Saturday, August 8, 2009

Karnataka Rakshana Vedike KRV - mob of jobless hoodlums . Unholy nexus between Bangalore media and KRV


Karnataka Rakshana Vedike (KRV) is in the news all over again by protesting against installation of Tiruvalluvar statue in Bangalore.

Intention of this post is to clarify that not all Kannadigas are fanatics like Karnataka Rakshana Vedike - KRV hoodlums.

Also to expose the unholy nexus between Karnataka Rakshana Vedike and media in Bangalore.

Facts on the statue are:


  • All political parties met and decided to support installation of statue. Just like TN, it is very rare in Karnataka that all parties meet and agree on something, but on this issue they did.

  • Well known Kannada leaders like Patil Puttappa attended the meeting and supported statue.

  • Many Kannada writers, literary figures including Jnanapeetha Award winner U.R.Ananathamurthy have given public statements supporting statue installation.

  • Almost all Kannada newspapers have writtern Editorials and published articles supporting Thiruvalluvar statue in Bangalore.

  • Even Karanataka Highcourt came down heavily on anti-statue protesters and basically asked them to mind their own business and warned that they will be responsible for any untoward incidents on August 9th.
So why Karnataka Rakshana Vedike KRV and other fringe groups are up in arms?

Karnataka Rakshana Vedike is a fringe violent group in Bangalore. By claiming to be fighting for Kannada there are many accusastions against this organisation for involving in blackmail, hafta collection - in general what locals call as "Roll Call" business.

These fringe groups like to be in news all the time as that is how they build their image as ruthless extortionists. So statue issue has come as a boon to these useless jobless goons.

KRV's business must be booming - because there are lot of infighting within organisation and there are groups like "Narayana Gowda faction KRV", "Praveen Shetty faction KRV", "Shivarame Gowda faction KRV" each trying to get foothold and mark their territories in the name of "fighting for Kannada".




Many of Karnataka Rakshana Vedike's office bearers are ex-criminals now donning the roll of Kannada fighters.

Yellow and red shawl of these goons has become a symbol in Bangalore for roll call business and extort money from business in the name of Kannada.


Interestingly during general elections time these factions don't contest elections but go with any political parties or candidates who can bid for them! If these thugs are truly interested in development of Karnataka and Kannada why are they not contesting in elections?

Narayana Gowda President of Karnataka Rakshana Vedike


All times of the year Bangalore is plastered with chubby smiling face of Narayana Gowda and Karnataka Rakshana Vedike is a brain child of Narayana Gowda.

Narayana Gowda, President of Karnataka Rakshana Vedike is a returnee from Mumbai (where he supposedly worked in Dance Bars) so one would think he appreciates how Mumbai offered him food at the end of the day despite him being an outsider in Mumbai. But no, he poses as a crusader against outsiders in Bangalore.





Narayana Gowda has no known means of income now. But he can be seen driving around in large posh SUVs with dozens of hanger ons and goons posing as body guards. If this person is truly fighting for Kannada one has to wonder why does he require goons as his body guards.

Narayana Gowda and his band of followers don't have a normal job like you and me. They just go around Bangalore meeting businessmen and business owners including MNCs and BPOs and harass them for not having Kannada board, for example and leave the place after collecting you know what. No wonder Karnataka Rakshana Vedike has now become another name for Roll Call.


In January 2009, Narayana Gowda organised a huge conference in Bangalore. Of course, stage is imcomplete without chubby smiling face of Narayana Gowda in center. Crores of rupees were collected in the name of conference by all and sundry in the name of KRV, but no one has been account books even after so many months.

So question is why no one in Karnataka Media challenge this goon Narayana Gowda who is running roll call business in the name of protecting Kannada? Answer is simple - many in the media world are in the pockets of Rakshana Vedike.

Relation between Bangalore media and Rakshana Vedike is so close that many a times Rakshana Vedike goons inform journalists well in advance of any so called "raid", "attack" on business, property and people.

See disgusting vidoe below where Rakshana Vedike goons attack party goers and girls in Bangalore. KRV claimed this was a "drug""rave" party but only tablets they show are used for common cold, fever!! Karnataka Rakshana Vedike goons also stole laptops, cell phones of these poor party goers and allegedly molested girls (in video you can see them tearing top of a lady who screams in horror). One has to note that police ultimately dropped all charges against these party goers, but this incident truly established KRV as an extortion organisation who now rule all business establishement in outskirts of Bangalore.





It's time people of Karnataka raise their voice against undemocratic ways of Karnataka Rakshana Vedike and demand that Karnataka Govt ban this organisation and declare it a terrorist organisation. So far we are afraid that Govt won't act on KRV, but in the case of statue it is clear that Govt, Courts have seen real intention of KRV.

KRV now stands exposed. Govt should immediately put its leaders in jail under goonda act and ban KRV and its blackmail business. Govt should also need to take a look and seize bank accounts of Narayana Gowda, Shetty and other sundry blackmail leaders.

On a side note, it is unfortunate that there are many non-resident Kannadigas who support these thugs of Karnataka Rakshana Vedike. Typical long distance NRI patriotism syndrome. Karnataka Rakshana Vedike's web presence is maintained by these NRI Kannadigas who themselves are outsiders in countries they live but preach that Bangalore should be closed for outsiders.

*****Kannada Blog Post below / Cross Posted to Kannada Journalists*****



ಪ್ರತಿಮೆ ವಿವಾದ - ಜನಪ್ರತಿನಿಧಿಗಳಲ್ಲದ ಉಟ್ಟು ಓರಾಟಗಾರರಿಗೆ ಮಾಧ್ಯಮಗಳಲ್ಲೇಕಿಷ್ಟು ಪ್ರಚಾರ?

ಕರ್ನಾಟಕದ ಜನತೆಯ ಪ್ರತಿನಿಧಿಗಳಾದ ಕರ್ನಾಟಕದ ಸಮಸ್ತ ರಾಜಕೀಯ ಪಕ್ಷಗಳ ಮುಖಂಡರು ತಮ್ಮ ಎಂದಿನ ಗಲಾಟೆ ಬದಿಗಿಟ್ಟು ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ತಿರುವಳ್ಳವಾರ್ ಪ್ರತಿಮೆ ಸ್ಥಾಪನೆಗೆ ಒಪ್ಪಿರುವುದು ಶ್ಲಾಘನೀಯ ಸಂಗತಿ. ಏನೇ ಹೇಳಿ ಈ ವಿಷಯದಲ್ಲಂತೂ ಮಾನ್ಯ ಯಡ್ಯ್ರಪ್ಪನವರು ತಮ್ಮ ನಾಯಕತ್ವ ಮರೆದಿದ್ದಾರೆ.

ಅಂತೆಯೇ ಕನ್ನಡ ಸಂಸ್ಕೃತಿಯ ನಿಜವಾದ ಹರಿಕಾರರಾದ ಸಾಹಿತಿಗಳು, ಚಿಂತಕರು, ಪಾಟೀಲ್ ಪುಟ್ಟಪ್ಪರಂತಹ ಅಸಲೀ ಹೋರಾಟಗಾರರೂ ಒಮ್ಮತದಿಂದ ಸರಕಾರವನ್ನು ಬೆಂಬಲಿಸಿದ್ದಾರೆ. ಎಲ್ಲಾ ಮಾಧ್ಯಮ ಮತ್ತು ಪತ್ರಿಕೆ ಸಂಪಾದಕೀಯಗಳೂ ಇದನ್ನು ಸ್ವಾಗತಿಸಿವೆ.

ಆದರೆ ಬಹಳ ಸಮಯದಿಂದ ತಣ್ಣಗೆ ಕೆಲಸವಿಲ್ಲದೆ ಕುಳಿತಿದ್ದ ಕೆಲ "ಉಟ್ಟು ಓರಾಟಗಾರ"ರಿಗೆ ಬಹಳ ಸಿಟ್ಟು ಬಂದು ಬಿಟ್ಟಿದೆ. ಜನವರಿಯಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಸಮ್ಮೇಳನ ಮಾಡಿದ್ದ ಕ.ರಾ.ವೆ.ಯ ಗೌಡರೂ, ರೋಲ್ ಕಾಲ್ ಉದ್ದಿಮೆಯಲ್ಲಿ ತನ್ನದೇ ಅಸ್ತಿತ್ವ ಸ್ಥಾಪಿಸಲು ಒದ್ದಾಡುತ್ತಿರುವ ಇನ್ನೊಂದು "ಬಣ"ವೂ, ಸತತವಾಗಿ ಚುನಾವಣೆಯಲ್ಲಿ ಸೋತರೂ ಬುದ್ಧಿ ಬರದ ವಾಟಾಳರೂ ಸಡನ್ನಾಗಿ ಎದ್ದು ಬಿಟ್ಟಿದ್ದಾರೆ, ಕನ್ನಡ ಉಳಿಸುವ ಹೆಸರಲ್ಲಿ ಪ್ರತಿಮೆ ಸ್ಥಾಪನೆ ವಿರೋಧಿಸುತ್ತಿದ್ದಾರೆ. ಮುಖ್ಯಮಂತ್ರಿಗಳು ಕರೆದ ಸಭೆಯಲ್ಲಿ ಹಿರಿಯರೆದುರು ಸಭಾ ಮರ್ಯಾದೆಯನ್ನೂ ಮರೆತು ಯಕ:ಶ್ಚಿತ್ ಸ್ಟ್ರೀಟ್ ರೌಡಿಗಳಂತೆ ತಮ್ಮ ರೋಲ್ ಕಾಲ್ ಸ್ಟೈಲ್ ತೋರಿಸಿದ್ದು ತಾವು ಟಿ.ವಿ.ಯಲ್ಲಿ ನೋಡಿರಬಹುದು.

ನಾನು ಕೇಳಿದಂತೆ ಗೌಡರೂ, ಶೆಟ್ಟರೂ ಪ್ರತಿಭಟನೆಯ ಹೆಸರಲ್ಲಿ, ಪ್ರತಿಭಟನೆಗಾಗುವ ಖರ್ಚಿನ ಹೆಸರಲ್ಲಿ ಎಂದಿನಂತೆ ಈಗಾಗಲೇ ಎರಡೆರಡು ಬಾರಿ ದೊಡ್ಡ ಕುಳಗಳ ಹತ್ತಿರ ಚಂದಾ ವಸೂಲಿ ಮಾಡಿಯಾಗಿದೆ. ಜನವರಿಯ ಸಮ್ಮೇಳನಕ್ಕೆ ಕ.ರಾ.ವೇ.ಯಿಂದ ಬಲಾತ್ಕಾರವಾಗಿ ಚಂದಾ ವಸೂಲಿ ಮಾಡಿಕೊಡಲ್ಪಟ್ಟಿದ್ದ ಗಾಂಧೀನಗರದ ಮಿತ್ರರೊಬ್ಬರು ಆರು ತಿಂಗಳಾಗುವುದರೊಳಗೆ ಕ.ರಾ.ವೇ.ಯ ಇನ್ನೊಂದು ಡಿಮಾಂಡ್ ಬಂದದ್ದು ನೋಡಿ ಹೌಹಾರಿದ್ದಾರೆ. ನವೆಂಬರ್ ೧ ನ್ನೂ ದೂರವಿಲ್ಲ ನೋಡಿ.

ನನ್ನ ಪ್ರಶ್ನೆ ಸಿಂಪಲ್ - ರಾಜ್ಯದ ಎಲ್ಲಾ ಪಕ್ಷಗಳು ಒಪ್ಪಿರುವಾಗ ಕ್ಷುಲ್ಲುಕ ಕಾರಣಗಳಿಗೆ, ಪ್ರಚಾರಕ್ಕಾಗಿ ವಿರೋಧಿಸುತ್ತಿರುವ ಈ ಉಟ್ಟು ಓರಾಟಗಾರರಿಗೆ ನಾವೇಕೆ ಕ್ಯಾರ್ ಮಾಡಬೇಕು? ವಿರೋಧಿಸುವ ಹೆಸರಲ್ಲಿ ಬಿಟ್ಟಿ ಪ್ರಚಾರ ಪಡೆದುಕೊಂಡು ರೋಲ್ ಕಾಲ್ ಸಾಮ್ರಾಜ್ಯ ವಿಸ್ತರಿಸುತ್ತಿರುವ ಇವರಿಗೆ ಧಿಕ್ಕಾರ. ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಡದ ಈ ರೋಲ್ ಕಾಲ್ ಉದ್ದಿಮೆದಾರರು ಮೊದಲು ಚುನಾವಣೆಯಲ್ಲಿ ಸ್ಪರ್ಧಿಸಿ ನಂತರ ಮಾತನಾಡಲಿ.

ನಾಡಿದ್ದೂ ನೋಡಿ - ಪ್ರತಿಮೆ ಅನಾವರಣಕ್ಕಿಂತ ಈ ಗೌಡರ-ಶೆಟ್ಟರ-ವಾಟಾಳರ ಬೊಬ್ಬೆಗೇ ಪ್ರಚಾರ ಜಾಸ್ತಿ ಸಿಗಲಿದೆ. ಕೋಟ್ಯಾಂತರ ಕನ್ನಡಿಗರನ್ನು ಪ್ರತಿನಿಧಿಸುವ ರಾಜಕೀಯ ಪಕ್ಷಗಳಿಗಿಂತ ನಮ್ಮ ಮಾಧ್ಯಮಗಳಿಗೆ ಈ ಬೆರಳೆಣಿಕೆಯ "ಓರಾಟ"ಗಾರರು ಮುಖ್ಯವೆನಿಸಲಿದ್ದಾರೆ.

ರಾಜಕಾರಣಿಗಳಂತೆ ವೇದಿಕೆಯವರೂ ಮಾಧ್ಯಮದವರನ್ನು ಸಾಕಿಕೊಂಡಿದ್ದಾರಾ? ರಾಜಕಾರಣಿಗಳಿಗೆ, ಚಿತ್ರ ನಟ ನಟಿಯರಿಗೆ ಏನೆಲ್ಲಾ pointed question ಕೇಳುವ ನಮಗೆ ಜನವರಿಯಲ್ಲಿ ನಡೆದ ಕ.ರಾ.ವೇ.ಯ ಭರ್ಜರಿ ಸಮ್ಮೇಳನದ ಲೆಕ್ಕವನ್ನು ಗೌಡರ ಬಳಿ ಕೇಳುವಷ್ಟು ಧೈರ್ಯವಿದೆಯೇ? There is a big story out there - if you are interested!
*******

20 comments:

  1. One of the most brutally honest blog I have seen in recent years - keep it up!!!!

    You have said in open what many of us know but are afraid to speak. Thanks for the expose`

    ReplyDelete
  2. ಆನಂದ್August 09, 2009

    So many wrong information and allegations about KRV and Gowdru here.

    If they are doing wrong then media is also wrong. U have to highlight concerned media too as jobless hoondlums.

    and all people knw abt drugs, illegal, immoral activities at so called birthday parties arranged at outskirts of city. In the josh of exposing KRV u r supporting such parties!!

    u r a media student and u dnt knw how kannadigas are suffering in the hands of non kannadigas in almost all companies and for this even KRV are goons v want them. no other go. Great saviours of Kannada like papu, chimu, GSS cant do anything abt this.

    This link shows the KRV goals and reasons
    That is in Kannada, translate it in English.

    http://karave.blogspot.com/2009/08/tiruvalluvar-pratime-krv-niluvu.html

    ReplyDelete
  3. I agree with what you say. Majority in Bangalore feel the same way but are afraid of KRV and it's informers.

    Every two bit goonda now wears KRV's trademark yellow red shawl and overnight has become KRV activist.

    Usman, Shivajinagar

    ReplyDelete
  4. ಬಹಳ ಸರಿಯಾಗಿ ಬರಿದಿದ್ದೀಯಾ ಗುರೂ! ಮುಂಚೆ ನವೆಂಬರ್ ೧ರ ನೆಪದಲ್ಲಿ ಜನರಿಂದ ಕನ್ನಡ ಹೋರಾಟಗಾರರು ಹಣ ಕೀಳುತ್ತಿದ್ದರು. ಆದ್ರೆ ಈಗ ಗಲ್ಲಿ ಗಲ್ಲಿಯ ಪುಂಡುಗಳೂ ಕರವೇಯೆಂದು ಹೇಳಿಕೊಂಡು ಪ್ರತಿನಿತ್ಯವೆಂದೆನ್ನುವಂತೆ ಜನರಿಂದ ಹಣಕೀಳುತ್ತಿದ್ದಾರೆ.

    ಕರಾವೇಯ ಪೌರುಷವಿಂದು ಬಯಲಾಗಿದೆ. ಇವರದ್ದು ಎಷ್ಟೆಂದರೂ ಅಜ್ಜ ಅಜ್ಜಿಯರ ಮುಖಕ್ಕೆ ಮಸಿ ಬಳೆಯುವುದು, ತಮಿಳುನಾಡು ವಾಹನಗಳ ಗಾಜು ಪುಡಿ ಮಾಡುವುದು, ಪಾರ್ಟಿ ರೈಡು ಮಾಡುವ ಹೆಸರಲ್ಲಿ ಸೆಲ್ ಫೋನ್, ಲ್ಯಾಪ್ ಟಾಪ್ ಕದಿಯುವುದು, ಹೆಣ್ಮಕ್ಕಳ ಮೇಲೆ ಕೈಮಾಡುವುದು ಅಷ್ಟೇ!

    ReplyDelete
  5. ನೀವು ಮುಂದೊಂದು ದಿನ ಪತ್ರಕರ್ತ ಆಗದಿರಲಿ ಎಂದು ಹಾರೈಸುವೆ!

    ಯಾಕೆ ಅಂದರೆ ನಿಮ್ಮಂತಹ ಕುರುಡು ಪತ್ರಕರ್ತರ ಏನು ಕಡಿಮೆ ಇಲ್ಲ ಈಗ. ಸುಮ್ಮನೆ ಮನೆಯೊಳಗೆ ಕುಳಿತು, "ನಾನು ಕನ್ನಡಿಗ" ಅಂತ ಜಪ ಮಾಡುತ್ತಾ, ಹೊರಗಡೆ ಏನೂ ತೊಂದರೆ ಇಲ್ಲವೆಂದು ಕಣ್ಣು ಮುಚ್ಚಿ ಹಾಲು ಕುಡಿವ ಬೆಕ್ಕಿನಂತೆ ತೊಂದರೆಗಳನ್ನೆಲ್ಲಾ ಮರೆಯುವಂತಹ, ಅಷ್ಟಕ್ಕೇ ಮುಗಿಯದೇ, ಟಿವಿ ಪೇಪರ್ ಗಳಲ್ಲಿ ಕಂಡ ಚಿತ್ರಗಳಿಂದಲೇ ಮತ್ತೊಂದು ನಿಮಗಿಷ್ಟವಾಗುವಂತಹ ಕಥೆ ಪೋಣಿಸುವಂತಹ ನೀವು ಪತ್ರಕರ್ತರಾಗದೇ ಇರುವುದೇ ನಮ್ಮ ಸಮಾಜಕ್ಕೆ ಒಳಿತು.
    ಸಂದರ್ಭವನ್ನು ನಿಮ್ಮ ಕಣ್ಣಿನಿಂದ ಮಾತ್ರ ನೋಡುವುದು ಬಿಟ್ಟು, ಸಮಾಜದ ಒಳಿತಿನ ಕಣ್ಣಿನಿಂದ ನೋಡಲು ಮುಂದಾಗಿ. ಆಗಲೇ ನಿಮ್ಮ ಕಸುಬಿಗೆ ಮರ್ಯಾದೆ, ಘನತೆ ಮತ್ತು ಗೌರವ ಉಳಿವುದು.

    ReplyDelete
  6. ಹೆಸರಿಗೆ ಪತ್ರಿಕೋದ್ಯಮ ವಿದ್ಯಾರ್ಥಿ, ಬ್ಲಾಗ್ ಪೋಸ್ಟ್ ನೋಡಿದರೆ ಯಾವುದು ಕ್ರೈಂ ಸ್ಟೋರಿಗೆ ಅರ್ಜಿ ಹಾಕಿದ ಹಾಗೆ ಇದೆ ಬರಹ. ಅವಸರದಲ್ಲಿ ಬಾಯಿಗೆ ಬಂದಿದ್ದು ಬರೆಯುವುದು, ಯಾವುದೋ ಒಂದು ಪಕ್ಷಕ್ಕೆ ನಿಯತ್ತು ತೋರಿಸುವುದು, ವಿ.ಕ ಪತ್ರಿಕೆಗಳನ್ನೇ ನಿಜಾ ಅಂತ ನಂಬುವ ಹುಂಬ ಲೇಖನ ಇದು.

    ಪತ್ರಿಕೋದ್ಯಮದ ಒಂದು ಮುಖ್ಯ ಅಂಶ ಅಂದರೆ ಓದುವುದು, ಹೆಚ್ಚು ಹೆಚ್ಚು ವಿಷಯಗಳನ್ನು ಹೆಕ್ಕಿ ತೆಗೆಯುವುದು, ಅದನ್ನು ಯಾವುದು ಮಾಡದೇ ಹಳೆ ಪಾತ್ರೆ, ಹಳೆ ಪೇಪರ್ ಅನ್ನೋ ರೀತಿಯಲ್ಲಿ ಎನೊ ಬರೆದು ಅದನ್ನೇ ನಕಲಿ ಕಾಮೆಂಟಗಳಿಂದ ಬಲೆ ಭಲೇ ಅನಿಸಿಕೊಳ್ಳುವ ಈ ಪರಿ ಯಾರನ್ನು ಕ್ಷ ಕರಿಸಲು ಹೊಗಿದೆ?.

    ತಿರುವಳ್ಲುವವರ್ ವಿಷಯದಲ್ಲಿ ಕರವೇ ಅಂತರ್ಜಾಲ ತಾಣದಲ್ಲಿ ನಿಲುವನ್ನು ಪ್ರಕಟಿಸಿದೆ, ಅದನ್ನು ಒಮ್ಮೆ ಓದು, ಅದನ್ನು ಬಿಟ್ಟು ಒಳ್ಳೆ discovery of india ಮಾಡಿದ ಹಾಗೆ ಆಡಬೇಡ.
    ಕರವೇ ಬಗ್ಗೆ ಹೀಗೆ ಬರೆಯುವದಕ್ಕೆ, ನಿನ್ನ ನಗ್ನ ಸತ್ಯ ಬಟ್ಟಬಯಲು ಮಾಡಿದಕ್ಕೆ ಆದಾರ ಇದ್ದರೆ ಕೊಡು, ಸುಮ್ಮನೆ ಅದು ಇದು ಅದೇ ರಾಗ ಹಾಡುವದರ ಬದಲು. ಸುಮ್ಮನೆ ಹೊಟ್ಟೆ ಉರಿದುಕೊಳ್ಳಬೇಡ.

    ವಿದ್ಯಾರ್ಥಿ ದಸೆಯಿಂದಲೇ ಬಕೆಟ್ ಪತ್ರಿಕೋದ್ಯಮ ಮಾಡುತ್ತಿರುವ ನೀನು ABVP ಕಾರ್ಯಕರ್ತ ಅಂತ ಎಲ್ಲ ಕನ್ನಡಿಗರಿಗೂ ಗೊತ್ತು ಬಿಡು. ಬೇಕಿದ್ದರೆ ಮುಖ್ಯವಾಹಿನಿ ಆದ ಸಂಪದಕ್ಕೆ ಬಾ, ನಿನ್ನ ಚರ್ಚೆ ಮುಂದೆ ಇಡು, ಇನ್ನೊಮ್ಮೆ ಈ ತರಹದ ಬಕೆಟ್ ಬರಹ ಬರೆಯೊಲ್ಲ ನೀನು.

    ReplyDelete
  7. ಹಳ್ಳಿ ಹೈದAugust 10, 2009

    ಯಾವುದೇ ಒಬ್ಬ ಬರಹಗಾರ ಮೊದಲು ಪೂರ್ವ ಪರಗಳನ್ನು ವಿಶ್ಲೇಷಿಸಿ, ನಂತರ ತನ್ನ ಚಿಂತನಾ ಶಕ್ತಿಗೆ ಸ್ವಲ್ಪ ಕೆಲಸ ಕೊಟ್ಟು ನಂತರ ಬರೆಯುವುದೆ ವಾಡಿಕೆ. ಆದರೆ ನೀನೊಬ್ಬ ಕ್ರಾಂತಿಕಾರಿ ಬರಹಗಾರನ ಥರಹ ಕಾಣಿಸುತ್ತಿದ್ದಿಯೇ! ಎಲ್ಲು ಸ್ವಲ್ಪವೂ ವಿಷಯದ ಬಗ್ಗೆ ಅರಿತು ಕೊಳ್ಳದೆ, ಚಿಂತನೆಯನ್ನು ಚಿತೆಯ ಮೇಲೆ ಮಲಗಿಸಿ - ಮನಸ್ಸಿಗೆ ಬಂದಂತೆ ಬರೆದಿದ್ದಿಯೆ. ನೀನು ಅಪ್ಪಿ ತಪ್ಪಿ ಪತ್ರಿಕೋದ್ಯಮ ದಲ್ಲಿ ಕೆಲಸ ಗಿಟ್ಟಿಸಿ ಕೊಂಡರೆ, ಮತ್ತೊಂದು ಹಾದಿ ಬೀದಿಯ ಸಿಗರೆಟ್ ಅಂಗಡಿಗೆ ಸೀಮಿತವಾದ ಪಪೆರ್ ನಲ್ಲಿ ನಿನ್ನ ಬರಹಗಳು ಬರಬೊಹುದು.

    ReplyDelete
  8. ಕರ್ನಾಟಕದಲ್ಲಿ ದುಡ್ಡು ಅಂತಾ ಇದ್ರೆ ಅದು ಬರಿ ಬೆಂಗಳೂರಲ್ಲಿ,, ಕನ್ನಡದ ಹೆಸರಲ್ಲಿ ದುಡ್ಡು ಮಾಡ್ತಿನಿ ಅನ್ನೋರಿಗೆ ಮಾರುಕಟ್ಟೆ ಅಂತಾ ಇದ್ರೆ ಅದು ಬೆಂಗಳೂರಲ್ಲಿ ಮಾತ್ರ..

    ನಾರಾಯಣ ಗೌಡರ ಕ.ರವೇ ಗೆ ಕನ್ನಡದ ಹೆಸರಲ್ಲಿ ದುಡ್ಡು ಮಾಡೋದೆ ಆಗಿದ್ರೆ ಅವರು ನಯಾ ಪೈಸೆ ಹುಟ್ಟದ ( ಕನ್ನಡದ ಹೆಸರಲ್ಲಿ) ಹುಬ್ಬಳ್ಳಿಯಂತ ಊರಲ್ಲಿ ೧೦ ಸಾವಿರ ಜನರನ್ನ ಸೇರಿಸಿ, ಕಳಸಾ-ಬಂಡೂರಿ ನಾಲೆಗಾಗಿ ಯಾಕೆ ಹೋರಾಟ ಮಾಡ್ತಿದ್ರು ?? ಬೆಳಗಾವಿಯಂತ ಊರಲ್ಲಿ ಅಲ್ಲಿರುವ ಎಲ್ಲ ಪ್ರಮುಖ ಉದ್ಯಮಗಳು ಮರಾಠಿಗರ ಕೈಯಲ್ಲಿವೆ,, ಅಲ್ಲಿ ಕನ್ನಡದ ಹೆಸರಲ್ಲಿ ಬಿಡಿಗಾಸು ಹುಟ್ಟಲಿಕ್ಕಿಲ್ಲ,, ಹಾಗಿದ್ರೆ ನಾರಾಯಣ ಗೌಡರ ಕ.ರ.ವೇ ಅಲ್ಲಿ ಹಳ್ಳಿ ಹಳ್ಳಿಯಲ್ಲಿ ಕನ್ನಡಿಗರ ನಡುವೆ ಜಾಗೃತಿ ತರಲು, ಒಗ್ಗಟ್ಟು ತರಲು ಯಾಕೆ ಹೋರಾಡೀತು?? ಅಲ್ಲಿನ ಪಾಲಿಕೆಗೆ ಕನ್ನಡತಿಯೊಬ್ಬರು ಮೇಯರ್ ಆಗಿದ್ದಾಗಲಿ, MES ನ ಪುಂಡರು ಸೋತಿದ್ದು ಅಂತದೊಂದು ಜಾಗೃತಿಯ ಯಶಸ್ಸಿನ ಪರಿಣಾಮವೇ ತಾನೆ? ಅಲ್ಲೇನು ಕನ್ನಡಿಗರ ಸಂಖ್ಯೆ ದಿಢೀರ ಎಂದು ಏರಿ ಕನ್ನಡಿಗರೊಬ್ಬರು ಮೇಯರ್ ಆದರೆ? ಇಲ್ಲ ತಾನೆ? ಅಲ್ಲಿ ಕನ್ನಡತಿಯೊಬ್ಬರು ಮೇಯರ್ ಆಗಲು ನಾರಾಯಣ ಗೌಡರ ಕ.ರ.ವೇ ಕಾರಣ ಎಂದು ವಿ.ಕ ಸಂಪಾದಕರು ತಮ್ಮ ಬರಹದಲ್ಲೇ ನೇರವಾಗಿ ಬರೆದಿದ್ದನ್ನು ಓದಿದ್ದ ನೆನಪು.

    ಬರೀ ಕನ್ನಡದ ಹೆಸರಲ್ಲಿ ದುಡ್ಡು ಮಾಡಬೇಕು ಅನ್ನೊರಿಗೆ ಕರ್ನಾಟಕ-ಕನ್ನಡಿಗ ಬಗ್ಗೆ ಈ ಮಟ್ಟದ ವಿಶನ್ ಇರಲು, ಗುರಿ ಇರಲು ಸಾಧ್ಯವೇ ಇಲ್ಲ.. ಕನ್ನಡಕ್ಕಾಗಿ ಪ್ರಾಮಾಣಿಕವಾಗಿ ಹೋರಾಡೋರನ್ನು, ಕನ್ನಡದ ಹೆಸರಲ್ಲೇ ತಮ್ಮ ಬೆಳೆ ಕಾಳು ಬೆಯಿಸಿಕೊಳ್ಳೊರನ್ನು ಒಂದೇ ತಕ್ಕಡಿಯಲ್ಲಿ ಅಳಿಬಾರದು ಅನ್ನೊದು ನನ್ನ ಅನಿಸಿಕೆ.

    ನನ್ನ ಸ್ನೇಹಿತೆ ಮಾಧುರಿಯ ಮದುವೆಗೆ ಬೆಳಗಾವಿಯ ಶಾಹುನಗರಕ್ಕೆ ಹೋದಾಗ ಅಲ್ಲಿ ಆಕೆಯ ಬಂಧುಗಳೇ ಬೆಳಗಾವಿಯಲ್ಲಿ ಕ.ರ.ವೇ ಕನ್ನಡ ಉಳಿಸಲು ಮಾಡಿರುವ ಕೆಲಸಗಳ ಬಗ್ಗೆ ಮಾತಾಡ್ತಾ ಇದ್ರು. ಅದು ಚುನಾವಣೆ ಫಲಿತಾಂಶ ಬಂದು, MES ಮಣ್ಣುಕಚ್ಚಿದ್ದ ಸಮಯ.

    ReplyDelete
  9. ಕನ್ನಡಿಗರಲ್ಲಿ ಕನ್ನಡತನದ ಜಾಗ್ರುತಿ ಆಗ್ಗುತ್ತಿರುವುದನ್ನು, ಕನ್ನಡಿಗರಲ್ಲಿ ಒಗ್ಗಟ್ಟು ಮೂಡುತ್ತಿರುವುದನ್ನು ಸಹಿಸಲು ಆಗದ ಕೆಲವು ಪತ್ರಕರ್ತರು ಈ ಒಗ್ಗಟ್ಟು, ಜಾಗ್ರುತಿಗೆ ಕಾರಣರಾಗಿರುವ ಕ ರ ವೇ ಹಾಗು ನಾರಯಣ ಗೌಡರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿ ತಮ್ಮ frustration ಅನ್ನು ಇಲ್ಲಿ ತೋರಿಸುತ್ತಿದ್ದಾರೆ. ಕ ರ ವೇ ಹಾಗು ನಾರಯಣ ಗೌಡರ ಬಗ್ಗೆ ಬಹಳ ಹಗುರವಾಗಿ ಮಾತನಾಡುವುದನ್ನ ನೋಡಿದರೆ ಇವರ ಮೇಲೆ ಕ ರ ವೇ ಯವರು ಏಕೆ ಇನ್ನು ಒಂದು defamation case ಹಾಕಿಲ್ಲ ಎಂಬುದೆ ಆಶ್ಚರ್ಯ ಪಡುವಂತ ವಿಷಯ.

    ReplyDelete
  10. ಕನ್ನಡ ನಾಡು ಒಂದಾಗಿದ್ದೆ "ಏಕೀಕರಣ" ಚಳವಳಿಯಿಂದ. ಪ್ರತಿಬಾರಿಯೂ ಕನ್ನಡಿಗರ ಬೇಡಿಕೆಗಳು ಈಡೇರಲು ಒಂದಲ್ಲ ಒಂದು ಹೋರಾಟದ, ಚಳವಳಿಯ ಕೊಡುಗೆ ಇದ್ದೇ ಇದೆ. ಹಿಂದೆಲ್ಲಾ ಚಳವಳಿ ಮಾಡಿದಾಗಲೂ ಕನ್ನಡ ಸಂಘಟನೆಗಳೆ ಅವನ್ನು ನಡೆಸಿದ್ದು. ಅನಕೃ, ರಾಮಮೂರ್ತಿ, ಆಲೂರು ವೆಂಕಟರಾಯರು ಮೊದಲಾದ ಮಹನೀಯರು ಕಟ್ಟಿದ ಸಂಘಟನೆಗಳು, ನಡೆಸಿದ ಚಳವಳಿಗಳ ಕಾರಣದಿಂದಲೇ ಇಂದು ಕನ್ನಡಿಗರಿಗೊಂದು ಅಸ್ತಿತ್ವ ಉಳಿದಿದೆ ಅಂದರೆ ಉತ್ಪ್ರೇಕ್ಷೆಯಾಗಲಾರದು.
    ಕನ್ನಡ ಚಳವಳಿಗಳ ಕಾರಣದಿಂದಾಗಿಯೇ ಈ ದಿನ ಬೆಂಗಳೂರಿನಲ್ಲಿ ಹಿಂದಿದ್ದ ತಮಿಳರ ಪಾರಮ್ಯ ತಗ್ಗಿರುವುದು. ಕನ್ನಡಪರ ಸಂಘಟನೆಗಳ ಕಾರಣದಿಂದಲೇ ಕಾವೇರಿ ನದಿನೀರು ಹಂಚಿಕೆ ತೀರ್ಪಿನ ಅನುಷ್ಠಾನಕ್ಕೆ ಕೇಂದ್ರ ಹಿಂದುಮುಂದು ನೋಡುತ್ತಿರುವುದು, ನೈಋತ್ಯ ವಲಯ ರೇಲ್ವೇ ನೇಮಕಾತಿ ಪ್ರಕ್ರಿಯೆ ಸ್ಥಗಿತವಾಗಿದ್ದು, ಎಫ್.ಎಂಗಳಲ್ಲಿ ಕನ್ನಡ ಗೀತೆಗಳು ಮೂಡಿದ್ದು, ಹೊಗೇನಕಲ್ ಯೋಜನೆಯನ್ನು ಜಾರಿಗೊಳಿಸಲಾಗದ್ದು....

    ReplyDelete
  11. vijay hosakoteAugust 11, 2009

    ಚಳವಳಿ ಅನ್ನೋದು ನಡೆಯೋದೇ ಆಡಳಿತ ವ್ಯವಸ್ಥೆ ತನ್ನ ಕೆಲಸ ತಾನು ಮಾಡಲು ಸೋತಾಗ. ಹಾಗಾಗಿ ಹೆಚ್ಚು ಸಲ ಅದು ವ್ಯವಸ್ಥೆಗೆ ವಿರುದ್ಧವಾಗಿರುತ್ತದೆ ಮತ್ತು ಪೂರ್ಣಫಲ ಸಿಗುವುದಿಲ್ಲ. ಅದಕ್ಕೆ ಏಕೀಕರಣ ಚಳವಳಿಯೂ ಹೊರತಲ್ಲ. ಹಾಗೇ ನಾಡಿನ ತುಂಬಾ ದೊಡ್ಡ ಕ್ರಾಂತಿಯುಂಟುಮಾಡಿದ್ದ ಗೋಕಾಕ್ ಚಳವಳಿಯೂ ಆ ದೃಷ್ಟೀಲಿ ನೋಡೂದ್ರೆ ವೈಫಲ್ಯವೇ. ಹಾಗಾದ್ರೆ ಚಳವಳಿಗಳಿಂದ ಏನು ಪ್ರಯೋಜನ? ಚಳವಳಿಗಳು ಉಂಟು ಮಾಡೋ ಅಗಾಧವಾದ ಜನಜಾಗೃತಿಯೇ, ಜನರ ಒಗ್ಗಟ್ಟೇ ನಿಜವಾದ ಚಳವಳಿಯ ಯಶಸ್ಸಿನ ಮಾನದಂಡ.
    ಇವತ್ತಿನ ದಿವಸ ಕರ್ನಾಟಕ ರಕ್ಷಣಾ ವೇದಿಕೆ ಇಂತಹ ಜನ ಪರ ಚಳವಳಿಯ ರೂವಾರಿಯಾಗಿ ಕಳೆದ ಹತ್ತು ವರ್ಷದಿಂದ ದಾಪುಗಾಲಿಟ್ಟು ಸಾಗುತ್ತಿದೆ. ನೀವೇ ನೆನಪಿಸಿಕೊಂಡು ನೋಡಿ. ಹತ್ತು ವರ್ಷದ ಹಿಂದೆ ಕನ್ನಡ ಕನ್ನಡಿಗ ಕರ್ನಾಟಕ ಅಂತ ಯಾವ ಚರ್ಚೆಗಳು ನಡೆದಿದ್ದವು ಅಂತ. ವಾಟಾಳ್ ನಾಗರಾಜ್ ಥರದೋರು ಕನ್ನಡ ಚಳವಳಿಯನ್ನು ಕತ್ತೆ ಎಮ್ಮೆ ತಮಟೆಗಳಿಗೆ ವಿಸ್ತರಿಸಿ ಇಡೀ ಕನ್ನಡ ಹೋರಾಟ ಅನ್ನೋದೆ ವಸೂಲಿ, ಜೋಕ್ ಅನ್ನುವಂತೆ ಮಾಡಿದ್ದು ನಾಡ ಜನರು ಅವುಗಳ ಬಗ್ಗೆ ಹಗುರ ಭಾವನೆ ಹೊಂದಲು ಕಾರಣವಾಗಿದ್ದರು. ಇಂಥ ಸನ್ನಿವೇಶದಲ್ಲಿ ಚಾಮರಾಜ ನಗರದಿಂದ ಬೀದರ್ ತನಕ, ಬಳ್ಳಾರಿಯಿಂದ ಉಡುಪಿಯ ತನಕ ಕನ್ನಡ ಬಾವುಟದ ಅಡಿಯಲ್ಲಿ ಕನ್ನಡಿಗರನ್ನು ಸಂಘಟಿಸುತ್ತಾ ಇರೋದು ಕರವೇ. ಇವತ್ತು ನಲವತ್ತು ಲಕ್ಷ ಸದಸ್ಯತ್ವ ಹೊಂದಿರೋದೇ ಸಂಘಟನೆಯ ಯಶಸ್ಸಿಗೆ ಸಾಕ್ಷಿಯಾಗಿದೆ.
    ಒಂದು ತಮಾಷೆ ಹೇಳಲಾ. ಇಷ್ಟು ಅಗಾಧವಾಗಿ ಬೆಳೆದೋರಿಗೆ ಈ ರೋಲ್ ಕಾಲು, ದಾದಾಗಿರಿ, ಎಂಎಲ್ಲೆ ಸೀಟು ಅವೆಲ್ಲಾ ಜುಜುಬಿ ಗುರಿಗಳು, ಇರೋ ನಾಲ್ಕು ಜನ ಬೆಂಬಲಿಗರನ್ನು ಇಟ್ಕೊಂಡೇ ವಾಟಾಳು ಐದು ಸರ್ತಿ ಶಾಸಕ ಆಗಿದ್ದಾರೆ ಅಂತಾದ್ರಲ್ಲಿ ರಾಜಕೀಯ ಗುರೀನೆ ಇರೋದಾದ್ರೆ ಕರವೇ ನಾಡಿನ ರಾಜಕೀಯ ಪಕ್ಷಗಳನ್ನು ಧೂಳಿಪಟ ಮಾಡಿ ಅಧಿಕಾರದ ಚುಕ್ಕಾಣಿ ಹಿಡಿಯೋದು ಅದರ ಗುರಿಯಾಗಿರೋ ಸಾಧ್ಯತೇನೆ ಹೆಚ್ಚಲ್ವೇನ್ರಿ? ಇಂಥ ದೊಡ್ಡ ಅವಕಾಶ ಇರೋರು ಚಿಲ್ಲರೆ ಕೆಲಸಕ್ಕೆ ಇಳಿತಾರೆ ಅಂತ ಆಧಾರ ಇಲ್ಲದೇ ಮಾತಾಡಬೇಡಿ.
    ನೋಡಿ, ಸಾರ್... ಒಂದು ಹೀಗೆ ಯಶಸ್ಸು ಪಡೆದ ತಕ್ಷಣ ನಾಯಿಕೊಡೆ ತರಹ ಕನ್ನಡ ಸೇನೆ, ಕರುನಾಡಸೇನೆ, ಜಯಕರ್ನಾಟಕ ಥರದ ಅನೇಕವು ಹುಟ್ಟುಕೊಳ್ಳೋದು ಸಹಜ. ಒಬ್ಬರಿಗೆ ರೋಲ್ ಕಾಲ್ ಚಿಂತೆ, ಇನ್ನೊಬ್ಬರಿಗೆ ಅಂಡರ್ ವರ್ಲ್ಡ್ ಇಮೇಜ್ ಬದಲಾಯಿಸಿಕೊಳ್ಳೋ ಚಿಂತೆ, ಮತ್ತೊಬ್ಬರಿಗೆ ಕರವೇ ಹೆಸರು ಬಳಸಿಕೊಂಡು ರಿಯಲ್ ಎಸ್ಟೇಟ್ ಮಾಡೊ ಚಿಂತೆ, ಮತ್ತೊಬ್ಬರಿಗೆ ಇಮೇಜ್ ಹಾಳುಮಾಡೋ ಚಿಂತೆ... ಇಂಥಾ ಸಂತೆಲಿ ನಿಜವಾದ ಕಾಳಜಿ ಇರೋರುನ್ನ ಗುರುತಿಸೋದು, ಹರಸೋದು, ಬೆಳೆಸೋದು ನಮ್ಮ ಏಳಿಗೆಯ ದೃಷ್ಟಿಯಿಂದಲೇ ಒಳ್ಳೇದು.

    ReplyDelete
  12. ಬಹಳ ಚೆನ್ನಾಗಿದೆ ಬ್ಲಾಗ್. ಕರವೇಯ ಉಟ್ಟು ಓರಾಟಗಾರರಿಗೆ "ಕರ್ನಾಟಕ ರಕ್ಕಸ ವೇದಿಕೆ"ಯೆಂಬ ಹೆಸರಿಟ್ಟಿರುವುದು ಸರಿಯಾಗಿದೆ.

    ಮೊನ್ನೆ ಬೆಂಗಳೂರು ಬಂದ್ ಕರೆಕೊಟ್ಟು ಸಂಪೂರ್ಣ ವೈಫಲ್ಯ ಹೊಂದಿದರೂ ಕೆಳಗೆ ಬಿದ್ದರೂ ಮೀಸೆ ಮಣ್ಣಾಗದಂತೆ ಇಂಟರನೆಟ್ಟಿನಲ್ಲಿ ಕರ್ನಾಟಕ ರಕ್ಕಸ ವೇದಿಕೆಯ ಬೆಂಬಲಿಗರು ಹೀರೋಗಳಂತೆ ವರ್ತಿಸುವುದು ಕಂಡು ಆಶ್ಚರ್ಯವಾಗಲಿಲ್ಲ.

    ಯಾವಾಗಲೂ ಬೇರೆಯವರು ಮಾಡಿದ ಕೆಲಸಕ್ಕೆ ಕ್ರೆಡಿಟ್ ತೆಗೆದುಕೊಳ್ಳುವುದು ನಾರಾಯಣ ಗೌಡ ಮತ್ತು ಕಂಪೆನಿಯ ಸ್ಟೈಲ್.

    ಅಲ್ಲಾ ಬೆಳಗಾವಿಯಲ್ಲಿ ಕನ್ನಡ ಮೇಯರ್ ಮಾಡಿದ್ದೇ ನಾರಾಯಣ ಗೌಡರಂತೆ ಹೇಳುತ್ತಾರಿವರು. ಕಳೆದ ಎಷ್ಟೋ ವರ್ಷಗಳಿಂದ ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಬಲಹೀನವಾಗುತ್ತಿತ್ತು ಮತ್ತೆ ಮೀಸಲಾತಿಯ ಪರಿಣಾಮ ಕನ್ನಡಿಗ ಮೇಯರ್ ಆಗುವಂತಾಯಿತು. ಇದನ್ನು ಮತ್ತು ಎದುರಾಡದ ಮುದುಕರ ಮುಖಕ್ಕೆ (ಶಾಸಕರ ಭವನದಲ್ಲಿ ಮತ್ತು ಕಾರವಾರದಲ್ಲಿ) ಮಸಿ ಬಳೆಯುವುದನ್ನೇ ಕನ್ನಡ ಸೇವೆಯೆಂದು ನಾರಾಯಣ ಗೌಡ ಮತ್ತವರ ಅನುಯಾಯಿಗಳು ಕೊಚ್ಚಿಕೊಳ್ಳುವುದು ಹಾಸ್ಯಾಸ್ಪದ.

    ಎಂ.ಎನ್.ಸಿ. ಕಂಪೆನಿಗಳನ್ನು ಬ್ಲ್ಯಾಕ್ಮೇಲ್ ಮಾಡುವುದು, ಕನ್ನಡ ಫಲಕಗಳಿಗೆ ಮಸಿಬಳೆಯುವುದು, ಬೆಂಗಳೂರಿನಲ್ಲೆಡೆ ಫ್ಲೆಕ್ಸುಗಳಲ್ಲಿ ತನ್ನ ಮುಖ ಹಾಕಿಕೊಳ್ಳುವುದರಿಂದ ಕನ್ನಡ ಉಳಿಸುತ್ತೇನೆಯೆಂದೆನ್ನುವುದು ನಾರಾಯಣ ಗೌಡರಂತಹ ಅಪ್ರಬುದ್ಧ ಅವಿವೇಕಿಗಳಿಗಷ್ಟೇ ಸಾಧ್ಯ.

    ReplyDelete
  13. ಸಂಗಮೇಶ್August 11, 2009

    @Yathin
    ಸ್ವಾಮಿ ನೀವು ಬೆಳಗಾವಿಯಲ್ಲಿ ಓಡಾಡಿಲ್ಲ ಅನಿಸೊತ್ತೆ, ಅಲ್ಲಿ ಮರಾಠಿ ಭಾಷಿಕರ್ ಮುಜುಗರ, ಕೀಳು ಮಾತುಗಳನ್ನು ನಾವು ಅನುಭವಿಸಿದ್ದೇವೆ. ಅವರು ಮಾಡಿರುವ ಕೆಲ್ಸವನ್ನು ಒಪ್ಪಿಕೊಂಡರೆ ನಿಮಗೆ ಯಾಕೆ ಹೊಟ್ಟೆ ಉರಿ. ನೀವು ಹೇಳಿದ ಹಾಗೆ ಅಲ್ಲಿ ಕನ್ನಡಿಗರನ್ನು ಒಗ್ಗೂಡಿಸಿ ಆ ಕೆಲ್ಸಕ್ಕೆ ತುಂಬಾ ಶ್ರಮ ಪಟ್ಟಿದ್ದಾರೆ ಗೌಡರು. ಇದನ್ನು ನಮ್ಮ ಊರಿನ ಪ್ರತಿಯೊಬ್ಬ ಕೂಡ ಹೇಳಬಲ್ಲ. ಬೇಕಿದ್ದರೆ ಎಮ್,ಇ.ಎಸ್ ಅವರನ್ನು ಕೇಳಿ, ಅವರ‍ೆ ಕೂಪದಿಂದ ಹೇಳುತ್ತಾರೆ ಇದೆ ಮಾತನ್ನು. ಮತ್ತೆ ಮಸಿ ಪ್ರಕರಣದಿಂದಲೇ ಅಲ್ಲಿ ಬದಲಾವಣೆ ಆಗಿದ್ದು, ಕುದ್ದು ಆ ವಿಷಯವನ್ನು ಎತ್ತಿ, ಕೆದಕಿದರೂ ಮೊರೆ ಸೋತ.

    ನಿಮಗೆ ಆ ತಾಕತ್ತು ಇದ್ದರೆ ಇಷ್ಟು ವರುಷ ಯಾಕೆ ಸುಮ್ಮನೆ ಕುಳಿತಿದ್ದೀರಿ ?

    ನೀವು ಬರೀ ಪೂರ್ವಗ್ರಹಪೀಡಿತರಾಗಿ ಯೋಚನೆ ಮಾಡುತ್ತ ಇದ್ದೀರಾ, ೧೦ ವರುಷಗಳ ಹಿಂದೆ ಅವರು ಮಾಡುತ್ತ ಇದ್ದ ಕೆಲ್ಸಕ್ಕೂ ಇಗಲೂ ಅಜಗಜಾಂತರ ವ್ಯತ್ಯಾಸವಿದೆ, ಇದನ್ನು ನಾನು ಬೆಳಗಾವಿಯಲ್ಲಿ ಕಂಡಿರುವೆ ಮತ್ತು ಗೌಡರ ಅಧ್ಯಕ್ಷರ ಲೇಖನಿಯಿಂದ ಅವರ ವಿಚಾರ ಬಾಳ ಮುಂದ ಇದೆ ಅನಿಸೊತ್ತೆ. ಫಲಕಕ್ಕೆ ಮಸಿ ಎಲ್ಲಾ ಹಳೆ ಮಾತು ಬಿಡ್ರಲ್ಲ, ನೀವು ಬೇರೆಯವರ ಜೊತೆ ಇವರನ್ನು ತುಲನಾ ಮಾಡುವುದು ಸರಿ ಬರೊದಿಲ್ರಿ ಸಾಹೇಬ್ರ.

    ಇನ್ನ ನಿಮ್ಮ ಅಂಗಡಿ ಎಂತಾ ಕೆಲ್ಸ ಮಾಡಿದ ಅಂತ ನಮ್ಮೂರಿನ ಹುಡ್ಗ ಕೂಡ ಹೇಳ್ತಾನ, ಬೇಕಿದ್ದರ ಒಮ್ಮಿ ಬರ್ಲಾಲಾ.

    ಸುಮ್ಮನೆ ಯಾಕೆ ಉರಿದುಕೊಂಡು ಬೀಳುತ್ತಿರಾ, ನೀವು ಕೆಲ್ಸ ಮಾಡಿ ಅವರು ಮಾಡಲಿ, ಕನ್ನಡಮ್ಮ ತೇರು ಹೊತ್ತಲು ಕೈಗಳು ಬೇಕು, ಅದಕ್ಕು ಮುಂಚೆ ಮನಸ್ಸು ಬೇಕು, ನಿಮ್ಮ ತರಹದ ಕಾಲೆಳೆಯುವ ಪ್ರವೃತ್ತಿ ಅಲ್ಲ.

    - ಸಂಗಮೇಶ

    ReplyDelete
  14. Halli haidaAugust 11, 2009

    ಸ್ವಾಮಿ

    ನಿಮಗೆ ವಸ್ತು ಸ್ಥಿತಿಯ ಅರಿವೇ ಇಲ್ಲದಂತೆ ಕಾಣುತ್ತದೆ. ಎಲ್ಲೊ ಗಾಳಿಯಲ್ಲಿ ತೇಲುವ ಮಾತುಗಳಂತೆ ಇವೆ. ೧೭ ವರುಷಗಳ ಬಳಿಕ ಬೆಳಗಾವಿಯಲ್ಲಿ ಏನಾದರು ಬದಲಾವಣೆಯಾಗಿ, ಅಲ್ಲಿ ಕನ್ನಡಿಗರು ಮಹಾಪೌರರಾಗಿದ್ದರೆ ಅದಕ್ಕೆ ಕ.ರ.ವೇ ಯ ಗೌಡರೇ ಕಾರಣ. ಮೊನ್ನೆ ಕತಾರ್ ಕನ್ನಡ ಸಂಘದ ಅಧ್ಯಕ್ಷರು ಸಿಕ್ಕಿದ್ರು, ಅವರು ಬೆಳಗಾವಿಯವರು; ಹೇಳ್ತಾ ಇದ್ರು ಬೆಳಗಾವಿಯಲ್ಲಿ ಮರಾಠಿಗರದೆ ದರ್ಬಾರ್ ಆಗಿತ್ತು, ವೇದಿಕೆ ಬಂದ್ ಮೇಲೆ ಕನ್ನಡಿಗರಿಗು ಕಿಮ್ಮತ್ತು ಬಂತು ಅಂತ. ಇದಕ್ಕಿಂತ ಬೇಕೆ ಸಾಕ್ಷಿ. ನಿಮಗೆ ಗೊತ್ತಿಲ್ಲದೆ ಇಷ್ಟೊಂದು ಹುಟ್ ಹಾಕೊಂಡು ಹೇಗೆ ಬರಿತಿರಿ ಅಂತ ನನ್ಗೆ ಅರ್ಥ ಆಗ್ತ ಇಲ್ಲ.

    ReplyDelete
  15. ರವಿ ಕುಲಕರ್ಣಿAugust 11, 2009

    ರಾಕೇಶ್ ಅವರೇ,
    ನಿಮ್ಮಲ್ಲಿ ಕಲಿಯಬೇಕು ಅನ್ನೋ ಹುಮ್ಮಸ್ಸಿದೆ, ಆದ್ರೆ ಫೀಲ್ಡ್ ಅಲ್ಲಿ ಓಡಾಡಿ ಕಲಯಬೇಕೇ ವಿನಹ ಪೂರ್ವಾಗ್ರಹ ಪೀಡಿತರಿಂದಲ್ಲ. ಬರೀ ರೋಲ್ ಕಾಲ್ ಮಾಡೋರು ಖಂಡಿತ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಿಲ್ಲ. ವೇದಿಕೆ ಅದರ ಹೋರಾಟಗಳಿಂದಲೇ ಇವತ್ತು ಈ ಮಟ್ಟಕ್ಕೆ ಬೆಳೆದಿರೋದು. ಹಿಂದೆ ಮುಂದೆ ತಿಳಿಯದೇ ಬಾಯಿಗೆ ಬಂದದ್ದು ಬರೆದರೆ ನೀವು ಯಾವತ್ತು ಒಬ್ಬ ಯೋಗ್ಯ ಪತ್ರಕರ್ತರಾಗಲು ಸಾಧ್ಯವಿಲ್ಲ. ನಾಡಿನ ಪರವಾಗಿ ಕೆಲ್ಸ ಮಾಡೋರು ಯಾರು ಅನ್ನುವುದನ್ನು ತಿಳಿಯಲು ಯತ್ನಿಸಿ, ಪೂರ್ವಾಗ್ರಹದಿಂದ ಆಚೇ ಬನ್ನಿ, ಆಗ ಖಂಡಿತ ನಿಮ್ಮಿಂದ ಒಬ್ಬ ಪತ್ರಕರ್ತ ಈ ನಾಡಿಗೆ ಸಿಕ್ಕಾನು.

    ReplyDelete
  16. ರಾಘವೇಂದ್ರ ಕಮಲಾಕರ್August 11, 2009

    ಸರ್ಕಾರ/ ರಾಜಕಾರಣಿಗಳು ಸರಿಯಾಗಿ ಕೆಲ್ಸ ಮಾಡಿದ್ರೆ ನಮಗೆ ಕ.ರ.ವೇ ಯ ಅಗತ್ಯವೇ ಇರತಿರಲಿಲ್ಲ ಸರ್. ಆದ್ರೆ ನೆನಪಿರಲಿ, ಕರ್ನಾಟಕದ ಕಳೆದ ೫ ವರ್ಷದ ಇತಿಹಾಸ ತೆಗೆದು ಒಮ್ಮೆ ನೋಡಿ, ಅಲ್ಲಿ ಕನ್ನಡಿಗರ ಪರವಾಗಿ ನಡೆದ ಹೋರಾಟಗಳು ಯಾವುವು, ಅಲ್ಲೆಲ್ಲ ಯಾರು ಹೋರಾಡಿದ್ದು, ಹೋರಾಡಿ ನ್ಯಾಯ ತಂದುಕೊಂಡಿದ್ದು ಎಂದು. ಅದು ಕಾವೇರಿ ನ್ಯಾಯ ಮಂಡಳಿ ತೀರ್ಪು ಕಾನೂನು ಆಗದಂತೆ ತಡೆದದ್ದೆ ಇರಬಹುದು, ಬೆಳಗಾವಿಯ ಪಾಲಿಕೆಯಲ್ಲಿ ಕನ್ನಡತಿಯೊಬ್ಬಳನ್ನು ಗೆಲ್ಲಿಸಿದ್ದೆ ಇರಬಹುದು, ಬೆಂಗಳೂರಿನ ಎಫ್.ಎಮ್ ವಾಹಿನಿಗಳಲ್ಲಿ ಕನ್ನಡದ ಧ್ವನಿ ಕೇಳಿಸುವಂತೆ ಮಾಡಿದ್ದೆ ಇರಬಹುದು, ಕಳಸಾ ಬಂಡುರಿ ಯೋಜನೆಗಾಗಿ ಹುಬ್ಬಳ್ಳಿಯಲ್ಲಿ ಅತಿ ದೊಡ್ಡ ಪ್ರತಿಭಟನೆ ಹಮ್ಮಿಕೊಂಡದ್ದೆ ಇರಬಹುದು, ಎಲ್ಲ ಹೋರಾಟದಲ್ಲೂ ಕನ್ನಡಿಗರ ಧ್ವನಿಯಾಗಿ ಈ ಮಣ್ಣಿನ ಮಕ್ಕಳ ಪರವಾಗಿ ಹೋರಾಡುತ್ತಿರುವವರು ಕ.ರ.ವೇ ಒಂದೇ.

    ಬನ್ನಿ ನನ್ನ ಊರು ಹುಬ್ಬಳ್ಳಿಯ ರೈಲ್ವೇ ನಿಲ್ದಾಣ ಅನ್ನೋ ಮಿನಿ ಬಿಹಾರಿಗೆ. ಅಲ್ಲಿ ಹೋರಾಟ ಮಾಡಿ ಪಡೆದ ನೈರುತ್ಯ ರೈಲ್ವೇ ವಲಯದಲ್ಲಿ ಕಳೆದ ೫ ವರ್ಷದಲ್ಲಿ ನಡೆದ ಎಲ್ಲ ನೇಮಕಾತಿಯಲ್ಲಿ ೮೦% ಬಿಹಾರಿಗಳ ಅಯ್ಕೆಯಾಗಿದೆ. ಅದನ್ನ ಒಬ್ಬೇ ಒಬ್ಬ ರಾಜಕಾರಣಿ ಪ್ರಶ್ನಿಸಿಲ್ಲ. ಅದನ್ನ ಪ್ರಶ್ನಿಸಿದ್ದು, ಜಾಗ್ರುತಿ ತಂದಿದ್ದು, ನೇಮಕಾತಿಯಲ್ಲಿ ಕನ್ನಡದ ಮಕ್ಕಳಿಗೆ ಆದ್ಯತೆ ಸಿಗಲಿ ಎಂದು ಕನ್ನಡಿಗರ ಕೂಗು ದೆಹಲಿಗೆ ತಲುಪೋ ಹಾಗೇ ಮಾಡಿದ್ದು ಮತ್ತದೇ ಕರವೇ ಸರ್. ಕರವೇ ಬಗ್ಗೆ ಸ್ವಲ್ಪ ನಿಮ್ಮ ಹೋಮ್ ವರ್ಕ ಮಾಡಿ ಬರೆಯಿರಿ ಮುಂದಿನ ಬಾರಿ.

    ReplyDelete
  17. ಚೇತನ್ ರಾಮರಾವ್August 11, 2009

    ಇದನ್ನ ಒಮ್ಮೆ ಓದಿ
    http://sampada.net/blog/kannadavesathya/11/02/2009/16751

    ReplyDelete
  18. ಯಡಿಯೂರಪ್ಪನೋರು ಇನ್ನು ಮುಂದೆ ಸರಕಾರಿ ಕಾರ್ಯಕ್ರಮಗಳಲ್ಲಿ ಕನ್ನಡ ಭಾವುಟ ಹಾರಿಸಬಾರದು ಅಂತ ಆಜ್ಞೆ ಹೊರಡಿಸಿಬಿಟ್ಟರು. ಯಾವೊಬ್ಬ ಕನ್ನಡ ಸಾಹಿತಿನಾದರೂ ಬಾಯಿ ಬಿಟ್ಟಿದ್ದರೆ ಕೇಳಿ. ಕೊನೆಗೆ ಕನ್ನಡಿಗರ ರಕ್ಷಣೆಗೆ ಬಂದೋರು ರಕ್ಷಣಾ ವೇದಿಕೆಯೋರು. ಆವರ ಹೋರಾಟದ ಕಾರಣದಿಂದಲೇ ಆಮೇಲೆ ಯಡಿಯೂರಪ್ಪನೋರು ಆಜ್ಞೆ ವಾಪಸ್ ತಂಡ್ರು ಅನ್ನೋದು ಈಗ ಇತಿಹಾಸ. ಈಗಹೇಳಿ. ಇಂತ ದರಿದ್ರ ಲೀಡರುಗಳಿಂದ ಕನ್ನಡದ ಹಿತಾಸಕ್ತಿ ಕಾಪಾಡಲು ಹೇಗೆ ಸಾಧ್ಯ. ನಾರಾಯಣ ಗೌಡರಿಗೆ ಒಳ್ಳೇದಾಗಲಿ. ಅವರಿರೋದ್ರಿಂದ ಅಷ್ಟೋ ಇಷ್ಟೋ ಕೆಲಸ ಆಗ್ತಾ ಇದೆ.

    ತಿಋವಳ್ಳುವರ್ ಪ್ರತಿಮೆ ಬಗ್ಗೆ ಅವರ ನಿಲುವು ಇಲ್ಲಿ ಕೊಟ್ಟಿದ್ದಾರೆ (http://karave.blogspot.com/2009/08/tiruvalluvar-pratime-krv-niluvu.html). ಈ ಸುದ್ದಿ ಯಾವುದೇ ಪೇಪರ್ ಗಳಲ್ಲಿ ಪ್ರಕಟವಾಗಲಿಲ್ಲ ಅನ್ನೋದು ದುಃಖದ ವಿಷಯ

    -ಒಬ್ಬ ಓದುಗ

    ReplyDelete
  19. ಕರ್ನಾಟಕ ರಕ್ಷಣಾ ವೇದಿಕೆಯ ಬಗ್ಗೆ ಏನೇನು ಗೊತ್ತಿಲ್ಲದ್ದಿದ್ದರು ಸುಮ್ಮನೆ ಈ ತರ ಬರಹಗಳನ್ನು ಬರೆಯಲ್ಲಿ ತುಂಬಾ ಲೇಸು ಕೆಲವರಿಗೆ. ಆದೇ ರಕ್ತ ಧಾನ ಮಾಡಿದಾಗ ಎಲ್ಲಿದ್ದಿರಿ ಸ್ವಾಮಿ ? ಬಡಗು ಕರ್ನಾಟಕದಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಇವರ ಕೆಲಸದ ಬಗ್ಗೆ ಮಾತಿಲ್ಲ ಯಾಕೆ ? ಹಿಂದೆ ತಮಿಳರು ಈ ಪ್ರತಿಮೆಯನ್ನು ಯಾವ ಕಾನೂನಿಲ್ಲದೆ ಆವರಣ ಮಾಡಿಕ್ಕೆ ಹೊರಟ್ಟಿದ್ದರು. ವಿಶಯ ಗೊತ್ತಿಲ್ಲಾ ಸುಮ್ಮನೆ ಬಂದು ಇಲ್ಲಿ ಒಂದಿಶ್ಟು ಬರೆಯದಕ್ಕೆ ಬಹಳ ಜನಕ್ಕೆ ಗೊತ್ತು.

    ReplyDelete
  20. Excellent article, These b****** should be banned. Its become licensed rowdism these days.

    Thanks for so much of information

    ReplyDelete