪರಿಹಾರ ಎಂದು ನಂಬಿದವರು ಅವರು.

ಆದರೆ ಒಂದು ಘಟನೆ ಹಿಡಿದು - ಅದೂ ಓರ್ವ ಪತ್ರಕರ್ತ ಪ್ರಾಯೋಜಿತ -  ಒಂದು ಊರನ್ನೇ, ಸಮಾಜವನ್ನೇ ಹೀಯಾಳಿಸುವುದು ಸರಿಯೇ? ಮಂಗಳೂರಿಗರು ಈಗಾದರೂ ಸ್ವಲ್ಪ ಯೋಚಿಸಿ, ಮಂಗಳೂರು ಬ್ರಾಂಡ್ ನೇಮ್ ರಿಪೇರಿ ಮಾಡಬೇಕಾಗಿದೆ. ನವೀನ ಶೆಟ್ಟಿ, ಬಿ.ವಿ.ಸೀತಾರಾಮನಂತಹ ಢೋಂಗೀ ಪತ್ರಕರ್ತರಿಗೆ ಪಾಠ ಕಲಿಸುವ, ಗಡೀಪಾರು ಮಾಡಿಸುವ ಸಮಯ ಬಂದಿದೆ.

2 comments:

  1. ಹೀಗೆಲ್ಲಾ ಇದೆಯೆ? ಓದಿ ಅಚ್ಚರಿಯಾಯಿತು!

    ReplyDelete
  2. Wow ! ಸಾಕಷ್ಟು ಸತ್ಯಗಳನ್ನು ಹೇಳಿದ್ದೀರಿ !.

    ReplyDelete