Monday, January 26, 2015


ಅಧಿಕಾರ ಮದವೇರಿದ ಜಾತೀವಾದಿ ದಿನೇಶ್ ಅಮೀನ್ ಮಟ್ಟುವಿನ ದರ್ಪ ಈ ಸುಪ್ರೀಂ ಕೋರ್ಟ್ ತೀರ್ಪು ನೋಡಿಯಾದರೂ ಕೆಳಗೆಳದೀತೇ?







ತನ್ನ ಭಾಷಣಗಳಲ್ಲಿ ಗ್ಯಾಬ್ರಿಯೆಲ್ ಮಾರ್ಕ್ವೆಜ್, ಎರ್ನೆಸ್ಟ್ ಹೆಮಿಂಗ್ವೇ ಬಗ್ಗೆ ಮಾತನಾಡುವ ಮಟ್ಟು, ಈಗ ತನ್ನ ಬಾಳಿನ ಸಂಧ್ಯಾ ಕಾಲದಲ್ಲಿ ತನ್ನ ಮೊಮ್ಮಗರ ಪ್ರಾಯದ ಹುಡುಗರ ಮೇಲೆ ಸಿ.ಎಂ. ಕಚೇರಿ ದುರುಪಯೋಗಿಸಿ ಪೋಲಿಸರನ್ನು ಛೂ ಬಿಟ್ಟದ್ದು ನೋಡಿದರೆ ನೆನಪಾಗುವುದು: Has he not heard of Evelyn Beatrice Hall's quote -
"I disapprove of what you say, but I will defend to the death your right to say it"

 

Misuse of power, Karnataka CM Advisor
Casteist Journalist Dinesh Amin Mattu misusing Karnataka Chief Minister's Office to curb freedom of expression and media.

ನಿಲುಮೆ ಎಂಬ ಬ್ಲಾಗಿನ ಯುವಕರ ಮೇಲೆ "ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ" ಎಂಬಂತೆ ಮುಖ್ಯಮಂತ್ರಿಗಳ ಕಚೇರಿಯ ಅಧಿಕಾರ ದುರುಪಯೋಗಿಸಿ ಪೋಲಿಸ್ ದೂರು ನೀಡಿರುವ ದಿನೇಶ್ ಅಮೀನ್ ಎಂಬ ಜಾತೀವಾದಿ "ಪತ್ರಕರ್ತನ" ಅಸಲುತನ ಬಯಲಾಗಿದೆ.

ಮಂಗಳೂರಿನ "ಮುಂಗಾರು" ಪತ್ರಿಕೆಯ ಕಾಲದಲ್ಲೇ ಸಮಾಜವಾದಿ ಹೆಸರಲ್ಲಿ ಜಾತೀವಾದಿ ಕೆಲಸ ಮಾಡಿದ ಈ ಭೂಪ ಈಗ "ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ"ವೆಂಬ ಕ್ಯಾಬಿನೆಟ್ ದರ್ಜೆ ಗೂಟದ ಕಾರು, ಟಿಎ ಡಿಎ ಎಂದು ಬಡ ಬೋರೇ ಗೌಡನ ತೆರಿಗೆ ಹಣ ಪೋಲು ಮಾಡುತ್ತಿರುವುದು, ತನ್ನ ಸಿದ್ದಾಂತಕ್ಕೆ ವಿರುದ್ದವಿರುವವರು ಪೋಲಿಸ್ ಠಾಣೆ ಮೇಲೇರುವಂತೆ ಮಾಡಿ ಮಾಧ್ಯಮ/ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಮಾಡುತ್ತಿರುವುದು ವಿಷಾದನೀಯ. 

ಯಾರೋ ಫೇಸ್ಬುಕ್ಕಿನಲ್ಲಿ ಕಮೆಂಟು ಹಾಕಿದರೆ ಅದಕ್ಕೆ ಬ್ಲಾಗ್ ಎಡ್ಮಿನ್ ಜವಾಬ್ದಾರಿಯಂತೆ! ಮುಖ್ಯಮಂತ್ರಿಗಳನ್ನು ಮುಠ್ಠಾಳನೆಂದು ಕರೆಯಬಾರದಂತೆ! ಬ್ಲಾಗ್ ಸಂಪಾದಕರು ಪತ್ರಿಕೆಯ ಸಂಪಾದಕರಂತೆ ಎಂದೆಲ್ಲಾ ತನ್ನ ಓಬೀರಾಯನ ಕಾಲದ ಔಟ್ ಡೇಟೆಡ್ ಮಾಹಿತಿಯನ್ನು "ಸುವರ್ಣ ವಾಹಿನಿ"ಯಲ್ಲಿ ಓತಪ್ರೋತವಾಗಿ ಬೊಬ್ಬೆ ಹಾಕಿದ ದಿನೇಶ್ ಅಮೀನ್ ಮಟ್ಟುವನ್ನು ನೋಡಿ ಇಡೀ ಕರ್ನಾಟಕವೇ ನಗುತ್ತಿದೆ. ಇಂತಹ ಮೂರ್ಖ ಶಿಖಾಮಣಿಯನ್ನು ಮಾಧ್ಯಮ ಸಲಹೆಗಾರನೆಂದು ಇಟ್ಟುಕೊಂಡಿರುವ ಸಿ.ಎಂ. ಸಿದ್ಧರಾಮಯ್ಯನವರ ಪರಿಸ್ಥಿತಿ ನೋಡಿ ಕರುಣೆ ಬರುತ್ತಿದೆ. 

ತಾನು ಮೋದಿ, ವಿವೇಕಾನಂದರ ಬಗ್ಗೆ ಏನೆಲ್ಲಾ ಬರೆಯಬಹುದು, ಭಾಷಣ ಮಾಡಬಹುದು, ಆದರೆ ತನ್ನ ವಿರುದ್ಧ ಯಾರಾದರು ಬರೆದರೆ ಉಗ್ರನಾಗುವ ಮಟ್ಟುವಿನ ನಿಜ ಸ್ವರೂಪವನ್ನು ಮಂಗಳೂರು/ಉಡುಪಿಯ ಹಳೆ ತಲೆಮಾರಿನ ಪತ್ರಕರ್ತರು ಯಾರಲ್ಲಾದರೂ ಕೇಳಿದರೆ ಅಸಲು ಹೊರಗೆ ಬರುತ್ತದೆ. ವಡ್ಡರ್ಸೆ ಮತ್ತು ಮುಂಗಾರು ಹೆಸರಿನಲ್ಲಿ ಸಾರಾಯಿ, ಬಾರು ಮಾಲಿಕರೊಂದಿಗೆ ಮಾಡಿದ ರೋಲ್ ಕಾಲ್ ಮತ್ತು ಗೋಲ್ ಮಾಲ್, ಮುಂಗಾರನ್ನು ಮುಳುಗಿಸಿ ಪ್ರಜಾವಾಣಿಗೆ ಪಲಾಯನ ಮಾಡಿದ್ದು ಎಲ್ಲಾ ಹೊರಗೆ ಬರುತ್ತದೆ.

ಅಲ್ಲಾ, ಮುಖ್ಯಮಂತ್ರಿಯನ್ನು "ಮುಠ್ಠಾಳ"ನೆಂದು ಕರೆಯಬಾರದು ಎಂದು ಸ್ಟುಡಿಯೋದಲ್ಲಿ ಬೊಬ್ಬೆ ಹಾಕಿದ ಈ ಮಟ್ಟು, ಪ್ರಾಯಷ: ಹಳ್ಳಿ ಕಟ್ಟೆಯಲ್ಲಿ, ಬಾರುಗಳಲ್ಲಿ ಜನ ಮುಖ್ಯಮಂತ್ರಿಯನ್ನು ನಿಂದಿಸಿದರೆ ಅವರನ್ನೂ ಜೈಲಿಗೆ ಕಳೆಸಿ ಹಿಟ್ಲರ್ ಆಗುವ ಅಂದಾಜಿನಲ್ಲಿದ್ದಾರೆಯೋ ಎಂಬ ಅನುಮಾನ ಮೂಡುತ್ತಿದೆ. 

ತನ್ನ ವೃತ್ತಿ ಜೀವನದುದ್ದಕ್ಕೂ ಮತ್ತು ದೆಹಲಿಯಲ್ಲಿ ತನ್ನ ಜಾತಿಬಾಂಧವ corrupt ಕಾಂಗ್ರೆಸಿಗರ ಡ್ರಾಯಿಂಗ್ ರೂಮಿನಲ್ಲೇ ಕಾಲ ಕಳೆದ ಈ ಮಟ್ಟುವಿನ ಬಗ್ಗೆ ಹಿಂದೆಯೇ ಮಂಗಳೂರಿನ ಪೋಲಿ ಪತ್ರಕರ್ತ ನವೀನ್ ಶೆಟ್ಟಿ ಸೂರಿಂಜೆ ಜೈಲುವಾಸದ ಸಮಯದಲ್ಲಿ ಬರೆದಿದ್ದೆ. ಸೋ ಈಗ ಮಟ್ಟುವಿನ ಅಧಿಕಾರ ದುರುಪಯೋಗ ನೋಡಿ ಆಶ್ಚರ್ಯವೇನೂ ಆಗಿಲ್ಲ. 

 

ಫೇಸ್ಬುಕ್ಕಿನ ಕಮೆಂಟುಗಳ ಬಗ್ಗೆ ಕಳೆದ ವಾರ ಸುಪ್ರೀಂ ಕೋರ್ಟ್ ಇವರದ್ದೇ ಸರಕಾರದ ಪೋಲಿಸ ಅಧಿಕಾರಿಯೊಬ್ಬ ಇಬ್ಬರು ನಾಗರೀಕರ ಮೇಲೆ ಹಾಕ್ಕಿದ್ದ ಎಫ್.ಐ.ಆರ್. ರದ್ದು ಗೊಳಿಸಿದ್ದು "ಮಾಧ್ಯಮ ಸಲಹೆ"ಗಾರರಾಗಿ ಈ ಮಟ್ಟು ಎಂಬ "ಮುಠ್ಠಾಳ" ನೋಡಿರಬಹುದೆಂದು ಅಂದುಕೊಂಡಿದ್ದೇನೆ. 

ಹಾo, ಅಂದ ಹಾಗೆ ಈ ಬ್ಲಾಗಿನ ಮೂಲ ಹುಡುಕಹೋಗಬೇಡ "ಮುಠ್ಠಾಳ ಮಟ್ಟು". ಹಿಂಟ್: ಟೋರ್...:)

No comments:

Post a Comment